Thursday, May 17, 2012
Last Updated: 12:59:19 PM IST
  • ನಾನೆಲ್ಲಿರುವೆ:
  • ಮುಖಪುಟ ಜಗತ್ತು
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ನೇವಾಡದಲ್ಲಿ ರೋಮ್ನಿಗೆ ಭರ್ಜರಿ ಗೆಲುವು
    • ನೇವಾಡದಲ್ಲಿ ನಡೆದ ಚುನಾವಣೆಯಲ್ಲಿ ಮಿಟ್‌ ರೋಮ್ನಿ ಭಾರೀ ಅಂತರದಿಂದ ಗೆದ್ದು ಬಂದಿದ್ದಾರೆ.

      • Udayavani | Feb 05, 2012

        ವಾಷಿಂಗ್ಟನ್‌: ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಾರ್ಟಿಯ ಅಭ್ಯರ್ಥಿಯನ್ನು ಆಯ್ಕೆ ಮಾಡಲು ನೇವಾಡದಲ್ಲಿ ನಡೆದ ಚುನಾವಣೆಯಲ್ಲಿ ಮಿಟ್‌ ರೋಮ್ನಿ ಭಾರೀ ಅಂತರದಿಂದ ಗೆದ್ದು ಬಂದಿದ್ದಾರೆ. ಇದು ರೋಮ್ನಿಗೆ ದಕ್ಕಿರುವ ಸತತ ಎರಡನೇ ನೇರ ಜಯ. ಈ ಗೆಲುವಿನೊಂದಿಗೆ ಬರಾಕ್‌ ಒಬಾಮಾ ಅವರನ್ನು ಎದುರಿಸುವ ಅವಕಾಶವನ್ನು ರೋಮ್ನಿ ಇನ್ನಷ್ಟು ಗಟ್ಟಿ ಮಾಡಿಕೊಂಡಿದ್ದಾರೆ.

        17 ಕೌಂಟಿಗಳ ಪೈಕಿ 14 ಕೌಂಟಿಗಳ ಫ‌ಲಿತಾಂಶ ಮಸಾಚುಸೆಟ್ಸ್‌ನ ಮಾಜಿ ಗವರ್ನರ್‌ ರೋಮ್ನಿಗೆ ಪೂರ್ಣ ಬೆಂಬಲ ಇರುವುದನ್ನು ಸೂಚಿಸಿವೆ. ರೋಮ್ನಿ ಶೇ. 42 ಮತಗಳನ್ನು ಪಡೆದುಕೊಂಡಿದ್ದಾರೆ ಅವರ ಸಮೀಪ ಎದುರಾಳಿ ಸಂಸತ್ತಿನ ಮಾಜಿ ಸ್ಪೀಕರ್‌ ನ್ಯೂಟ್‌ ಗಿಂಗ್ರಿಕ್‌ ಶೇ. 25 ಮತ್ತು ಇನ್ನೋರ್ವ ಅಭ್ಯರ್ಥಿ ಪೆನಿಸಿಲ್ವೇನಿಯದ ಮಾಜಿ ಸೆನೇಟರ್‌ ರಿಕ್‌ ಸ್ಯಾಂಟೊರಮ್‌ ಶೇ. 13 ಮತಗಳನ್ನು ಗಳಿಸಿದ್ದಾರೆ.

        ನೇವಾಡದ ಗೆಲುವಿನ ಬಳಿಕ ಉತ್ತೇಜಿತರಾಗಿರುವ 64ರ ಹರೆಯದ ರೋಮ್ನಿ ಹಾಲಿ ಅಧ್ಯಕ್ಷರ ಗುರಿ ರಹಿತ ನೀತಿಗಳಿಂದಾಗಿ ನಮ್ಮ ಸಂಕಷ್ಟಗಳು ದೀರ್ಘ‌ವಾಗಿವೆ. ಇದು ಇನ್ನಷ್ಟು ಬಿಗಡಾಯಿಸಲಿವೆ ಎನ್ನುವ ಅಧ್ಯಕ್ಷರು ನಮಗೆ ಬೇಡ. ಎಲ್ಲವೂ ಅತ್ಯುತ್ತಮವಾಗಿರಬೇಕೆಂಬ ನಮ್ಮ ಬಲವಾದ ಹಂಬಲವೇ ನಮ್ಮನ್ನು ಅಮೆರಿಕನ್ನರೆಂದು ಗುರುತಿಸುತ್ತದೆ ಎಂದು ಹೇಳಿದ್ದಾರೆ.

      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • ಈ ವಿಭಾಗದಲ್ಲಿಯೂ ಇದೆ
      • Copyright @ 2009-2010 Udayavani.All rights reserved.
      • Designed & Hosted By 4cplus