Thursday, May 17, 2012
Last Updated: 1:25:56 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಸಾಪ್ತಾಹಿಕ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಆಧುನಿಕ ಮೇಘಸಂದೇಶ
      • ಪಿ. ಕೆ. ಬಾಗಲಕೋಟೆ | Feb 12, 2012

        ಪ್ರೇಮನಿವೇದನೆಯನ್ನು ದೇವರ ಪ್ರಾರ್ಥನೆಯಾಗಿಸಿದವನು ಮಾತ್ರ ಪ್ರೀತಿಯಲ್ಲಿ ಆಧ್ಯಾತ್ಮಿಕತೆಯನ್ನು ಕಾಣಲು ಸಮರ್ಥನಾದಾನು ! ವ್ಯಾಲೆಂಟೈನ್‌ ಡೇ ಎಂದರೆ ಅದೇ ಅಲ್ಲವೆ?

        ಪ್ರಣಯಸಂದೇಶಗಳು ಹಂಸದ ಮೂಲಕ ರವಾನೆಯಾಗುತ್ತಿದ್ದ ಕಾಲವೊಂದಿತ್ತು. ಹಂಸವು ನಳ- ದಮಯಂತಿಯರ ನವುರಾದ ಪ್ರೇಮಪ್ರಕರಣಕ್ಕೆ ಸಾಕ್ಷಿಯಾಗಿತ್ತು. ಹಂಸದಮಯಂತಿ ಕಾವ್ಯ, ಪ್ರೇಮಿಗಳಿಗೆ ಸ್ಫೂರ್ತಿ ಕೊಡುತ್ತಿದ್ದ ನಾಡಿನಲ್ಲಿ ಅಂಚೆವ್ಯವಸ್ಥೆ ಬಂದು ಹತ್ತಾರು ದಶಕಗಳು ಸಂದುಹೋಗಿವೆ ! ಅಂಚೆಯೆಂದರೆ ಹಂಸದ ತದ್ಭವ ರೂಪ. ನಳದಮಯಂತಿಯರು ಹಂಸದ ಆಗಮನಕ್ಕೆ ಕಾತರಿಸಿ ಕುಳಿತಂತೆ ಆಧುನಿಕ ಪ್ರೇಮಿಗಳು ಅಂಚೆಯವನ ಕಾಲಸಪ್ಪಳವನ್ನು ಕಾದು ಕುಳಿತುಕೊಳ್ಳುತ್ತಿದ್ದರು. ಅಂಚೆಯವನ ಕೈಯಿಂದ ಪತ್ರವನ್ನು ಜೋಪಾನದಿಂದ ಎತ್ತಿಕೊಂಡು, ಅದನ್ನೊಮ್ಮೆ ಆಘ್ರಾಣಿಸಿ, ಅದರ ಗಂಧವನ್ನು ಮನಸ್ಸಿನ ತುಂಬ ತುಂಬಿಕೊಂಡು ನಂತರ ಪತ್ರವನ್ನು ತೆರೆದು ಅಕ್ಷರಗಳ ಮೇಲೆ ಕಣ್ಣಾಡಿಸುತ್ತಿದ್ದರು.

        ಮತ್ತೂಂದೆಡೆಯಲ್ಲಿ , ನಮ್ಮದು ಮೇಘದೂತದ ಕಾವ್ಯಪರಂಪರೆಯೂ ಹೌದು. ಕುಬೇರನ ರಾಜ್ಯದಿಂದ ಗಡಿಪಾರಾದ ಯಕ್ಷನೊಬ್ಬ ಪತ್ನಿಗೆ ಗಿರಿಗಳಾಚೆಯಿಂದ ಮೋಡಗಳ ಮೂಲಕ ವಿರಹಯಾತನೆಯನ್ನು ಬಿತ್ತರಿಸುತ್ತಿದ್ದ ಕಾವ್ಯಮಯ ಬದುಕನ್ನು ಕಲ್ಪಿಸಿಕೊಂಡು ರೋಮಾಂಚನಗೊಳ್ಳುತ್ತಿದ್ದವರು ನಾವು. ಗುಡುಗು  ಬಂದರೆ ಅಲಕಾಪಟ್ಟಣಕ್ಕೆ ಮೋಡಗಳು ಅದೇನೋ ಸಂದೇಶಗಳನ್ನು ತಂದಿವೆ ಎಂದು ತಿಳಿಯಲಾಗುತ್ತಿತ್ತು. ಈಗ, ಗುಡುಗು ಸಿಡಿಲುಗಳ ಬದಲಿಗೆ ಪ್ರೇಮಿಗಳು ಮೊಬೈಲ್‌ನ ರಿಂಗಣವನ್ನು ಕಾಯುತ್ತ ಕುಳಿತಿರುತ್ತಾರೆ. ಮೊಬೈಲ್‌ಗ‌ಳಲ್ಲಿ ಎಂಥ ಸಂದೇಶವಿದೆ ಎಂದು ತವಕದಿಂದ ಹೆಬ್ಬೆರಳಿನಲ್ಲಿ ತಡಕಾಡುತ್ತಾರೆ.

