Thursday, May 17, 2012
Last Updated: 12:59:19 PM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಸ್ನೂಕರ್‌: ಆದಿತ್ಯ ಮೆಹ್ತಾಗೆ ಪ್ರಶಸ್ತಿ
    • ಐಬಿಎಸ್‌ಎಫ್ ವಿಶ್ವದ ಮೂರನೇ ರ್‍ಯಾಂಕಿನ ಆಟಗಾರ ಕಮಲ್‌ ಚಾವ್ಲ ಅವರನ್ನು 6-2 ಅಂತರದಿಂದ ಸೋಲಿಸಿದರು

      • Udayavani | Feb 05, 2012

        ಪುಣೆ: ಸತತ ಆರು ಫ್ರೆಮ್‌ಗಳನ್ನು ಗೆಲ್ಲುವ ಮೂಲಕ ಹಾಲಿ ಚಾಂಪಿಯನ್‌ ಆದಿತ್ಯ ಮೆಹ್ತಾ ಅವರು ಐಬಿಎಸ್‌ಎಫ್ ವಿಶ್ವದ ಮೂರನೇ ರ್‍ಯಾಂಕಿನ ಆಟಗಾರ ಕಮಲ್‌ ಚಾವ್ಲ ಅವರನ್ನು 6-2 ಅಂತರದಿಂದ ಸೋಲಿಸಿ ರಾಷ್ಟ್ರೀಯ ಸ್ನೂಕರ್‌ ಚಾಂಪಿಯನ್‌ಶಿಪ್‌ನ ಪ್ರಶಸ್ತಿ ಗೆದ್ದುಕೊಂಡರು.

        ಇಲ್ಲಿನ ಪಿವೈಸಿ ಹಿಂದೂ ಜಿಮಾನದಲ್ಲಿ ನಡೆದ ಫೈನಲ್‌ ಹೋರಾಟದಲ್ಲಿ ಚಾವ್ಲ ಮೊದಲೆರಡು ಫ್ರೆಮ್‌ ಗೆಲ್ಲುವ ಮೂಲಕ ಮುನ್ನಡೆ ಪಡೆದಿದ್ದರು. ಆದರೆ ಆ ಬಳಿಕ ಪಂದ್ಯದಲ್ಲಿ ಹಿಡಿತ ಸಾಧಿಸಲು ವಿಫ‌ಲರಾದ ಅವರು ಪ್ರಶಸ್ತಿಯಿಂದ ವಂಚಿತರಾದರು. ರಾಷ್ಟ್ರೀಯ ಸ್ನೂಕರ್‌ನ ಫೈನಲ್‌ನಲ್ಲಿ ಮೊದಲ ಬಾರಿಗೆ ಆಡಿದ ಚಾವ್ಲ ಆತ್ಮವಿಶ್ವಾಸದಿಂದ ಹೋರಾಟ ಆರಂಭಿಸಿದ್ದರು. ಆದರೆ ದ್ವಿತೀಯ ಫ್ರೆàಮ್‌ ಬಳಿಕ ಗೆಲ್ಲುವ ಅವಕಾಶವನ್ನು ಕಳೆದುಕೊಳ್ಳುತ್ತ ಹೋದ ಕಾರಣ ಮೆಹ¤ ಅವರು ಇದರ ಪೂರ್ಣ ಲಾಭ ಎತ್ತಿದರು. ಸತತ ಆರು ಫ್ರೆàಮ್‌ ಗೆದ್ದು ಪ್ರಶಸ್ತಿ ವಶಪಡಿಸಿಕೊಂಡರು.

        ಆರಂಭದಲ್ಲಿ ನಾನು ಬಹಳಷ್ಟು ಒತ್ತಡಕ್ಕೆ ಒಳಗಾಗಿದ್ದೆ. ಅವರು ನನಗಿಂತ ಹೆಚ್ಚು ಚೆನ್ನಾಗಿ ಆಡಿದ್ದರು. ಆದರೆ ದ್ವಿತೀಯ ಫ್ರೆಮ್‌ ಬಳಿಕ ನನ್ನ ಯೋಜನೆಯಂತೆ ಆಡಲು ಆರಂಭಿಸಿ ಹಿಡಿತ ಸಾಧಿಸಿದೆ ಎಂದು ಮೆಹ¤ ತಿಳಿಸಿದರು.

      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus