Thursday, May 17, 2012
Last Updated: 1:25:56 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಸಾಪ್ತಾಹಿಕ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ತಸ್ಮೈ ಶ್ರೀ ಗುರವೇ ನಮಃ
    • ತಸ್ಮೈ ಶ್ರೀ ಗುರವೇ ನಮಃ

      • ಸೂರ್ಯ ಕೆಂಗೆನ್ನೆ | Feb 19, 2012

        ಶ್ರೀಕಾಂತನ ಅಜ್ಜ ಬಿಕ್ಕಿಬಿಕ್ಕಿ ಅಳುತ್ತಿದ್ದದ್ದು ಕಂಡ ಶಿವಕುಮಾರ್‌ ಮೇಸ್ಟ್ರಿಗೆ ಕರುಳು ಕಿತ್ತಂತೆ; ಯಾವುದೋ ಅಪಸ್ವರ ನರಗಳಿಂದ ಹೊರಟಂತೆ, ನೋವಾಗತೊಡಗಿತ್ತು. ಅಜ್ಜನನ್ನು ಸಮಾಧಾನಪಡಿಸುತ್ತ, ""ಯಜಮಾನ್ರೆ ನೀವು ಹೀಗೆ ಅತ್ರೆ ಹೇಗೆ, ಹಿರಿಯರು ನೀವು, ಧೈರ್ಯ ಹೇಳಬೇಕಾದ ನೀವೇ ಅಧೀರರಾದ್ರೆ ಏನ್‌ ಮಾಡ್ಬೇಕ್‌ ಹೇಳಿ?' ಎಂದು ಹೇಳುತ್ತಾ ಕೈಹಿಡಿದು ಕುರ್ಚಿಯ ಮೇಲೆ ಕುಳ್ಳಿರಿಸಿದರು. ಶ್ರೀಕಾಂತ ಮೇಸ್ಟ್ರನ್ನ , ಅಜ್ಜನನ್ನ ನಿರಾಸಕ್ತನಾಗಿ, ಉಡಾಫೆಯಿಂದ ನೋಡುತ್ತಾ, ಗೋಡೆಗೆ ಒರಗಿಕೊಂಡೇ ತಲೆಬಗ್ಗಿಸಿ ನೆಲಕೆರೆಯುತ್ತಾ, ಪುಸ್ತಕ ಬಗಲಿಗೆ ಹಾಕಿಕೊಂಡು "ನಾನಿØಂಗೆ, ಅದೇನಾಗುತ್ತೋ ಆಗ್ಲಿ' ಎಂಬಂತಿದ್ದ.
        ಶಿವಕುಮಾರ್‌ ಮೇಸ್ಟ್ರೆ ""ಯಜಮಾನೆÅ, ಯಾಕೆ ಒಂದು ವಾರದಿಂದ ಕಳಿÕಲ್ಲ ನಿಮ್ಮ ಮೊಮ್ಮಗನ್ನ?' ಎಂದದ್ದೇ ತಡ ""ಅಯ್ಯೋ ಸ್ವಾಮೇರೆ ಅದೆ° ಹೇಳಕೆ ಬಂದಿದ್ದು, ಮುಂಡೆಮಗ ಬೆಳಿಗ್ಗೆ ಆರು ಗಂಟೆಗೆ ಮನೆ ಬಿಟ್ರಾತು, ಒಂಬತ್ತು ಗಂಟೆಗೆ ಬರ್ತಾನೆ, ನಾವು ಇನ್ನೇನು ಪಾಠುಕ್ಕೆ ಹೋಗಿಬರ್ತಾನೆ ಅಂತಿದ್ವಿ. ನಿನ್ನೆ ಸಂಜೆ ಗೊತ್ತಾಯ್ತು ಸ್ವಾಮಿ ಈ ಬಡ್ಡೆತ್ತೆದ್ದು ಪೋಲಿ ಹೊಡಿಯಾಕೆ ಹೋಗುತ್ತೇಂತ; ಏನ್ಮಾಡ್ಲಿ ಸ್ವಾಮಿ ಇವ್ರ ಚಿಕ್ಕಪ್ಪ ದೊಡ್ಡಪ್ಪಗೊಳು ಒಳ್ಳೊಳ್ಳೆ ಕೆಲ್ಸದಾಗಿದಾರೆ, ಅತ್ತೆ ಮಾವಗಳು ಚೆನ್ನಾಗಿದಾರೆ, ಪಾಪ ಇವ್ರವ್ವಂದು ಗ್ರಹಚಾರ ನೆಟ್ಟುಗಿರಲಿಲ್ಲ. ಇವ್ರಪ್ಪ ಸತ್ತೋದ, ಸಂಬಂಧಿಕ್ರು ಅನುಕಂಪದಿಂದ ಸ್ವಲ್ಪದಿನ ಆಟೀಟು ಸಹಾಯ ಮಾಡಿದ್ರು, ಈಗ ಅವ್ರವ್ರ ಪಾಡಿಗೆ ಅವ್ರವ್ರು ಇದಾರೆ, ನಮ್‌ ಪಾಲಿಗೆ ಆ ದೇವ್ರೇ ಗತಿ; ನನ್‌ ಪೆನ್‌ಷನ್ನಾಗೆ, ಅವ್ರವ್ವ ಬಟ್ಟೆ ಒಲಿಯದ್ರಗೆ ಬದುಕೆºàಕು, ಏನಾದ್ರೂ ಮಾಡಿ ಇವ°, ಇವ° ಕಾಲಮೇಲೆ ನಿಲ್ಲಿಸ್ಬೇಕೂಂತ ಹಗುÉರಾತ್ರಿ ಒದ್ದಾಡ್ತಿದಿವಿ, ಇವ್ನು ನೋಡಿದ್ರೆ ಇಂಗಾಗುºಟ್ನಲ್ಲಾ ಅನ್ನದೆ ಯಥೆಯಾಗುºಟ್ಟಿದೆ ಸ್ವಾಮಿ' ಎಂದು ಮತ್ತೆ ಅಳತೊಡಗಿದರು ಶ್ರೀಕಾಂತನ ಅಜ್ಜ .

        ಶ್ರೀಕಾಂತ ನೋಡಲು ಸುಂದರಾಂಗ, ಚುರುಕು ಹುಡುಗ, ಮೊನ್ನೆ ಮೊನ್ನೆವರೆಗೂ ಅವನು ಕೆಟ್ಟದಾಗಿ, ಅಸಭ್ಯವಾಗಿ ನಡೆದುಕೊಂಡಿದ್ದು ಯಾರೂ ನೋಡಿರಲಿಲ್ಲ, ಕೇಳಿರಲೂ ಇಲ್ಲ. ಯಾರ ಬಾಯಲ್ಲಿ ಕೇಳಿದರೂ ಶ್ರೀಕಾಂತ ಒಳ್ಳೆಯ ಹುಡುಗ "ರ್‍ಯಾಂಕ್‌ ಸ್ಟೂಡೆಂಟ್‌' ಎಂಬ ಉತ್ತರವೇ ಬರುತ್ತಿತ್ತು. ಅದೇಕೋ ಏನೊ ಈಗ್ಗೆ ಒಂದು ತಿಂಗಳಿಂದ ಈಚೆಗೆ ಓದಿನಲ್ಲಿ ಶ್ರದ್ಧೆ ಇರಲಿಲ್ಲ, ಪುಸ್ತಕಗಳನ್ನ ತರುವುದರಲ್ಲಿ , ನೋಟ್ಸ್‌ಗಳನ್ನ ಬರೆದುಕೊಳ್ಳುವುದರಲ್ಲೆ ಶಿಸ್ತುಗಳು ಮಾಯವಾಗಿದ್ದವು. ಅಂಕ ಗಳಿಕೆಯಲ್ಲಿ ಯಾವಾಗಲೂ ಪ್ರಥಮ ಸ್ಥಾನದಲ್ಲಿರುತ್ತಿದ್ದ ಶ್ರೀಕಾಂತ, ಇತ್ತೀಚಿನ ದಿನಗಳಲ್ಲಿ ನೂರರಲ್ಲಿ ಒಬ್ಬನಾಗಿದ್ದ. ನೂರಕ್ಕೆ ನೂರು ಅಂಕ ಗಳಿಸುತ್ತಿದ್ದ ಹುಡುಗ, ನೂರಕ್ಕೆ 30, 35, 20, 18, 10 ಅಂಕಗಳನ್ನ ಪಡೆಯುತ್ತಿದ್ದರೂ, ಭಯಪಡದಂತಾಗಿದ್ದ.

        ಆರಂಭದ ದಿನಗಳಲ್ಲಿ , ಗುರುಗಳ ಬಗ್ಗೆ ಭಯ, ಭಕ್ತಿ, ಶ್ರದ್ಧೆಗಳು ಎದ್ದು ಕಾಣುತ್ತಿದ್ದವು. ಗುರುಗಳು ಹೇಳಿಕೊಟ್ಟ ಯಾವುದನ್ನೇ ಆಗಲಿ ಚಾಚೂತಪ್ಪದೆ ಪಾಲಿಸುತ್ತಿದ್ದ. ಗುರುಗಳ ಮಾತೆಂದರೆ ಪಂಚಪ್ರಾಣ ಶ್ರೀಕಾಂತನಿಗೆ. ಆದರೆ ಅದೇಕೊ ಏನೋ ಇತ್ತೀಚೆಗೆ ಗುರುಗಳ ಬಗ್ಗೆಯೂ ತಾತ್ಸಾರ. ಅವರ ಮಾತುಗಳೆಂದರೆ ನಿರ್ಲಕ್ಷ್ಯ. ಹಿಂದೆ ಒಂದೂ ದಿನವೂ ನಿರ್ಲಕ್ಷ್ಯದಿಂದ, ಅಶಿಸ್ತಿನಿಂದ ಕುಳಿತವನಲ್ಲ. ವರ್ತಿಸಿದವನಲ್ಲ. ಆದರೆ ಇತ್ತೀಚೆಗೆ ಬೇಕಾಬಿಟ್ಟಿ ಕೂರುವುದು, ಪಾಠ ಮಾಡುವಾಗ ಹರಟುವುದು, ಮೇಸ್ಟ್ರೆ ಬೈದರೆ ಅದಕ್ಕೆ ತಮಾಷೆಯ ಅಥವಾ ಬೇಕಾಬಿಟ್ಟಿ ಉತ್ತರ ಕೊಡುವುದು, ತನ್ನ ಸಹಪಾಠಿಗಳು ನಕ್ಕರೆ ಮುಗಿಯಿತು. ಇನ್ನೂ ಉತ್ತೇಜನಗೊಂಡು ಮತ್ತೆ ಮತ್ತೆ ಕೀಟಲೆ ಮಾಡುವುದು ರೂಢಿಸಿಕೊಂಡುಬಿಟ್ಟಿದ್ದ. ಶಿವಕುಮಾರ್‌ ಮೇಸ್ಟ್ರೆ ಆರಂಭದಲ್ಲಿ "ಏನೋ ಹುಡುಗಾಟ, ಎಸ್‌ಎಸ್‌ಎಲ್‌ಸಿ ಹುಡುಗರು ಬೇರೆ, ಅತಿಯಾಗಿ ಶಿಸ್ತು ಮಾಡಿದರೆ ಸರಿಯಾಗುವುದಿಲ್ಲ' ಎಂದು ಸುಮ್ಮನಿದ್ದರು. ಆದರೆ ಶ್ರೀಕಾಂತನ ನಡೆನುಡಿಗಳು ಪಾಠದ ಕಾಲಾವಧಿಗಳನ್ನೇ ಹಾಳುಮಾಡಿಬಿಡಹತ್ತಿದ್ದವು.

        ಹತ್ತಾರು ಸಾವಿರ ವಿದ್ಯಾರ್ಥಿಗಳಿಗೆ ತಯಾರಿ ಮಾಡಿ ಕಳುಹಿಸಿದ್ದ ಶಿವಕುಮಾರ್‌ ಮೇಸ್ಟ್ರಿಗೆ ಇಂತಹ ಪ್ರಕರಣಗಳು ಹೊಸದೇನೂ ಆಗಿರಲಿಲ್ಲ. ಅವರೂ ಸ್ವಲ್ಪ ಜಾಗೃತರಾದರು. ಏಕೊ ಏನೊ, ಎಲ್ಲೋ ಸ್ವಲ್ಪ ವ್ಯತ್ಯಾಸವಾಗಿದೆಯೆಂದು ಅರಿತುಕೊಂಡ ಮೇಸ್ಟ್ರೆ , ತಮ್ಮ ಸಾಮ, ದಾನ, ಭೇದ, ದಂಡಗಳ ಪ್ರಯೋಗಗಳನ್ನ ಆರಂಭಿಸಿದ್ದರು.

        ಮೊದಮೊದಲು ಸಮಾಧಾನದಿಂದ ಬುದ್ಧಿವಾದ ಹೇಳಿದರು. ತಿದ್ದಿಕೊಳ್ಳದಿದ್ದಾಗ, ಎಲ್ಲರೆದುರೂ ಹೇಳಿದರು, ಬೈದರು, ಉಪಯೋಗವಾಗಲಿಲ್ಲ. ನಂತರ ಹೆಣ್ಣು ಮಕ್ಕಳೆದುರು ಬೇಕೆಂದೇ ಅವಮಾನ ಮಾಡಲಾರಂಭಿಸಿದ್ದರು. ಶ್ರೀಕಾಂತ ಬಗ್ಗಲಿಲ್ಲ. ಪ್ರತಿಯಾಗಿ ಗುರುಗಳ ಭಾಷೆಗೆ ತಕ್ಕಂತೆ ಮೋಜಿನ, ತಮಾಷೆಯ ಉತ್ತರಗಳನ್ನ ನೀಡತೊಡಗಿದ. ಹೆಚ್ಚಾಕಡಿಮೆ ಎಂಟØತ್ತು ಹುಡುಗರು, ಅವರಿಗೆ ತಕ್ಕಂತಿದ್ದ ಹುಡುಗಿಯರ ಸಾಥ್‌ ಸಿಗುತ್ತಿದ್ದದ್ದು ಅವನಿಗೆ "ಮಂಗನಿಗೆ ಹೆಂಡ ಕುಡಿಸಿದಂತಾಗಿತ್ತು'. ಶಿವಕುಮಾರ್‌ ಮೇಸ್ಟ್ರಿಗೆ ಸಮಸ್ಯೆ ಗಂಭೀರ ರೂಪ ಪಡೆದು, ಕೈಮೀರಿ ಹೋಗಿರುವುದು ಅರಿವಿಗೆ ಬಂದಿತ್ತು. ತಮ್ಮ ಹೆಂಡತಿಯ ಹತ್ತಿರ ಗೋಳು ತೋಡಿಕೊಂಡರು. ಹೆಂಡತಿ ಇತ್ತೀಚಿನ ಹುಡುಗರ ನಡವಳಿಕೆಗಳು ಅರ್ಥವಾಗದೆ "ನೀವುಂಟು ನಿಮ್ಮ ಸ್ಟೂಡೆಂಟ್ಸ್‌ ಉಂಟು' ಎಂದು ಹೇಳಿ ತಲೆತೊಳೆದು ಕೊಂಡಿದ್ದರು.

        ಶಿವಕುಮಾರ್‌ ಮೇಸ್ಟ್ರಿಗೆ, ವರ್ಷದಿಂದ ವರ್ಷಕ್ಕೆ ಬರುವ ವಿದ್ಯಾರ್ಥಿಗಳ ಮನೋಭಾವ, ಮನಃಸ್ಥಿತಿ ಅರ್ಥೈಸಿಕೊಳ್ಳುವುದು ಬಹಳ ಕಷ್ಟವಾಗತೊಡಗಿತ್ತು. ಮೊದಲ ಸಮಸ್ಯೆಗಳು ಬಹಳ ಸರಳವಾಗಿದ್ದವು. ಆದರೆ ಇತ್ತೀಚಿನ ಜನಾಂಗದ ಸೂಕ್ಷ್ಮಗಳು, ಸಂಕೀರ್ಣವಾಗಿ ಗೋಜಲುಗೋಜಲಾಗಿ ಕಾಡಹತ್ತಿದ್ದವು. ಅಂದು ಸಮಸ್ಯೆಗಳು ಸರಳವಾಗಿ, ನೇರವಾಗಿರುತ್ತಿದ್ದಂತೆಯೇ ಉತ್ತರಗಳು ಅಷ್ಟೇ ಸರಳ ನೇರವಾಗಿರುತ್ತಿದ್ದವು. ಇಂದು ಸಮಸ್ಯೆ ಗುರುತಿಸುವುದು, ಅದಕ್ಕೆ ಮದ್ದು ಕಂಡುಹಿಡಿಯುವುದು ಕಠಿಣವಾಗಿ ಹೋಗಿದೆ ಎಂಬ ಅರಿವು ಬಂದಿತ್ತು.

        ಬೈದರೆ ಮನೆಬಿಟ್ಟು ಹೋಗುವ, ಹೊಡೆದರೆ ನೇಣು ಹಾಕಿಕೊಳ್ಳುವ, ಏನೂ ಅನ್ನದಿದ್ದರೆ ಹೆಗಲಮೇಲೆ ಕೈಹಾಕಿಕೊಂಡು, ತಲೆಯ ಮೇಲೆ ಕೂರುವ ಅಪ್ಪ , ಅಮ್ಮ , ಗುರುಗಳ ಎದುರೇ ಕಂಡದ್ದು ಮಾಡುವ ಇತ್ತೀಚಿನ ಅತಿಸೂಕ್ಷ್ಮ ಮನೋಭಾವದ ಜನಾಂಗವನ್ನು ದಾರಿಗೆ ತರುವಲ್ಲಿ ಶಿವಕುಮಾರ್‌ ಮೇಸ್ಟ್ರೆ ಸಾಕುಸಾಕಾಗಿ ಹೋಗಿದ್ದರು. ಈಗ ಶ್ರೀಕಾಂತನ ಸಮಸ್ಯೆ ಹೇಗೆ ಬಿಡಿಸುವುದೆಂದು ಹೊಸ ತಲೆನೋವನ್ನ ತಂದುಕೊಂಡಿದ್ದರು.

        ಶಿವಕುಮಾರ್‌ ಮೇಸ್ಟ್ರೆ ಶ್ರೀಕಾಂತನ ಅಜ್ಜನಿಗೆ ""ಯಜಮಾನೆÅ, ನಿಮ್ಮ ಮೊಮ್ಮಗನ ಜವಾಬ್ದಾರಿ ನನಗೆ ಬಿಡ್ರಿ, ನೀವಿನ್ನ ಹೊರಡಿ' ಎಂದರು. ಶ್ರೀಕಾಂತನ ಅಜ್ಜ ಅಷ್ಟು ಹೇಳುವುದನ್ನೇ ಕಾಯುತ್ತಿದ್ದವರ ಹಾಗೆ ""ಅಯ್ಯೋ ಸ್ವಾಮೇರ ಅಷ್ಟು ಮಾಡಿಬುಡಿ ನಿಮ್ಗೆ ಪುಣ್ಯ ಬರುತ್ತೆ' ಎಂದು ಕಾಲಿಗೆ ಬೀಳಲು ಹೋದರು, ಮೇಸ್ಟ್ರೆ ಅವರನ್ನ ತಡೆದು ""ಏನ್‌ ಮಾಡ್ತಿದೀರಿ ಯಜಮಾನೆÅ ನೀವು; ಹಿರಿಯರು ಹಿಂಗೆ ಮಾಡಬಾರ್ಧು' ಎಂದು ಕೈಹಿಡಿದು ""ಒಂದು ಕೆಲ್ಸಮಾಡಿ ನಾಳೆಯಿಂದ ಒಂದು ವಾರ ಅವನನ್ನ ನನ್ನ ಜೊತೆ ಓದೋಕೆ ಕಳಿಸ್ಬೇಕು' ಎಂದರು. ಅದಕ್ಕೆ ಅಜ್ಜ ಆನಂದದಿಂದ ""ಅಯ್ಯೋ ಸ್ವಾಮಿ ಅಂಗೇ ಆಗ್ಲಿ, ಇವತ್ತಿಂದೆÉ ಕಳಿಸ್ತೀನಿ' ಎಂದು ಹೊರಟರು. ಶಿವಕುಮಾರ್‌ ಮೇಸ್ಟ್ರಿಗೆ ತಲೆ ಸಿಡಿಯುವಂತಾಯ್ತು. ಸಮಸ್ಯೆ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ.

        ಶಿವಕುಮಾರ್‌ ಮೇಸ್ಟ್ರಿಗೆ ಇಂತಹ ರಿಸ್ಕ್ಗಳನ್ನ ತೆಗೆದುಕೊಂಡು ಅಭ್ಯಾಸವಾಗಿದ್ದರೂ, ಇತ್ತೀಚೆಗೆ ಹೆಂಡತಿಯ ಬಿಗಿಯಿಂದಾಗಿ ಯಾವುದನ್ನೂ ಹೆಚ್ಚಿಗೆ ಹಚ್ಚಿಕೊಳ್ಳುತ್ತಿರಲಿಲ್ಲ. ಆದರೆ ಇದು ಅನಿವಾರ್ಯವಾಗಿ ಬಂದು ಅಂಟಿಕೊಂಡು ಬಿಟ್ಟಿತ್ತು. ಮರುದಿನವೇ ಶ್ರೀಕಾಂತನನ್ನ ಮನೆಯಲ್ಲಿ ಕೂರಿಸಿಕೊಂಡು ಓದಿಸುತ್ತಾ ಗಮನಿಸತೊಡಗಿದರು. ನಿಧಾನವಾಗಿ ""ಶ್ರೀಕಾಂತ, ಈ ಒಂದು ವಾರ ನಿನೆY ನಾನು ಬೇರೆ ಕೆಲ್ಸ ಕೊಡ್ತೀನಿ, ನೀನು ಅದು ಮಾಡಿದ್ರೆ ಸಾಕು ಓದದೇನೂ ಬೇಡ' ಎಂದರು. ಶ್ರೀಕಾಂತ ಕುರಿಯಂತೆ ತಲೆಯಾಡಿಸುತ್ತಾ "ಸರಿ ಸಾರ್‌' ಎಂದ. ಮೇಸ್ಟ್ರೆ ""ನೋಡು ನೀನು ಮಾಡಬೇಕದ್ದು ಇಷ್ಟೆ , ಪಿಂಗ, ನಾಗ, ಗೋಪಿ, ಜಗ್ಗ, ಮೂರ್ತಿ, ಗಿಡ್ಡ, ಪೀರ ಇವ್ರ ಅಪ್ಪ ಅಮ್ಮನ ತಿಂಗಳ ವರಮಾನ ಎಷ್ಟು , ಏನೇನ್‌ ಕೆಲ್ಸ  ಮಾಡ್ತಾರೆ, ಅವರ ವಿದ್ಯಾಭ್ಯಾಸ ಎಷ್ಟು? ಒಂದು ಪಕ್ಷ ಅವ್ರುಗಳು ಸತ್ತೋದ್ರೆ, ಇವ್ರುಗಳು ಏನೇನು ಮಾಡಬೌದು? ತಿಳ್ಕಂಡು ಬಾ... ಯಾಕೇಂದ್ರೆ ನಾನು ಸಂಶೋಧನೆ ಮಾಡ್ತಿರೋ ವಿಷ್ಯ ಇದ್ರಮೇಲೆ ನಿಂತಿದೆ' ಎಂದರು. ಶ್ರೀಕಾಂತನಿಗೆ ಅನುಮಾನ ಬಂದರೂ, ಗುರುಗಳು ಪಿಎಚ್‌.ಡಿ ಮಾಡುತ್ತಿರುವ ವಿಷಯ ತಿಳಿದಿತ್ತು, ಸುಮ್ಮನೆ ಒಪ್ಪಿಕೊಂಡ. ಒಪ್ಪಿಕೊಂಡ ಹಾಗೆಯೇ, ವಾರಕ್ಕಿಂತ ಮುಂಚೆ, ಮೂರೇ ದಿನಗಳಲ್ಲಿ ಅಂಕಿಅಂಶ ಸಂಗ್ರಹಿಸಿ ಗುರುಗಳ ಮುಂದಿಟ್ಟ .

        ಶ್ರೀಕಾಂತ ಕೊಟ್ಟ ವರದಿಯಂತೆಯೇ, ಎಲ್ಲರ ಆದಾಯ, ವರಮಾನಗಳು ತಿಂಗಳಿಗೆ ಊಟ, ಬಟ್ಟೆಬರೆ ಎಲ್ಲಾ ಆಗಿ ಸ್ವಲ್ಪ ಕೂಡಿಡುವಂತಿತ್ತು. ವಿದ್ಯಾಭ್ಯಾಸಗಳು ಸಾಮಾನ್ಯ ಮಟ್ಟದ್ದಾಗಿತ್ತು. ಒಂದು ಪಕ್ಷ ಅವರುಗಳು ತೀರಿಕೊಂಡರೂ, ಅವರ ಕಸುಬುಗಳನ್ನು ಮಕ್ಕಳು ಮುಂದುವರೆಸುವಂತಿತ್ತು. ಅವನ್ನೆಲ್ಲಾ ಗಮನಿಸಿದ ಶಿವಕುಮಾರ್‌ ಮೇಸ್ಟ್ರೆ ""ಲೋ ನಿಮ್ಮನೆದೆ ಇಲ್ವಲ್ಲೋ' ಎಂದು ಅವನ ಮುಖ ನೋಡಿದರು. ಶ್ರೀಕಾಂತ ಕ್ಷಣಕಾಲ ತಬ್ಬಿಬ್ಟಾದ. "ಮೇಸ್ಟ್ರೆ ಅವಮಾನ ಮಾಡಲು ಹೀಗೆ ಹೇಳ್ತಿದಾರೋ ಅಥವಾ ನಿಜಕ್ಕೂ ಕೇಳ್ತಿದಾರೋ' ಎಂಬ ಗಲಿಬಿಲಿಯಲ್ಲಿದ್ದ. ಕೂಡಲೇ ಗ್ರಹಿಸಿದ ಮೇಸ್ಟ್ರೆ , ತೀರಾ ಸಹಜವಾಗಿಯೆಂಬಂತೆ ""ಲೋ ಶ್ರೀಕಾಂತ ನಿನ್ನದೊಬ್ಬಂದು ಬಿಟ್ಟಿದ್ದೆ, ನಿಂದೂ ಬರ್ಧುಬಿಡು' ಎಂದರು. ಶ್ರೀಕಾಂತ ಅನುಮಾನದಿಂದ ಹೊರಬಂದು ಕ್ಷಣಕಾಲ ಯೋಚಿಸತೊಡಗಿದ.

        ಮುಖದಲ್ಲಿ ನೋವಿನ ಗೆರೆಗಳು ಕಾಣಿಸತೊಡಗಿದವು. ಸಾವರಿಸಿಕೊಂಡ, ಬರೆದು ಮೇಸ್ಟ್ರೆ ಕೈಗೆ ಕೊಟ್ಟ , ಮೇಸ್ಟ್ರೆ ಏನೂ ಆಗಿಲ್ಲವೆಂಬಂತೆ ಅದನ್ನ ತೆಗೆದುಕೊಂಡು, ಕೈಯಲ್ಲಿ ಎತ್ತಿಹಿಡಿದು, ಏನೋ ಸೂಕ್ಷ್ಮವಾಗಿ ಗಮನಿಸುವರಂತೆ ""ತಿಂಗಳ ವರಮಾನ ಅವರೆಲ್ಲರಿYಂಥ ಕಡಿಮೆ ಇದೆ... ಇರ್ಲಿಬಿಡು' ಎಂದು ಏನೋ ಅವನ ಬಗ್ಗೆ ಆಳವಾಗಿ ಯೋಚಿಸುವವರಂತೆ ನಟಿಸಿ ಆ ಕಾಗದಗಳನ್ನ ಅವರ ಫೈಲಲ್ಲಿ ಹಾಕುತ್ತಾ ಶ್ರೀಕಾಂತನನ್ನ ಸೂಕ್ಷ್ಮವಾಗಿ ಗಮನಿಸಿದರು. ಅವನ ಮುಖ ಜೋತುಬಿದ್ದಿದ್ದರೂ; ಅವನು, ಮೇಸ್ಟ್ರೆ ಏನೋ ಚಾಲಾಕಿತನ ಮಾಡುತ್ತಿರಬಹುದೇ ಎಂಬ ಸಂಶಯಪಟ್ಟರೂ, ಗುರುಗಳು ಕೆಟ್ಟವರಲ್ಲವೆಂಬ ಅಂಶದಿಂದ ಸುಮ್ಮನಾದ. ಇಷ್ಟಾದರೂ ತನ್ನ ಸಹವಾಸಗಳನ್ನ ಬಿಡಲಿಲ್ಲ. ಸ್ನೇಹಿತ ಜೊತೆ ತಿರುಗುವುದು, ಪೋಲಿ ಮಾತನಾಡುವುದು, ಗುಟುಕ, ಜರ್ದಾ ಅಗೆಯುವುದು, ಕದ್ದುಮುಚ್ಚಿ ಬೀಡಿ ಸಿಗರೇಟು ಸೇದುವುದು ಸಾಗಿಯೇ ಇತ್ತು. ಶಿವಕುಮಾರ್‌ ಮೇಸ್ಟ್ರೆ ಎಲ್ಲಾ ತಿಳಿದೂ, ಏನೂ ತಿಳಿಯದವರಂತಿದ್ದರು. ಅವರ ಪ್ರಯೋಗ ಮುಂದುವರೆದಿತ್ತು.

        ಆ ದಿನ ತಮ್ಮ ಸೀನಿಯರ್‌ ಶಿಷ್ಯ ಮಧುಸೂದನ ಊರಿಗೆ ಬಂದಿದ್ದು ತಿಳಿದುಕೊಂಡಿದ್ದು , ಮನೆಗೆ ಬರುವಂತೆ ತಿಳಿಸಿದರು. ಇಂಜಿನಿಯರಿಂಗ್‌ ಆರನೇ ಸೆಮಿಸ್ಟರ್‌ ಮುಗಿಸಿ ರಜೆಗಾಗಿ ಬಂದಿದ್ದ ಮಧು ಎಸ್‌ಎಸ್‌ಎಲ್‌ಸಿ, ಪಿಯುಸಿ ರ್‍ಯಾಂಕ್‌ ವಿಜೇತ ; ತುಂಬಾ ಒಳ್ಳೆಯ ಹುಡುಗಿ, ಹೆಚ್ಚಾ ಕಡಿಮೆ ಎಲ್ಲಾ ಹುಡುಗರಿಂದಲೂ ಆಕರ್ಷಿತಳಾದ ಶ್ರೀವಿದ್ಯಾಳನ್ನೂ ಕರೆಯಿಸಿಕೊಂಡ ಗುರುಗಳು ತಮ್ಮ ಸಂಪೂರ್ಣ ಯೋಜನೆಯನ್ನ ತಿಳಿಸಿದರು. ಅಷ್ಟೇ ಪ್ರೀತಿ, ಆಸ್ತೆಯಿಂದ ಅವರಿಬ್ಬರೂ ಒಪ್ಪಿಕೊಂಡರು. ಶಿವಕುಮಾರ್‌ ಮೇಸ್ಟ್ರಿಗೆ ಹೃದಯ ತುಂಬಿಬಂದಿತ್ತು. ಮೂವರಲ್ಲೂ ಒಂದು ಒಳ್ಳೆಯ ಕೆಲಸಕ್ಕೆ ಅನಿವಾರ್ಯವಾಗಿ ಕೈಹಾಕಿದ ಸಮಾಧಾನ ಮುಖದಲ್ಲಿ ಕಾಣತೊಡಗಿತ್ತು.

        ಒಂದು ವಾರ ಮಧುಸೂದನ ಶ್ರೀಕಾಂತನಿಗೆ ಪಾಠಹೇಳಿಕೊಡುವುದು, ಜೊತೆಗೆ ಕರೆದುಕೊಂಡು ಶ್ರೀವಿದ್ಯಾಳ ಹಿಂದೆಮುಂದೆ ಓಡಾಡುತ್ತಾ, ಅವಳನ್ನ ನೋಡುವುದು, ಆಚೀಚೆ ಸುಳಿದಾಡುತ್ತಾ ಕಾಲೇಜು ಹುಡುಗರ ಹಾವಭಾವಗಳನ್ನೆಲ್ಲಾ ಪ್ರದರ್ಶಿಸುವ ನಟನೆಗಳನ್ನೆಲ್ಲಾ ಶ್ರೀಕಾಂತನ ಮುಂದೆಯೇ ಮಾಡತೊಡಗಿದ್ದ. ಶ್ರೀಕಾಂತ ಅಸಮಾಧಾನಗೊಂಡು, "ಹಾಳಾಗಿ ಹೋಗಲಿ, ಸೀನಿಯರ್‌ ಬೇರೆ' ಎಂದುಕೊಂಡು ಸುಮ್ಮನಾಗಿದ್ದ.

        ಅಂತೂ ಮಾಗಿದ ಆ ದಿನ ಬಂದೇಬಿಟ್ಟಿತು. ಮಧುಸೂಧನ ಶ್ರೀವಿದ್ಯಾಳನ್ನ ತನ್ನ ಬೈಕಲ್ಲಿ ಅಡ್ಡxಗಟ್ಟಿ ನಿಂತ. ಹಿಂದೆ ಕುಳಿತಿದ್ದ ಶ್ರೀಕಾಂತನ ಎದೆ ಢವಢವ ಹೊಡೆದುಕೊಳ್ಳಲಾರಂಭಿಸಿತ್ತು. ಮಧು ಕೇಳಿಯೇಬಿಟ್ಟ ""ಐ ಲವ್‌ ಯು, ವಿಲ್‌ ಯು ಮ್ಯಾರಿ ಮೀ?' ಎಂದ. ಶ್ರೀವಿದ್ಯಾ ಸಿಟ್ಟು , ರೋಷಗಳಿಂದ, ತನ್ನ ಕಾಲಲ್ಲಿದ್ದ ಚಪ್ಪಲಿ ಎತ್ತಿಹಿಡಿದು ""ಥೂ ನಿನೆY ನಾಚೆY ಆಗೋಲ್ವ, ನಿನ್ನಂಥ ಡರ್ಟಿಫೆಲೋನ ನಾನು ಮದ್ವೆ ಆಗೋದ, ಆಪ್ಟರಾಲ್‌ ಬಿಇ ಮಾಡ್ತಾ ಇದಿಯ, ನಿನ್ನಪ್ಪ ಅಮ್ಮ ಏನ್‌ ಒಂದು ಐವತ್ತು ಲಕ್ಷ ಇಟ್ಟಿರಬಹುದು, ಆರ್ಡಿನರಿ ಜಾಬಲ್ಲಿರಬಹುದು, ಅಷ್ಟಕ್ಕೆ ನನ್ನನ್ನ ಪ್ರಪೋಸ್‌ ಮಾಡ್ತೀಯ?' ಎಂದಳು. ಮಧು ಅಷ್ಟೇ ಸಿಟ್ಟಿನಿಂದ ""ಹೇಯ್‌, ಇಳೆÕ ಕೈಕೆಳಗೆ... ಮತ್ತಿನ್ನೆಂಗೆ ಇರ್ಬೇಕು ನೀನು ನೋಡೋ ಹುಡ್ಗ' ಎಂದ. ಅದಕ್ಕೆ ವಿದ್ಯಾ ""ರೀ ಮಿಸ್ಟರ್‌ ಲುಕ್‌ ಆಗಿ ಇರ್ಬೇಕು, ಹ್ಯಾಂಡ್‌ಸಮ್‌ ಆಗಿ ಇರ್ಬೇಕು, ಲೇಟೆಸ್ಟ್‌ ಮಾಡೆಲ್‌ ಬೈಕ್‌, ಕಾರ್‌ ಇರ್ಬೇಕು, ಅವ್ರ ಅಪ್ಪ ಅಮ್ಮ ಫ‌ುಲ್‌ ಮಾಡರ್ನ್ ಆಗಿರ್ಬೇಕು, ನಾಳೆ ಅವ್ರ ಅಪ್ಪ ಅಮ್ಮನ ಬಿಟ್ಟು ಬಾ, ಅಂದ್ರೆ ಬಿಟ್ಟು ಬರಿ¤ರಬೇಕು, ಗೊತ್ತಾ!' ಎಂದಳು. ಅದಕ್ಕೆ ಮಧು ""ಥತ್‌, ನಿನ್ನಂಥ ಹುಡ್ಗಿàರ್‌ ಹಿಂದೆ ಬಿದ್ರೆ ನಮ್‌ ಲೈಫ್ ಹಾಳು, ಪಾಪ ನಮ್ಮಪ್ಪ , ಅಮ್ಮನ್ನ ಬೀದಿ ಪಾಲು ಮಾಡಿಬಿಡ್ತೀರಿ, ನಿಮ್ಮ ಸಹವಾಸ ಅಲ್ಲ , ಗುಡ್‌ಬೈ' ಎಂದವನೇ ಬೈಕ್‌ ಕಿಕ್‌ ಹೊಡೆದು ವೇಗವಾಗಿ ಹೋಗಿಯೇಬಿಟ್ಟ. ಶ್ರೀಕಾಂತನೆದುರು ತೀವ್ರ ಅಸ್ವಸ್ಥನಾದಂತೆ, ದುಃಖ ನೋವು, ನಿರಾಸೆ ಅನುಭವಿಸಿದವನಂತೆ ನಟಿಸಿ, ಊರಿಗೆ ಹೋಗಿಯೇಬಿಟ್ಟ . ಪ್ರತಿಯೊಂದು ವಿದ್ಯಮಾನಗಳನ್ನೂ ಕಣ್ಣಮುಂದೆಯೇ ಗಮನಿಸುತ್ತಿದ್ದ ಶ್ರೀಕಾಂತನಿಗೆ ತೀವ್ರ ಆಘಾತವಾಗಿತ್ತು.

        ""ಸವಾರ್ರಾದ, ಅಷ್ಟು ಚೆನ್ನಾಗಿರೋ ಮಧುಸೂದನಣ್ಣನ್ನೇ, ಅದೂ ಇಂಜಿನಿಯರ್ರನ್ನೆ ಬೇಡ ಅನ್ನೋ ಹುಡುಗಿರು ನಮ್ಮಂಥವರನ್ನ ನೋಡಲು ಸಾಧ್ಯವೇ ಇಲ್ಲ' ಎಂದು ಶ್ರೀಕಾಂತ ತೀರ್ಮಾನಿಸಿದ್ದ. ಘಾಸಿಯಾದ ಮನಸ್ಸಿನಿಂದ, ಪೆಚ್ಚುಮೋರೆ ಹಾಕಿ ಮನೆಗೆ ಹೋದ. ತನ್ನ ಹಳೆಯ ಗುಡಿಸಿಲಿನಂತಿದ್ದ ಮನೆ, ಒಳಗೆ ಹಳೆಯ ಬಟ್ಟೆ ಮಿಷನ್ನಿನಲ್ಲಿ ಕಟಕಟ ಬಟ್ಟೆ ಹೊಲೆಯುತ್ತಿದ್ದ ಅಮ್ಮನ, ಬಾಡಿಹೋದ ಕಣ್ಣುಗಳು, ಕೃಶವಾದ ದೇಹ, ಜೀವಕಳೆಯೇ ಇಲ್ಲದೆ ಕೇವಲ ಮಗನಿಗಾಗಿ ಬದುಕಿದ್ದಂತಹ ಜೀವ. ಅಜ್ಜ , ತನ್ನ ಹರಿದ ಅಂಗಿ ಹಾಕಿಕೊಂಡು ಮಗಳಿಗೆ ಸಣ್ಣಪುಟ್ಟ ಸಹಾಯ ಮಾಡುತ್ತಿದ್ದರು. ತನ್ನ ಮನೆಯನ್ನ , ಪರಿಸ್ಥಿತಿಯನ್ನ ಒಂದು ಸುತ್ತು ನೋಡಿದ, ಬವಳಿ ಬಂದಂತಾಯ್ತು, ದುಃಖ ಉಮ್ಮಳಿಸಿ ಬಂದಿತ್ತು. ಒಡನೆಯೇ ಓಡಿಹೋಗಿ ಅಮ್ಮನ ಕಾಲುಗಳನ್ನ ಹಿಡಿದು ಬಿಕ್ಕಿಬಿಕ್ಕಿ ಅತ್ತುಬಿಟ್ಟ .

        ಈ ಘಟನೆಗಳ ತರುವಾಯ, ಆರು ವರ್ಷಗಳು ಕಳೆದ ನಂತರ ಶ್ರೀಕಾಂತ ಇಂಜಿನಿಯರ್‌ ಆಗಿ ಶ್ರೀವಿದ್ಯಾಳ ಮದುವೆಗೆ ಹೋದಾಗಲೇ ತಿಳಿದದ್ದು, ಮಧುಸೂದನನ ಮಾವನ ಮಗಳು ಶ್ರೀವಿದ್ಯಾ, ಅಂದು ಅವರುಗಳು ಆಡಿದ್ದೆಲ್ಲಾ ನನ್ನಂಥವರುಗಳಿಗಾಗಿ ಅನಿವಾರ್ಯವಾಗಿ ಆಡಿದ್ದ ನಾಟಕ, ಅದರ ಸೂತ್ರಧಾರ, ಗುರುಗಳಾದ ಶಿವಕುಮಾರ್‌ ಮಾಸ್ಟ್ರೆಂದು. ಅಲ್ಲಿ ಎಲ್ಲರೂ ಶಿವಕುಮಾರ್‌ ಮಾಸ್ಟ್ರನ್ನ ಮುತ್ತಿಕೊಂಡದ್ದು ಕಂಡುಬಂತು. ಶ್ರೀಕಾಂತ ಅವರ ಹತ್ತಿರ ಹೋಗಿ ಪಾದಕ್ಕೆ ನಮಸ್ಕರಿಸಿದ. ಮಧುಸೂದನ, ಶ್ರೀವಿದ್ಯಾ ದಂಪತಿಯರಿಗೆ ಮನಃತುಂಬಿ ಹೃದಯತುಂಬಿ ಕೈಮುಗಿದ. ಮಧುಸೂದನ ಶ್ರೀಕಾಂತನ ಕೈಹಿಡಿದು ಗುರುಗಳತ್ತ ನೋಡುತ್ತಾ ""ಶ್ರೀಕಾಂತ, ನಮ್ಮ ಗುರುಗಳು ಒಳ್ಳೇ ಡ್ರಾಮಟಿಸ್ಟು' ಎಂದಾಗ, ಎಲ್ಲರೂ ಮನಸಾರೆ ನಕ್ಕರು. ಶಿವಕುಮಾರ್‌ ಮಾಸ್ಟ್ರೆ ದೈವಕ್ಕೆ ನಮಸ್ಕರಿಸುತ್ತಾ ಮತ್ತೂಮ್ಮೆ "ಪರಮಾತ್ಮ, ನನ್ನ ಜನ್ಮ ಸಾರ್ಥಕವಾಯ್ತು' ಎಂದು ಕೈಮುಗಿದರು.

      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಜೂನ್‌ ತಿಂಗಳು ಹತ್ತಿರವಾದಂತೆ ನಗರಗಳ ಅಪ್ಪ, ಅಮ್ಮಂದಿರಿಗೆ ತಮ್ಮ ಚಿಣ್ಣರನ್ನು ಹತ್ತಿರದ ಯಾವ ಒಳ್ಳೆಯ ಶಾಲೆಗಳಿಗೆ ಸೇರಿಸುವುದು ಎಂಬ ಚಿಂತೆ...
      • ಈ ವಿಭಾಗದಲ್ಲಿಯೂ ಇದೆ
      • Copyright @ 2009-2010 Udayavani.All rights reserved.
      • Designed & Hosted By 4cplus