Thursday, May 17, 2012
Last Updated: 1:25:56 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಸಾಪ್ತಾಹಿಕ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ದೊಡ್ಡಬಳ್ಳಾಪುರ ಎಂದರೆ ಕೊಂಗಾಡಿಯಪ್ಪ...
    • ದೊಡ್ಡಬಳ್ಳಾಪುರ ಎಂದರೆ ಕೊಂಗಾಡಿಯಪ್ಪ...

      • ಡಿ. ಸಿ. ನಾಗೇಶ್‌ | Feb 19, 2012

        ಸಮಾಜಸೇವಕ ಕೊಂಗಾಡಿಯಪ್ಪನವರ ಜನ್ಮಶತಮಾನೋತ್ಸವ ವರ್ಷವಿದು...

        ದೊಡ್ಡಬಳ್ಳಾಪುರ ಎಂದರೆ ಕೊಂಗಾಡಿಯಪ್ಪ.  ಕೊಂಗಾಡಿಯಪ್ಪ ಎಂದರೆ ಅದರಲ್ಲಿ ದೊಡ್ಡಬಳ್ಳಾಪುರ ಇರಲೇಬೇಕು. ಇವತ್ತು ದೊಡ್ಡಬಳ್ಳಾಪುರದಲ್ಲಿ ಪುರೋಭಿವೃದ್ಧಿಯಾಗಿದೆ ಎಂದರೆ ಇದರಲ್ಲಿ ಕೊಂಗಾಡಿಯಪ್ಪನವರ ಬೆವರು ಹರಿಯುತ್ತಿದೆ. ಸಾಕ್ಷರತೆ, ಕೈಗಾರಿಕೋದ್ಯಮದ ಕನಸು ಆಗಲೇ ಇವರ ಕಂಡಿದ್ದರು. ಅದನ್ನು ನನಸು ಮಾಡಲು ಇಡೀ ಜೀವನವನ್ನು ತೇಯ್ದಿಟ್ಟರು.

        ಇವರ ವೈಯಕ್ತಿಕ ಜೀವನ, ಸಾರ್ವಜನಿಕ ಬದುಕಿನ ನಡುವೆ ಯಾವುದೇ ಬೌಂಡರಿ ಇರಲಿಲ್ಲ. ಬದುಕನ್ನು ಊರಿನ, ಜನರ ಕ್ಷೇಮಕ್ಕೆ ಎತ್ತಿಟ್ಟ ಮಹಾನ್‌ಪುರುಷ ಕೊಂಗಾಡಿಯಪ್ಪ ಜೀವನಬಂಡಿಯನ್ನು ಸೇವೆಯ ದಾರಿಯಲ್ಲೇ ಎಳೆದರು. ಇದನ್ನು ಕಂಡ ಮೈಸೂರು ಮಹಾರಾಜರು, ವಿಶ್ವೇಶ್ವರಯ್ಯನವರು ಬೆರಗಾದದ್ದು ಉಂಟು. ನಾಲ್ವಡಿ ಕೃಷ್ಣರಾಜ ಒಡೆಯರ್‌ ಲೋಕಸೇವಾನಿರತ ಬಿರುದು ನೀಡಿ ಗೌರವಿಸಿದರು. 

         ಕೊಂಗಾಡಿಯಪ್ಪನವರ ಬದುಕನ್ನು ಇಣುಕಿ ನೋಡಿದರೆ ಇಂದಿನ ಹದಗೆಟ್ಟಿರುವ ಶೈಕ್ಷಣಿಕ ಕ್ಷೇತ್ರ ಅನೇಕ ಪರಿಹಾರೋಪಾಯಗಳು ಸಿಗುತ್ತವೆ. ಇವರು ಹುಟ್ಟಿದ್ದು 1861 ಫೆ. 22 ರಂದು. ಹುಟ್ಟಿದಾಗಿನಿಂದ ಸಾಯುವ ತನಕ ಸೇವೆಯೇ ಮೂಲಮಂತ್ರ. ಈಗ ನಾವು ನೋಡುತ್ತಿರುವ ಸಾಕ್ಷರತಾ ಆಂದೋಲನ, ವಯಸ್ಕ ಶಿಕ್ಷಣ ಪದ್ಧತಿಯನ್ನು ಯಾವ ಸರ್ಕಾರಿ ಸುತ್ತೋಲೆಗಳನ್ನು ಪಡೆಯದೇ ತಾವೇ ಶುರುಮಾಡಿದ್ದರು.  ಸ್ಕೂಲು ಬಿಟ್ಟು ಬೀಡಾಡಿಯಾಗಿ ಅಡ್ಡಾಡುತ್ತಿದ್ದ ಹುಡುಗರನ್ನು ಮನೆಗೆ ಕರೆದುಕೊಂಡು ಹೋಗಿ ಊಟ ಹಾಕಿ, ಪಾಠ ಹೇಳಿ, ಸ್ಕೂಲಿಗೆ ಕಳಿಸುತ್ತಿದ್ದರು. ಸಾಕ್ಷರತೆ ಬದುಕಿನ ದೀವಟಿಗೆ ಎಂದು ನಂಬಿದವರು ಕೊಂಗಾಡಿಯಪ್ಪ. ಇವತ್ತು ದೊಡ್ಡಬಳ್ಳಾಪುರದ ಶೈಕ್ಷಣಿಕ ಪ್ರಗತಿಯಲ್ಲಿ ಇವರ ಕನಸುಗಳಿವೆೆ. ಇವತ್ತು ಅಲ್ಲಿ ತಲೆ ಎತ್ತಿರುವ ರೇಷ್ಮೆ ಮಗ್ಗ ಉದ್ಯಮ ರೂಪ ಪಡೆಯಲು ಕೊಂಗಾಡಿಯಪ್ಪನವರು ಅಂದು ಹಾಕಿದ ಅಡಿಪಾಯವೇ ಕಾರಣ.

        ಇವರ ಪರಿಸರ ಪ್ರೀತಿಗೆ ಮಾರುಹೋಗದವರು ಯಾರಿ¨ªಾರೆ? ಆಂಗ್ಲೋ ವರ್ನಾಕ್ಯುಲರ್‌ ಶಾಲೆಯ ಉಪಾಧ್ಯಾಯರಾಗಿದ್ದರು. ನಿವೃತ್ತರಾದ ನಂತರ ಅಟೆಂಡೆನ್ಸ್‌ ಅಧಿಕಾರಿಯಾದರು. ಕೊಂಗಾಡಿಯಪ್ಪ ತಮಗೆ ಬರುತ್ತಿದ್ದ ಪಗಾರದ (20- 25ರೂ.)ಅಷ್ಟೂ ಹಣವನ್ನು ತೆಗೆದು ಕೊಂಡು ಹೋಗಿ ಲಾಲ್‌ಬಾಗ್‌ ಬಳಿಯ ಓಬಳಪ್ಪನ ತೋಟದಲ್ಲಿ ಸಸಿಗಳನ್ನು ತರುತ್ತಿದ್ದರು. ಸೈಕಲ್‌ ಮೇಲೆ ಕಲಾಸಿ ಪಾಳ್ಯಕ್ಕೆ ತಂದು, ಆನಂತರ ಬಸ್‌ನಲ್ಲಿ ಊರಿಗೆ ಸಾಗಿಸಿಕೊಂಡು ಬರುತ್ತಿದ್ದರು. ಅವುಗಳನ್ನು ಘಾಟಿ- ಹಾಡೋನಳ್ಳಿ ರಸ್ತೆಯಂಚಿನಲ್ಲಿ ವಿದ್ಯಾರ್ಥಿಗಳ ನೆರವಿನಿಂದ ನೆಡುತ್ತಿದ್ದರು. ಕೊಂಗಾಡಿಯಪ್ಪನವರು ಛತ್ರಿಯಲ್ಲಿ ಗುರುತು ಮಾಡಿದ ಕಡೆ ವಿದ್ಯಾರ್ಥಿಗಳು ನೆಡಬೇಕಿತ್ತು. ಇಂದು ಘಾಟಿ ಸುಬ್ರಹ್ಮಣ್ಯ ರಸ್ತೆಯಲ್ಲಿ ನೂರಾರು ವರ್ಷಗಳ ಕಾಲದ ಸಾಲು ಮರಗಳು ಇವೆ. ಎಲ್ಲವೂ ಕೊಂಗಾಡಿಯಪ್ಪನವರ ಕೊಡುಗೆ. ಇವರ ಗಿಡ ನೆಡುವ ಕಾರ್ಯದಲ್ಲಿ ಎರಡು ಉದ್ದೇಶವಿತ್ತು. ಒಂದು ಘಾಟಿ ಸುಬ್ರಹ್ಮಣ್ಯ ಅವರ ಮನೆ ದೇವರು. ಅಲ್ಲಿಗೆ ಹೋಗುವ ಭಕ್ತರಿಗೆ ನೆರವಾಗಲಿ ಎಂದು. ಇನ್ನೊಂದು ವಿದ್ಯಾರ್ಥಿಗಳಲ್ಲೂ ಪರಿಸರ ಕಾಳಜಿ ಮೂಡಬೇಕು ಎನ್ನುವ ಉದ್ದೇಶವೂ ಆಗಿತ್ತು. 

         ಇವರ ಬದುಕು ಹೇಗಿತ್ತು ಎನ್ನಲು ಇÇÉೊಂದು ಉದಾಹರಣೆ ಇದೆ.

         ಆ ಕಾಲದಲ್ಲಿ ದೊಡ್ಡಬಳ್ಳಾಪುರ ವಿದ್ಯುತ್‌ ಇಲ್ಲದೇ ಕತ್ತಲಲ್ಲಿ ಮುಳುಗಿತ್ತು. ಕುಡಿಯಲು ನೀರು ಸಹ ಇಲ್ಲ. ಲಾಟೀನ್‌ ಬೆಳಕು ರಾತ್ರಿ ಕತ್ತಲು ಓಡಿಸಲು, ಬೆಳಗ್ಗೆ ಅಡುಗೆಗೆ ಸೌದೆ ಒಲೆ. ಬದುಕು ನರಕವಾಗಿತ್ತು. ನೇಕಾರರ ಸ್ಥಿತಿಯಂತೂ ಚಿಂತಾಜನಕವಾಗಿತ್ತು. ಇದೇ ಸಮಯದಲ್ಲಿ  ನಾಲ್ವಡಿ ಕೃಷ್ಣರಾಜ ಒಡೆಯರ್‌ ರೈಲಿನಲ್ಲಿ ಬಾಂಬೆಗೆ ಹೊರಟಿದ್ದರು. ರೈಲು ದೊಡ್ಡಬಳ್ಳಾಪುರದ ಮೂಲಕವೇ ಹೋಗಬೇಕಿತ್ತು.
        ಕೊಂಗಾಡಿಯಪ್ಪನವರಿಗೆ ಈ ವಿಷಯ ತಿಳಿದ ಕೂಡಲೇ ಸುಮ್ಮನೆ ಇರಲಿಲ್ಲ. ಮಹಾರಾಜರು ಬರುವ ಸಮಯ ತಿಳಿದುಕೊಂಡು ಬೆಳಗ್ಗೆ 5 ಗಂಟೆಗೇ ಸ್ಕೌಟ್‌ಡ್ರೆಸ್‌ನಲ್ಲಿ ರೈಲ್ವೇ ನಿಲ್ದಾಣದಲ್ಲಿ ಮೊಕ್ಕಾಂ ಹೂಡಿದರು. 10 ನಿಮಿಷಗಳ ಕಾಲ ಮಹಾರಾಜರ ರೈಲನ್ನು ನಿಲ್ಲಿಸಿ ದೊಡ್ಡಬಳ್ಳಾಪುರದ ಯೋಗಕ್ಷೇಮ ಹೇಳಿದರು.  ನೀರು, ಕರೆಂಟು ಬೇಕೇಬೇಕು ಎಂದು ನಾಗರಿಕರ ಪರವಾಗಿ ಪಟ್ಟು ಹಿಡಿದು ಮನವಿ ಮಾಡಿದರು.  ಕೆಲವೇ ತಿಂಗಳಲ್ಲಿ  ಊರಿನ ತುಂಬಾ ಬೆಳಕು ಹರಿದಾಡಿತು.

