ಹೊಸದಿಲ್ಲಿ: ಇತ್ತೀಚೆಗಿನ ಆಸ್ಟ್ರೇಲಿಯ ಪ್ರವಾಸ ನನ್ನ ಪಾಲಿಗೆ ದೊಡ್ಡ ಮಟ್ಟದಲ್ಲಿ ಕಲಿಕೆಯ ಅನುಭವವನ್ನು ಕೊಟ್ಟಿದೆ ಎಂದು ಬಂಗಾಲದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಾಹಾ ಹೇಳಿದ್ದಾರೆ. ಅವರು ಉತ್ತರ ವಲಯ ವಿರುದ್ಧ ನಡೆಯುತ್ತಿರುವ ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯದ ಮೊದಲ ದಿನ ಅಜೇಯ ಶತಕ ಹೊಡೆದಿದ್ದಾರೆ.ಈ ಶತಕ ದಾಖಲಿಸಲು ಆಸ್ಟ್ರೇಲಿಯದಲ್ಲಿ ಆಡಿರುವುದು ಬಹಳಷ್ಟು ನೆರವು ನೀಡಿದೆ ಎಂದು ತಿಳಿಸಿದ ಅವರು ಅಲ್ಲಿ ನಾವು ಬೌನ್ಸಿ ಪಿಚ್‌ನಲ್ಲಿ ಆಡಬೇಕಾಗುತ್ತದೆ. ಇದು ಒಬ್ಬನ ಬ್ಯಾಟಿಂಗ್ ಗುಣಮಟ್ಟವನ್ನು ಉತ್ತಮಪಡಿಸಲು ನೆರವು ನೀಡುತ್ತದೆ ಎಂದರು.ಶನಿವಾರದ ಈ ಶತಕ ಸಾಹಾ ಅವರ ಕ್ರಿಕೆಟ್ ಬಾಳ್ವೆಯ ಆರನೇ ಪ್ರಥಮ ದರ್ಜೆ ಶತಕ ಮತ್ತು ಈ ಋತುವಿನ ದ್ವಿತೀಯ ಶತಕವಾಗಿದೆ. ಇದು ನನ್ನ ಬಾಳ್ವೆಯ ಶ್ರೇಷ್ಠ ಶತಕವೆಂದು ನಾನು ಹೇಳಲಾರೆ. ಆ ಬಗ್ಗೆ ಯಾವುದೇ ಆಲೋಚನೆ ಕೂಡ ಮಾಡಿಲ್ಲ. ಆದರೆ ಇದು ನನ್ನ ಪಾಲಿಗೆ ವಿಶೇಷಗಳಲ್ಲಿ ಒಂದು ಎಂದು ಸಾಹಾ ತಿಳಿಸಿದರು.ಈ ಪಂದ್ಯದಲ್ಲಿ 16 ರನ್ ತಲಪಿದ ವೇಳೆ ಸಾಹಾ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 2 ಸಾವಿರ ರನ್ ಪೂರ್ತಿಗೊಳಿಸಿದ ಸಾಧನೆ ಮಾಡಿದರು.