ಮುಂಬಯಿ: ಮುಂಬಯಿ ಕನ್ನಡ ಸಂಘ 448ನೇ ಶ್ರೀ ಪುರಂದರದಾಸರ ಆರಾಧನೋತ್ಸವ ಹಮ್ಮಿಕೊಂಡಿದೆ.ಫೆ.12ರಂದು ಮೈಸೂರು ಅಸೋಸಿಯೇಶನ್ ಕಿರು ಸಭಾಗೃಹದಲ್ಲಿ ಅಪರಾಹ್ನ 2ರಿಂದ 5.30 ಗಂಟೆ ತನಕ ಶ್ರೀ ಪುರಂದರದಾಸರ ದೇವರ ನಾಮಗಳ ಗಾಯನ ಸ್ಪರ್ಧೆ, ಸಂಜೆ 6ರಿಂದ 7ರ ತನಕ ಶ್ರೀಮತಿ ವಿದುಷಿ ಶ್ಯಾಮಲಾ ಪ್ರಕಾಶ್ ಮುಂಬಯಿ ಇವರಿಂದ ಕರ್ನಾಟಕ ಸಂಗೀತ ಕಾರ್ಯಕ್ರಮ ಎಚ್.ಎಸ್. ಅಡೂರ್ ಮುಂಬಯಿ ಇವರ ಸಹಪ್ರಾಯೋಜಕತ್ವದಲ್ಲಿ ನಡೆಯುವುದು.ಸಭಾಸಮಾರಂಭದಲ್ಲಿ ಯಕ್ಷ ಮಾನಸ ಅಧ್ಯಕ್ಷ ಶೇಖರ ಆರ್. ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಸಂಘದ ಪ್ರಕಟನೆಯಲ್ಲಿ ತಿಳಿಸಲಾಗಿದೆ.