Udayavani | Feb 04, 2012
ಮೈಸೂರು: ಏಕಕಾಲಕ್ಕೆ ಸಿಇಟಿ ಪರೀಕ್ಷೆ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಆಯುಕ್ತರಾದ ವಿ. ರಶ್ಮಿ ಹೇಳಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಮಾನಸಗಂಗೋತ್ರಿ ಸೆನೆಟ್ ಭವನದಲ್ಲಿ ಏರ್ಪಡಿಸಿದ್ದ ಪಿಯುಸಿ ವಿದ್ಯಾರ್ಥಿಗಳು, ಪೋಷಕರೊಡನೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೆಡಿಕಲ್, ಎಂಜಿನಿಯರಿಂಗ್ ಹಾಗೂ ಮ್ಯಾನೇಜ್‌ಮೆಂಟ್ ಸೀಟ್‌ಗಳಿಗೆ ಸಿಇಟಿ ಪರೀಕ್ಷೆಗಳನ್ನು ರಾಜಾÂದ್ಯಂತ ಏಕಕಾಲದಲ್ಲಿ ನಡೆಸಲಾಗುವುದು. ಈ ವರ್ಷದಿಂದ ಮೆಡಿಕಲ್, ಎಂಜಿನಿಯರಿಂಗ್ ಹಾಗೂ ಮ್ಯಾನೇಜ್‌ಮೆಂಟ್ ಸೀಟ್‌ಗಳಿಗೆ ಆನ್‌ಲೈನ್ ಕೌನ್ಸಲಿಂಗ್ ನಡೆಸಲು ತೀರ್ಮಾನಿಸಲಾಗಿದೆ. ಈ ಮೂಲಕ ಪ್ರತಿ ಸೀಟನ್ನು ಟ್ರಾÂಕಿಂಗ್ ಮಾಡಲಾಗುತ್ತದೆ. ಇದರಿಂದಾಗಿ ಮೆರಿಟ್ ವಿದ್ಯಾರ್ಥಿಗಳಿಗೆ ಸೀಟು ಲಭಿಸಲಿವೆ
ಪದವಿ ಪೂರ್ವ ಪರೀಕ್ಷೆಗಳಾದ ಮೂರು ದಿನಗಳ ಬಳಿಕ ಕೀ ಉತ್ತರ ವೆಬ್‌ಸೈಟ್‌ನಲ್ಲಿ ಬಿಡುಗಡೆಯಾಗಲಿದೆ.
ವಿದ್ಯಾರ್ಥಿಗಳ ಪರೀಕ್ಷೆಗೆ ತಯಾರಿ ವೇಳೆ, ಅವರಿಗೆ ಪ್ರಶ್ನೆ ಪತ್ರಿಕೆಯ ಬ್ಲೂಪ್ರಿಂಟ್ ವಿತರಿಸಲಾಗುವುದು. ಇದರಿಂದಾಗಿ ಅವರ ಪರೀûಾ ಸಿದ್ಧತೆಗೆ ಅನುಕೂಲವಾಗಲಿದೆ.
ಮುಂದಿನ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ವಿಜ್ಞಾನ ಪಠ್ಯ ಪದ್ಧತಿ ಜಾರಿಗೆ ತರಲಾಗುವುದು. ಕರ್ನಾಟಕದಲ್ಲಿ 6.5 ಲಕ್ಷ ಪದವಿ ಪೂರ್ವ ವಿದ್ಯಾರ್ಥಿಗಳಿದ್ದು, 2.5 ಲಕ್ಷ ಕಲೆ, 1.15 ಲಕ್ಷ ವಾಣಿಜ್ಯ ಹಾಗೂ 1.10 ಲಕ್ಷ ವಿಜ್ಞಾನ ವಿಷಯದ ವಿದ್ಯಾರ್ಥಿಗಳಿದ್ದು, ರಾಜ್ಯದಲ್ಲಿ ವಿಜ್ಞಾನದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಕನ್ನಡದಲ್ಲಿ ಉತ್ತಮ ಅಂಕ ಗಳಿಸುವ ವಿದ್ಯಾರ್ಥಿಗಳು ಇಂಗ್ಲೀಷ್‌ನಲ್ಲಿ ಎಡವುತ್ತಿದ್ದು, ಇಲಾಖೆ ವೆಬ್‌ಸೈಟ್‌ನಲ್ಲಿ ಇಂಗ್ಲೀಷ್‌ಗೆ ಸಂಬಂಧಿಸಿ ವ್ಯಾಕರಣ, ಪ್ಯಾಸೇಜ್, ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗಿದೆ.
