ಪುಣೆ: ಇಲ್ಲಿನ ವಿಮನ್ ನಗರದ ಪಂಚತಾರಾ ಹೊಟೇಲ್‌ನಿಂದ ವೇಶ್ಯಾವಾಟಿಕೆ ಪ್ರಕರಣದಲ್ಲಿ ಸಣ್ಣಮಟ್ಟದ ತಮಿಳು ಚಿತ್ರನಟಿ ಕರೋಲಿನ್ ಮರಿಯಾ ಆಸಾನ್ ಶನಿವಾರ ರಾತ್ರಿ ಸೆರೆಯಾಗಿದ್ದಾರೆ.ಪೊಲೀಸರು ಜಾಲ ಹರಡಿ ಡಮ್ಮಿ ಗ್ರಾಹಕನನ್ನು ಕಳುಹಿಸಿ ಆಕೆಯನ್ನು ಬಂಧಿಸಿದರು. ಕರೋಲಿನ್ ಚೆನ್ನೆ çಯಲ್ಲಿ ಕೊಂಚ ಪ್ರಸಿದ್ಧಿಯಲ್ಲಿದ್ದಾರೆ. ರೈನ್, ವಡಚಲಾಮ್ ಮತ್ತು ಇತರ ಚಿತ್ರಗಳಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಈಕೆ ಚೆನ್ನೆ ç ಮತ್ತು ಬೆಂಗಳೂರಿನಲ್ಲಿ ವಜ್ರ ಮತ್ತು ಜವುಳಿ ಉದ್ಯಮ ಕಂಪೆನಿಗಳ ವಿನ್ಯಾಸಗಳಿಗೆ ರೂಪದರ್ಶಿಯಾಗಿಯೂ ಕೆಲಸ ಮಾಡುತ್ತಿದ್ದರು. ವಿಮನ್ ನಗರ ಚೌಕಿ ಪೊಲೀಸರು ಆಕೆಯ ವಿರುದ್ಧ ಕೇಸು ದಾಖಲಿಸಿದ್ದಾರೆ.ಆಕೆಯ ಮ್ಯಾನೇಜರ್‌ಛ ಮತ್ತು ಫಿಲ್ಮ್ ಸ್ಟುಡಿಯೋ ಮಾಲಕ ಎಂ. ರಾಜ್‌ಕುಮಾರ್ (32) ಅವರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.