ಕೋಲ್ಕತಾ: ನಾಯಕ ಗೌತಮ್ ಗಂಭೀರ್ ಅವರ ಅರ್ಧಶತಕದಿಂದಾಗಿ ಕೋಲ್ಕತಾ ನೈಟ್‌ರೈಡರ್ ತಂಡವು ಐಪಿಎಲ್‌ನ ಬುಧವಾರದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು 8 ವಿಕೆಟ್‌ಗಳಿಂದ ಭರ್ಜರಿಯಾಗಿ ಸೋಲಿಸಿದೆ.ಬಿಗು ದಾಳಿಯಿಂದಾಗಿ ಪಂಜಾಬ್ ಮೊತ್ತವನ್ನು 124 ರನ್ನಿಗೆ ನಿಯಂತ್ರಿಸಿದ್ದ ಕೋಲ್ಕತಾ ತಂಡವು ಆಬಳಿಕ ಗಂಭೀರ್ ಅವರ ತಾಳ್ಮೆಯ ಆಟದಿಂದಾಗಿ 16.3 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟದಲ್ಲಿ ಗುರಿ ತಲಪಿತು. ಈ ಜಯದಿಂದ ಕೋಲ್ಕತಾ ಆರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿತು.ಗಿಲ್‌ಕ್ರಿಸ್ಟ್ ಲಯ ಕಂಡುಕೊಂಡ ಹೊತ್ತಿನಲ್ಲೇ ಸ್ನಾಯು ಸೆಳೆತಕ್ಕೊಳಗಾಗಿ ಕ್ರೀಸ್ ತೊರೆಯುವ ಅನಿವಾರ್ಯತೆಗೆ ಸಿಲುಕಿದರು. ಆಗ ಪಂಜಾಬ್ 5.5 ಓವರ್‌ಗಳಲ್ಲಿ 44 ರನ್ ಮಾಡಿತ್ತು. ಗಿಲ್ಲಿ 23 ಎಸೆತಗಳಿಂದ 28 ರನ್ ಗಳಿಸಿದ್ದರು. ಹೊಡೆದದ್ದು 3 ಬೌಂಡರಿ. ಕೊನೆ ಹಂತದಲ್ಲಿ ಮತ್ತೆ ಕ್ರೀಸಿಗೆ ಆಗಮಿಸಿದ ಗಿಲ್‌ಕ್ರಿಸ್ಟ್ ಕೊನೆಗೆ 40 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ವೇಳೆ ಒಂದು ಸಿಕ್ಸರ್ ಬಾರಿಸಿದರು.ಶಾನ್ ಮಾರ್ಷ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರೂ ಬ್ರೆಟ್ ಲೀ ಅದಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು. 30 ಎಸೆತ ಎದುರಿಸಿದ ಮಾರ್ಷ್ 33 Ãನ್ ಹೊಡೆದರು. 4 ಬೌಂಡರಿ ಬಾರಿಸಿದ್ದರು. ಅವರನ್ನು ಹೊರತುಪಡಿಸಿದರೆ ಡೇವಿಡ್ ಹಸ್ಸಿ, ಮನ್‌ದೀಪ್ ಸಿಂಗ್, ಡಿಮಿಟ್ರಿ ಮಸ್ಕರೇನಸ್ ನಿರಾಶೆ ಮೂಡಿಸಿದರು.ಬ್ರೆಟ್ ಲೀ ಮತ್ತು ಸುನಿಲ್ ನಾರಾಯಣ್ ತಲಾ ಎರಡು ವಿಕೆಟ್ ಪಡೆದರು.ಈ ಪಂದ್ಯಕ್ಕಾಗಿ ಕೆಕೆಆರ್ 3 ಬದಲಾವಣೆ ಮಾಡಿಕೊಂಡಿತ್ತು. ಶಕಿಬ್ ಅಲ್ ಹಸನ್, ರಿಯಾನ್ ಟೆನ್ ಡೊಶೆಟ್ ಮತ್ತು ಜೈದೇವ್ ಉನಾದ್ಕತ್ ಬದಲು ಮೆಕಲಮ್, ಬ್ರೆಟ್ ಲೀ ಮತ್ತು ಬಾಲಾಜಿ ಅವರನ್ನು ಆಡಿಸಲಾಗಿತ್ತು. ಪಂಜಾಬ್ ತಂಡದಲ್ಲಿ ಬಿಪುಲ್ ಶರ್ಮ ಬದಲು ವಲ್ತಾಟಿಗೆ ಜಾಗ ಕಲ್ಪಿಸಲಾಗಿತ್ತು.ಕೋಲ್ಕತಾ ತಂಡದ ಆರಂಭ ಉತ್ತಮವಾಗಿತ್ತು. ಗಂಭೀರ್ ಮತ್ತು ಬ್ರೆಂಡನ್ ಮೆಕಲಮ್ ಮೊದಲ ವಿಕೆಟಿಗೆ 5.5 ಓವರ್‌ಗಳಲ್ಲಿ 53 ರನ್ ಗಳಿಸಿದ್ದರು. ಈ ಹಂತದಲ್ಲಿ ಚಾವ್ಲಾ ಎಸೆತದಲ್ಲಿ 15 ರನ್ ಗಳಿಸಿದ ಮೆಕಲಮ್ ಔಟಾದರು. ಬಿಸ್ಲಾ 11 ರನ್ ಗಳಿಸಿದ್ದರೆ ಕ್ಯಾಲಿಸ್ ಮತ್ತು ಗಂಭೀರ್ ಇನ್ನಷ್ಟು ಕುಸಿತ ಕಾಣದಂತೆ ನೋಡಿಕೊಂಡು ತಂಡದ ಗೆಲುವನ್ನು ಸಾರಿದರು.ಗಂಭೀರ್ 44 ಎಸೆತಗಳಿಂದ 7 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 66 ರನ್ ಗಳಿಸಿದ್ದರೆ ಕ್ಯಾಲಿಸ್ 30 ರನ್ ಗಳಿಸಿ ಅಜೇಯರಾಗಿ ಉಳಿದರು.ಸ್ಕೋರುಪಟ್ಟಿಕಿಂಗ್ಸ್ ಇಲೆವೆನ್ ಪಂಜಾಬ್:ಆ್ಯಡಂ ಗಿಲ್‌ಕ್ರಿಸ್ಟ್ ಔಟಾಗದೆ 40ಪಾಲ್ ವಲ್ತಾಟಿ ಸಿ ಬಿಸ್ಲಾ ಬಿ ಲೀ 8ಶಾನ್ ಮಾರ್ಷ್ ಸಿ ಬಿಸ್ಲಾ ಬಿ ಲೀ 33ಮನ್‌ದೀಪ್ ಸಿಂಗ್ ಸಿ ಭಾಟಿಯ ಬಿ ಬಾಲಾಜಿ 6ಡೇವಿಡ್ ಹಸ್ಸಿ ರನೌಟ್ 10ಪರಾಸ್ ದೋಗ್ರ ಸಿ ಕ್ಯಾಲಿಸ್ ಬಿ ನಾರಾಯಣ್ 6ಡಿ. ಮಸ್ಕರೇನಸ್ ಸಿ ತಿವಾರಿ ಬಿ ಭಾಟಿಯ 9ಪಿಯೂಷ್ ಚಾವ್ಲಾ ಬಿ ನಾರಾಯಣ್ 9ಇತರ 3ಒಟ್ಟು (20 ಓವರ್‌ಗಳಲ್ಲಿ 7 ವಿಕೆಟಿಗೆ) 124ವಿಕೆಟ್ ಪತನ: 1-24, 2-62, 3-86, 4-87, 5-101, 6-103. 7-124ಬೌಲಿಂಗ್:ಬ್ರೆಟ್ ಲೀ 4-0-26-2ಜಾಕ್ ಕ್ಯಾಲಿಸ್ 3-0-23-0ಸುನೀಲ್ ನಾರಾಯಣ್ 4-0-24-2ಲಕ್ಷ್ಮೀಪತಿ ಬಾಲಾಜಿ 4-0-20-1ಯೂಸುಫ್ ಪಠಾಣ್ 1-0-7-0ರಜತ್ ಭಾಟಿಯ 4-0-23-1ಕೋಲ್ಕತಾ ನೈಟ್ರೈಡರ್ಬ್ರೆಂಡಮ್ ಮೆಕಲಮ್ ಸಿ ಮಸ್ಕರೇನಸ್ ಬಿ ಚಾವ್ಲಾ 15ಗೌತಮ್ ಗಂಭೀರ್ ಔಟಾಗದೆ 66ಮನ್ವಿಂದರ್ ಬಿಸ್ಲಾ ಬಿ ಚಾವ್ಲಾ 11ಜಾಕ್ ಕ್ಯಾಲಿಸ್ ಔಟಾಗದೆ 30ಇತರ: 5ಒಟ್ಟು (16.3 ಓವರ್‌ಗಳಲ್ಲಿ 2 ವಿಕೆಟಿಗೆ) 127ವಿಕೆಟ್ ಪತನ: 1-53, 2-74ಬೌಲಿಂಗ್:ಪ್ರವೀಣ್ ಕುಮಾರ್ 3-1-23-0ಡಿಮಿಟ್ರಿ ಮಸ್ಕರೇನಸ್ 4-0-23-0ಹರ್ಮೀತ್ ಸಿಂಗ್ 2-0-26-0ಪಿಯೂಷ್ ಚಾವ್ಲಾ 4-0-19-2ಭಾರ್ಗವ್ ಭಟ್ 3.3-0-32-0ಪಂದ್ಯಶ್ರೇಷ್ಠ: ಗೌತಮ್ ಗಂಭೀರ್
Get FREE IPL Scores/Updates-08023635343. Call now, it disconnects after one ring and you get SMS within 60 Sec. Service from www.just1misscall.com ITYS FREE AVAIL THIS INFORMATION