ಉಡುಪಿ ಜಲ ಸಮೃದ್ಧಿ ಇರುವ, ಅತ್ಯುತ್ತಮ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶವಿರುವ ವಿಶಿಷ್ಟ ಜಿಲ್ಲೆಯಾಗಿದೆ.

ಉಡುಪಿ ಜಿಲ್ಲೆಯಲ್ಲಿ ಹಲವಾರು ನದಿಗಳು ಪಶ್ಚಿಮ ಘಟ್ಟದ ತಪ್ಪಲಲ್ಲಿ ಹುಟ್ಟಿ ಪಶ್ಚಿಮಾಭಿ ಮುಖವಾಗಿ ಹರಿದು ಅರಬ್ಬಿ ಸಮುದ್ರವನ್ನು ಸೇರುತ್ತವೆ. ಇವು ಗಳಲ್ಲಿ ಸೀತಾ, ಸ್ವರ್ಣ, ವಾರಾಹಿ ಹಾಗೂ ಗಂಗೊಳ್ಳಿ ಪ್ರಮುಖ ನದಿಗಳಾಗಿವೆ. ಚಕ್ರಾ ನದಿ, ಕುಬj , ಸೌಪರ್ಣಿಕಾ ಇತರ ನದಿಗಳು.

ದೇವಳಗಳ ನಗರಿ ಎಂದೇ ವಿಶ್ವಖ್ಯಾತಿ ಪಡೆದಿರುವ ಉಡುಪಿ ಅಪಾರ ನೈಸರ್ಗಿಕ ಸಂಪನ್ಮೂಲಗಳ ಸಿರಿವೀಡು ಎನ್ನಲು ಅಡ್ಡಿಯಿಲ್ಲ. ಜಿಲ್ಲೆಯ ಹಚ್ಚಹಸುರಿನ ಪ್ರಕೃತಿ, ತುಂಬಿ ಹರಿಯುವ ನದಿಗಳು, ಭೋರ್ಗರೆದು ನುಗ್ಗಿ ಬರುವಂತೆ ಕಾಣುವ ಸಮುದ್ರ ಇವೆಲ್ಲವೂ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಿವೆ.
ಉಡುಗೆ-ತೊಡುಗೆ: ಬಿಸಿಲಬೇಗೆ ಮತ್ತು ಬೆವರುವಿಕೆ ಪ್ರಮಾಣ ಜಾಸ್ತಿ ಇರುವುದರಿಂದ ಹೆಚ್ಚಿನವರು ಹತ್ತಿ ಬಟ್ಟೆಗಳನ್ನೇ ಆಯ್ಕೆಮಾಡಿಕೊಳ್ಳುತ್ತಾರೆ. ತರುಣ ಜನಾಂಗ ಪ್ಯಾಂಟ್-ಶರ್ಟ್, ತರುಣಿಯರು ಚೂಡಿದಾರ, ಜೀನ್ಸ್ ಧರಿಸುತ್ತಾರೆ. ನಡುಪ್ರಾಯ ಸ್ಥರು ಪ್ಯಾಂಟ್-ಶರ್ಟ್- ಮಹಿಳೆಯರು ಸೀರೆ ಸಾಮಾನ್ಯವಾಗಿ ಧರಿಸುತ್ತಾರೆ. ವಯೋವೃದ್ಧರು ಧೋತಿ ಹಾಗೂ ವೃದ್ಧೆಯರು ಸೀರೆ ಧರಿಸುವರು.

ಆಹಾರ: ಉಡುಪಿಯ ಆಹಾರ ವಿಶ್ವಮಾನ್ಯವಾಗಿದೆ. ಬಾಯಲ್ಲಿ ನೀರೂರಿಸುವ ಇಡ್ಲಿ-ವಡಾ ದೋಸೆ, ಉಪ್ಪಿಟ್ಟುಗಳನ್ನು ಪರಿಚಯಿಸಿದ ಖ್ಯಾತಿ ಉಡುಪಿಗಿದೆ.
ಗ್ರಾಮೀಣ ತಿಂಡಿ ತಿನಸುಗಳಾದ ಗೋಳಿಬಜೆ, ಸಂಜೀರ, ಪತ್ರೋಡೆ, ಓಲೆ ಕಡುಬು,ಶಾವಿಗೆ, ಸಜ್ಜಿಗೆ-ಬಜಿಲ್ ಹಾಗೂ ಅಕ್ಕಿ ರೊಟ್ಟಿ ಎಂತಹ ಆಹಾರಪ್ರಿಯರಿಗೂ ಹಸಿವೆಯನ್ನು ಹೆಚ್ಚುಸುತ್ತವೆ.

ಮೂರು ಶೈಲಿ: ತುಳು ಶಿವಳ್ಳಿ ಬ್ರಾಹ್ಮಣರ ಅಡುಗೆ, ಕೊಂಕಣಿ ಸಮುದಾಯದವರ ಅಡುಗೆ ಮತ್ತು ಬಂಟರ ಬಗೆ ಬಗೆಯ ಅಡುಗೆ-ಹೀಗೆ ಮೂರು ಪ್ರಧಾನ ಶೈಲಿಯಲ್ಲಿ ಆಹಾರ ತಯಾರಾಗುತ್ತವೆ.
ಜಿಲ್ಲೆಯಲ್ಲಿ ಸಸ್ಯ ಸಂಪತ್ತು: ತೆಂಗು, ಗೇರು , ಮಾವು ಮತ್ತು ಹಲಸು ಈ ಜಿಲ್ಲೆಯಲ್ಲಿ ಯಥೇತ್ಛ .