Thursday, May 17, 2012
Last Updated: 1:25:56 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಸಾಪ್ತಾಹಿಕ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಇವನಂಥ ಚೆಲುವರಿಲ್ಲ ನೋಡು ಬಾರೆ !
    • ಪಾರ್ವತಿಯೊಂದಿಗಿರುವ ಶೃಂಗಾರಭಾವದ ಶಿವ.

      • ಕಾರ್ಗಲ್ಲು ಸತೀಶ್‌ | Feb 19, 2012

        ಪುರಾಣದ ಈ ಕತೆ ಎಲ್ಲರಿಗೂ ಗೊತ್ತಿದ್ದದ್ದೇ. ಶಿವನು ಕಿರಾತವೇಷದಲ್ಲಿ ಲೋಕಸಂಚಾರಕ್ಕೆ ಹೊರಡುವುದು. ಸತ್ಯಲೋಕಕ್ಕೆ ಬಂದಾಗ ಬ್ರಹ್ಮ , ಶಾರದೆಯೊಂದಿಗೆ ಸರಸವಾಡುವುದನ್ನು ನೋಡಿ ಸಿಟ್ಟುಗೊಳ್ಳುವುದು. ಕಿರಾತವೇಷದಲ್ಲಿ ಬಂದವನು ಈಶ್ವರನೆಂದು ತಿಳಿಯದೆ ಬ್ರಹ್ಮ ನಿರ್ಲಕ್ಷ್ಯ ಮಾಡುವುದು. ಶಿವನು ಇನ್ನಷ್ಟು ಕ್ರೋಧದಿಂದ ಬ್ರಹ್ಮನ ಒಂದು ಶಿರವನ್ನು ತ್ರಿಶೂಲದಿಂದ ಛೇದಿಸುವುದು. ಆ ಶಿರವು ಶಿವನ ಕೈಗೆ ಅಂಟಿಕೊಳ್ಳುವುದು. ಅದರ ಬಿಡುಗಡೆಗಾಗಿ ಶಿವನು ಭಿಕ್ಷಾಟನೆ ಮಾಡುತ್ತ ಲೋಕಗಳನ್ನೆಲ್ಲ ಸುತ್ತುವುದು.

        ಶಿವನು ಭಿಕ್ಷಕೆ ಬಂದ ನೋಡು ಬಾರೆ... ಎಂಬ ಹಾಡಿನ ಸಾಲು ನಮಗೆ ಚಿರಪರಿಚಿತವಾದದ್ದು. ಭಿಕ್ಷೆ ಎಂಬುದು ವೈರಾಗ್ಯದ ಒಂದು ಲಕ್ಷಣ. ಬಡವರಷ್ಟೇ ಭಿಕ್ಷೆ ಬೇಡುವುದಲ್ಲ , ಐಹಿಕ ಸುಖಸಂಪತ್ತನ್ನು ತೊರೆದ ಬೈರಾಗಿಗಳು ಕೂಡ ಭಿಕ್ಷೆ ಎತ್ತುತ್ತಾರೆ. ಭಿಕ್ಷೆಗೂ ಒಂದು ಘನತೆಯನ್ನು ತಂದುಕೊಡುವ ರೀತಿಯಲ್ಲಿ ಸಾಕ್ಷಾತ್‌ ಶಿವನೇ ಭಿಕ್ಷಾಪಾತ್ರೆಯನ್ನು ಹಿಡಿದುಕೊಂಡು ಮನೆಗಳ ಮುಂದೆ ಬಂದು ನಿಂತ.

        ಸಾಮಾನ್ಯ ಮನುಷ್ಯನೊಬ್ಬ "ಭವತಿ ಭಿಕ್ಷಾಂದೇಹಿ' ಎಂದು ಮನೆಯ ಮುಂದೆ ನಿಂತರೆ ಅವನಿಗೆ ಮನೆಯಲ್ಲಿ ಸಿದ್ಧಗೊಳಿಸಿದ ಆಹಾರ ಒಂದಿಷ್ಟನ್ನು ಕೊಟ್ಟುಬಿಡಬಹುದು. ಲೋಕನಾಯಕನೇ ಭಿಕ್ಷೆಗೆ ನಿಂತರೆ ಅವನಿಗೆ ಕೊಡುವುದಾದರೂ ಏನನ್ನು? ದೇವಾದಿದೇವನೇ ಸಕಲವನ್ನು ತೊರೆದು ಬತ್ತಲೆಯಾಗಿ ನಿಂತಾಗ ಲೌಕಿಕರಾದ ನಾವು ಪೀತಾಂಬರವನ್ನು ಉಟ್ಟು, ಚಿನ್ನಾಭರಣಗಳನ್ನು ಧರಿಸಿ ನಿಲ್ಲುವುದರಲ್ಲಿ ಏನು ಅರ್ಥವಿದೆ ! ಜಾತವಸ್ತ್ರಧಾರಿಯಾಗಿ ನಿಂತ ಶಿವನನ್ನು "ಇವನಂಥ ಚೆಲುವರಿಲ್ಲ' ಎಂದು ಒಪ್ಪಿಕೊಂಡ ಮೇಲೆ ನಮ್ಮ ಸಂಪತೌÕಭಾಗ್ಯಗಳಲ್ಲಿ ಏನು ಧನ್ಯತೆಯಿದೆ !

        ಇದು ನಾವು ಶಿವದೇವನಿಂದಲೂ ಶಿವರಾತ್ರಿಯಿಂದಲೂ ಕಲಿಯಬೇಕಾದ ದೊಡ್ಡ ಪಾಠ.
        ಶಿವನ ಪೂರ್ಣ ಚಿತ್ರವನ್ನು ನೋಡುವುದು ಚಿತ್ರಪಟಗಳಲ್ಲಿ ಮಾತ್ರ. ಒಂದೋ ಧ್ಯಾನಾಸಕ್ತನಾಗಿ ಕುಳಿತ ಶಿವ, ಇಲ್ಲವೆ, ತಾಂಡವ ಭಂಗಿಯ ನಟರಾಜ, ಅಥವಾ ಪಾರ್ವತಿಯೊಂದಿಗಿರುವ ಶೃಂಗಾರಭಾವದ ಶಿವ. ಶಿವನೆಂದ ಕೂಡಲೇ ಶಿರದ ಮೇಲೆ ಜಿಗಿಯುವ ಗಂಗೆ, ಸೊಂಟಕ್ಕೆ ಸುತ್ತಿರುವ ಗಜಚರ್ಮ, ಕೊರಳಿನಲ್ಲಿರುವ ನಾಗ ಕಣ್ಣೆದುರು ಬರುತ್ತದೆ. ಅನಿಕೇತನ ತಣ್ತೀಕ್ಕೆ ನಿಕಟವಾಗಿರುವ ಜೀವನ ಶೈಲಿ ಅವನದು.
        ಮಂಜುಬೆಟ್ಟದ ಮೇಲೆ ಆಲಯವಿಲ್ಲದೆ ಬಯಲಿನಲ್ಲಿಯೇ ಕುಳಿತ ರೀತಿಯನ್ನು ನೋಡಿದಾಗ ಯಾರಿಗೂ ಬೆರಗಾಗಬೇಕು. ಪ್ರಾಣಿ, ಪಕ್ಷಿ, ವೃಕ್ಷ ಸಂಕುಲಗಳಂತೆ ಪ್ರಕೃತಿಗೆ ಹತ್ತಿರವಾದ ಶೈಲಿಯಲ್ಲಿ ಬದುಕದೆ, ಸಂಸ್ಕೃತಿಯ ಹೆಚ್ಚುಗಾರಿಕೆಯನ್ನು ರೂಢಿಸಿಕೊಂಡ ಮನುಷ್ಯರಂತೆ ಎಲ್ಲ ದೇವರುಗಳೂ ಬದಲಾಗಿದ್ದಾರೆ.
        ಆದರೆ, ಶಿವ ಮಾತ್ರ ತಾನಿನ್ನೂ ಪ್ರಕೃತಿಗೆ ಹತ್ತಿರವಾಗಿಯೇ ಉಳಿದುಕೊಂಡು ಬಿಟ್ಟಿದ್ದಾನೆ. ನಿರಾಕಾರ ಸಿದ್ಧಾಂತಕ್ಕೆ ಪೂರಕವೆಂಬಂತೆ, ಆತ ತನ್ನ ಮೂರ್ತಿ ಆರಾಧನೆಗೊಳ್ಳುವುದನ್ನು ಒಪ್ಪಿಕೊಳ್ಳಲಿಲ್ಲ.
        ಸಾಂಕೇತಿಕವಾದ ಲಿಂಗವಿದ್ದರೆ ಸಾಕು. ಅಭಿಷೇಕವೂ ಅದೇ ಲಿಂಗಕ್ಕೆ , ಆರತಿಯೂ. ಆದರೆ, ಉಳ್ಳವರು ಆಲಯವನ್ನು ಕಟ್ಟಿಸಿಬಿಡುತ್ತಾರೆ. ಇಲ್ಲದವರು ತಮ್ಮ ದೇಹವೇ ದೇಗುಲವೆಂಬ ಮಹತ್ತರ ತಣ್ತೀವನ್ನು ಅನುಸರಿಸಿ ಸುಮ್ಮನಿರುತ್ತಾರೆ. ಅದ್ವೆ„ತ ಮಾರ್ಗಪ್ರವರ್ತಕರಾದ ಶ್ರೀಶಂಕರರಿಗೂ ವಿಶ್ವನಾಥ ಕ್ಷೇತ್ರವಾದ ಕಾಶಿಯಲ್ಲಿಯೇ ಜ್ಞಾನವಿಸ್ತರಣೆಯ ಆಸ್ಪದ ದೊರೆತದ್ದು. ಕಾಯಕವೇ ಕೈಲಾಸವೆಂದ ಬಸವಣ್ಣನವರಿಗೂ ಶಿವನೇ ಇಷ್ಟದೇವತೆ. ವೈದಿಕಗಳಲ್ಲಿ ರುದ್ರನಾಗಿರುವ ಮಂಗಳಕಾರಕ ಈಶ, ಜನಪದರಿಗೆ ಮಾದೇವನಾಗಿ ಪ್ರೀತಿಯ ದೇವರು. ಋಗ್‌ ಮತ್ತು ಯಜುರ್‌ವೆàದಗಳಲ್ಲಿ ರುದ್ರನ ಉಲ್ಲೇಖವಿದೆ. ಯಜ್ಞೆàಶ್ವರ ನಾದ ಅಗ್ನಿಯೂ ಶಿವನೂ ಒಂದೇ ಎಂದು ನಿರುಕ್ತ ಹೇಳುತ್ತದೆ. ಶುಭ ಎಂಬ ಅರ್ಥವನ್ನು ಹೊಂದಿರುವ ಹೆಸರುಳ್ಳ ಶಿವ, ಲಯಕರ್ತನೂ ಹೌದು. ಅಂತ್ಯ ಮತ್ತು ಸಂತುಲಿತ ಎಂಬ ಎರಡರ್ಥಗಳೂ ಲಯಕ್ಕಿವೆ.

        ಶಿವಪೂಜೆಯಲ್ಲಿ ನಿರತನಾದರೆ ಸಾಲದು. ಶಿವನಿಗೆ ಇಷ್ಟವಾದ ಪ್ರಕೃತಿಯ ಮೇಲೆಯೂ ಭಕ್ತಿಯಿಟ್ಟು ಜೀವಿಸಿದರೆ ಮಾತ್ರ ಶಿವರಾತ್ರಿಯ ಆಚರಣೆಯಲ್ಲಿ ಫ‌ಲವಿದೆ.

      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಜೂನ್‌ ತಿಂಗಳು ಹತ್ತಿರವಾದಂತೆ ನಗರಗಳ ಅಪ್ಪ, ಅಮ್ಮಂದಿರಿಗೆ ತಮ್ಮ ಚಿಣ್ಣರನ್ನು ಹತ್ತಿರದ ಯಾವ ಒಳ್ಳೆಯ ಶಾಲೆಗಳಿಗೆ ಸೇರಿಸುವುದು ಎಂಬ ಚಿಂತೆ...
      • ಈ ವಿಭಾಗದಲ್ಲಿಯೂ ಇದೆ
      • Copyright @ 2009-2010 Udayavani.All rights reserved.
      • Designed & Hosted By 4cplus