Thursday, May 17, 2012
Last Updated: 12:59:19 PM IST
  • ನಾನೆಲ್ಲಿರುವೆ:
  • ಮುಖಪುಟ ರಾಷ್ಟ್ರೀಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಗೋವಾ ಸರಕಾರಕ್ಕೆ ಎಂಜಿಪಿ ಬೆಂಬಲ ಹಿಂದೆಗೆತ
      • Udayavani | Feb 05, 2012

        ಪಣಜಿ: ಗೋವಾದ ಕಾಂಗ್ರೆಸ್‌ ನೇತೃತ್ವದ ಮೈತ್ರಿ ಸರಕಾರಕ್ಕೆ ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ (ಎಂಜಿಪಿ) ಬೆಂಬಲ ಹಿಂದೆಗೆದುಕೊಂಡಿದೆ ಮತ್ತು ಮುಂಬರುವ ಮಾ. 3ರ ವಿಧಾನಸಭಾ ಚುನಾವಣೆಗಳಿಗಾಗಿ ಪ್ರಮುಖ ವಿಪಕ್ಷ ಬಿಜೆಪಿ ಜತೆ ಮೈತ್ರಿಯನ್ನು ಪ್ರಕಟಿಸಿದೆ.

        ಆಳುವ ಮೈತ್ರಿಕೂಟಕ್ಕೆ ಬೆಂಬಲ ಹಿಂದೆಗೆದುಕೊಂಡಿರುವುದನ್ನು ಲಿಖೀತವಾಗಿ ರಾಜ್ಯಪಾಲ ಕೆ. ಶಂಕರನಾರಾಯಣನ್‌, ವಿಧಾನಸಭಾ ಸ್ಪೀಕರ್‌ ಪ್ರತಾಪ್‌ ಸಿಂಗ್‌ ರಾಣೆ ಮತ್ತು ಮುಖ್ಯಮಂತ್ರಿ ದಿಗಂಬರ್‌ ಕಾಮತ್‌ ಅವರಿಗೆ ತಿಳಿಸಲಾಗಿದೆ ಎಂದು ಎಂಜಿಪಿ ಅಧ್ಯಕ್ಷ ದೀಪಕ್‌ ಧವಳೀಕರ್‌ ತಿಳಿಸಿದ್ದಾರೆ.

        ಪಕ್ಷದ ಸಚಿವ ರಾಮಕೃಷ್ಣ ಧವಳೀಕರ್‌ ಸಂಪುಟಕ್ಕೆ ಕಳೆದ ವಾರ ರಾಜೀನಾಮೆ ನೀಡಿದ್ದರು. ಗೋವಾದ ಅತ್ಯಂತ ಹಳೆಯ ಪ್ರಾದೇಶಕ ಪಕ್ಷವಾಗಿರುವ ಎಂಜಿಪಿ ಸದ್ಯ 40 ಸದಸ್ಯರ ಸದನದಲ್ಲಿ ಇಬ್ಬರು ಶಾಸಕರನ್ನು ಹೊಂದಿದೆ.

        ಚುನಾವಣಾಪೂರ್ವ ಮೈತ್ರಿಯನ್ನು ಪ್ರಕಟಿಸಲು ಎರಡೂ ಪಕ್ಷಗಳ ನಾಯಕರು ಬಳಿಕ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

        ಬಿಜೆಪಿ 31 ಕ್ಷೇತ್ರಗಳಲ್ಲಿ ಮತ್ತು ಎಂಜಿಪಿ 8 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ಎಂಜಿಪಿ ಮತ್ತು ಬಿಜೆಪಿ ಸಹಜ ಮಿತ್ರರಾಗಿವೆ ಎಂದು ಬಿಜೆಪಿ ಅಧ್ಯಕ್ಷ ನಿತಿನ್‌ ಗಡ್ಕರಿ ಹೇಳಿದರು ಮತ್ತು ಮೈತ್ರಿಕೂಟ ಬಹುಮತ ಸಾಧಿಸುವ ಕುರಿತು ವಿಶ್ವಾಸ ವ್ಯಕ್ತಪಡಿಸಿದರು.

        ಉತ್ತಮ ಆಡಳಿತ ಒದಗಿಸುವುದು ನಮ್ಮ ಏಕೈಕ ಗುರಿಯಾಗಿದೆ. ಜಂಟಿ ಚುನಾವಣಾ ಪ್ರಣಾಳಿಕೆಯನ್ನು ಶೀಘ್ರ ಪ್ರಕಟಿಸಲಾಗುವುದು. ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ದಿಲ್ಲಿಯಲ್ಲಿ ಬಿಜೆಪಿ ನಾಯಕರ ಸಭೆ ಸೇರಿಲಿದೆ ಎಂದು ಅವರು ತಿಳಿಸಿದರು.

        ಎಂಜಿಪಿ ತನ್ನ ಅಭ್ಯರ್ಥಿಗಳ ಯಾದಿಯನ್ನು ಸೋಮವಾರ ಪ್ರಕಟಿಸಲಿದೆ.


      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus