Thursday, May 23, 2013
Last Updated: 9:47:09 AM IST
  • ನಾನೆಲ್ಲಿರುವೆ:
  • ಮುಖಪುಟ ರಾಜ್ಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
  • ಹಿಂದೂ ಕಾರ್ಯಕರ್ತರ ಬಂಧನ ವ್ಯವಸ್ಥಿತ ಸಂಚು
  • ಹಿಂದೂ ಕಾರ್ಯಕರ್ತನ್ನು ಬಂಧಿಸಿ ಅವರನ್ನು ಬಲಿಪಶು ಮಾಡಿದ್ದಾರೆ...

    • Udayavani | Mar 22, 2012

      ಸಿಂದಗಿ : ಪಟ್ಟಣದಲ್ಲಿ ಪಾಕ್‌ ಧ್ವಜ ಹಾರಿಸಿದ ಪ್ರಕರಣದಲ್ಲಿ ಭಾಗಿಯಾದ ನಿಜವಾದ ಅಪರಾಧಿಗಳನ್ನು ವ್ಯವಸ್ಥಿತವಾಗಿ ಬಚ್ಚಿಟ್ಟು ಹಿಂದೂ ಕಾರ್ಯಕರ್ತನ್ನು ಬಂಧಿಸಿ ಅವರನ್ನು ಬಲಿಪಶು ಮಾಡಿದ್ದಾರೆ ಎಂದು ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಹೇಳಿದರು.

      2003ರಲ್ಲಿ ತಾಲೂಕಿನ ದೇವರಹಿಪ್ಪರಗಿ ಗ್ರಾಮದಲ್ಲಿ ನಡೆದ ಹಿಂದು ಸಮಾಜೋತ್ಸವ ಕಾರ್ಯಕ್ರಮದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ಪಟ್ಟಣದ ನ್ಯಾಯಾಲಯದಲ್ಲಿ ಗುರುವಾರ ನಡೆದ ವಿಚಾರಣೆ ನಂತರ ಅವರು ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

      ಹಿಂದೂ ಕಾರ್ಯಕರ್ತರು ಪಾಕಿಸ್ತಾನ ಧ್ವಜವನ್ನು ಸುಟ್ಟು ಹಾಕುತ್ತಾರೆ ಹೋರತು, ದೇಶದಲ್ಲಿ ಪಾಕಿಸ್ಥಾನ ಧ್ವಜ ಹಾರಿಸುವುದಿಲ್ಲ. ಪಾಕ್‌ ಧ್ವಜ ಪ್ರಕರಣದ ಮೇಲೆ ಪೋಲಿಸರು ಬಂಧಿಸಿದ ಹಿಂದೂ ಕಾರ್ಯಕರ್ತರು ನಿರಪರಾಧಿಗಳು. ಅವರ ಮೇಲೆ ಎರಡು ಮೊಕದ್ದಮೆಗಳಿದ್ದು ಒಂದರಲ್ಲಿ ಜಾಮೀನು ಸಿಕ್ಕಿದೆ. ಇನ್ನೊಂದರಲ್ಲಿ ಜಾಮೀನು ದೊರಕುತ್ತದೆ ಎಂಬ ನಮ್ಮ ಆಸೆಯಿದೆ. ಬಂಧತ ಹಿಂದೂ ಕಾರ್ಯಕರ್ತರು ನೀಜವಾಗಿಯೂ ನಿರಪರಾಧಿಗಳು. ಅವರು ನಿರಪರಾಧಿಗಳೆಂಬುದಕ್ಕೆ ತಮ್ಮ ಹತ್ತಿರ ಸಾಕಷ್ಟು ಸಾಕ್ಷಿ - ಪುರಾವೆಗಳಿವೆ. ಅವರಿಗೆ ಖಂಡಿತವಾಗಿಯೂನ್ಯಾಯ ದೊರಕುತ್ತದೆ. ಅವರು ದೋಷಮುಕ್ತರಾಗಿ ಹೊರಬರತ್ತಾರೆ ಎಂಬ ವಿಶ್ವಾಸವಿದೆ ಎಂದರು.

      ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿಗಳು ಯಾವುದೇ ಆಧಾರವಿಲ್ಲದೇ ಪಾಕಿಸ್ಥಾನ ಧjವನ್ನು ಶ್ರೀರಾಮ ಸೇನೆ ಕಾರ್ಯಕರ್ತರು ಹಾರಿಸಿದ್ದಾರೆ ಎಂದು ಆರೋಪಿಸಿದ್ದು ಖಂಡನಿಯವಾಗಿದೆ. ಸಂಘಟನೆ ಮೇಲೆ ಆರೋಪ ಮಾಡಿ, ಗೂಬೆ ಕೂಡಿಸುವ ಷಡ‌Âಂತ್ರ ನಡೆದಿದೆ. ಆದ್ದರಿಂದ ಸಂಘಟನೆಯಿಂದ ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿ ಮೇಲೆ ಮಾನ ನಷ್ಟ ಮೊಕದ್ದಮೆ ಹಾಕುವುದಾಗಿ ತಿಳಿಸಿದರು.

      ಬಿಜೆಪಿ ಹಿಂದುತ್ವದ ಮುಖವಾಡ ಹಾಕಿಕೊಂಡು ದತ್ತ ಪೀಠಕ್ಕೆ ಮಾಡಿದ ದ್ರೋಹದಿಂದ ಚಿಕ್ಕಮಗಳೂರು ಲೋಕಸಭಾ ಚುನಾಣೆಯಲ್ಲಿ ಸೊಲು ಅನುಭವಿಸಿದೆ. ಈ ಚುನಾವಣೆ ಫಲಿತಾಂಶ ಮುಂಬರುವ ಚುನಾವಣೆಯ ದಿಕ್ಸೂಚಿಯಾಗಿದೆ. ಬಿಜೆಪಿಯವರು ದತ್ತ ಪೀಠವನ್ನು ರಾಜಕೀಯವಾಗಿ ಬಳಸಿಕೊಂಡರು. ಆದರೇ ದತ್ತ ಗುಹೆ ಬಿದ್ದು ಮೂರು ವರ್ಷಗಳು ಗತಿಸಿವೆ. ಅವರಿಂದ ದುರಸ್ಥಿಕಂಡಿಲ್ಲ. ಹಾಗಾಗಿ ದತ್ತಾತ್ರಯನ ಶಾಪದಿಂದ ಬಿಜೆಪಿಗೆ ಹಿನ್ನಡೆಯಾಗುತ್ತಿದೆ ಎಂದರು.

      ರಾಜ್ಯ ಸರಕಾರ ಮಂಡಿಸಿದ ಬಜೆಟ್‌ ಜನಸಾಮಾನ್ಯರ ಬಜೆಟ್‌ ಆಗಿದೆ. ಆದರೆ ಕಿತ್ತೂರ ರಾಣಿ ಚನ್ನಮ್ಮ ರಕ್ಷಣಾ ಸಮಿತಿ ಸರಕಾರ ಮುಂದೆ ಇಟ್ಟ ಬೇಡಿಕೆ ಕಿತ್ತೂರು ಸಂಸ್ಥಾನದಲ್ಲಿ ಬರುವ ಹಳ್ಳಿಗಳ ಪ್ರದೇಶ ಅಭಿವೃದ್ಧಿ ಪಡೆಸಿ ಪ್ರವಾಸಿ ತಾಣ ಮಾಡಬೇಕು. ಇದಕ್ಕೆ 500 ಕೋಟಿ ರೂ. ಹಣ ಮೀಸಲು ಇಡಬೇಕು ಎಂಬ ಬೇಡಿಕೆ ಮಾತ್ರ ಈಡೇರಿಸಿಲ್ಲ. ಕಿತ್ತೂರು ರಾಣಿ ಚೆನ್ನಮ್ಮ ದೇಶದ ಸ್ವಾತ್ಯಂತ್ರಕ್ಕಾಗಿ ಹೋರಾಡಿದ ಪ್ರಥಮ ಮಹಿಳೆ. ಆದ್ದರಿಂದ ಕಿತ್ತೂರು ಸಂಸ್ಥಾನ ಪ್ರದೇಶವನ್ನು ಅಭಿವೃದ್ಧಿ ಪಡಿಸಬೇಕು ಎಂದು ಸರಕಾರಕ್ಕೆ ಆಗ್ರಹಿಸಿದರು.

      ಶ್ರೀರಾಮಸೇನಾ ರಾಜ್ಯ ಕಾರ್ಯದರ್ಶಿ ನೀಲಕಂಠ ಕಂದಗಲ್‌, ಕಾರ್ಯಕರ್ತರಾದ ಬಸವರಾಜ ಪಾಟೀಲ, ರಾಜು ಪಾಟೀಲ, ವಿರೇಶ ವಸ್ತ್ರದ, ರವಿ ಮಠ, ಅಪ್ಪು ಟಿಣಕೆದಾರ ಹಾಗೂ ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

    Share your views-post your Comment below
    blog comments powered by Disqus
    ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
    image
    • Copyright @ 2009 Udayavani.All rights reserved.
    • Designed & Hosted By 4cplus