        ಕಾಳಿದಾಸನ ಕಾವ್ಯದ ಸೌಂದರ್ಯ ವರ್ಣನೆ, ಶೃಂಗಾರ ರೂಪಕಗಳಂತೂ ತುಂಬ ಜನಪ್ರಿಯ. ಆದರೆ, ಅವೆಲ್ಲವೂ ಕಲ್ಪನೆಗೆ ಸಂಬಂಧಪಟ್ಟದ್ದು. ಮನಸ್ಸಿನ ಕಲ್ಪನೆ ಎಂಬುದು ಕಣ್ಣಿಗೆ ಕಾಣುವ ದೃಶ್ಯಕ್ಕಿಂತಲೂ ಮಹತ್ವದ್ದು. ಕಲ್ಪನೆಗೆ ಚೌಕಟ್ಟಿಲ್ಲ. ಕಣ್ಣಿನ ಅನುಭವಕ್ಕೆ ಪೂರ್ಣವಿರಾಮವಿದೆ. ಕಲ್ಪನೆಗಳು, ಕನಸುಗಳು ಮನಸ್ಸನ್ನು ಅರಳಿಸುತ್ತವೆ. ಆದರೆ, ದೃಶ್ಯಾನುಭವಗಳು ಮನಸ್ಸನ್ನು ಕೆರಳಿಸುತ್ತವೆ. ಕಣ್ಣುಮುಚ್ಚಿ ಕಲ್ಪಿಸಬೇಕಾದುದನ್ನೆಲ್ಲ ಮೊಬೈಲ್‌ನ ಪುಟ್ಟ ಸ್ಕ್ರೀನ್‌ನಲ್ಲಿ ನೋಡುತ್ತ ನಮ್ಮ ಶಿಷ್ಟಾಚಾರದ ಬೇಲಿಯನ್ನು ನಾವೇ ದಾಟುತ್ತಿದ್ದೇವೆ. ಸಭ್ಯತೆಯ ದೃಷ್ಟಿಯಲ್ಲಿ ನಮ್ಮದು ಬಟ್ಟಾಬಯಲಾಗುವ ಸಂಸ್ಕೃತಿಯಲ್ಲ, ಬದಲಾಗಿ, ದ್ವೀಪಗಳಂತೆ ನಮಗೆ ನಾವೇ ದಡಗಳನ್ನು ನಿರ್ಮಿಸಿಕೊಂಡ ಜೀವನಶೈಲಿಯವರು ನಾವು. ಈ ಸಭ್ಯತೆಯ ದ್ವೀಪವನ್ನು ಮುಕ್ತ ವ್ಯವಹಾರದ ಅಲೆಗಳು ಕೊಚ್ಚಿಕೊಂಡು ಹೋಗದ ಹಾಗೆ ಕಾಯುವ ಹೊಣೆಗಾರಿಕೆ ನಮ್ಮ ಮೇಲೆಯೇ ಇದೆ.

        ಒಬ್ಟಾಕೆಯನ್ನು ತೀವ್ರವಾಗಿ ಪ್ರೀತಿಸುತ್ತಿದ್ದ ನಿಸ್ವಾರ್ಥಿಯೊಬ್ಬ ತನ್ನ ಪ್ರೇಮನಿವೇದನೆಯನ್ನು ಆಕೆಯಲ್ಲಿ ಮಾಡಿಕೊಳ್ಳಲಾಗದೆ, ಕಣ್ಣುಮುಚ್ಚಿ ಇಷ್ಟ ದೇವರಲ್ಲಿ ಪ್ರಾರ್ಥಿಸುತ್ತಾನೆ, "ಆಕೆಗೆ ನನಗಿಂತ ಪ್ರೀತಿಸುವವನೊಬ್ಬ ಸಿಗುವಂತಾಗಲಿ ದೇವರೆ'

        ಪ್ರೇಮನಿವೇದನೆಯನ್ನು ದೇವರ ಪ್ರಾರ್ಥನೆಯಾಗಿಸಿ ದವನು ಮಾತ್ರ ಪ್ರೀತಿಯಲ್ಲಿ ಆಧ್ಯಾತ್ಮಿಕತೆಯನ್ನು ಕಾಣಲು ಸಮರ್ಥನಾದಾನು!


      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಜೂನ್‌ ತಿಂಗಳು ಹತ್ತಿರವಾದಂತೆ ನಗರಗಳ ಅಪ್ಪ, ಅಮ್ಮಂದಿರಿಗೆ ತಮ್ಮ ಚಿಣ್ಣರನ್ನು ಹತ್ತಿರದ ಯಾವ ಒಳ್ಳೆಯ ಶಾಲೆಗಳಿಗೆ ಸೇರಿಸುವುದು ಎಂಬ ಚಿಂತೆ...
      • ಈ ವಿಭಾಗದಲ್ಲಿಯೂ ಇದೆ
      • Copyright @ 2009-2010 Udayavani.All rights reserved.
      • Designed & Hosted By 4cplus