ಲಂಡನ್: ದಟ್ಟ ಮಂಜು ಮತ್ತು ಭಾರೀ ಹಿಮಪಾತದ ಎಚ್ಚರಿಕೆಯ ಹಿನ್ನೆಲೆಯಲ್ಲಿ ಲಂಡನ್‌ನ ಹಿತ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಬೇಕಾಗಿದ್ದ ಸುಮಾರು ಶೇ. 30 ವಿಮಾನಗಳ ನಿಯೋಜಿತ ಹಾರಾಟವನ್ನು ರದ್ದುಗೊಳಿಸಲಾಗಿದೆ.ಸದಾ ವಿಮಾನಗಳಿಂದ ತುಂಬಿರುವ ಈ ನಿಲ್ದಾಣದಲ್ಲಿ ಸುಮಾರು 10 ಸೆಂ.ಮೀ.ದಪ್ಪಕ್ಕೆ ಹಿಮ ಸುರಿಯಬಹುದು ಎಂದು ಮುನ್ನೆಚ್ಚರಿಕೆ ನೀಡಲಾಗಿತ್ತು ಎಂದು ವಿಮಾನ ನಿಲ್ದಾಣದ ಅಧಿಕಾರಿ ನಾರ್ಮಂಡ್ ಬೊಯ್‌ವಿನ್ ಹೇಳಿದರು.ರಾಜಧಾನಿಯ ರಸ್ತೆಗಳಲ್ಲೆಲ್ಲ ಬಲು ದಟ್ಟವಾಗಿ ವ್ಯಾಪಿಸಿರುವ ಹಿಮ ಕರಗಿ ಹೋಗುವಂತೆ ಮಾಡಲು ಸುಮಾರು 10,000 ಟನ್‌ಗಳಿಗೂ ಹೆಚ್ಚು ಉಪ್ಪನ್ನು ಸುರಿಯಲಾಗಿದೆ. ಈ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಬೇಕಾದ ಸುಮಾರು 1,200 ವಿಮಾನಗಳನ್ನು ತಡೆ ಹಿಡಿಯಲಾಗಿದೆ ಎಂದು ಬ್ರಿಟಿಷ್ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ. ಇವುಗಳಲ್ಲಿ ರಾತ್ರಿ ವೇಳೆ ಭಾರತದತ್ತ ಹಾರಾಟ ನಡೆಸುವ ವಿಮಾನಗಳೂ ಸೇರಿವೆ.ಪ್ರಯಾಣಿಕರಿಗೆ ಹಚ್ಚಿನ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಇದೇ ವೇಳೆ ವಿಮಾನ ನಿಲ್ದಾಣ ಮೂಲದ ಪ್ರಕಟನೆಯೊಂದು ತಿಳಿಸಿದೆ.