Saturday, December 20, 2014
Last Updated: 7:16:40 PM IST
 • ನಾನೆಲ್ಲಿರುವೆ:
 • ಮುಖಪುಟ ಅಭಿಪ್ರಾಯ ಬ್ಲಾಗ್ ಮನೋಹರ ಪ್ರಸಾದ್‌
 • ವಿಡಿಯೋ ಗ್ಯಾಲರಿ
 • ಉದಯವಾಣಿ
 • ವೆ ಬ್
 • ಹುಡುಕಿ
image
 • Imageಮನೋಹರ ಪ್ರಸಾದ್‌, ಸುದ್ದಿವಿಭಾಗದ ಮುಖ್ಯಸ್ಥರು

  'ಉದಯವಾಣಿ' ದಿನಪತ್ರಿಕೆಯ ಮಂಗಳೂರು ಸುದ್ದಿವಿಭಾಗದ ಮುಖ್ಯಸ್ಥರು. ಮಾನವೀಯ ಮತ್ತು ಸಾಮಾಜಿಕ ಪ್ರಸ್ತುತಿಯ ವರದಿಗಾರಿಕೆಯಿಂದ ಗಮನ ಸೆಳೆದವರು, ಕತೆಗಾರ ಕೂಡಾ. 2005ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2007ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಗೌರವ ಪ್ರಶಸ್ತಿ ಪುರಸ್ಕೃತರಾಗಿರುವ ಅವರ 2500ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ.

Jul 28, 2012 | Comments 1 | ShareShare
------------------------------------------------------------------------------------
ಇಂಗ್ಲೆಂಡ್‌: ಅದು 12 ದಿನಗಳ ಪ್ರವಾಸ


(ಇಂಗ್ಲೆಂಡಿನ ರಾಜಧಾನಿ ಲಂಡನ್‌ನಲ್ಲಿ ಆಧುನಿಕ ಒಲಿಂಪಿಕ್‌ ಕ್ರೀಡಾಕೂಟ ಜುಲೈ 27ರಂದು ಆರಂಭವಾಗಿದೆ. ಲಂಡನ್‌ ಸಹಿತ ಇಂಗ್ಲೆಂಡಿನ 34 ಕೇಂದ್ರಗಳಲ್ಲಿ ನಡೆಯುವ ಈ ಒಲಿಪಿಕ್ಸ್‌ನಲ್ಲಿ 204 ದೇಶಗಳ 11 ಸಾವಿರ ಕ್ರೀಡಾಪಟುಗಳು ಸ್ಪರ್ಧಿಸುತ್ತಿದ್ದಾರೆ. ಭಾರತದ 81 ಮಂದಿ ಕ್ರೀಡಾಪಟುಗಳಿದ್ದಾರೆ. ಒಲಿಂಪಿಕ್ಸ್‌ ಇತಿಹಾಸದಲ್ಲಿಯೇ ಅದ್ದೂರಿಯ ಮತ್ತು ವೈಶಿಷ್ಠÂಪೂರ್ಣವಾದ ಈ ಒಲಿಂಪಿಕ್ಸ್‌ಗೆ ಒಟ್ಟು 9.3 ಬಿಲಿಯನ್‌ ಪೌಂಡ್‌ ಅಂದರೆ 14.5 ಬಿಲಿಯನ್‌ ಡಾಲರ್‌ ವ್ಯಯವಾಗಲಿದೆ. ಲಂಡನ್‌ನಲ್ಲಿ ಇದು ಮೂರನೇ ಬಾರಿ ನಡೆಯುತ್ತಿರುವ ಒಲಿಂಪಿಕ್ಸ್‌. ಬ್ರಿಟಿಶ್‌ ಕೌನ್ಸಿಲ್‌ ಆಮಂತ್ರಣದೊಂದಿಗೆ ಈ ಬ್ಲಾಗ್‌ ಲೇಖಕ ಆರು ವರ್ಷಗಳ ಹಿಂದೆ ಇಂಗ್ಲೆಂಡಿಗೆ 12 ದಿನಗಳ ಪ್ರವಾಸವನ್ನು ಮಂಗಳೂರಿನ ಗೆಳೆಯ ಎಂ. ಅಶೋಕ್‌ ಶೇಟ್‌ ಅವರೊಂದಿಗೆ ಕೈಗೊಂಡಿದ್ದ ಸಂದರ್ಭದ ಅನುಭವ ಮಾಲಿಕೆ ಪ್ರಿಯ ಬ್ಲಾಗ್‌ ಸಂದರ್ಶಕರಿಗೆ ಈ ಮಾಲಿಕೆಯಲ್ಲಿ ನೀಡಲಾಗುತ್ತಿದೆ. ಲಂಡನ್‌ನಲ್ಲಿ ನಮ್ಮ ಆತಿಥೇಯರಾಗಿದ್ದ ಶೇಟ್‌ ಅವರ ಸೋದರಳಿಯ- ಆಗತಾನೇ ನಾಟಿಂಗ್‌ಹ್ಯಾಂ ವಿಶ್ವವಿದ್ಯಾನಿಲಯದಲ್ಲಿ ಕೃಷಿ ವಿಷಯದಲ್ಲಿ ಡಾಕ್ಟರೇಟ್‌ ಪಡೆದ ಡಾ| ಅರವಿಂದ್‌ ಬಾಬುರಾಯ ನಾಗೇಶ್‌. ಅವರು ಧಾರವಾಡ ಕೃಷಿ ವಿ.ವಿ.ಯಿಂದ ಪಿಎಚ್‌ಡಿ ಅಧ್ಯಯನಕ್ಕೆ ಇಂಗ್ಲೆಂಡಿಗೆ ಬಂದಿದ್ದರು. ಈಗ, ಮತ್ತೆ ಧಾರವಾಡ ಕೃಷಿ ವಿವಿಯಲ್ಲಿ ಪ್ರೊಫೆಸರ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.)

ನಾವು ಮುಂಬಯಿಯಿಂದ ಬ್ರಿಟಿಷ್‌ ಮಿಡ್‌ವೇಸ್‌ ಏರ್‌ಲೈನ್ಸ್‌ ವಿಮಾನದಲ್ಲಿ ಪ್ರಯಾಣ ಆರಂಭಿಸಿದ್ದು ಮಧ್ಯರಾತ್ರಿ ಕಳೆದ ಬಳಿಕದ ಭಾರತೀಯ ಕಾಲಮಾನ ಮುಂಜಾನೆ 2.30ಕ್ಕೆ. ಸಮಯದ ಲೆಕ್ಕಾಚಾರವೂ ಅಲ್ಲಿಂದಲೇ ಆರಂಭ. ಏಕೆಂದರೆ, ಇಂಗ್ಲೆಂಡ್‌ ನಮಗಿಂತ ಸುಮಾರು ನಾಲ್ಕುವರೆ ತಾಸುಗಳಷ್ಟು ಹಿಂದಿರುತ್ತದೆ.

ಲಂಡನ್ನಿನ ಪ್ರಖ್ಯಾತ ಹೀತೂÅ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾವು ಇಳಿದಾಗ ಅದು ಸತತವಾದ ಒಂಬತ್ತು ತಾಸುಗಳ ಪ್ರಯಾಣವಾಗಿತ್ತು. ಅಲ್ಲಿ ಒಂದು ತಾಸಿನಲ್ಲಿ  ಪ್ರವಾಸ ಸಂಬಂಧಿತ ತಾಂತ್ರಿಕ ಪ್ರಕ್ರಿಯೆಗಳನ್ನು ಪೂರೈಸಿ, ಬ್ಯಾಗೇಜ್‌ ಸಂಗ್ರಹಿಸಿ ನಾವು ಹೊರಬಂದಾಗ ಬೆಳಗ್ಗಿನ ಒಂಬತ್ತು ದಾಟಿತ್ತು.

