Thursday, May 17, 2012
Last Updated: 1:25:56 PM IST
  • ನಾನೆಲ್ಲಿರುವೆ:
  • ಮುಖಪುಟ ರಾಷ್ಟ್ರೀಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ತಲಾಕ್‌ಗೆ ತಲಾಕ್‌?
      • Udayavani | Feb 05, 2012

        ಹೊಸದಿಲ್ಲಿ : ಮುಸ್ಲಿಮ್‌ ಚಿಂತಕರ ಗುಂಪೊಂದು ಮುಸ್ಲಿಮ್‌ ವೈಯಕ್ತಿಕ ಕಾನೂನಿಗೆ ಕೆಲವು ಮಹತ್ವದ ತಿದ್ದುಪಡಿಗಳನ್ನು ಮಾಡುವ ನಿಟ್ಟಿನಲ್ಲಿ ಮುಂದಡಿಯಿಟ್ಟಿದೆ. ತಲಾಕ್‌ ಮತ್ತು ಬಹುಪತ್ನಿತ್ವ ನಿಷೇಧಂತಹ ಕೆಲವು ಕ್ರಾಂತಿಕಾರಿ ನಿಯಮಗಳನ್ನು ಒಳಗೊಂಡಿರುವ ಈ ಕರಡು ಸಂಹಿತೆಯನ್ನು ರಾಷ್ಟ್ರವ್ಯಾಪಿ ಸಲಹೆಗಳನ್ನು ಪಡೆದುಕೊಂಡ ಬಳಿಕ ರೂಪಿಸಲಾಗಿದೆ.

        ಕರಡು ನಿಯಮಗಳಿಗೆ ಸಂಹಿತೆಯ ರೂಪ ಕೊಟ್ಟ ಬಳಿಕ ಮುಸ್ಲಿಮ್‌ ವೈಯಕ್ತಿಕ ಕಾನೂನಿಗೆ ಸೂಕ್ತ ತಿದ್ದುಪಡಿ ಮಾಡುವುದಕ್ಕಾಗಿ ಅದನ್ನು ಸಂಸತ್‌ಗೆ ಕಳುಹಿಸಲಾಗುವುದು. ನಿಜವಾದ ಇಸ್ಲಾಮ್‌ ಏನು ಹೇಳುತ್ತದೆ ಮತ್ತು ಕೆಲವು ಮುಲ್ಲಾಗಳು ಶತಮಾನಗಳಿಂದ ಜನರಿಗೆ ಏನನ್ನು ನಿರಾಕರಿಸುತ್ತಾ ಬಂದಿದ್ದಾರೆ ಎನ್ನುವುದನ್ನು ಮುಸ್ಲಿಮರಿಗೆ ತಿಳಿಸುವ ಪ್ರಯತ್ನವನ್ನು ಮಾಡಲಾಗಿದೆ.

        ಮುಸ್ಲಿಮ್‌ ವೈಯಕ್ತಿಕ ಕಾನೂನು ಬದಲಾಗಬೇಕಾದುದು ಈ ಸಂದರ್ಭದ ಅಗತ್ಯ. ನಾವು ಯಾವುದೇ ಹೊಸ ಕಾನೂನು ತರುತ್ತಿಲ್ಲ ಬದಲಾಗಿ ಕುರಾನ್‌ ಮುಸ್ಲಿಮ್‌ ಪುರುಷರು ಮತ್ತು ಮಹಿಳೆಯರಿಗೆ ಕೊಟ್ಟಿರುವ ಹಕ್ಕುಗಳನ್ನು ಪುನಃ ಸ್ಥಾಪಿಸುತ್ತಿದ್ದೇವೆ ಎಂದಿದ್ದಾರೆ ಸುಧಾರಣಾವಾದಿ ಮುಸ್ಲಿಮ್‌ ಚಿಂತಕ ಅಸYರ್‌ ಅಲಿ ಎಂಜಿನಿಯರ್‌.

        ಒಮ್ಮೆಲೆ ಮೂರು ಸಲ ತಲಾಕ್‌ ಹೇಳಿ ಸಂಬಂಧ ಕಡಿದುಕೊಳ್ಳುವ ನಿಯಮ ಕುರಾನ್‌ನಲ್ಲಿಲ್ಲ. ಈ ಕಾನೂನು ರದ್ದಾಗಬೇಕೆಂದು ಪ್ರತಿಪಾದಿಸುತ್ತಿದ್ದಾರೆ ಮುಂಬಯಿಯ ಇನ್‌ಸ್ಟಿಟ್ಯೂಟ್‌ ಆಫ್ ಇಸ್ಲಾಮಿಕ್‌ ಸ್ಟಡೀಸ್‌ನ ಖುತುಬ್‌ ಜೆಹಾನ್‌ ಕಿದ್ವಾಯಿ. ಬಹುಪತ್ನಿತ್ವ ನಿರ್ಬಂಧಿತ ನಿಯಮ. ಏಕಪತ್ನಿತ್ವವನ್ನು ಇಸ್ಲಾಂ ಧರ್ಮ ಪ್ರೋತ್ಸಾಹಿಸುತ್ತದೆ. ಔಹಾದ್‌ನಲ್ಲಿ ನೂರಾರು ಪುರುಷರು ಕೊಲ್ಲಲ್ಪಟ್ಟ ಕಾರಣ ಅರೇಬಿಯದಲ್ಲಿ ವಿಧವೆಯರ ಮತ್ತು ಅನಾಥರ ಸಂಖ್ಯೆ ಹೆಚ್ಚಿತ್ತು. ಪುರುಷ ನಾಲ್ಕು ಮದುವೆಯಾಗಲು ಕುರಾನ್‌ನಲ್ಲಿ ಅವಕಾಶವಿದ್ದರೂ ಇದೇ ವೇಳೆ ನಾಲ್ವರಿಗೂ ನ್ಯಾಯ ಸಲ್ಲಿಸಲು ಅಸಾಧ್ಯವಾಗಿರುವುದರಿಂದ ಒಬ್ಬಳನ್ನು ಮಾತ್ರ ಮದುವೆಯಾಗಬೇಕೆಂದು ಹೇಳಿದೆ ಎಂದು ಕೇರಳ ಹೈಕೋರ್ಟ್‌ನ ವಿಶ್ರಾಂತ ನ್ಯಾಯಾಧೀಶ ಶಮುÕದ್ದೀನ್‌ ತಿಳಿಸಿದ್ದಾರೆ.

        ಕರಡು ಸಂಹಿತೆಯಲ್ಲಿ ಎಲ್ಲ ಮುಸ್ಲಿಮರು ಮದುವೆಯನ್ನು ಸರಕಾರಿ ಇಲಾಖೆಯಲ್ಲಿ ನೋಂದಾಯಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ನಿಕಾನಾಮಗಳ ದಾಖಲೆ ಇಟ್ಟುಕೊಳ್ಳಲು ನಿಕಾಕ ರಿಜಿಸ್ಟ್ರಾರ್‌ಗಳ ನೇಮಕ, ಮದುವೆಗೆ ಹುಡುಗಿಯ ಒಪ್ಪಿಗೆ ಕಡ್ಡಾಯ, ಮದುವೆಗೆ ಹೆಣ್ಣಿಗೆ 18 ಮತ್ತು ಗಂಡಿಗೆ 21 ವರ್ಷವಾಗುವುದನ್ನು ಕಡ್ಡಾಯಗೊಳಿಸುವಂತಹ ಹಲವು ಪ್ರಸ್ತಾವಗಳು ಇವೆ.


      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus