Monday, May 20, 2013
Last Updated: 6:48:44 PM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
  • ಸೇರಾಜೆಯಲ್ಲಿ ಕಾಡು ಪ್ರಾಣಿಗಳ ಉಪಟಳ - ವ್ಯಾಪಕ ಕೃಷಿ ನಾಶ
  • ಕಾಡು ಪ್ರಾಣಿಗಳ ಉಪಟಳದಿಂದ ನಾಶವಾದ ತೆಂಗು,ಬಾಳೆ,ಆನಾನಸು ಕೃಷಿಗಳು.

    • Udayavani | Mar 11, 2012

      ಪೆರ್ಲ ; ಒಂದು ಕಾಲಘಟ್ಟದಲ್ಲಿ ಹುಲುಸಾಗಿ ಬೆಳೆದಿರುತ್ತಿದ್ದ ಕಾಡುಗಳು ಇಂದು ಕ್ರಮೇಣ ಬರಿದಾಗುತ್ತಿದ್ದು ಕಾಡು ಕಡಿದು ರಬ್ಬರ್‌ ಕೃಷಿಯಲ್ಲಿ ಆಸಕ್ತಿ ಬೆಳೆಸಿಕೊಂಡ ಮಾನವನಿಂದಾಗಿ ಕಾಡು ಪ್ರಾಣಿಗಳು ತಮ್ಮ ನೆಲೆ ಕಳೆದುಕೊಳ್ಳತೊಡಗಿರುವುದು ನಾಗರಿಕರಿಗೆ ಈಗ ಆತಂಕಿತ ವಿಷಯವಾಗಿದೆ. ನಾಡಿಗಿಳಿಯುವ ಇಂತಹ ವನ್ಯಜೀವಿಗಳು ಇಲ್ಲಿನ ಕೃಷಿಯುಕ್ತ ಪ್ರದೇಶಗಳನ್ನು ಆಕ್ರಮಿಸಿ ನಾಶಗೊಳಿಸುತ್ತಿರುವ ಪ್ರಕ್ರಿಯೆ ಮುಂದುವರಿಯುತ್ತಿರುವುದಾಗಿ ನಾಗರಿಕರು ದೂರಿದ್ದಾರೆ. ಆಹಾರವನ್ನು ಹುಡುಕಿಕೊಂಡು ನಾಡಿಗಿಳಿಯುವ ಕಾಡು ಪ್ರಾಣಿಗಳಾದ ಮಂಗ ,ಕಾಡು ಹಂದಿ ಇನ್ನಿತರ ಜೀವಿಗಳು ನೇರವಾಗಿ ಕೃಷಿ ಸ್ಥಳಗಳಿಗೆ ಲಗ್ಗೆ ಇಟ್ಟು ತೆಂಗಿನ ತೋಟ, ಆಡಿಕೆ ತೋಟ ,ಬಾಳೆ ಮೊದಲಾದ ಕೃಷಿಗಳನ್ನು ತಿನ್ನುವುದಲ್ಲದೆ ಇವುಗಳ ಗಿಡ ,ಮರಗಳನ್ನು ನಾಶ ಮಾಡುವುದಾಗಿ ಕೃಷಿಕರು ಆಳಲು ವ್ಯಕ್ತಪಡಿಸುತ್ತಿದ್ದಾರೆ. ಕಾಡು ಸಮೃದ್ಧವಾಗಿದ್ದ ಹಲವು ಕಡೆಗಳಲ್ಲಿ ಕಾಡು ಕಡಿದ ಜನ ರಬ್ಬರ್‌ ಬೆಳೆಯತ್ತ ಉತ್ಸುಹಕತೆ ತೋರ್ಪಡಿಸಿರುವುದರಿಂದ ಪಾಕೃತಿಕ ಆಸಮತೋಲನ ಏರ್ಪಾಡುತ್ತಿದ್ದು ವನ್ಯಜೀವಿಗಳ ಈ ಉಪಟಳ ಪ್ರಾರಂಭಗೊಳ್ಳಲು ಒಂದು ಕಾರಣವಾದರೆ , ಕೃಷಿಕರಿಗೆ ಉಪಯುಕ್ತವಾಗುವಂತೆ ಸರಕಾರ ಪರವಾನಿಗೆ ನೀಡಿದ ಕೋವಿಗಳ ಪರವಾನಿಗೆ ಇದೀಗ ನವೀಕರಿಸಲು ಅಧಿಕೃತ ವರ್ಗ ತೋರ್ಪಡಿಸುತ್ತಿರುವ ನಿರ್ಲಕ್ಷé ನೀತಿಯಿಂದಾಗಿ ಕೋವಿ ಇದ್ದ ಕೃಷಿಕರು ಇದೀಗ ಕೈ ಕಟ್ಟಿ ಕೂರಬೇಕಾಗಿ ಬಂದಿರುವುದು ನಾಡಿನಲ್ಲಿ ಕಾಡು ಪ್ರಾಣಿಗಳ ಉಪದ್ರ ವ್ಯಾಪಕವಾಗಲು ಇನ್ನೊಂದು ಪ್ರಧಾನ ಕಾರಣವಾಗಿದೆ ಎಂದು ನಾಗರಿಕರು ತಿಳಿಸಿದ್ದಾರೆ.

      ಕಾಡು ಪ್ರಾಣಿಗಳ ತೀವ್ರಕಾಟ;- ಇಲ್ಲಿನ ಸೇರಾಜೆ,ಸೋಮಾಜೆ,ಆಲ್ಚಾರ್‌, ಶಿರಿಯ ಅಣೆಕಟ್ಟು ಪರಿಸರ ಹಾಗೂ ಎಣ್ಮಕಜೆಗಳಲ್ಲಿನ ಕೃಷಿ ತೋಟಗಳಲ್ಲಿ ಕಾಡು ಪ್ರಾಣಿಗಳಿಂದಾಗಿ ಅತ್ಯಧಿಕ ಕೃಷಿ ನಾಶ ಸಂಭವಿಸುತ್ತಿರುವುದಾಗಿ ಸ್ಥಳೀಯರು ದೂರಿದ್ದಾರೆ. ತೆಂಗಿನ ಮರವೇರಿ ಸೀಯಾಳಗಳನ್ನು , ತೆಂಗಿನ ಕಾಯಿಗಳನ್ನು ಕೀಳುವ ಮಂಗಗಳು ಸ್ವತಃ ಅವುಗಳನ್ನು ತಿನ್ನುವುದಲ್ಲದೆ ಮರ-ಗಿಡಗಳನ್ನು ಹಾಳು ಮಾಡಿಯೂ ಉಪದ್ರ ನೀಡುತ್ತವೆ. ಬಾಳೆ ಗಿಡಗಳನ್ನು ,ಆನಾನಸು ,ಪಪ್ಪಾಯಿ ಇನ್ನಿತರ ತರಕಾರಿ ಕೃಷಿಗಳಿಗೆ ಲಗ್ಗೆ ಇಡುವ ವನ್ಯ ಜೀವಿಗಳು ಇಡೀ ತೋಟವನ್ನೆ ಅಲ್ಲೊಲ ಕಲೋÉಲಗೊಳಿಸುತ್ತಿರುವುದಾಗಿ ಇಲ್ಲಿನ ಕೃಷಿಕರು ಪತ್ರಿಕೆಗೆ ತಿಳಿಸಿದ್ದಾರೆ. ಹಗಲು ರಾತ್ರಿಯೆನ್ನದೆ ಕೃಷಿಕರ ನಿದ್ದೆಗೆಡಿಸುವ ಈ ವನ್ಯಜೀವಿಗಳಿಂದ ಅಪಾರ ನಾಶ ನಷ್ಟ ಉಂಟಾಗುತ್ತಿರುವುದರಿಂದ ಬಡಕೃಷಿಕರು ಆನ್ಯ ಜೀವನೋಪಾಯ ಮಾರ್ಗವಿಲ್ಲದೆ ಆತಂಕಿತರಾಗಿದ್ದಾರೆ.ಈ ಬಗ್ಗೆ ಕಾಳಜಿವುಳ್ಳ ಅಧಿಕಾರಿ ವರ್ಗ ಕೃಷಿಕರ ಕೋವಿ ಪರವಾನಿಗೆ ನೀಡಲು ಮುಂದಾದರೆ ಕಾಡು ಪ್ರಾಣಿಗಳ ಉಪಟಳದ ಸಮಸ್ಯೆಗೆ ಅಲ್ಪವಾದರೂ ಪರಿಹಾರ ಉಂಟಾಗಬಹುದೆಂಬುದು ನಾಗರಿಕರ ಅಭಿಪ್ರಾಯವಾಗಿದ್ದು ಇನ್ನಾದರೂ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಬೇಕಾಗಿರುವುದು ಅತ್ಯಗತ್ಯವಾಗಿದೆ.

    Share your views-post your Comment below
    blog comments powered by Disqus
    ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
    image
    • Copyright @ 2009 Udayavani.All rights reserved.
    • Designed & Hosted By 4cplus