Thursday, May 17, 2012
Last Updated: 1:25:56 PM IST
  • ನಾನೆಲ್ಲಿರುವೆ:
  • ಮುಖಪುಟ ರಾಷ್ಟ್ರೀಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಹಣ ಒದಗಿಸಲು ಯೋಜನಾ ಆಯೋಗಕ್ಕೆ ಶಿಫಾರಸು
      • Udayavani | Feb 05, 2012

        ಹೊಸದಿಲ್ಲಿ: ಅಭಿವೃದ್ಧಿ ಕಾರ್ಯಗಳಿಗೆ ಬೇಕಾದ ನಿಧಿಯನ್ನು ಜಿಲ್ಲಾ ಕೇಂದ್ರಗಳ ಮೂಲಕ ಒದಗಿಸುವ ಬದಲು ನೇರಾಗಿ ಬ್ಲಾಕ್‌ ಪಂಚಾಯತ್‌ಗಳ ಮೂಲಕವೇ ಒದಗಿಸಲು ಪಂಚಾಯತ್‌ ರಾಜ್‌ ಖಾತೆಯು ಯೋಜನಾ ಆಯೋಗಕ್ಕೆ ಶಿಫಾರಸು ಮಾಡಿದೆ.

        'ಅನೇಕ ಪಂಚಾಯತ್‌ಗಳಲ್ಲಿ ಹಿಂದುಳಿದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಹಣ ಮಂಜೂರಾಗಿದ್ದರೂ ಅದು ಸರಿಯಾಗಿ ಒದಗಿ ಬರುತ್ತಿಲ್ಲ. ಹಿಂದುಳಿದ ಪ್ರದೇಶದ ಅಭಿವೃದ್ಧಿ ಕಾರ್ಯಗಳಿಗೆ ಖರ್ಚು ಮಾಡಬೇಕಾದ ಬಹಳಷ್ಟು ಹಣ ಅನಗತ್ಯವಾಗಿ ಬೇರೆ ಪ್ರದೇಶಗಳಿಗೆ ಸೋರಿಕೆಯಾಗುತ್ತಿದೆ' ಎಂದು ಪಂಚಾಯತ್‌ ರಾಜ್‌ ಸಚಿವ ವಿ.ಕಿಶೋರ್‌ ಚಂದ್ರ ದೇವ್‌ ಮಾಧ್ಯಮಕ್ಕೆ ತಿಳಿಸಿದರು.

        'ಈ ವಿಚಾರವಾಗಿ ನಾನು ಯೋಜನಾ ಆಯೋಗದ ಜತೆ ಮಾತನಾಡಿದ್ದೇನೆ. ಈ ಹಿನ್ನೆಲೆಯಲ್ಲಿ ಬ್ಲಾಕ್‌ ಪಂಚಾಯತ್‌ಗಳ ಮೂಲಕವೇ ಅಭಿವೃದ್ಧಿಗೆ ಬೇಕಾದ ನಿಧಿಯನ್ನು ವಿತರಿಸುವ ಕುರಿತು ಮಾತನ್ನಾಡಿದ್ದೇನೆ' ಎಂದ ಸಚಿವರು ಬಿಆರ್‌ಜಿಎಫ್ ಮೂಲಕ ಮಂಜೂರಾದ ಹಣವನ್ನು ಆಯಾ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೇ ಬಳಸುವಂತಾಗಬೇಕು' ಎಂದರು. ಅಭಿವೃದ್ಧಿ ಕಾರ್ಯಗಳಿಗೆ ಇನ್ನಷ್ಟು ಹಣ ಸಿಗುವಂತಾಗಲು ಪ್ರಯತ್ನಿಸುವುದಾಗಿ ಅವರು ಇದೇ ವೇಳೆ ತಿಳಿಸಿದರು.

        ಒದಗಿಸಲಾದ ನಿಧಿಗಳ ಸಮರ್ಪಕ ಉಪಯೋಗ ತಿಳಿಯಲು ಸರಕಾರವು ಎಲ್ಲ ಪಂಚಾಯತ್‌ಗಳಿಗೆ 2014ರೊಳಗೆ ಬ್ರಾಡ್‌ಬ್ಯಾಂಡ್‌ ಸೌಲಭ್ಯವನ್ನು ಸಹ ನೀಡಲಿದೆ.


      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus