Udayavani | Mar 06, 2012
ಕಾರ್ಕಳ: ತಾಲೂಕಿನ ಅಜೆಕಾರು ನಾಡ ಕಚೇರಿಯಲ್ಲಿ ಕಂದಾಯ ನಿರೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಬಿ. ತ್ರಿವಿಕ್ರಮ ಅಡಿಗ ಅವರು ಲಂಚ ಸ್ವೀಕರಿಸುತ್ತಿರುವಾಗಲೇ ಉಡುಪಿ ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ಮಂಗಳವಾರ ಸಂಭವಿಸಿದೆ.
ಖಾತೆ ಬದಲಾವಣೆಗೆ ಸಂಬಂಧಪಟ್ಟಂತೆ ಹೆರ್ಮುಂಡೆಯ ಚಂದ್ರಶೇಖರ ನಾಯ್ಕ ಅವರಿಂದ 3 ಸಾ. ರೂ. ಲಂಚ ಸ್ವೀಕರಿಸಿದ ಆರೋಪ ಅವರ ಮೇಲೆ ಹೊರಿಸಲಾಗಿದೆ.
ನ್ಯಾಯಾಲಯದ ಆದೇಶದಂತೆ ತನ್ನ ಪಾಲಿಗೆ ಬಂದ ಜಾಗವೊಂದರ ಖಾತೆ ಬದಲಾವಣೆಗೆ ಚಂದ್ರಶೇಖರ್ ಆರ್ಜಿ ಸಲ್ಲಿಸಿದ್ದರು. ಅರ್ಜಿ ಬಗ್ಗೆ ಕಳೆದ ಶುಕ್ರವಾರ ಅವರು ವಿಚಾರಿಸಲು ಹೋದಾಗ ಖಾತೆ ಬದಲಾವಣೆಗೆ ತನಗೆ 2 ಸಾ.ರೂ. ಹಾಗೂ ಗ್ರಾಮ ಲೆಕ್ಕಾಧಿಕಾರಿಗೆ 1 ಸಾ.ರೂ. ನೀಡಬೇಕು. ನಾಳೆ ಮಧ್ಯಾಹ್ನದ ಒಳಗೆ ಹಣ ತಂದರೆ ಸರಿ, ಇಲ್ಲವಾದರೆ ಅರ್ಜಿಯನ್ನು ಎ.ಸಿ.ಗೆ ಕಳುಹಿಸಲಾಗುವುದು ಎಂದು ಅಡಿಗ ಹೇಳಿದರು ಎನ್ನಲಾಗಿದೆ.

ಅದೇನು ಸಂತೆ ವ್ಯಾಪಾರವಾ ?: ಈ ಬಗ್ಗೆ ಶನಿವಾರ ಉಡುಪಿ ಲೋಕಾಯುಕ್ತಕ್ಕೆ ದೂರು ನೀಡಿದ ಅವರು ಲೋಕಾಯುಕ್ತರ ಸೂಚನೆಯಂತೆ ಶನಿವಾರ ಧ್ವನಿಮುದ್ರಿಕೆಯೊಂದಿಗೆ ನಾಡ ಕಚೇರಿಗೆ ಹೋದರು. 'ಇಂದು ಹಣ ತರಲಿಲ್ಲ' ಎಂದು ಹೇಳಿದಾಗ, ಅಡಿಗರು, 'ಮತ್ತಾÂಕೆ ನನ್ನ ಮುಖ ನೋಡಲು ಬಂದದ್ದಾ ?' ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯೆಯಾಗಿ 'ಸ್ವಲ್ಪ ಹಣ ಕಡಿಮೆ ಮಾಡಿ' ಎಂದು ಚಂದ್ರಶೇಖರ್ ವಿನಂತಿಸಿದಾಗ ' ಅದೇನು ಸಂತೆ ವ್ಯಾಪಾರವಾ ?' ಎಂದು ಅಡಿಗರು ಪ್ರಶ್ನಿಸಿದರು. ಬಳಿಕ ಮಂಗಳವಾರ ಹಣ ತರುವುದಾಗಿ ಹೇಳಿದೆ. ಆದರೆ ಗ್ರಾಮ ಲೆಕ್ಕಾಧಿಕಾರಿ ಯಾವುದೇ ಹಣ ಕೇಳಿರಲಿಲ್ಲ ಎಂದು ಚಂದ್ರಶೇಖರ್ ಅವರು ಉದಯವಾಣಿಯೊಂದಿಗೆ ಮಾತನಾಡುತ್ತಾ ಪ್ರಕರಣವನ್ನು ವಿವರಿಸಿದರು.
ಇಂದು ಚಂದ್ರಶೇಖರ್ ಹಣ ನೀಡುತ್ತಿದ್ದಂತೆ ಹೊರಗಡೆ ಕಾದು ಕುಳಿತಿದ್ದ ಲೋಕಾಯುಕ್ತ ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡರು. ಲೋಕಾಯುಕ್ತ ಡಿವೈಎಸ್‌ಪಿ ಸದಾನಂದ ವರ್ಣೆàಕರ್ ಅವರ ಮಾರ್ಗದರ್ಶನದಂತೆ ವೃತ್ತ ನಿರೀಕ್ಷರುಗಳಾದ ಬಿ.ಪಿ. ದಿನೇಶ್ ಕುಮಾರ್ ಮತ್ತು ಸಿ.ಇ. ತಿಮ್ಮಯ್ಯ ಕಾರ್ಯಾಚರಣೆ ನಡೆಸಿದರು. ಸಿಬ್ಬಂದಿಗಳಾದ ಶ್ರೀಧರ್, ಉಮೇಶ್, ನಾಗೇಶ್ ಉಡುಪ, ಶೋಭಾ, ರಿಯಾಜ್ ಅಹ್ಮದ್, ಶಿವರಾಯ, ಅಶೋಕ್, ಸಂತೋಷ್, ದಿನೇಶ್, ಲಕ್ಷಿ$¾àಧರ್ ಸೇಥಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.