ಸಿಇಟಿ ಪರೀಕ್ಷೆಗೆ ಮುನ್ನ ಚಂದನ ವಾಹಿನಿಯಲ್ಲಿ ಕಲೆ, ವಿಜ್ಞಾನ ಹಾಗೂ ಕಾಮರ್ಸ್ ವಿದ್ಯಾರ್ಥಿಗಳಿಗೆ ರಾತ್ರಿ 9.30 ರಿಂದ 10.30 ವರೆಗೆ ಪಿಸಿಎಂಬಿ, ಕಾಮರ್ಸ್ ವಿಷಯದಲ್ಲಿ ತರಬೇತಿ ನೀಡಲಾಗುತ್ತದೆ. ಆದರೆ ಇದಕ್ಕೆ ವೆಚ್ಚ ಹೆಚ್ಚಾಗುವುದರಿಂದ ರಾಜ್ಯಸರಕಾರವೇ ಹೊಸ ಚಾನೆಲ್ ಆರಂಭಿಸಲು ಆಲೋಚಿಸಲಾಗಿದೆ.
ವೆಬ್‌ಸೈಟ್‌ನಲ್ಲೂ ತರಬೇತಿ ಮಾಹಿತಿ ಇದ್ದು, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬಹುದಾಗಿದೆ.
ಏಪ್ರಿಲ್‌ನಲ್ಲಿ ಸಿಇಟಿ ಆರಂಭವಾಗಲಿದ್ದು, ಈ ಕುರಿತು ವಿದ್ಯಾರ್ಥಿ-ಪೋಷಕರ ಜತೆ ಚರ್ಚಿಸಲಾಗುವುದು. ಸಮಸ್ಯೆಗಳ ಕುರಿತಂತೆ ಮೇಲ್ ಮಾಡಿದಲ್ಲಿ 24 ಗಂಟೆಯೊಳಗೆ ಪರಿಹಾರ ಸೂಚಿಸುವುದಾಗಿ ಭರವಸೆ ನೀಡಿದರು.
ಜಿÇÉಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್, ಕಲೆ, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಉದ್ಯೋಗಾವಕಾಶಕ್ಕಾಗಿ 45 ಪ್ಯಾರಾಮೆಡಿಕಲ್ ಕೋರ್ಸ್‌ಗಳ ಆರಂಭಕ್ಕೆ ಚಿಂತಿಸಲಾಗಿದೆ. ರಾಜ್ಯದಲ್ಲಿರುವ ಡೀಮx ವಿವಿಗಳಲ್ಲಿ ಶೇ. 25 ಸೀಟ್‌ಗಳನ್ನು ಸರಕಾರಿ ಕೋಟಾದಲ್ಲಿ ಪಡೆಯಲು ತೀರ್ಮಾನಿಸಲಾಗಿದೆ ಎಂದರು. ಮುಂದಿನ 2 ತಿಂಗಳಿನಲ್ಲಿ ಒಂದು ಸಾವಿರ ಮೆಡಿಕಲ್ ಸೀಟುಗಳು ಸರಕಾರಿ ಕೋಟಾಕ್ಕೆ ಸೇರಿಕೊಳ್ಳಲಿವೆ. ಪದವಿ ಶಿಕ್ಷಣದಲ್ಲಿ 14ನೇ ಸ್ಥಾನದಲ್ಲಿರುವ ಮೈಸೂರು ಜಿÇÉೆಯನ್ನು 1ರಿಂದ 4ನೇ ಸ್ಥಾನದೊಳಗೆ ತರಬೇಕಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಗೋ. ಮಧುಸೂದನ್ ಮಾತನಾಡಿ, ನ್ಪೋಕನ್ ಇಂಗ್ಲೀಷ್ ತರಬೇತಿಯನ್ನು ಪಠ್ಯದ ಜೊತೆ ಸೇರಿಸಬೇಕೆಂದು ಸಲಹೆ ನೀಡಿದರು. ಸೆಕೆಂಡ್ ಪಿಯು ವಿದ್ಯಾರ್ಥಿಗಳಿಗೆ ಶೇ. 75 ಹಾಜರಾತಿ ಕಡ್ಡಾಯ ನೀತಿ ಸಡಿಸಲಿಸಬೇಕೆಂದು ಮನವಿ ಮಾಡಿದರು.
ಕರ್ನಾಟಕ ಪರೀûಾ ಪ್ರಾಧಿಕಾರದ ಪಿಆರ್‌ಒ ನರಸಿಂಹಮೂರ್ತಿ, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಚ್. ಕೃಷ್ಣಯ್ಯ ಮತ್ತಿತರರು ಹಾಜರಿದ್ದರು.