Udayavani | Feb 04, 2012
ಉಡುಪಿ: ಉಡುಪಿ ಅಡುಗೆ ಎಂದರೆ ಭಾರೀ ಪ್ರಸಿದ್ಧ. ಉಡುಪಿಯ ಹೊಟೇಲ್ಲೂ ಪ್ರಸಿದ್ಧ. ಮಣಿಪಾಲದ ವೆಲ್‌ಕಮ್‌ಗ್ರೂಪ್ ಗ್ರಾಜುವೇಟ್ ಸ್ಕೂಲ್ ಆಫ್ ಹೊಟೇಲ್ ಅಡ್ಮಿನಿಸ್ಟ್ರೇಶನ್ (ವಾಗÒ) ಸಂಸ್ಥೆಯಲ್ಲಿ 1991ರಲ್ಲಿ ಪದವೀಧರರಾದ ಪಂಜಾಬ್ ಅಮೃತಸರದ ವಿಕಾಸ ಖನ್ನ ಅವರು ಶ್ರೀಕೃಷ್ಣ, ಉಡುಪಿಯ ಅಡುಗೆಯನ್ನು ಬಹಳಷ್ಟು ಮೆಚ್ಚಿಕೊಳ್ಳುವುದಷ್ಟೆ ಅಲ್ಲ ಪಾಕಶಾಸ್ತ್ರದಲ್ಲಿ ಸ್ಪಿರಿಚುವಾಲಿಟಿ ಕಾಣುತ್ತಾರೆ, ಜಗತøಸಿದ್ಧ ಅಡುಗೆಭಟರ ಸಾಲಿನಲ್ಲಿ ನಿಂತಿದ್ದಾರೆ.
ನ್ಯೂಯಾರ್ಕ್ ಮತ್ತು ಜಗತ್ತಿನ ಮುಂಚೂಣಿ ರಾಷ್ಟ್ರಗಳಲ್ಲಿ ಸೇವೆ ಸಲ್ಲಿಸಿದ ವಿಕಾಸ ಖನ್ನ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಹಲವು ಸಾಕ್ಷ್ಯಚಿತ್ರಗಳಲ್ಲಿಯೂ ಪಾತ್ರ ವಹಿಸಿದ್ದಾರೆ. ಇದೇ ವೇಳೆ ಭಾರತದಲ್ಲಿ ಬಡವರ ಸೇವೆಗೆ ಕಟಿಬದ್ಧರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಫೆ.4ರಂದು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಖನ್ನ ಅವರು ಭಾರತ ವಿಶಾಲವಾದ ರಾಷ್ಟ್ರ. ಇಲ್ಲಿ ಆಹಾರವೈವಿಧ್ಯವೂ ವಿಶಾಲ. ಆದ್ದರಿಂದ ಬ್ರಾಂಡ್ ಮಾಡುವುದು ಕಷ್ಟ. ಆದರೆ ಎಲ್ಲ ಕಡೆಯೂ ಮಾತೃ, ತಾಯಿ ಎಂಬ ಭಾವನೆ ಇದೆ. ಬಡತನವಿದ್ದರೂ ಶಕ್ತಿಯನ್ನು ಉಳಿಸಿಕೊಳ್ಳುತ್ತಾರೆ. ಆಹಾರಕ್ಕೂ ಆಧ್ಯಾತ್ಮಿಕತೆಗೂ ಸಂಬಂಧ ಕಂಡುಬರುವುದು ಭಾರತದಲ್ಲಿ ಮಾತ್ರ. ಇಲ್ಲಿ ಆಹಾರವನ್ನು ದೇವರಿಗೆ ಸಮರ್ಪಿಸಿದ ಬಳಿಕವೇ ಸ್ವೀಕರಿಸುವ ಪದ್ಧತಿ ಕಂಡುಬರುತ್ತದೆ. ದೇಹ ಮತ್ತು ಮನಸ್ಸಿಗೆ ಎರಡು ತೆರನಾದ ಹಸಿವು ಇದೆ. ಬಹುತೇಕ ರಾಷ್ಟ್ರಗಳಲ್ಲಿ ದೇಹಕ್ಕೆ ಮಾತ್ರ ಹಸಿವು ಎಂಬ ಭಾವನೆ ಇದೆ. ಮನಸ್ಸಿನ ಹಸಿವನ್ನು ಧ್ಯಾನ, ಸತ್ಸಂಗದ ಮೂಲಕ ಪರಿಹರಿಸಿಕೊಳ್ಳಬೇಕು ಎಂದು ಹೇಳಿದರು.
ಕೇರಳದಲ್ಲಿ ಒಬ್ಬರ ಮನೆಗೆ ಹೋಗಿ ನೀರು ಕೇಳಿದೆ. ಅವರು ಬಡವರಾಗಿದ್ದರು. ಮಹಿಳೆ ಮನೆಯಿಂದ ಹೊರಹೋದಳು. ಆಗ ನನ್ನೊಟ್ಟಿಗೆ ಇದ್ದ ವಿದೇಶಿಯ ಇಲ್ಲಿಂದ ಹೋಗೋಣವೆಂದ. ಸ್ವಲ್ಪ ಹೊತ್ತಿನಲ್ಲಿ ಆ ಮಹಿಳೆ ಧಾನ್ಯವನ್ನು ತಂದು ನಮ್ಮಲ್ಲಿ ಕೊಡಲು ಏನೂ ಇರಲಿಲ್ಲ. ನೀರಿನೊಂದಿಗೆ ಇತರ ವಸ್ತುಗಳನ್ನು ಕೊಡುವುದು ನಮ್ಮ ಸಂಪ್ರದಾಯವೆಂದರು. ಇದೇ ರೀತಿ ಅಮೃತಸರದ ಗುರುನಾನಕ್ ಮಂದಿರದಲ್ಲಿ ಓರ್ವ ಮಹಿಳೆ ಎಷ್ಟೋ ವರ್ಷಗಳಿಂದ ಸೇವೆ ಮಾಡುತ್ತಿದ್ದಳು. ಈ ಕುರಿತು ಕೇಳಿದಾಗ ಅವರ ಮಗ ಭಾರತ ಪಾಕಿಸ್ಥಾನದ ಯುದ್ಧದಲ್ಲಿ ಮಡಿದ. ಆತನ ಸ್ಮರಣೆಗಾಗಿ ನಾನು ಇಲ್ಲಿ ಅನ್ನದಾನ ಮಾಡುತ್ತಿದ್ದೇನೆಂದರು. ಇಂತಹ ಮನೋಭಾವನೆ ಬೇರೆ ದೇಶಗಳಲ್ಲಿ ಸಿಗಲು ಸಾಧ್ಯವಿಲ್ಲ ಎಂದರು.
ಮಣಿಪಾಲಕ್ಕೆ ಬರುವಾಗ ಆತ್ಮವಿಶ್ವಾಸವಿರಲಿಲ್ಲ. ಸಭಾಕಂಪನವಿತ್ತು. ಆದರೆ ಮಣಿಪಾಲಕ್ಕೆ ಬಂದು ಸೇರ್ಪಡೆಗೊಂಡ ಅನಂತರ ಸಭಾಕಂಪನದಂತಹ ಸಮಸ್ಯೆಗಳು ನಿವಾರಣೆಯಾದವು. ಕೇವಲ ಪದವಿಯೊಂದೆ ಮನುಷ್ಯನ ಯಶಸ್ವಿಗೆ ಸಾಕಾಗುವುದಿಲ್ಲ. ಆತ್ಮವಿಶ್ವಾಸದಿಂದ ಕೆಲಸ ಮಾಡಬೇಕು ಎಂದರು.
ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು ತಾನು ಕಲಿಯುವ ಹೊತ್ತಿಗೂ ಈಗಕ್ಕೂ ಮಣಿಪಾಲದಲ್ಲಿ ಬಹಳಷ್ಟು ವ್ಯತ್ಯಾಸವಾಗಿದೆ. ತಂತ್ರಜ್ಞಾನ ಮತ್ತು ಸವಾಲಿನಲ್ಲಿ ಬಹಳಷ್ಟು ಮುಂದೆ ಸಾಗಿವೆ ಎಂದರು. ತಾನು ಕೃಷ್ಣ, ಉಡುಪಿ, ರಂಝಾನ್ ಉಪವಾಸದ ಬಗ್ಗೆ ಪುಸ್ತಕ ಬರೆದಿರುವುದಾಗಿ ಹೇಳಿದರು. ಸಂವಾದ ಕಾರ್ಯಕ್ರಮದಲ್ಲಿ ವಗಾÒ ಪ್ರಾಂಶುಪಾಲೆ ಪರ್ವತವರ್ಧಿನಿ, ಹಿರಿಯ ಅಧಿಕಾರಿ ತಾರಕ್ಕನ್ ಉಪಸ್ಥಿತರಿದ್ದರು.
'ಕೃಷ್ಣ ಎನಬಾರದೆ' ಕಲಿತ ಪಂಜಾಬಿ
ತಾನು ಅಮೃತಸರದವನಾದರೂ ಬಹುದೂರದ ಮಣಿಪಾಲಕ್ಕೆ ಬಂದೆ. ಉಡುಪಿ ತನಗೆ ಅನೇಕ ರೀತಿಗಳಲ್ಲಿ ಬಲು ಇಷ್ಟ. ಶ್ರೀಕೃಷ್ಣ ನನ್ನ ಅಚ್ಚುಮೆಚ್ಚಿನ ದೇವರು, ಉಡುಪಿಯ ಆಹಾರ, ಜನರ ಸರಳತೆ, ಪ್ರೀತಿ ವಿಶ್ವಾಸ ನಾನು ಮೆಚ್ಚಲು ಕಾರಣ. ಶ್ರೀಕೃಷ್ಣನನ್ನು ಮಾತ್ರ ಮೆಚ್ಚುವುದಲ್ಲ, ಕೃಷ್ಣಮಠದ ಊಟವನ್ನೂ ಅಷ್ಟೇ ಮೆಚ್ಚುತ್ತೇನೆ. ಈ ಬಾರಿ ಬಂದಾಗಲೂ ಕೃಷ್ಣಮಠದ ಊಟವನ್ನು ಸ್ವೀಕರಿಸಿ ಸಂತೋಷ ಪಟ್ಟಿದ್ದೇನೆ. 'ಕೃಷ್ಣ ಎನಬಾರದೆ...' ಎಂಬ ಕನ್ನಡದ ಹಾಡನ್ನೂ ಕಲಿತೆ ಎಂದು ಖನ್ನ ಸ್ವಲ್ಪ ಹಾಡಿಯೂ ತೋರಿಸಿದರು.