Thursday, May 17, 2012
Last Updated: 1:25:56 PM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಎಂ.ಎನ್‌. ಆಶಾದೇವಿಗೆ ವಿ.ಎಂ. ಇನಾಂದಾರ್‌ ಸ್ಮಾರಕ ವಿಮಶಾì ಪ್ರಶಸ್ತಿ
      • Udayavani | Feb 22, 2012

        ಉಡುಪಿ : ಬೆಂಗಳೂರು ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ವಿಮರ್ಶಕಿ ಹಾಗೂ ಭಾಷಾಂತರಕಾರ್ತಿ ಎಂ.ಎನ್‌. ಆಶಾದೇವಿ ಅವರನ್ನು 2011ರ ವಿ.ಎಂ. ಇನಾಂದಾರ್‌ ಸ್ಮಾರಕ ವಿಮಶಾì ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ನಿರ್ದೇಶಕ ಪ್ರೊ| ಹೆರಂಜೆ ಕೃಷ್ಣ ಭಟ್‌ ಅವರು ತಿಳಿಸಿದ್ದಾರೆ.

        'ನಡುವೆ ಸುಳಿವ ಆತ್ಮ' ಈ ಕೃತಿಗೆ 'ಇನಾಂದಾರ್‌ ಪ್ರಶಸ್ತಿ' ಘೋಷಿಸಲಾಗಿದೆ. 2012ರ ಮಾರ್ಚ್‌ನಲ್ಲಿ ಎಂಜಿಎಂ ಕಾಲೇಜಿನಲ್ಲಿ ನಡೆಯುವ ವಾರ್ಷಿಕ ಸಾಹಿತ್ಯೋತ್ಸವದಲ್ಲಿ ಆಶಾದೇವಿ ಅವರಿಗೆ ಇನಾಂದಾರ್‌ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

        ಆಶಾದೇವಿ ಅವರು ಬಿಎ ಮತ್ತು ಎಂಎ ಪರೀಕ್ಷೆಯಲ್ಲಿ ಚಿನ್ನದ ಪದಕ ವಿಜೇತರು. ನವೋದಯ ಸಾಹಿತ್ಯದ ಮೇಲೆ ಪಾಶ್ಚಾತ್ಯ ವಿಮರ್ಶೆಯ ಪ್ರಭಾವದ ಕುರಿತು ನಿಬಂಧ ರಚಿಸಿ ಡಾಕ್ಟರೇಟ್‌ ಪದವಿ ಗಳಿಸಿದ್ದಾರೆ. 'ಸ್ತ್ರೀ ಮತವನುತ್ತರಿಸಲಾಗದೆ' ವಿಮಶಾìತ್ಮಕ ಲೇಖನಗಳ ಸಂಗ್ರಹದಲ್ಲಿ ಸ್ತ್ರೀಪರತೆ ಹಾಗೂ ಸಂಸ್ಕ ೃತಿಯನ್ನು ಬಿಂಬಿಸಿದ್ದಾರೆ.

        'ಭಾರತದ ಬಂಗಾರ' ಹಾಗೂ 'ಉರಿ ಚಮ್ಮಾಳಿಗೆ' ಅವರ ಅನುವಾದಿತ ಕೃತಿಗಳು. 'ವಚನ ಪ್ರವೇಶ' ಸಂಪಾದಿತ ಕೃತಿ. ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಆಶಾದೇವಿ ಅವರಿಗೆ ಎಂ.ಕೆ. ಇಂದಿರಾ ಪ್ರಶಸ್ತಿ, ಸುಧಾಮೂರ್ತಿ ಪ್ರಶಸ್ತಿಗಳು ಬಂದಿವೆ. ಕನ್ನಡ ಹಾಗೂ ಇಂಗ್ಲಿಷ್‌ನ ಪ್ರಸಿದ್ಧ ಪತ್ರಿಕೆಗಳಲ್ಲಿ ಅವರ ವಿಮಶಾìತ್ಮಕ ಲೇಖನಗಳು ಪ್ರಕಟವಾಗಿವೆ.


      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus