Thursday, May 17, 2012
Last Updated: 12:59:19 PM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಕಿದಿಯೂರು ರಜತ ಸಂಭ್ರಮ: ಸಿಎಂ ಭೇಟಿ
    • ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಫೆ. 5ರಂದು ಕಿದಿಯೂರು ಹೊಟೇಲಿಗೆ ಭೇಟಿ ನೀಡಿದರು.

      • Udayavani | Feb 05, 2012

        ಉಡುಪಿ: ಕಿದಿಯೂರು ಹೊಟೇಲಿನ ರಜತ ಸಂಭ್ರಮ, ನಾಗದೇವರ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ನಾಗಮಂಡಲ ಕಾರ್ಯಕ್ರಮಗಳು ಫೆ. 6 ರಿಂದ ಫೆ. 8ರವರೆಗೆ ಜರಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಫೆ. 5ರಂದು ಕಿದಿಯೂರು ಹೊಟೇಲಿಗೆ ಭೇಟಿ ನೀಡಿದರು.

        ಹೊಟೇಲಿನ ಈಶಾನ್ಯ ಮೂಲೆಯಲ್ಲಿ ಪುನರ್‌ನಿರ್ಮಾಣಗೊಳಿಸಲಾದ ಶ್ರೀನಾಗದೇವರ ಸಂಪೂರ್ಣ ಶಿಲಾಮಯ ದೇವಸ್ಥಾನ ಹಾಗೂ ಅದೇ ಪರಿಸರದಲ್ಲಿ ರಚಿಸಲಾದ ಅನಂತಶಯನ ಮೂರ್ತಿಯನ್ನು ವೀಕ್ಷಿಸಿದ ಸಿಎಂ ಸದಾನಂದ ಗೌಡರು ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಕಾರ್ಯಕ್ರಮ ಸಾಂಗವಾಗಿ ಸಾಗಲಿ ಎಂದು ಹಾರೈಸಿದರು.

        ಹೊಟೇಲಿನ ಮಾಲಕರಾದ ಭುವನೇಂದ್ರ ಕಿದಿಯೂರು ಮುಖ್ಯಮಂತ್ರಿಗಳಿಗೆ ಹೊಟೇಲಿನ ರಜತ ಸಂಭ್ರಮದ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.

        ಪತ್ನಿ ಶ್ರೀಮತಿ ಹೀರಾ ಬಿ. ಕಿದಿಯೂರು, ಪುತ್ರ ಜಿತೇಶ್‌ ಕಿದಿಯೂರು, ಪುತ್ರಿ ಭವ್ಯಶ್ರೀ ಕಿದಿಯೂರು, ಜಿಲ್ಲಾ ಉಸ್ತುವಾರಿ ಸಚಿಡ ಡಾ| ವಿ.ಎಸ್‌. ಆಚಾರ್ಯ, ಉಡುಪಿ ಶಾಸಕ ಕೆ. ರಘುಪತಿ ಭಟ್‌, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಉದಯಕುಮಾರ ಶೆಟ್ಟಿ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

        ಇದೇ ಸಂದರ್ಭದಲ್ಲಿ ಜ್ಯೋತಿಷಿ ವಿದ್ವಾನ್‌ ಕಬಿಯಾಡಿ ಜಯರಾಮ ಆಚಾರ್ಯ ಅವರ ಮಾರ್ಗದರ್ಶನದಲ್ಲಿ ಉಗ್ರಾಣ ಮುಹೂರ್ತವು ನೆರವೇರಿತು.

      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus