ವೇಣೂರು : ಮಹಾಮಸ್ತಕಾಭಿಷೇಕದ ಎಂಟನೆಯ ದಿನವಾದ ಇಂದು ಸಮವಸರಣ ಪೂಜೆ ಧಾರ್ಮಿಕ ಕಾರ್ಯಕ್ರಮ ನಡೆಯಿತು.ಮುಖ್ಯ ಸಭಾಭವನದಲ್ಲಿ ಸುಂದರವಾಗಿ ಅಲಂಕರಿಸಿದ ವೇದಿಕೆಯಲ್ಲಿ ಸಮವಸರಣದ ಪ್ರತಿರೂಪ ಪ್ರತಿಷ್ಠಾಪಿಸಿದ್ದು ಇಂದಿನ ಪೂಜಾ ಕತೃಗಳಾದ ಧರ್ಮಸ್ಥಳದ ಡಾ| ಡಿ. ವೀರೇಂದ್ರ ಹೆಗ್ಗಡೆ ದಂಪತಿ, ಡಿ. ಸುರೇಂದ್ರ ಕುಮಾರ್ ದಂಪತಿ, ಡಿ. ಹಷೇìಂದ್ರ ಕುಮಾರ್ ದಂಪತಿ ವೇದಿಕೆಯಲ್ಲಿ ಅಷ್ಟವಿಧಾರ್ಚನೆ ಪೂಜೆಯಲ್ಲಿ ಭಾಗವಹಿಸಿದರು.ಮಾತಾಜಿ ಜಿನವಾಣಿ ನೇತೃತ್ವದಲ್ಲಿ ವಿಶೇಷ ಪೂಜೆ ನಡೆದಿದ್ದು, ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆ ಅವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಅಧ್ಯಾಪಕ ಮುನಿರಾಜ್ ರೆಂಜಾಳ ಮತ್ತು ಅಜಿತ್ ಕುಮಾರ್ ಕೊಕ್ರಾಡಿ ನಿರ್ವಹಣೆಯಲ್ಲಿ ಸಮವಸರಣದ ವಿವಿದ ದೃಶ್ಯಗಳನ್ನು ಮನೋಜ್ಞವಾಗಿ ಅಭಿನಯಿಸಿದರು.