Thursday, May 17, 2012
Last Updated: 12:24:52 PM IST
  • ನಾನೆಲ್ಲಿರುವೆ:
  • ಮುಖಪುಟ ರಾಜ್ಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • 1.40 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ
      • Udayavani | Feb 04, 2012

        ಬೆಂಗಳೂರು : ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಒಟ್ಟು 1.42 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ.

        ರಾಜ್ಯ ಸರ್ಕಾರ ನೀಡಿರುವ ಅಧಿಕೃತ ಮಾಹಿತಿಯಂತೆ ಡಿಸೆಂಬರ್‌ 2011ರವರೆಗೆ ಸರ್ಕಾರದ 36 ಇಲಾಖೆಗಳಲ್ಲಿ 1,42,330 ಹುದ್ದೆಗಳು ಖಾಲಿ ಇದೆ.

        ವಿಧಾನಪರಿಷತ್ತಿನಲ್ಲಿ ಜೆಡಿಎಸ್‌ನ ಬಸವರಾಜ ಹೊರಟ್ಟಿ ಅವರ ಪ್ರಶ್ನೆಗೆ ಲಿಖೀತ ಉತ್ತರದಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಈ ಮಾಹಿತಿ ನೀಡಿದ್ದಾರೆ.

        ರಾಜ್ಯ ಇತರ ಎಲ್ಲಾ ಇಲಾಖೆಗಳ ಪೈಕಿ ಶಿಕ್ಷಣ ಇಲಾಖೆಯಲ್ಲಿ ಅತಿ ಹೆಚ್ಚು ಅಂದರೆ, 24518 ಹುದ್ದೆಗಳು ಖಾಲಿ ಇದೆ. ವೈದ್ಯಕೀಯ ಶಿಕ್ಷಣ ಇಲಾಖೆ- 20413, ಪೊಲೀಸ್‌ ಇಲಾಖೆ- 16950 ಹಾಗೂ ಸಮಾಜ ಕಲ್ಯಾಣ ಇಲಾಖೆ 10546 ಕ್ರಮವಾಗಿ ನಂತರದ ಸ್ಥಾನದಲ್ಲಿವೆ.

        ಖಾಲಿ ಇರುವ ಒಟ್ಟು 1.42 ಲಕ್ಷ ಹುದ್ದೆಗಳ ಪೈಕಿ ಅಧಿಕಾರಿಗಳ ಮಟ್ಟದ 15,598 ಹುದ್ದೆಗಳು ಖಾಲಿ ಇದ್ದರೆ, 126732 ಸಿಬ್ಬಂದಿ ಹುದ್ದೆಗಳು ಖಾಲಿ ಇವೆ.

        ಹುದ್ದೆಗಳು ಖಾಲಿ ಇರುವ ಇಲಾಖೆಗಳು:

        ರಾಜ್ಯಪಾಲರ ಕಚೇರಿ-29, ನ್ಯಾಯಾಂಗ ಇಲಾಖೆ-7516, ವಾಣಿಜ್ಯ ತೆರಿಗೆ ಇಲಾಖೆ-1351, ಕಂದಾಯ ಇಲಾಖೆ-6108, ಶುಲ್ಕ ಮತ್ತು ನೋಂದಣಿ ಇಲಾಖೆ-153, ಅಬಕಾರಿ ಇಲಾಖೆ-2334, ಮೋಟಾರು ವಾಹನ ಇಲಾಖೆ-456, ಲೋಕಾಸೇವಾ ಆಯೋಗ-75, ಸಚಿವಾಲಯ-504, ಖಜಾನೆ-593, ಪೊಲೀಸ್‌ ಇಲಾಖೆ-16950, ಬಂದಿಖಾನೆ-757, ಸರ್ಕಾರಿ ಮುದ್ರಣಾಲಯ-876, ಲೋಕೋಪಯೋಗಿ ಇಲಾಖೆ-1973, ಶಿಕ್ಷಣ ಇಲಾಖೆ-24518, ತಾಂತ್ರಿಕ ಶಿಕ್ಷಣ ಇಲಾಖೆ-6601, ಯುವಜನ ಸೇವಾ ಇಲಾಖೆ-374, ಕನ್ನಡ ಮತ್ತು ಸಂಸ್ಕೃತಿ ಇಲಾಖೆ-413, ವೈದ್ಯಕೀಯ ಶಿಕ್ಷಣ ಇಲಾಖೆ-20413, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ-2675, ಮಾಹಿತಿ ಮತ್ತು ಪ್ರಸಾರ ಇಲಾಖೆ-66, ಸಮಾಜ ಕಲ್ಯಾಣ ಇಲಾಖೆ-10546, ಕಾರ್ಮಿಕ ಮತ್ತು ಉದ್ಯೋಗ ಇಲಾಖೆ-2242, ಮಹಿಳಾ ಮತ್ತು ಕಲ್ಯಾಣ ಇಲಾಖೆ-1989, ಕೃಷಿ ಮತ್ತು ತೋಟಗಾರಿಕೆ ಇಲಾಖೆ-7363, ಪಶುಸಂಗೋಪನೆ ಇಲಾಖೆ-5364, ಮೀನುಗಾರಿಕೆ ಇಲಾಖೆ-497, ಅರಣ್ಯ ಇಲಾಖೆ-2196, ಆಹಾರ ಮತ್ತು ನಾಗರಿಕ ಪೊರೈಕೆ ಇಲಾಖೆ-358, ಸಹಕಾರ ಇಲಾಖೆ-1513, ಬೃಹತ್‌ ನೀರಾವರಿ ಇಲಾಖೆ-581, ಸಣ್ಣ ನೀರಾವರಿ ಇಲಾಖೆ-507, ಕೈಗಾರಿಕಾ ಇಲಾಖೆ-1094, ಪ್ರವಾಸೋದ್ಯಮ ಇಲಾಖೆ-53 ಹಾಗೂ ಇತರೆ-13319 ಹುದ್ದೆಗಳು ಖಾಲಿ ಇವೆ.

        ಆಡಳಿತ ಸುಧಾರಣಾ ಆಯೋಗದ ಶಿಫಾರಸ್ಸಿನಂತೆ ರದ್ದಾದ ಹುದ್ದೆಗಳು:

        ಹಾರನಹಳ್ಳಿ ರಾಮಸ್ವಾಮಿ ನೇತೃತ್ವದ ಆಡಳಿತಾ ಸುಧಾರಣಾ ಆಯೋಗದ ಶಿಫಾರಸ್ಸಿನಂತೆ 2000ನೇ ವರ್ಷದಲ್ಲಿ ಖಾಲಿಯಿದ್ದ ಹುದ್ದೆಗಳ ಪೈಕಿ ಶೇ. 20, ಶೇ. 50 ಹಾಗೂ ಶೇ. 80 ರಂತೆ ವಿವಿಧ ಇಲಾಖೆಗಳಲ್ಲಿ ಹುದ್ದೆಗಳನ್ನು ಕಡಿತಗೊಳಿಸಲಾಗಿದೆ.

        ಕೃಷಿ ಇಲಾಖೆಯಲ್ಲಿ 563, ತೋಟಗಾರಿಕೆ-43, ಪಶುಸಂಗೋಪನೆ ಮತ್ತು ಮೀನುಗಾರಿಕೆ-1985, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ-457, ಸಹಕಾರ ಇಲಾಖೆ-407, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ-493 ಹುದ್ದೆಗಳನ್ನು ಕಡಿತಗೊಳಿಸಲಾಗಿದೆ. ಶಿಸ್ತು ಮತ್ತು ಆಡಳಿತ ಸುಧಾರಣೆ ಇಲಾಖೆಯ 775 ಹುದ್ದೆಗಳಿಗೆ ಕಡಿತದಿಂದ ವಿನಾಯಿತಿ ನೀಡಲಾಗಿದೆ.


      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus