ಮೊಹಾಲಿ: ಕೆರಿಬಿಯನ್ ಕಿಂಗ್ ಕ್ರಿಸ್ ಗೇಲ್ ಅವರ ಮತ್ತೂಂದು ಆಕ್ರಮಣಕಾರಿ ಆಟದ ನೆರವು ಪಡೆದ ರಾಯಲ್ ಚಾಲೆಂಜರ್ ಬೆಂಗಳೂರ್ ಶುಕ್ರವಾರ ರಾತ್ರಿಯ ಮೊಹಾಲಿ ಪಂದ್ಯದಲ್ಲಿ ಆತಿಥೇಯ ಪಂಜಾಬ್‌ಗ 5 ವಿಕೆಟ್‌ಗಳ ಸೋಲುಣಿಸಿದೆ.ಬ್ಯಾಟಿಂಗಿಗೆ ಇಳಿಸಲ್ಪಟ್ಟ ಆತಿಥೇಯ ಪಂಜಾಬ್ 6 ವಿಕೆಟಿಗೆ 163 ರನ್ ಪೇರಿಸಿದರೆ, ಬೆಂಗಳೂರ್ 19.3 ಓವರ್‌ಗಳಲ್ಲಿ 5 ವಿಕೆಟಿಗೆ 166 ರನ್ ಬಾರಿಸಿ ಜಯಭೇರಿ ಬಾರಿಸಿತು.ಚೇಸಿಂಗ್ ಹಾದಿಯಲ್ಲಿ ಆರ್‌ಸಿಬಿ ಆರಂಭದಲ್ಲೇ ಆಘಾತಕ್ಕೊಳಗಾಯಿತು. ಮೂಲತಃ ದಿಲ್ಲಿಯ ಬಲಗೈ ಮಧ್ಯಮ ವೇಗಿಯಾಗಿರುವ ಪರ್ವಿಂದರ್ ಅವಾನ ಪಟಪಟನೆ 3 ವಿಕೆಟ್ ಉರುಳಿಸಿ ಪಂಜಾಬ್‌ಗ ಮೇಲುಗೈ ಒದಗಿಸಿದರು. ಮಾಯಾಂಕ್ ಅಗರ್ವಾಲ್, ವಿರಾಟ್ ಕೊಹ್ಲಿ ಹಾಗೂ ಪುಣೆ ವಿರುದ್ಧ ಅಂತಿಮ ಓವರ್‌ನಲ್ಲಿ ಸಿಕ್ಸರ್ ಎತ್ತಿ ಆರ್‌ಸಿಬಿಯನ್ನು ಗೆಲ್ಲಿಸಿದ್ದ ಸೌರಭ್ ತಿವಾರಿ 25 ರನ್ ಆಗುವಷ್ಟರಲ್ಲಿ ಆಟ ಮುಗಿಸಿದರು.ಆದರೆ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಕ್ರೀಸಿಗೆ ಅಂಟಿಕೊಂಡಿದ್ದರಿಂದ, ಅವರಿಗೆ ಡಿ'ವಿಲಿಯರ್ ಉತ್ತಮ ಬೆಂಬಲ ನೀಡಿದ್ದರಿಂದ ಆರ್‌ಸಿಬಿಯ ಗೆಲುವಿನ ಆಸೆಗೆ ಹೊಸ ಜೀವ ಬಂತು. ಇವರಿಬ್ಬರು ಹತ್ತರ ಸರಾಸರಿಯಲ್ಲಿ ರನ್ ಗಳಿಸುತ್ತ ಹೋದಾಗ ಪಂಜಾಬ್ ಬೌಲರ್‌ಗಳು ದಿಕ್ಕೆಟ್ಟರು.ಗೇಲ್ 41 ಎಸೆತಗಳಿಂದ ಅರ್ಧ ಶತಕ ಪೂರೈಸಿದರೆ, ಡಿ'ವಿಲಿಯರ್ ಅರ್ಧ ಶತಕ 36 ಎಸೆತಗಳಿಂದ ಬಂತು. ಈ ಜೋಡಿಯ ಶತಕದ ಜೊತೆಯಾಟಕ್ಕೆ ತಗುಲಿದ್ದು ಕೇವಲ 62 ಎಸೆತ. ಗೇಲ್ ಕಾಣಿಕೆ 87 ರನ್. 56 ಎಸೆತಗಳ ಈ ಇನ್ನಿಂಗ್ಸ್ 8 ಬೌಂಡರಿ ಹಾಗೂ 4 ಸಿಕ್ಸರ್‌ಗಳಿಂದ ಸಿಂಗಾರಗೊಂಡಿತ್ತು. 4ನೇ ವಿಕೆಟಿಗೆ ಒಟ್ಟುಗೂಡಿದ್ದು 131 ರನ್.ಗೇಲ್ ಔಟಾದ ಎರಡೇ ರನ್ ಅಂತರದಲ್ಲಿ ಡಿ'ವಿಲಿಯರ್ ವಿಕೆಟ್ ಕೂಡ ಬಿತ್ತು. ಆದರೆ ಆಗಲೇ ತಂಡದ ಗೆಲುವು ಖಾತ್ರಿಯಾಗಿತ್ತು. 39 ಎಸೆತಗಳನ್ನು ಎದುರಿಸಿದ ಡಿ'ವಿಲಿಯರ್ 6 ಬೌಂಡರಿ ನೆರವಿನಿಂದ 52 ರನ್ ಹೊಡೆದರು.ಇದಕ್ಕೂ ಮುನ್ನ ಪಂಜಾಬ್ ಮತ್ತೂಮ್ಮೆ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಗಿತ್ತು. ಆಸೀಸ್ ಜೋಡಿ ಶಾನ್ ಮಾರ್ಷ-ಡೇವಿಡ್ ಹಸ್ಸಿ ಜೊತೆಗೂಡಿದಾಗ ರನ್‌ಧಾರಣೆ ಏರುವ ನಿರೀಕ್ಷೆ ಇತ್ತು. ಮಾರ್ಷ್ ಭರ್ಜರಿ ಮೂಡ್‌ನಲ್ಲಿದ್ದರು. ಆದರೆ ಮೆಕ್‌ಡೊನಾಲ್ಡ್ ಮುಂದೆ ಮಾರ್ಷ್ ಆಟ ಸಾಗಲಿಲ್ಲ. 17 ಎಸೆತಗಳಿಂದ 26 ರನ್ ಮಾಡಿದ ಅವರು ಬೌಲ್ಡ್ ಆಗಿ ನಿರ್ಗಮಿಸಿದರು. ಮಾರ್ಷ್ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ, ಒಂದು ಸಿಕ್ಸರ್ ಸೇರಿತ್ತು. ತಂಡದ 50 ರನ್ ಪೂರ್ತಿಗೊಳ್ಳಲು ಸರಿಯಾಗಿ 7 ಓವರ್ ತಗುಲಿತು. ಮೊದಲ 10 ಓವರ್‌ಗಳಲ್ಲಿ ಪಂಜಾಬ್ ಏಳರ ಸರಾಸರಿಯಲ್ಲಿ ಸರಿಯಾಗಿ 70 ರನ್ ಮಾಡಿತು.ಸ್ಕೋರ್ 14 ಓವರ್‌ಗಳಲ್ಲಿ 94ಕ್ಕೆ ಮುಟ್ಟಿದಾಗ ಮೆಕ್‌ಡೊನಾಲ್ಡ್‌ಗೆ ಮತ್ತೂಂದು ಬಲಿ ಲಭಿಸಿತು. 13 ಎಸೆತಗಳಿಂದ 8 ರನ್ ಮಾಡಿದ ಡೇವಿಡ್ ಮಿಲ್ಲರ್ ಜಹೀರ್‌ಗೆ ಕ್ಯಾಚ್ ನೀಡಿದರು. ನೂರರ ಗಡಿ ದಾಟಿದೊಡನೆ ಅಪಾಯಕಾರಿಯಾಗಿ ಬೆಳೆಯುತ್ತಿದ್ದ ಹಸ್ಸಿ ವಿಕೆಟ್ ಹಾರಿಸಿದ ಹರ್ಷಲ್ ಪಟೇಲ್ ಆರ್‌ಸಿಬಿ ಪಾಳೆಯದಲ್ಲಿ ಹರ್ಷ ಉಕ್ಕಿಸಿದರು. ಕಪ್ತಾನನ ಕಾಣಿಕೆ 34 ಎಸೆತಗಳಿಂದ 41 ರನ್. ಹೊಡೆದದ್ದು 4 ಫೋರ್.ಅಜರ್ ಮಹಮೂದ್ ಕ್ರೀಸ್ ಇಳಿದ ಬಳಿಕವೇ ಪಂಜಾಬ್‌ನ ನೂರೈವತ್ತರ ಮೊತ್ತದ ಗುರಿಗೆ ಜೀವ ಬಂದದ್ದು. ಅಜರ್ ಕೇವಲ ಎಸೆತಗಳಿಂದ 3 ಬೌಂಡರಿ, 2 ಸಿಕ್ಸರ್ ಎತ್ತಿ 33 ರನ್ ಸಿಡಿಸಿದರು.ಆ್ಯಡಂ ಗಿಲ್‌ಕ್ರಿಸ್ಟ್ ಗಾಯಾಳಾಗಿ ಹೊರಗುಳಿದುದರಿಂದ ಆಸ್ಟ್ರೇಲಿಯದವರೇ ಆದ ಡೇವಿಡ್ ಹಸ್ಸಿ ಪಂಜಾಬ್ ತಂಡವನ್ನು ಮುನ್ನಡೆಸಿದರು. ಕೀಪಿಂಗ್ ನಡೆಸುವ ಅವಕಾಶ ನಿತಿನ್ ಸೈನಿ ಪಾಲಾಯಿತು. ಇದು ಅವರ ಮೊದಲ ಪಂದ್ಯ. ಹಾಗೆಯೇ ಪಾಕಿಸ್ಥಾನ ಮೂಲದ, ಈಗ ಇಂಗ್ಲಂಡ್ ಪ್ರಜೆಯಾಗಿರುವ ಅಜರ್ ಮಹಮೂದ್ ಪಾಲಿಗೂ ಇದು ಮೊದಲ ಪಂದ್ಯವಾಗಿತ್ತು.
hai guy give misscall to 08023635343 and get current update of ipl 5 for free.... tell to your frnds also.... a service by just1misscall.com