Saturday, May 25, 2013
Last Updated: 8:34:44 PM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
  • ಸೇಡು ತೀರಿಸಿಕೊಳ್ಳುವ ಚಾಲೆಂಜ್‌
  • ಸ್ಟಾರ್‌ ಆಟಗಾರರಿಂದ ತುಂಬಿರುವ ರಾಯಲ್‌ ಚಾಲೆಂಜರ್

    • Udayavani | Apr 22, 2012

      ಜೈಪುರ: ಸ್ಟಾರ್‌ ಆಟಗಾರರಿಂದ ತುಂಬಿರುವ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ ಸೋಮವಾರ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಐಪಿಎಲ್‌ ಟ್ವೆಂಟಿ-20 ಪಂದ್ಯವನ್ನು ಜಯಿಸುವ ಮೂಲಕ ಗೆಲುವಿನ ಅಭಿಯಾನ ಮುಂದುವರಿಸುವ ಗುರಿ ಹೊಂದಿದೆ.

      ಅಂಡರ್‌ಡಾಗ್‌ಗಳಾಗಿ ಕಣಕ್ಕಿಳಿದಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡ ರಾಯಲ್‌ ಚಾಲೆಂಜರ್ ಸೇರಿದಂತೆ ಪ್ರಮುಖ ತಂಡಗಳ ವಿರುದ್ಧ ಜಯ ಸಾಧಿಸಿ ಬಲಿಷ್ಠ ತಂಡವಾಗಿ ಹೊರಹೊಮ್ಮಿದೆ. ಮರೀಚಿಕೆಯಾಗಿರುವ ಪ್ರಶಸ್ತಿಯ ಬೆಂಬತ್ತಿರುವ ಆರ್‌ಸಿಬಿ ತಂಡ ತವರಿನ ಅಭಿಮಾನಿಗಳ ಸಮ್ಮುಖದಲ್ಲೇ ರಾಜಸ್ಥಾನ್‌ ವಿರುದ್ಧ ಮುಖಭಂಗ ಅನುಭವಿಸಿತ್ತು.



      ಆದರೆ ಪ್ರಮುಖ ಆಟಗಾರರು ನಿಧಾನವಾಗಿ ಫಾರ್ಮ್ಗೆ ಮರಳುತ್ತಿರುವುದರಿಂದ ಆರ್‌ಸಿಬಿ ತಂಡ ಗೆಲುವಿನ ವಿಶ್ವಾಸದಲ್ಲಿದೆ. ಅದರಲ್ಲೂ ಕ್ರೀಸ್‌ ಗೇಲ್‌ ಮತ್ತು ಡಿ'ವಿಲಿಯರ್ ಅವರ ಫಾರ್ಮ್ ತಂಡಕ್ಕೆ ಆನೆ ಬಲ ನೀಡಿದೆ. ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಈ ಇಬ್ಬರು ಬ್ಯಾಟ್ಸ್‌ಮನ್‌ಗಳ ಮೇಲೆ ತಂಡದ ಫ‌ಲಿತಾಂಶ ಅವಲಂಬಿಸಿದೆ. ಮತ್ತೂಂದೆಡೆ ಮಯಾಂಕ್‌ ಅಗರ್ವಾಲ್‌ ದೊಡ್ಡ ಮೊತ್ತ ಗಳಿಸದೇ ಇದ್ದರೂ ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಆದರೆ ರನ್‌ ಬರ ಎದುರಿಸುತ್ತಿರುವ ತಿಲಕರತ್ನ ದಿಲ್ಶನ್‌, ಸೌರಭ್‌ ಮತ್ತು ವಿರಾಟ್‌ ಕೊಹ್ಲಿ ಬಗ್ಗೆ ತಂಡ ಹೆಚ್ಚು ಚಿಂತೆಗೀಡು ಮಾಡಿದೆ. ಸೌರಭ್‌ ತಿವಾರಿ ಮತ್ತು ವಿರಾಟ್‌ ಕೊಹ್ಲಿ ತಲಾ ಒಂದು ಪಂದ್ಯದಲ್ಲಿ ಮಿಂಚಿದರೆ ಉಳಿದ ಪಂದ್ಯಗಳಲ್ಲಿ ರನ್‌ ಗಳಿಸಲು ವಿಫ‌ಲರಾಗಿದ್ದಾರೆ.

      ಬೌಲಿಂಗ್‌ ವಿಭಾಗವನ್ನು ಡೇನಿಯಲ್‌ ವೆಟರಿ ಸಮರ್ಥವಾಗಿ ಬಳಸಿಕೊಳ್ಳಲು ವಿಫ‌ಲರಾಗುತ್ತಿದ್ದಾರೆ. ತಂಡದ ಪ್ರಮುಖ ವಿಕೆಟ್‌ ಟೇಕರ್‌ ಮುತ್ತಯ್ಯ ಮುರಳೀಧರನ್‌ ಅವರು ದಿಲ್ಶನ್‌ ಅವರಿಗಾಗಿ ಜಾಗ ಬಿಟ್ಟುಕೊಡಬೇಕಾಗಿದೆ. ಇದರಿಂದ ಸ್ವತಃ ವೆಟರಿ ಮೇಲೆ ಒತ್ತಡ ಬಿದ್ದಿದೆ. ಜಹೀರ್‌ಖಾನ್‌ ಮತ್ತು ವಿನಯ್‌ಕುಮಾರ್‌ ತಮ್ಮ ಇತಿಮಿತಿಯಲ್ಲಿ ಎದುರಾಳಿಗಳನ್ನು ನಿಯಂತ್ರಿಸುವ ಪ್ರಯತ್ನ ನಡೆಸಿದ್ದಾರೆ. ಹರ್ಷಲ್‌ ಪಟೇಲ್‌ ಅಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ.

      ಮತ್ತೂಂದೆಡೆ ಬೆಂಗಳೂರಿನಲ್ಲಿ ಆರ್‌ಸಿಬಿ ವಿರುದ್ಧ ಶತಕ ಸಿಡಿಸಿದ್ದ ಅಜಿಂಕ್ಯ ರಹಾನೆ ಮತ್ತೂಂದು ಅಂತಹುದ್ದೇ ಪ್ರದರ್ಶನವನ್ನು ತವರಿನಲ್ಲಿ ತೋರುವ ಉತ್ಸಾಹದಲ್ಲಿದ್ದಾರೆ. ರಾಹುಲ್‌ ದ್ರಾವಿಡ್‌ ಉತ್ತಮ ಫಾರ್ಮ್ನಲ್ಲಿದ್ದರೂ ಅವರಿಂದ ದೊಡ್ಡ ಮಟ್ಟದ ಆಟ ಇನ್ನೂ ಬಂದಿಲ್ಲ. ಅಶೋಕ್‌ ಮೆನಾರಿಯ ಮಧ್ಯಮ ಕ್ರಮಾಂಕದಲ್ಲಿ ತಂಡವನ್ನು ಆಧರಿಸುತ್ತಿದ್ದರೆ, ಓವೇಸ್‌ ಷಾ ಮತ್ತು ಬ್ರಾಡ್‌ ಹಾಡ್‌ ಮತ್ತು ಕೆವನ್‌ ಕೂಪರ್‌ ತಂಡದ ರನ್‌ ವೇಗಕ್ಕೆ ಸಹಕಾರಿಯಾಗಿದ್ದಾರೆ. ಓವೇಸ್‌ ಷಾ ಹೆಚ್ಚು ಸ್ಥಿರ ಪ್ರದರ್ಶನ ನೀಡುತ್ತಿರುವುದು ತಂಡದ ಬ್ಯಾಟಿಂಗ್‌ ಬಲ ಹೆಚ್ಚಿಸಿದ್ದಾರೆ.

      ಬೌಲಿಂಗ್‌ ವಿಭಾಗದಲ್ಲಿ ಅಮಿತ್‌ ಸಿಂಗ್‌, ಸಿದ್ಧಾರ್ಥ್ ತ್ರಿವೇದಿ, ಸ್ಟುವರ್ಟ್‌ ಬಿನ್ನಿ, ಅಶೋಕ್‌ ಮೆನಾರಿಯ, ಕೆವನ್‌ ಕೂಪರ್‌, ಬ್ರಾಡ್‌ ಹಾಜ್‌ ಪ್ರಭಾವಿಯಾಗಿದ್ದಾರೆ.

    Share your views-post your Comment below
    blog comments powered by Disqus
    ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
    • Copyright @ 2009 Udayavani.All rights reserved.
    • Designed & Hosted By 4cplus