Thursday, May 17, 2012
Last Updated: 12:59:19 PM IST
  • ನಾನೆಲ್ಲಿರುವೆ:
  • ಮುಖಪುಟ ಹೊರನಾಡು ಕನ್ನಡಿಗ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಭಾರತ್‌ ಬ್ಯಾಂಕ್‌ ವಸಾಯಿ: ಬಿಮಾ ಬ್ಯಾಂಕ್‌ ಪ್ರಶಸ್ತಿ
    • ಭಾರತ್‌ ಬ್ಯಾಂಕ್‌ನ ವಸಾಯಿ ಶಾಖೆಗೆ ಬಿಮಾ ಬ್ಯಾಂಕ್‌ ಪ್ರಶಸ್ತಿ ಲಭಿಸಿದೆ.

      • Udayavani | Feb 05, 2012

        ವಸಾಯಿ: ಭಾರತ್‌ ಬ್ಯಾಂಕ್‌ನ ವಸಾಯಿ ಶಾಖೆಗೆ ಬಿಮಾ ಬ್ಯಾಂಕ್‌ ಪ್ರಶಸ್ತಿ ಲಭಿಸಿದೆ. ಭಾರತ್‌ ಬ್ಯಾಂಕ್‌ನ ವಸಾಯಿ ಶಾಖೆಯು 104 ಜೀವ ವಿಮಾ ಪಾಲಿಸಿ ಹಾಗೂ 10.96 ಲಕ್ಷ ರೂಪಾಯಿಗಳ ಪ್ರಥಮ ಕಂತನ್ನು ಸಾಧಿಸಿದ್ದರಿಂದ ಎಲ್‌ಐಸಿಯ ಬಿಮಾ ಬ್ಯಾಂಕ್‌ ಪ್ರಶಸ್ತಿ ಪಡೆದುಕೊಂಡಿದೆ.

        ಬ್ಯಾಂಕ್‌ನ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲ್‌ಐಸಿಯ ಮಾರ್ಕೇಟಿಂಗ್‌ ಮ್ಯಾನೇಜರ್‌ ಅಮಿತಾವ್‌ ದತ್ತಾ ಅವರು ಪ್ರಶಸ್ತಿಯನ್ನು ಪ್ರಬಂಧಕ ದಯಾನಂದ ಆರ್‌. ಅಮೀನ್‌ ಹಾಗೂ ಸುಪರಿಂಟೆಂಡೆಂಟ್‌ ರಘುನಾಥ ಜಿ. ಹಳೆಯಂಗಡಿ ಅವರಿಗೆ ಹಸ್ತಾಂತರಿಸಿದರು. ಇನ್ಸೂರೆನ್ಸ್‌ ಸಲಹೆಗಾರ ಎಚ್‌. ಆರ್‌. ಪೂಜಾರಿ, ಎಲ್‌ಐಸಿಯ ಪ್ರಬಂಧಕ ಪ್ರಭಾ ಉತ್ತೇಕರ್‌, ಉಪ ಪ್ರಬಂಧಕ ಸಂತೋಷ್‌ ಆಚರೇಕರ್‌ ಸಮಯೋಚಿತವಾಗಿ ಮಾತಾಡಿದರು.

        ಭಾರತ್‌ ಬ್ಯಾಂಕಿನ ಜನರಲ್‌ ಮ್ಯಾನೇಜರ್‌ ಶೇಖರ್‌ ಪೂಜಾರಿಯವರು ಮಾತನಾಡಿ ಬ್ಯಾಂಕಿನ ದೈನಂದಿನ ವ್ಯವಹಾರಗಳ ನಡುವೆ ವಿಮಾ ಪಾಲಿಸಿಯ ಸೇವೆಯನ್ನು ಗ್ರಾಹಕರಿಗೆ ನೀಡುವುದು ಇಂದಿನ ಅಗತ್ಯವೆಂದರು.

        ರೇವತಿ ನವೀನ್‌, ಜಯಪ್ರಸಾದ ಬಂಗೇರ, ನಾರಾಯಣ ಟಿ. ಸಾಲ್ಯಾನ್‌, ವೃಂದಾ ಎಂ. ಸುವರ್ಣ, ವೀಣಾ ಸಿ. ಪೂಜಾರಿ, ಪ್ರಭಾವತಿ ಕೋಟ್ಯಾನ್‌, ಸಂಜೀವ ಸಿ. ಪೂಜಾರಿ, ಪುರುಷೋತ್ತಮ ಸುವರ್ಣ ಮತ್ತು ನಿಲೇಶ್‌ ಅಹಿರ್‌ ಉಪಸ್ಥಿತರಿದ್ದರು.

        ಬ್ಯಾಂಕಿನ ಹಿರಿಯ ಪ್ರಬಂಧಕ ದಯಾನಂದ ಆರ್‌. ಅಮೀನ್‌ ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಉಪ ಪ್ರಬಂಧಕ ಕಲ್ಪನಾ ನಾರಾಯಣ ವಂದಿಸಿದರು.

      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಸಭೆಯು ಮೇ 12 ರಂದು ಬ್ಯಾಂಕ್‌ನ ಪ್ರಧಾನ ಕಚೇರಿ ಕಾಂದಿವಲಿ ಪೂರ್ವದ ಸ್ವಪ್ನಾಸಿದ್ಧಿ ಕಾರ್ಯಾಲಯದಲ್ಲಿ ನಡೆಯಿತು.
      • ಈ ವಿಭಾಗದಲ್ಲಿಯೂ ಇದೆ
      • Copyright @ 2009-2010 Udayavani.All rights reserved.
      • Designed & Hosted By 4cplus