        ಇದೇ ರೀತಿ ಇವರ ಶಿಕ್ಷಣ ಪ್ರೀತಿ ಬಹು ದೊಡ್ಡದು. ವಿದ್ಯಾರ್ಥಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸುವುದಕ್ಕೆ ಹೋರಾಟವನ್ನೇ  ಮಾಡುತ್ತಿದ್ದರು. ಮೈಸೂರು ಸಂಸ್ಥಾನದಲ್ಲಿ ಪ್ರಥಮವಾಗಿ ಎರಡು ಪುರಸಭಾ ಪ್ರೌಢಶಾಲೆಗಳು ಪ್ರಾರಂಭವಾದುವು. ಇದರಲ್ಲಿ ಒಂದನ್ನು ದೊಡ್ಡಬಳ್ಳಾಪುರಕ್ಕೆ ತರಿಸುವುದಕ್ಕೆ ಕೊಂಗಾಡಿಯಪ್ಪನವರ ಹೋರಾಟ ಬಹಳ ದೊಡ್ಡದು. ನೇಯ್ಗೆಯ ಶ್ರೇಯೋಭಿವೃದ್ದಿಗೂ ಕೊಂಗಾಡಿಯಪ್ಪನವರು ತಲೆ ಕೆಡಿಸಿ ಕೊಂಡಿದ್ದರು. ಆಗ ಸೀರೆಗೆ ಬಣ್ಣ ಹಾಕುವುದು ಕಷ್ಟದ ಕೆಲಸ. 
        ಆದ್ದರಿಂದ ಇವರ ಶಾಲೆಯಲ್ಲಿದ್ದ ಶಾಂಪೂರ್‌ ಪಾಪಣ್ಣ ಅವರನ್ನು ಮುಂಬಯಿಗೆ ಕಳುಹಿಸಿ ಹೆಚ್ಚಿನ ತರಬೇತಿ ಕೊಡಿಸಿದರು. ಆ ನಂತರ ಬಂದು ಎಲ್ಲರಿಗೂ ಬಣ್ಣ ಹಾಕುವ ಬಗೆ ಹೇಳಿ ಕೊಟ್ಟರು. ನೇಯ್ಗೆ ತರಬೇತಿ ಶಾಲೆಯನ್ನು ದೊಡ್ಡಬಳ್ಳಾಪುರದಲ್ಲಿ  ಸ್ಥಾಪಿಸಲು ಹೋರಾಟ ಮಾಡಿದ್ದರು.

         ಕೊಂಗಾಡಿಯಪ್ಪಎಂದರೆ ದೊಡ್ಡಬಳ್ಳಾಪುರದ ಸಹಾಯವಾಣಿ.  ಊರಿನ ಕಷ್ಟವೇ ಇವರ ಕಷ್ಟ. ಊರಿಗೆ ಯಾರೇ ಅಧಿಕಾರಿಗಳು ಬಂದರೂ ಮೊದಲು ಅವರಿಗೆ ಹೂ ಹಾರ ಹಾಕಿ, ಕೈಗೆ ಎರಡು ನಿಂಬೆ ಹಣ್ಣು ಕೊಟ್ಟು ಬರಮಾಡಿ ಕೊಳ್ಳುವ ಉಸಾಬರಿ ಕೊಂಗಾಡಿಯಪ್ಪನವರದೇ. ಅವರಿಗೆ ಊರಿನ ಕಷ್ಟಗಳ ಪಟ್ಟಿ ಕೊಟ್ಟು ಪರಿಹರಿಸುವಂತೆ ಮನವಿ ಮಾಡುತ್ತಿದ್ದರು.

        ಕೊಂಗಾಡಿಯಪ್ಪನವರಿಗೆ ಮಕ್ಕಳೆಂದರೆ ಪ್ರಾಣ. ಅವರಿಗೆ ಪಾಠ ಹೇಳುವುದು ಸೊಗಸು. "ಬಾರೋ ಪಾಠ ಹೇಳ್ತೀನಿ. ನೀನು ಮುಂದೆ ದೊಡ್ಡ ವ್ಯಕ್ತಿಯಾಗಬೇಕು' ಎಂದು ಇಂಗ್ಲೀಷ್‌, ಕನ್ನಡ ವನ್ನು ಹೇಳಿ ಕೊಡುತ್ತಿದ್ದರು. ಕೈಗೆ ಸಿಕ್ಕ ಮಕ್ಕಳಿಗೆÇÉಾ ಕ, ಕಾ, ಕಿ, ಕೀ ಹೇಳುತ್ತಿದ್ದರಿಂದ ಇವರಿಗೆ ಕಾಕಣ್ಣ ಎಂಬ ಹೆಸರೂ ಬಂದಿತ್ತು.  ಪರೀಕ್ಷೆ ಹತ್ತಿರ ಬಂದರೆ ಇವರ ಮನೆಯೇ ಶಾಲೆ. ಲೋಯರ್‌ ಸೆಕೆಂಡರಿಯಲ್ಲಿರುವ ಬಡ ವಿದ್ಯಾರ್ಥಿಗಳಿಗೆ ಇವರ ಮನೆಯಲ್ಲಿಯೇ ಊಟ. ವಿದ್ಯಾರ್ಥಿಗಳ ಓದಿಗೆ ನೆರವಾಗುವುದು ಎಂದರೆ ಇವರಿಗೆ ಸಂಭ್ರಮ. ಊಟಕ್ಕಾಗಿ ಅಡುಗೆಯವರನ್ನು ಸಿದ್ಧ ಮಾಡುತ್ತಿದ್ದರು.

          ಮನೆಯಲ್ಲಿ ಗದ್ಯ, ಪದ್ಯ, ಸಂಸ್ಕೃತ, ವ್ಯಾಕರಣ ಅನುರಣನಗೊಳ್ಳುತ್ತಿತ್ತು. ವಿದ್ಯಾರ್ಥಿಗಳು ಓದು ವುದಕ್ಕೆಂದೇ ನಡುಮನೆ ಇತ್ತು. ಗೋಡೆಯ ಮೇಲೆ ದೀಪ ಇಟ್ಟು ಸುತ್ತ ಹುಡುಗರು ಕೂತು ಓದಿಕೊಳ್ಳಬೇಕಿತ್ತು.  ಬೆಳಗ್ಗೆ 5 ಗಂಟೆಗೆ ಎದ್ದೇಳಬೇಕು. ಪ್ರತಿ ಶುಕ್ರವಾರ ಸರಸ್ವತಿ ಪೂಜೆ ಮಾಡಿ ಪ್ರಸಾದ ವಿನಿಯೋಗ ಮಾಡುತ್ತಿದ್ದರು. ಸುತ್ತಮುತ್ತಲ ಹಳ್ಳಿಯವರು ಜಾತಿ, ಮತ ಎನ್ನುವ ಬೇಧ ಭಾವ ಇಲ್ಲದೇ ಕೊಂಗಾಡಿಯಪ್ಪನವರ ಮನೆಯಲ್ಲಿರುತ್ತಿದ್ದರು. ಮನೆಗೆ ಬಂದವರನ್ನು ಸುಮ್ಮನೆ ಅಂತೂ ಕಳಿಸುತ್ತಿರಲಿಲ್ಲ. ದೊಡ್ಡ ಅಕ್ಕಿ, ಕೆಂಪು ಅಕ್ಕಿ ಘಮ, ಘಮ ಪರಿಮಳದ ಅನ್ನ ಬಡಿಸುತ್ತಿದ್ದರು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದರೆ ಖರ್ಚು ಹೆಚ್ಚು ಎಂದು ಬೇಸರ ಮಾಡಿಕೊಳ್ಳುವ ಗುಣದವರಲ್ಲ. ಬದಲಾಗಿ, ಅವರಿವರ ಹತ್ತಿರ ದವಸ, ಧಾನ್ಯಗಳನ್ನು ಬೇಡಿ ತರುತ್ತಿದ್ದರು.  ಸುಮಾರು 60 ವರ್ಷಗಳ ಕಾಲ ಅನ್ನದಾನ, ವಿದ್ಯಾದಾನಗಳನ್ನು ಮಾಡಿದ ಹಿರಿಮೆ ಇವರಿಗಿದೆ. ಇವರ ಆತಿಥ್ಯ ಸ್ವೀಕರಿಸಿದವರಲ್ಲಿ ಡಾ. ಎಚ್‌. ನರಸಿಂಹಯ್ಯನವರೂ ಒಬ್ಬರು.

           ಸತ್ಯ, ಅಂಸೆಯ ಗಾಂಧೀತತ್ವ ಇವರ ಜೀವನ ಮಂತ್ರವಾಗಿತ್ತು. ಹರಿಜನ ಕೇರಿಗೆ ಹೋಗಿ ಅಲ್ಲಿ ದುಶ್ಚಟಗಳ ಪರಿಣಾಮದ ಅರಿವು ಮೂಡಿಸುತ್ತಿದ್ದರು. ಎÇÉಾ ಜಾತಿಗಳವರಿಗೂ ಶಿಕ್ಷಣ ಬೇಕು ಎಂದು ಮುಸ್ಲಿಂ, ಹರಿಜನಕ್ಕೆ ಶಾಲೆ ತೆರೆಯುವಂತಾಯಿತು. ಅವರು ಅಕ್ಷರ ಬೆಳಕಿನಿಂದ ಬದುಕನ್ನು ಬೆಳಗಲೂ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಇವರ ಸೇವಾ ಮನೋಭಾವಕ್ಕೆ ಮನಸೋತವರು ವಿಶ್ವೇಶ್ವರಯ್ಯನವರು ಹಾಗೂ ಮಿಜಾì ಇಸ್ಮಾಯಿಲ್‌. ಇಬ್ಬರಿಗೂ ಕೊಂಗಾಡಿಯಪ್ಪ ಪ್ರಿಯವಾದ ಮೇಷ್ಟ್ರು. ವಿಶ್ವೇಶ್ವರಯ್ಯನವರಂತೂ ಅಗತ್ಯ ಬಿ¨ªಾಗೆಲ್ಲ ಕೊಂಗಾಡಿಯಪ್ಪನವರನ್ನು ಹುಡುಕಿಕೊಂಡು ವಿಚಾರವಿನಿಮಯ ಮಾಡಿಕೊಳ್ಳುತ್ತಿದ್ದರು.

        ಕೊಂಗಾಡಿಯಪ್ಪನವರ ಬದುಕಿದ ರೀತಿ, ದೂರದೃಷ್ಟಿಯಿಂದ ಈಗಲೂ ಪ್ರಸ್ತುತರಾಗುತ್ತಾರೆ.

      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಜೂನ್‌ ತಿಂಗಳು ಹತ್ತಿರವಾದಂತೆ ನಗರಗಳ ಅಪ್ಪ, ಅಮ್ಮಂದಿರಿಗೆ ತಮ್ಮ ಚಿಣ್ಣರನ್ನು ಹತ್ತಿರದ ಯಾವ ಒಳ್ಳೆಯ ಶಾಲೆಗಳಿಗೆ ಸೇರಿಸುವುದು ಎಂಬ ಚಿಂತೆ...
      • ಈ ವಿಭಾಗದಲ್ಲಿಯೂ ಇದೆ
      • Copyright @ 2009-2010 Udayavani.All rights reserved.
      • Designed & Hosted By 4cplus