Thursday, May 17, 2012
Last Updated: 12:24:52 PM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಇಂದು ಮಸ್ತಕಾಭಿಷೇಕ ಸಂಪನ್ನ
      • Udayavani | Feb 04, 2012

        ಬೆಳ್ತಂಗಡಿ: ನಾಡಿನ ಉದ್ದಗಲಕ್ಕೂ ಭಕ್ತ ಭಾವುಕರನ್ನು ಸೆಳೆದ ವೇಣೂರಿನ ಭಗವಾನ್‌ ಬಾಹುಬಲಿಯ ಮಹಾಮಸ್ತಕಾಭಿಷೇಕ ಫೆ.5ರಂದು ಸಂಪನ್ನಗೊಳ್ಳಲಿದೆ.

        ಅಜಿಲ ವಂಶಸ್ಥರಿಂದ 1604ರಲ್ಲಿ ಪ್ರತಿಷ್ಠಾಪನೆಗೊಂಡ ಬಾಹುಬಲಿಗೆ 1954ರಲ್ಲಿ ಮಸ್ತಕಾಭಿಷೇಕ ನೆಸಲಾಗಿತ್ತು. ಬಳಿಕ 2000ನೇ ಇಸವಿಯಲ್ಲಿ ವಾಸ್ತು ದೋಷ ನಿವಾರಿಸಿ ಅಮೋಘವಾಗಿ ಮಸ್ತಕಾಭಿಷೇಕದ ಆಚರಣೆ ನಡೆಯತು. ಇದೀಗ 12 ವರ್ಷದ ಬಳಿಕ ಈ ಶತಮಾನದ ಎರಡನೇ ಮಹಾಮಜ್ಜನ ನಡೆದಿದ್ದು ರವಿವಾರ 1008 ಜಲಕಲಶದ ಅಭಿಷೇಕ ಹಾಗೂ ಇತರ ದ್ರವ್ಯಗಳ ಅಭಿಷೇಕ ನಡೆದು ಮುಕ್ತಾಯಗೊಳ್ಳಲಿದೆ.

        ದೇಶದ ನಾನಾ ಭಾಗ ಮಾತ್ರವಲ್ಲದೇ ವಿದೇಶದಿಂದಲೂ ಭಕ್ತರು ಆಗಮಿಸಿ ಮಸ್ತಕಾಭಿಷೇಕ ನೋಡಿದ್ದು ಈ ಬಾರಿಯ ವಿಶೇಷವಾಗಿತ್ತು. ಮೂಡಬಿದ್ರೆ ಜೈನಮಠದ ಯತಿ ಶೀÅ ಭಟ್ಟಾರಕ ಚಾರುಕೀರ್ತಿ ಮಹಾಸ್ವಾಮಿಗಳ ನೇತೃತ್ವದಲ್ಲಿ ಮಸ್ತಕಾಭಿಷೇಕ ಕಾರ್ಯಗಳು ನಡೆದಿದ್ದರೆ ಶ್ರವಣಬೆಳಗೊಳದ ಯತಿ ಶೀÅ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಪೂರ್ಣ ಮಾರ್ಗದರ್ಶನ ನೀಡಿದ್ದರು. ವರೂರಿನ ಆಚಾರ್ಯ ಶೀÅ ಗುಣಧರ ನಂದಿ ಮಹಾರಾಜರು, ಶೀÅ ಸುದೇಶಸಾಗರ ಮಹಾರಾಜರು, ಆಚಾರ್ಯ ಶೀÅ ಪಾವನಕೀತಿರ ಮಹಾರಾಜರ ಸಹಿತ ತ್ಯಾಗಿ ವೃಂದ ಆಗಮಿಸಿತ್ತು. ವಿವಿಧ ಭಟ್ಟಾರಕರು ಆಗಮಿಸಿದ್ದರು. ಮುಖ್ಯಮಂತ್ರಿಯಾದಿಯಾಗಿ ರಾಜಕಾರಣಿಗಳು, ವಿದ್ವಾಂಸರು ಬಂದಿದ್ದರು. ಧಾರ್ಮಿಕ ಕಾರ್ಯಕ್ರಮಗಳ ಜತೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಭಾ ಕಾರ್ಯಕ್ರಮಗಳು ವೇಣೂರಿನ ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸಿದ್ದವು. ಮಸ್ತಕಾಭಿಷೇಕ ಸಮಿತಿ ಅಧ್ಯಕ್ಷರಾದ ಡಾ|ಡಿ. ವೀರೇಂದ್ರ ಹೆಗ್ಗಡೆಯವರು, ಕಾರ್ಯಾಧ್ಯಕ್ಷ ವಿ. ಧನಂಜಯ ಕುಮಾರ್‌, ಸ್ಥಾಪಕ ವಂಶೀಯ ಅರಸರಾದ ಡಾ| ಪದ್ಮಪ್ರಸಾದ ಅಜಿಲರು ಮಾರ್ಗದರ್ಶನ ನೀಡಿದ್ದರೆ ವಿವಿಧೆಡೆಯಿಂದ ಆಗಮಿಸಿದ ಜೈನ ಸಮಾಜದ ಮುಖಂಡರು, ಶ್ರಾವಕ, ಶ್ರಾವಕಿಯರು ಉತ್ಸಾಹದಿಂದ ಕಾರ್ಯನಿರ್ವಹಿಸಿ ಕಾರ್ಯಕ್ರಮದ ಯಶಸ್ಸಿನಲ್ಲಿ ಪಾಲು ಪಡೆದಿದ್ದರು. ಇದೀಗ ಮಂಗಳಾಚರಣೆ ಸಮಯ.


      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus