Thursday, May 17, 2012
Last Updated: 1:25:56 PM IST
  • ನಾನೆಲ್ಲಿರುವೆ:
  • ಮುಖಪುಟ ಪಯಣ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಗ್ರಿಕೋ ರೋಮನ್‌ ವೈಭವ


      • ಬೆಂಗಳೂರಿನ ಕೆಂಪು ಕಟ್ಟಡಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವುದೇ ಹೈಕೋರ್ಟ್‌. ವಿಧಾನ ಸೌಧದ‌ ಎದುರಿಗೆ ಗ್ರಿಕೋ-ರೋಮನ್‌ ಮಾದರಿ ಆರ್ಕಿಟಕ್ಚರ್‌ನಲ್ಲಿ ಈ ಕಟ್ಟಡವಿದೆ.

        ಈ ಹಿಂದೆ ಅಠಾರ ಕಚೇರಿಯಾಗಿದ್ದ ಕಟ್ಟಡ ಈಗ ರಾಜ್ಯ ಹೈಕೋರ್ಟ್‌. ಕೋರ್ಟ್‌ ಕಲಾಪಗಳು ನಡೆಯುವುದರಿಂದ ಸಾರ್ವಜನಿಕರಿಗೆ ಒಳಗಡೆ ಪ್ರವೇಶ ಇಲ್ಲ, ಹೊರಗಡೆಯಿಂದಲೇ ಈ ಕಟ್ಟಡದ ಸೊಬಗು ಸವಿಯಲು ಯಾವ ಅಡ್ಡಿ ಇಲ್ಲ.

        ಬೆಂಗಳೂರು  ಅರಮನೆ

        ವಿಧಾನ ಸೌಧದ ಉತ್ತರಕ್ಕೆ ಇರುವ ಬೆಂಗಳೂರು ಅರಮನೆ  ತನ್ನದೇ ಆದ ಇತಿಹಾಸ ಹೊಂದಿದೆ. 1880ರಲ್ಲಿ ನಿರ್ಮಾಣವಾದ ಈ ಅರಮನೆ ಇಂಗ್ಲೆಂಡ್‌ನ‌ ವಿಂಡ್ಸರ್‌ ಕ್ಯಾಸಲ್‌ ಮಾದರಿಯಲ್ಲಿದೆ.


        ಹಸಿರು ಉದ್ಯಾನ ಹಾಗೂ ಆಕರ್ಷಕ ಗೋಪುರಗಳೊಂದಿಗೆ ತನ್ನದೇ ಮೆರುಗು ಪಡೆದುಕೊಂಡಿದೆ. ಇಲ್ಲಿ ಅನೇಕ ಸಮಾರಂಭಗಳು ನಡೆಯುತ್ತವೆ. ಆದರೆ, ಪ್ರವೇಶ ನಿರ್ಬಂಸಲಾಗಿದೆ. ಆದರೆ, ಅರಮನೆ ಆವರಣದ ಒಂದು "ಾಗದಲ್ಲಿರುವ "ಫನ್‌ವರ್ಲ್ಡ್' ಅಮ್ಯೂಸ್‌ಮೆಂಟ್‌ ಮನರಂಜನೆ ತಾಣವಾಗಿದೆ. ಟಿ.ವಿ.ಗೋಪುರದ ಕಡೆಯಿಂದ ಪ್ರವೇಶವಿದೆ.

        ಲಾಲ್‌ಬಾಗ್‌

        ಬೆಂಗಳೂರಿನ ಹಸಿರು ವಿಶಾಲ ತಾಣಗಳಲ್ಲಿ ಲಾಲ್‌ಬಾಗ್‌ ಸಹ ಒಂದು. ತಂಪಾದ ಹವೆ ಜತೆಗೆ ಶಬಮಾಲಿನ್ಯದಿಂದ  ಮುಕ್ತವಾದ ಪ್ರಶಾಂತ ಸ್ಥಳ. ಕುಟುಂಬದ ಸದಸ್ಯರೊಂದಿಗೆ ಅರಾಮವಾಗಿ ಕಾಲ ಕಳೆಯಲು ಸೂಕ್ತ ತಾಣ. ಪ್ರೇಮಿಗಳಿಗೆ ಹೇಳಿ ಮಾಡಿಸಿದ ಜಾಗ.

        ಅಂದಾಜು 240 ಎಕರೆ ಪ್ರದೇಶವಿರುವ ಲಾಲ್‌ಬಾಗ್‌ "ಾರತದಲ್ಲಿಯೇ ಅತ್ಯಂತ ವಿರಳವಾದ ಗಿಡ- ಮರಗಳನ್ನು ಹೊಂದಿದೆ. ಶತಮಾನದಷ್ಟು ಹಳೆಯದಾದ ಮರಗಳು ಇಲ್ಲಿ ನೋಡಲು ಸಿಗುತ್ತವೆ. ಒಳಗಡೆ ಕೆಂಪೇಗೌಡ ಗೋಪುರ, 30 ಎಕರೆ ವಿಸ್ತೀರ್ಣದ ಕೆರೆ, ಹಸಿರು ಹುಲ್ಲಿನ ಹೊದಿಕೆ ಇರುವ ಪ್ರದೇಶಗಳು, ಸೆಂಚುರಿ ರೋಸ್‌ ಗಾರ್ಡನ್‌, ಲಂಡನ್‌ನ ಕ್ರಿಸ್ಟಲ್‌ ಪ್ಯಾಲೇಸ್‌ ಮಾದರಿಯ ಗಾಜಿನ ಮನೆ,


        ಮತ್ಸಾ$Âಲಯ, ಚಾಮರಾಜ ಒಡೆಯರ್‌ ಪ್ರತಿಮೆ, ಬ್ಯಾಂಡ್‌ಸ್ಟ್ಯಾಂಡ್‌, ಫ್ಲೋರಲ್‌ಕ್ಲಾಕ್‌, ಟಿಪ್ಪು ಸುಲ್ತಾನ್‌ ನೆಟ್ಟಿದ್ದ ಎರಡು ಮಾವಿನ ಮರಗಳನ್ನು ವೀಕ್ಷಿಸಬಹುದಾಗಿದೆ. ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ವೇಳೆ ಇಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗುತ್ತದೆ.


      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus