ಉಡುಪಿ: ಮದ್ಯ ವಯಸ್ಸಿಗೆ ಕಾಲುಡುತ್ತಿದ್ದಂತೆ ಜನರು ಕಾಲ ಕಾಲಕ್ಕೆ ವೈದ್ಯಕೀಯ ತಪಾಸಣೆಗಳನ್ನು ಮಾಡಿಸಿಕೊಳ್ಳಬೇಕು. ಕೊರತೆಗಳು ಕಂಡು ಬಂದಲ್ಲಿ ಸೂಕ್ತ ವೈದ್ಯಕೀಯ ಶುಶ್ರೂಶೆಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ತಿಳಿಸಿದರುಅವರು ಫೆ. 5ರಂದು ಉಡುಪಿ ಆದರ್ಶ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಎಲುಬು, ಕೀಲು, ಸಂಧಿವಾತ, ಪ್ಲಾಸ್ಟಿಕ್ ಸರ್ಜರಿ ಹಾಗೂ ದಂತ ತಪಾಸಣೆಯನ್ನು ಉದ್ಘಾಟಿಸಿ ಮಾತನಾಡಿದರು.ಆದರ್ಶ ಆಸ್ಪತ್ರೆಯ ವೈದ್ಯರುಗಳಾದ ಡಾ| ಮೋಹನ್‌ದಾಸ್ ಶೆಟ್ಟಿ, ನರರೋಗ ತಜ್ಞ ಪ್ರೊ| ಎ. ರಾಜಾ, ಡಾ| ಜೀನಾ ಡಿಸೋಜ ಹಾಗೂ ವಿಶೇಷ ಚಿಕಿತ್ಸೆ ನೀಡಲು ಆಗಮಿಸಿದ್ದ ಮಂಗಳೂರಿನ ವೈದ್ಯ ಡಾ| ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.ದೇಶದಲ್ಲಿಂದು ಮೂರು ಕೋಟಿಗೂ ಅಧಿಕ ಜನರು ಎಲುಬು ಸವಕಳಿ ಸಮಸ್ಯೆಯಿಂದ ಬಳಲುತ್ತಿರುವುದು ಅತ್ಯಂತ ಶೋಚನೀಯ. ಎಲುಬು ಸವಕಳಿಯನ್ನು ಮುಂಚಿತವಾಗಿಯೇ ನೋಡಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಳ್ಳಲು ಆಸಕ್ತಿತೋರಬೇಕೆಂದು ಆದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ| ಜಿ.ಎಸ್. ಚಂದ್ರಶೇಖರ ತಮ್ಮ ಸ್ವಾಗತ ಭಾಷಣದಲ್ಲಿ ತಿಳಿಸಿದರು.ಆಸ್ಪತ್ರೆಯ ವ್ಯವಸ್ಥಾಪಕ ಡೈಗೋ ಕ್ವಾಡ್ರೆಸ್ ಕಾರ್ಯಕ್ರಮ ನಿರೂಪಿಸಿದರು. ಆಸ್ಪತ್ರೆಯ ಸಿಬಂದಿ ಪ್ರಕಾಶ್ ವಂದಿಸಿದರು.