ವ್ಯಾಪಾರ ದೃಷ್ಟಿಯಿಂದ ಸಿನಿಮಾ ನಿರ್ಮಾಣ: ಗಿರೀಶ್ ಕಾಸರವಳ್ಳಿ ವಿಷಾದಶಿವಮೊಗ್ಗ: ವ್ಯಾಪಾರ ಮತ್ತು ಕಲೆ ಎರಡನ್ನೂ ಒಂದೇ ತಕ್ಕಡಿಯಲ್ಲಿ ಇಟ್ಟು ತೂಗುವುದೇ ಇಲ್ಲಿನ ಇಂದಿನ ಸಿನಿಮಾ ಕ್ಷೇತ್ರದ ಸಮಸ್ಯೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹೇಳಿದರು.ಕರ್ನಾಟಕ ಸಂಘದಲ್ಲಿ ಗೌರವ ಸದಸ್ಯತ್ವವನ್ನು ಸ್ವೀಕರಿಸಿ ಅವರು ಮಾತನಾಡಿ, ಸಿನಿಮಾವನ್ನು ವ್ಯಾಪಾರಿ ಮನೋಭಾವದಿಂದ ನೋಡುವ ಪರಿಪಾಠ ಹುಟ್ಟಿಕೊಂಡಿದೆ. ವ್ಯಾಪಾರದಿಂದ ದೃಷ್ಟಿಯಿಂದ ಸಿನಿಮಾಗಳ ಪ್ರಚಾರದ ಭರಾಟೆಯೂ ಹೆಚ್ಚಾಗಿದೆ. ಹೀಗಾಗಿ ಒಳ್ಳೆಯ ಸಿನಿಮಾಗಳು ಸೋಲುತ್ತಿವೆ ಎಂದು ವಿಷಾದಿಸಿದರು.ಇಂದು ಸಾಹಿತ್ಯವಾಗಲೀ, ಸಂಗೀತವಾಗಲೀ ಕಲುಷಿತಗೊಂಡಿಲ್ಲ. ಆದರೆ ದೃಶ್ಯ ಮಾಧ್ಯಮ ಮಾತ್ರ ಸಂಪೂರ್ಣವಾಗಿ ಕಲುಷಿತಗೊಂಡಿದೆ. ವ್ಯವಸ್ಥಿತ ಪ್ರಚಾರವನ್ನೇ ನಿಜ ಎಂದು ನಂಬುವ ಸ್ಥಿತಿ ಸೃಷ್ಟಿಯಾಗಿದ್ದು, ಇದು ಒಳ್ಳೆಯ ಸಿನಿಮಾಗಳ ಮೇಲೆ ಪ್ರಭಾವ ಬೀರುತ್ತಿದೆ ಎಂದರು.ವಿಮರ್ಶಕ ಟಿ.ಪಿ. ಅಶೋಕ್ ಮಾತನಾಡಿ, ಗಿರೀಶ್ ಕಾಸರವಳ್ಳಿಯವರು 7 ಸ್ವರ್ಣ ಕಮಲ ಪ್ರಶಸ್ತಿ ಪಡೆದ ಬಳಿಕವೂ ತಮ್ಮ ಸೃಜನಶೀಲತೆ ಕಳೆದುಕೊಳ್ಳದೆ ಮತ್ತೆ ಸಿನಿಮಾ ತಯಾರಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಚಲನ ಚಿತ್ರಗಳನ್ನು ನೋಡುವ ದ„ಷ್ಟಿಕೋನ ಬದಲಾಯಿಸಿರುವುದು ಗಿರೀಶ್ ಕಾಸರವಳ್ಳಿ ಮಾಡಿರುವ ಸಾಹಸ ಎಂದು ವಿಶ್ಲೇಷಿಸಿದರು. ಕರ್ನಾಟಕ ಸಂಘದ ಅಧ್ಯಕ್ಷ ಡಾ.ತೀ.ನಂ.ಶಂಕರನಾರಾಯಣ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಹೆಚ್.ಡಿ.ಉದಯಶಂಕರ ಶಾಸಿ, ಕೆ.ಜಿ.ಸುಬ್ರಹ್ಮಣ್ಯ, ವಿಶಾಲಾಕ್ಷಿ ಉಪಸ್ಥಿತರಿದ್ದರು..