Wednesday, May 22, 2013
Last Updated: 8:06:25 PM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಒತ್ತಿನೆಣೆ: ಮತ್ತೆ 12 ದನಗಳ ಸಾವು
    • ಹೇನ್‌ಬೇರುಗೆ ಶಾಸಕರು, ಅಧಿಕಾರ ಭೇಟಿ
    • ದನಗಳು ಸಾವನ್ನಪ್ಪಿದ ಸ್ಥಳಕ್ಕೆ ಶಾಸಕ ಕೆ. ಲಕ್ಷ್ಮೀನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.

      • Udayavani | Apr 14, 2012

        ಕುಂದಾಪುರ/ಬೈಂದೂರು : ಒತ್ತಿನೆಣೆ ಗುಡ್ಡಕ್ಕೆ ಹೊಂದಿಕೊಂಡಂತೆ ಇರುವ ಹೇನ್‌ಬೇರುವಿನಲ್ಲಿ ಜಾನುವಾರುಗಳ ಸಾವಿನ ಸರಣಿ ಶನಿವಾರವೂ ಮುಂದುವರಿದಿದ್ದು 7 ಹಸುಗಳು ಮೃತಪಟ್ಟಿವೆ. ಸಾವಿನ ಸಂಖ್ಯೆ ಸಂಖ್ಯೆ 72ಕ್ಕೇರಿದೆ. ಇನ್ನೂ ನಾಲ್ಕೈದು ದನಗಳು ಗಂಭೀರ ಸ್ಥಿತಿಯಲ್ಲಿವೆ.

        ತ್ಯಾಜ್ಯ ಸೇವಿಸಿದ ದನಗಳು ಕಳೆದ ನಾಲ್ಕು ದಿನಗಳಿಂದ ಸಾವಿಗೀಡಾಗುತ್ತಿದ್ದು ಶುಕ್ರವಾರದ ತನಕ ಸುಮಾರು 60 ದನಗಳು ಸಾವಿಗೀಡಾಗಿದ್ದವು. ದಿನದಿನವೂ ದನಗಳು ಸಾವನ್ನಪ್ಪುತ್ತಿರುವುದನ್ನು ನೋಡಿದ ಇಲ್ಲಿನ ಜನತೆ ಕಂಗಾಲಾಗಿದ್ದಾರೆ.

        ಆತಂಕಗೊಂಡ ಸ್ಥಳೀಯರು

        ಕೃಷಿ ಹಾಗೂ ಹೈನುಗಾರಿಕೆಯನ್ನೇ ನಂಬಿರುವ ಹೇನ್‌ಬೇರುವಿನ ಜನ ಈ ದುರಂತದಿಂದ ದಿಕ್ಕೇ ತೋಚದಂತಾಗಿದ್ದಾರೆ. ಇಲಿನ ಸುಮಾರು 45 ಮನೆಗಳಲ್ಲಿ ದನಗಳು ಸಾವನ್ನಪ್ಪಿವೆ. ಇನ್ನೂ ಕೆಲವು ದನಗಳು ಗಂಭೀರ ಸ್ಥಿತಿಯಲ್ಲಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

        ಆಕ್ರೋಶಗೊಂಡ ಜನತೆ

        ಘಟನೆಯ ಸ್ಥಳಕ್ಕೆ ಶನಿವಾರ ಭೇಟಿ ನೀಡಿದ ಉದಯವಾಣಿ ಪ್ರತಿನಿಧಿಗೆ ಕಂಡುಬಂದಿರುವುದು ಕೃಷಿಕರ ನೋವು ಹಾಗೂ ಆಕ್ರೋಶ. ದನಗಳ ಈ ಸಾವಿಗೆ ತ್ಯಾಜ್ಯ ಸೇವನೆಯೇ ಕಾರಣ ಎನ್ನುತ್ತಾರೆ ಅವರು. ಹಿರಿಯ ಪಶು ವೈದ್ಯಾಧಿಕಾರಿಗಳ ಅಭಿಪ್ರಾಯವೂ ಅದೇ ಆಗಿದೆ. ಇದಕ್ಕೆ ಅವಕಾಶ ಮಾಡಿಕೊಟ್ಟ ಇಲಾಖೆಯ ಮೇಲೆ ಜನರು ಆಕ್ರೋಶಗೊಂಡಿದ್ದಾರೆ.

        ಅಧಿಕಾರಿಗಳ ಮೊಕ್ಕಾಂ

        ಕಳೆದ ನಾಲ್ಕು ದಿನದಿಂದ ಸುಮಾರು 72 ಜಾನುವಾರುಗಳ ಸಾವಿನ ಹಿನ್ನೆಲೆಯಲ್ಲಿ ಪಶುಸಂಗೋಪನ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಪಶು ವೈದ್ಯಾಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

        ಪಶು ವೈದ್ಯಕೀಯ ಸಹಾಯಕ ನಿರ್ದೇಶಕ ಡಾ| ಮಂಜುನಾಥ್‌, ಕುಂದಾಪುರ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ| ಸೂರ್ಯನಾರಾಯಣ, ಹೆಮ್ಮಾಡಿ ಪಶು ವೈದ್ಯಾಧಿಕಾರಿಗಳಾದ ಡಾ| ಬಾಬಣ್ಣ ಪೂಜಾರಿ, ಬೆಳ್ವೆಯ ಡಾ| ವಾಗೇಶ್‌, ಗುಜ್ಜಾಡಿಯ ಡಾ| ಅರುಣ್‌, ಬೈಂದೂರಿನ ಡಾ| ನಾಗರಾಜ್‌ ಹಿರಿಯ ಪಶು ಪರಿವೀಕ್ಷಕ ಪ್ರಶಾಂತ್‌ ಯು., ಮಾಚ ಬಿಲ್ಲವ, ವಾಹನ ಚಾಲಕ ಮಂಜಪ್ಪಯ್ಯ ಸ್ಥಳಲ್ಲಿದ್ದಾರೆ.

        ರವಿವಾರ ಶಿವಮೊಗ್ಗದ ವಲಯ ರಿಸರ್ಚ್‌ ಅಧಿಕಾರಿ ಡಾ| ಸುದರ್ಶನ್‌ ಹೆಚ್ಚಿನ ಪರೀಕ್ಷೆಗಾಗಿ ಆಗಮಿಸಲಿದ್ದಾರೆ. ಉಳಿದ ದನಗಳ ರಕ್ಷಣೆ ಕಾರ್ಯದಲ್ಲಿ ವೈದ್ಯರ ತಂಡದ ಪ್ರಯತ್ನ ಸಾಗುತ್ತಿದೆ. ಆದರೂ ಇಂದು ಸಂಜೆ ಮತ್ತೆ ನಾಲ್ಕು ದನಗಳು ಗಂಭೀರ ಸ್ಥಿತಿಗೆ ಜಾರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

        ಜನಪ್ರತಿನಿಧಿಗಳ ಭೇಟಿ

        ಹೇನ್‌ಬೇರುವಿಗೆ ಶನಿವಾರ ಬೈಂದೂರು ಶಾಸಕ ಕೆ. ಲಕ್ಷ್ಮೀನಾರಾಯಣ ಆಗಮಿಸಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಭೇಟಿ ನೀಡಿ ಕೃಷಿಕರಿಗೆ ಸಾಂತ್ವನ ಹೇಳಿದ್ದಾರೆ.

        ವೈದ್ಯರ ಅಭಿಪ್ರಾಯ

        ಹಿರಿಯ ಪಶು ವೈದ್ಯಕೀಯ ನಿರ್ದೇಶಕರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅವರ ಪ್ರಕಾರ ದನಗಳ ಸಾವಿಗೆ ಮೇಲ್ನೋಟಕ್ಕೆ ಯಾವುದೇ ಸೋಂಕು ಅಥವಾ ವೈರಲ್‌ ಬಾಧೆ ಕಾರಣವಲ್ಲ. ಈಗಾಗಲೇ ಮಾದರಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ಅಲ್ಲಿನ ವರದಿ ಬಂದ ಮೇಲೆ ಸಾವಿನ ಬಗ್ಗೆ ಖಚಿತ ಅಭಿಪ್ರಾಯಕ್ಕೆ ಬರಲು ಸಾಧ್ಯ ಎನ್ನುತ್ತಾರೆ.

        ಮತ್ತೆ ಮೇಯುತ್ತಿರುವ ದನಗಳು

        ದನಗಳ ಸಾವಿಗೆ ಒತ್ತಿನೆಣೆ ಪರಿಸರದ ತ್ಯಾಜ್ಯ ಸೇವನೆ ಕಾರಣ ಎಂದು ಗೊತ್ತಾಗಿದ್ದರೂ ಶನಿವಾರವೂ ಕೆಲ ದನಗಳನ್ನು ಈ ಗುಡ್ಡದಲ್ಲಿ ಮೇಯಲು ಬಿಟ್ಟಿರುವುದು ಕಂಡುಬಂತು.

        ಬೈಂದೂರಿನ ಹೇನ್‌ಬೇರು ಪರಿಸರದಲ್ಲಿ ದನಗಳ ಸಾವಿಗೆ ಕೆಲವು ಮೂಲಗಳ ಪ್ರಕಾರ ಈ ಭಾಗದಲ್ಲಿ ಗೇರು ಮರಗಳಿಗೆ ಸಿಂಪಡಿಸಿರುವ ಔಷಧ ಕಾರಣ ಹಾಗೂ ಈಗಾಗಲೇ ಸುಮಾರು 3.50 ಲಕ್ಷ ರೂ. ನಷ್ಟ ಸಂಭವಿಸಿದ್ದರೂ ಈ ಬಗ್ಗೆ ಇಲಾಖೆ ಸರಿಯಾಗಿ ಸ್ಪಂದಿಸಿಲ್ಲ ಎನ್ನುತ್ತಾರೆ ಬೈಂದೂರಿನ ಸಾಮಾಜಿಕ ಕಾರ್ಯಕರ್ತ ರವೀಂದ್ರ ಶ್ಯಾನುಭಾಗ್‌.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus