Udayavani | Feb 22, 2012
ಯುವ ಜನತೆ ಜೆಡಿಎಸ್‌ನತ್ತ ಒಲವು
ಬೀದರ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕಾರ್ಯಕ್ರಮಗಳನ್ನೇ ಮುಂದುವರೆಸಿಕೊಂಡು ಬಂದಿರುವ ಬಿಜೆಪಿ, ಅವುಗಳಿಗೆ ತನ್ನ ಫೋಟೋ ಹಾಕಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ ಎಂದು ರಾಜ್ಯ ಯುವ ಜನತಾದಳ ಅಧ್ಯಕ್ಷ ಮಧು ಬಂಗಾರಪ್ಪ ವ್ಯಂಗ್ಯವಾಡಿದರು.
ನಗರದ ಎಸ್‌ಆರ್‌ಎಸ್ ಕಲ್ಯಾಣ ಮಂಟಪದಲ್ಲಿ ಬುಧವಾರ ರಾಜ್ಯ ಯುವ ಜನತಾದಳ ಬೀದರದಿಂದ ದಾವಣಗೆರೆವರೆಗೆ ಹಮ್ಮಿಕೊಂಡಿರುವ ಯುವ ಚೇತನ ಸಮಾವೇಶ (ನವ ಶಕ್ತಿಯ ಸಂಚಲನ)ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕುಮಾರಸ್ವಾಮಿ ಅವರ ನಾಯಕತ್ವ ಮತ್ತು ಸಿಎಂ ಇದ್ದಾಗ ಅವರು ಕೈಗೊಂಡಿದ್ದ ಕಾರ್ಯಕ್ರಮಗಳಿಂದ ಯುವ ಜನತೆ ಜೆಡಿಎಸ್‌ನತ್ತ ಒಲವು ತೋರುತ್ತಿದ್ದಾರೆ. ಆದರೆ, ಯುವಶಕ್ತಿ ಬಿಜೆಪಿಗೂ ಸಹ ಒಂದು ಬಾರಿ ಅಧಿಧಿಕಾರ ಕೊಟ್ಟು ನೋಡಿತ್ತಾದರೂ ಯುವಕರ ಅಭಿವೃದ್ಧಿಗಾಗಿ ಒಂದು ಯೋಜನೆಯನ್ನು ಸಹ ಜಾರಿಗೆ ತರಲಾಗಲಿಲ್ಲ ಎಂದು ಅವರು ಆರೋಪಿಸಿದರು.
ಬಿಜೆಪಿ ಸರ್ಕಾರದ ಶೂನ್ಯ ಸಾಧನೆ ಅರಿತಿರುವ ಯುವ ಜನತೆ, ಕುಮಾರಸ್ವಾಮಿಗೆ ಮತ್ತೂಮ್ಮೆ ಆ ಶಕ್ತಿ ತುಂಬಲು ಮುಂದಾಗಿದೆ. ಹೀಗಾಗಿ ರಾಜ್ಯದಲ್ಲಿ ನವಶಕ್ತಿಯ ಸಂಚಲನ ಮೂಡಿಸಲು ಯುವ ಚೇತನ ಹೆಸರಿನಲ್ಲಿ ಸಮಾವೇಶ ನಡೆಸಲಾಗುತ್ತಿದೆ ಎಂದು ಹೇಳಿದರು.
ಜೆಡಿಎಸ್ ಅಧಿಧಿಕಾರಕ್ಕೆ ಬಂದರೆ ಸಂಪೂರ್ಣ ಸಾಲ ಮನ್ನಾ:
20 ತಿಂಗಳ ಮುಖ್ಯಮಂತ್ರಿ ಅವಧಿಧಿಯಲ್ಲಿ ಕುಮಾರಸ್ವಾಮಿ ಜನಪರ ಕಾರ್ಯಕ್ರಮಗಳಿಂದ ಮೆಚ್ಚುಗೆಗೆ ಪಾತ್ರರಾಗಿದ್ದರು. ರೈತರ 25 ಸಾವಿರ ರೂ. ಸಾಲ ಮನ್ನಾ ಯೋಜನೆ ಇದರಲ್ಲಿ ಒಂದಾಗಿದೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಸಂಪೂರ್ಣ ಸಾಲ ಮನ್ನಾ ಮಾಡುವ ಕುರಿತು ಕುಮಾರಸ್ವಾಮಿ ಈಗಾಗಲೇ ಘೋಷಣೆ ಮಾಡಿದ್ದಾರೆ ಎಂದು ಹೇಳಿದರು.
ಮಾಜಿ ಸಿಎಂ ಎಸ್. ಬಂಗಾರಪ್ಪ ಸಾಮಾಜಿಕ ಸಿದ್ಧಾಂತದ ಆಧಾರದ ಮೇಲೆ ಸುದೀರ್ಘ ರಾಜಕೀಯ ನಡೆಸಿದ್ದರು. ಅವರ ಗರಡಿಯಲ್ಲಿಯೇ ನಾನು ಸಹ ಬೆಳೆದುಬಂದಿದ್ದೇನೆ. ಅವರು ಯಾವುದೇ ಪಕ್ಷದಲ್ಲಿದ್ದರೂ ಆ ಪಕ್ಷದ ಬೆಳವಣಿಗೆಗಾಗಿ ತೆರೆಯ ಹಿಂದೆಯೇ ಕಾರ್ಯ ನಿರ್ವಹಿಸಿದ್ದೇನೆ. ಕೊನೆಯವರೆಗೂ ಜೆಡಿಎಸ್ ಪಕ್ಷದ ಬಲವರ್ಧನೆಗೆ ದುಡಿಯುತ್ತೇನೆ ಎಂದರು.
ಜೆಡಿಎಸ್ ಪಕ್ಷದ ಶಾಸಕಾಂಗ ಉಪ ನಾಯಕ ಬಂಡೆಪ್ಪ ಖಾಶೆಂಪೂರ ಸಮಾವೇಶಕ್ಕೆ ಚಾಲನೆ ನೀಡಿದರು. ಪಕ್ಷದ ಜಿಲ್ಲಾಧ್ಯಕ್ಷ ನಸಿಮೂದ್ದೀನ್ ಪಟೇಲ, ಕಾರ್ಯಾಧ್ಯಕ್ಷ ಶಾಂತಲಿಂಗ ಸಾವಳಗಿ, ಮಾಜಿ ಶಾಸಕ ಜುಲೆಧೀಕಾರ ಹಾಸ್ಮಿ, ಜಿಪಂ ಸದಸ್ಯರಾದ ವಸಂತ ಬಿರಾದಾರ, ಅನಿಲ ಭೂಸಾರೆ, ರೇಖಾ ಮಲ್ಕಾಪೂರೆ, ಕಸ್ತೂರಿಬಾಯಿ ಬೌದ್ಧೆ, ಪ್ರಮುಖರಾದ ಬಾಬು ಹೊನ್ನಾನಾಯಕ, ಪಿ.ಎ. ಚಂದ್ರಶೇಖರಯ್ಯ, ಶರಣಬಸಪ್ಪ, ಐಲಿನ್ ಜಾನ್ ಮಠಪತಿ, ಡಾ| ಮಂಜುನಾಥ, ಶ್ರೀಕಾಂತ ಬಿರಾದಾರ, ಗೋವರ್ಧನ ರಾಠೊಡ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಬೀದರದಿಂದ ದಾವಣಗೆರೆಯುವ ಚೇತನ ಸಮಾವೇಶಕ್ಕೆ ಚಾಲನೆ
ಬೀದರ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಯಾವುದೇ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳದೇ ಸ್ವತಂತ್ರವಾಗಿ ಅಧಿಧಿಕಾರಕ್ಕೆ ಬರಲಿದೆ ಎಂದು ರಾಜ್ಯ ಯುವ ಜನತಾದಳ ಅಧ್ಯಕ್ಷ ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಎಸ್‌ಆರ್‌ಎಸ್ ಕಲ್ಯಾಣ ಮಂಟಪದಲ್ಲಿ ಬುಧವಾರ ರಾಜ್ಯ ಯುವ ಜನತಾದಳ ಬೀದರದಿಂದ ದಾವಣಗೆರೆವರೆಗೆ ಹಮ್ಮಿಕೊಂಡಿರುವ ಯುವ ಚೇತನ ಸಮಾವೇಶ (ನವ ಶಕ್ತಿಯ ಸಂಚಲನ)ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜನವಾಹಿನಿ ಯಾತ್ರೆ ನಡೆಸಲಾಗಿದ್ದು, ಪಕ್ಷದ ಪರವಾಗಿ ಉತ್ತಮ ವಾತಾವರಣ ವ್ಯಕ್ತವಾಗಿದೆ ಎಂದು ಹೇಳಿದರು.
ರೈತರ ಹೆಸರಿನ ಮೇಲೆ ಅಧಿಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಅನ್ನದಾತರ ಮೇಲೆ ದೌರ್ಜನ್ಯ ಎಸಗಿ ಶಾಪಕ್ಕೆ ಗುರಿಯಾಗಿದೆ. ಬೀದಿಯಲ್ಲಿರುವ ಜನರ ರಕ್ಷಣೆಗಾಗಿ ಬೀದಿಗೆ ಹೋಗಿ ಹೋರಾಟ ಮಾಡುವ ಸ್ಥಿತಿ ಬಂದಿದೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆದಾಗ ಮಾತ್ರ ಈ ಶಾಪದಿಂದ ವಿಮೋಚನೆ ದೊರೆಯಲು ಸಾಧ್ಯವಿದೆ. ಇದು ತಮ್ಮ ತಂದೆ ಬಂಗಾರಪ್ಪ ಅವರ ಕನಸು ಕೂಡ ಆಗಿತ್ತು ಎಂದು ಅವರು ಹೇಳಿದರು.