>>> ಲಂಡನ್‌ನ ಥೇಮ್ಸ್‌ ನದಿಯ ಲಂಡನ್‌ ಬ್ರಿಜ್‌ನಲ್ಲಿ ಅಶೋಕ್‌ ಶೇಟ್‌, ಮನೋಹರ ಪ್ರಸಾದ್‌, ಡಾ| ಅರವಿಂದ್‌.

ಬಾಲ್ಯದಲ್ಲಿ ಇತಿಹಾಸ, ಭೂಗೋಳಶಾಸ್ತ್ರ ಪಾಠವನ್ನು ಓದುತ್ತಿರುವಾಗಲೇ ಇಂಗ್ಲೆಂಡ್‌ ಬಗ್ಗೆ ಅದೇನೋ ಕುತೂಹಲ. ಅದು ಸಿಟ್ಟು ತುಂಬಿದ್ದ ಕುತೂಹಲವೂ ಆಗಿದ್ದಿರಬಹುದು! ದೇಶದ ಸ್ವಾತಂತ್ರÂ ಹೋರಾಟದ ಕಥಾನಕವನ್ನು ಅರಿಯುತ್ತಿದ್ದಂತೆಯೇ ಸಿಟ್ಟು ತೀವ್ರವಾಗತೊಡಗಿತ್ತು. ಅದರ ಜತೆಯಲ್ಲಿ ಕುತೂಹಲ ಕೂಡಾ! ಒಂದು ಕಾಲದಲ್ಲಿ ಬ್ರಿಟಿಷರದ್ದು ಸೂರ್ಯ ಮುಳುಗದ ಸಾಮ್ರಾಜ್ಯ ಎಂದೇ ಪ್ರತೀತಿ. ಏಕೆಂದರೆ ಜಗತ್ತಿನಾದ್ಯಂತ ಅವರ ವಸಾಹತುಗಳು ತುಂಬಿ ಹೋಗಿದ್ದವು. ಐದಾರು ಶತಮಾನಗಳ ಹಿಂದೆ ಅವರು ಇದನ್ನು ಹೇಗೆ ಸಾಧಿಸಿದರು ? ಆಗ ದೂರವಾಣಿ ಸಂಪರ್ಕ ಇರಲಿಲ್ಲ. ವಿದ್ಯುತ್‌ ಇರಲಿಲ್ಲ. ಸಂಪರ್ಕ ಸಾಧನಗಳಿರಲಿಲ್ಲ. ನೌಕಾಯಾನದ ಜ್ಞಾನ, ಸಾಹಸಿಕ ಮನೋಭಾವದಿಂದಲೇ ಅವರು ಈ ಮೇಲುಗೈ ಸಾಧಿಸಿದರೇ ? ಇದು ಕುತೂಹಲದ ಮೂಲ ವಸ್ತುವಾಗಿತ್ತು.

ವಿಮಾನ ನಿಲ್ದಾಣದಿಂದ ಹೊರ ಬರುತ್ತಿದ್ದಂತೆಯೇ ನಮ್ಮ ಆತಿಥೇಯರು ನಮ್ಮನ್ನು ಸೇರಿಕೊಂಡರು ಮಂಗಳೂರಿಗಿಂತ ಇಲ್ಲಿ ಈಗ ಜಾಸ್ತಿ ಸೆಕೆ ಇದೆ ಅಂತ ಸ್ವಾಗತದ ಮಾತಿನೊಂದಿಗೆ ಸೇರಿಸಿದರು. ಅದು ಜುಲೈ ತಿಂಗಳು. ಆ ದಿನ ಅಂದರೆ, ಜುಲೈ 10ರಂದು ಲಂಡನಿನ ತಾಪಮಾನ 31 ಡಿಗ್ರಿ ಸೆಲ್ಸಿಯಸ್‌ ಆಗಿತ್ತು. ಮಂಗಳೂರು ಮತ್ತು ಮುಂಬಯಿ ಅಂದು 28ರಿಂದ 30ರ ನಡುವೆ ಇದ್ದಿರಬಹುದು. ಲಂಡನಿನಲ್ಲಿ ಅದು ಸೆಕೆಗಾಲ ಅಥವಾ ಅಲ್ಲಿನವರು ಕಾದಿರುವ ಸಮ್ಮರ್‌. ಅಲ್ಲಿ ವಸ್ತುಶಃ ಎರಡೇ ಋತುಗಳು- ಸಮ್ಮರ್‌ ಮತ್ತು ವಿಂಟರ್‌. ಹಾಗಿದ್ದರೆ ಮಳೆಗಾಲ ? ಇಂಗ್ಲೆಂಡಿನಲ್ಲಿ ವರ್ಷಪೂರ್ತಿ ಮಳೆಗಾಲವೂ ಹೌದು. ಅಂದರೆ ಆಗಾಗ ಸಣ್ಣ ಪ್ರಮಾಣದಲ್ಲಿ ಮಳೆ ಸುರಿಯುತ್ತಲೇ ಇರುತ್ತದೆ. ಕ್ರಿಕೆಟ್‌ಪ್ರಿಯರಿಗೆಲ್ಲಾ ಇದು ತಿಳಿದಿರುವ ಸಂಗತಿ.

>>> ಐತಿಹಾಸಿಕ ಮಹತ್ವದ ಇಂಗ್ಲೆಂಡ್‌...

ಇಂಗ್ಲೆಂಡ್‌ ಪ್ರವಾಸಕ್ಕೆ ಬೇಸಗೆ ಕಾಲ ಅತ್ಯಂತ ಸೂಕ್ತವಾದ ಸಮಯ. (ಈಗ ಒಲಿಂಪಿಕ್‌ ಕ್ರೀಡಾಕೂಟ ಕೂಡಾ ಇದೇ ಋತುವಿನಲ್ಲಿ ನಡೆಯುತ್ತಿದೆ). ಇಲ್ಲಿ ಬೇಸಗೆಯಲ್ಲಿ ಹಗಲು ಸುದೀರ್ಘ‌ವಾಗಿರುತ್ತದೆ. (ನಾವು ಭೇಟಿ ನೀಡಿದಾಗ ಮುಂಜಾನೆ ಐದರ ವೇಳೆಗೆಲ್ಲಾ ಸೂರ್ಯೋದಯ ಮತ್ತು ರಾತ್ರಿ 10.30ರ ವೇಳೆಗಷ್ಟೇ ಸೂರ್ಯಾಸ್ತ ಎಂಬ ವಿವರ ಬಳಿಕ ತಿಳಿದುಬಂತು. ರಾತ್ರಿ 10ರವರೆಗೂ ಎಳೆಯರು ಫುಟ್ಬಾಲ್‌ ಆಡುತ್ತಿರುತ್ತಾರೆ). ಆದ್ದರಿಂದಲೇ ಇಂಗ್ಲೆಂಡ್‌ನ‌ಲ್ಲಿ ಬೇಸಗೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಋತು ಇರುತ್ತದೆ. ಬೇಸಗೆಯಲ್ಲಿ ಹಗಲು ದೀರ್ಘ‌ವಾಗಿರುವುದರಿಂದ ಇಲ್ಲಿ ಆರಂಭಿಕ ಏಕದಿನ ಕ್ರಿಕೆಟ್‌ ಪಂದ್ಯಗಳು (ಮೊದಲ ಮೂರು ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ಸಹಿತ- 1975, 1979, 1983) ತಲಾ 60 ಓವರುಗಳ ವ್ಯಾಪ್ತಿ ಹೊಂದಿದ್ದವು. ಏಕದಿನ ಕ್ರಿಕೆಟ್‌ ಭಾರತೀಯ ಉಪಖಂಡಕ್ಕೆ ಬಂದಾಗ ತಲಾ 50 ಓವರುಗಳಿಗೆ ಸೀಮಿತಗೊಂಡಿತು.

>>> ಥೇಮ್ಸ್‌ ನದಿ ವಿಹಾರ...

ಪ್ರಯಾಣ ಹೇಗಿತ್ತು ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಅಲ್ಲೇ ಟೀ ಕುಡಿದೆವು. ನಮ್ಮ ಪ್ರಯಾಣದ ಮೊದಲ ಮೂರು ದಿನ ನಾವು ಲಂಡನ್‌ನ ವೈಎಂಸಿಎ ಇಂಡಿಯನ್‌ ಸ್ಟೂಡೆಂಟ್ಸ್‌ ಹಾಸ್ಟೆಲ್‌ನಲ್ಲಿ ತಂಗುವವರಿದ್ದೆವು. ಅದು ಫ್ರಿಜಾಯ್‌ ಸ್ಟಿÅàಟ್‌ನಲ್ಲಿತ್ತು. ನಮ್ಮ ಆತಿಥೇಯರು ಅಲ್ಲಿಗೆ ಟ್ಯೂಬ್‌ಟ್ರೈನ್‌ ಟಿಕೆಟ್‌ ಸಹಿತ ಸಿದ್ಧವಾಗಿದ್ದರು. ನೆಲ ಅಂತಸ್ತಿನ ರೈಲು ತಂಗುದಾಣಕ್ಕೆ ನಮ್ಮ ಪ್ರಯಾಣ.

ಎಲೆಕ್ಟಾÅನಿಕ್‌ ಮಾಹಿತಿ ಪಟ್ಟಿಯಲ್ಲಿ ಮೂಡಿಬಂದ ಸಮಯಕ್ಕೆ ಅನುಗುಣವಾಗಿಯೇ ರೈಲು ಫ್ಲಾÂಟ್‌ಫಾರ್ಮಿಗೆ ಬಂದಿದೆ. ಇಲ್ಲಿ ಒಂದು ಕ್ಷಣವೂ ರೈಲು ವಿಳಂಬವಾಗುವುದಿಲ್ಲ. ರೈಲಿನ ದಿನಪೂರ್ತಿ ಪ್ರಯಾಣಕ್ಕೆ ಟಿಕೆಟ್‌ ಪಡೆದುಕೊಳ್ಳಬಹುದು. ಈ ಟಿಕೆಟ್‌ ಬಸ್‌, ಟ್ರಾÂಮ್‌ಗಳಲ್ಲಿ ಕೂಡಾ ಬಳಕೆಯಾಗುತ್ತದೆ. ಜಗತ್ತಿನ ಬಹುತೇಕ ಮಹಾನಗರಗಳಲ್ಲಿ ಇದೇ ಪದ್ಧತಿ ಇರುತ್ತದೆ. ವೈಎಂಸಿಎಯಲ್ಲಿ ನಮಗಾಗಿ ಕಾದಿರಿಸಲಾಗಿದ್ದ ಕೊಠಡಿಯನ್ನು ಸೇರಿಕೊಂಡೆವು.

(ಮುಂದಿನ ಬ್ಲಾಗ್‌: ಅದು ಸ್ವಸಹಾಯ- ಸ್ವಾವಲಂಬನೆ)

 • Other Blogs By ಮನೋಹರ ಪ್ರಸಾದ್‌
 • POSTED COMMENTS
 • pic
 • many many thanks
  Jul 29, 2012
  Author: bnakumar@gamil.com

  Dear Rajyotsav Awardee & Maadhyam Shree- sri Manohar Prasadji, Please accept my hearty congratulations on the occasion of initiating your esteemed blog. I was informed by Sri Ashok Shet about this. Thanks for remembering me on the occassion of London Olympics. Indeed it was a pleasure to have both of you during the summer of 2006 in Notts, UK. Sir, of course I do have a copy of your serial writings that featured in Udayavani. Your writings are always enthusing and We whole heartedly wish you a great success in your contributions for reaching the unreached part of the society. Aravinda Baurai Nagesh Shet & Family, Univ. Agril. Sci, Dharwad

 • Blog Archive
Keywords:   
From:
To:
 • POST YOUR COMMENTS
 • Name *
 •  
 • Subject
 • Email ID *
 •  
 • Comment *
 • Comments are moderated and will not be posted if found irrelevant or offensive.
 • Copyright @ 2009 Udayavani.All rights reserved.
 • Designed & Hosted By 4cplus