Wednesday, May 22, 2013
Last Updated: 10:30:38 AM IST
  • ನಾನೆಲ್ಲಿರುವೆ:
  • ಮುಖಪುಟ ರಾಷ್ಟ್ರೀಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಚಿನ್ನಕ್ಕೆ ಮತ್ತೆ ಸಾರ್ವಕಾಲಿಕ ಗರಿಷ್ಠ ಬೆಲೆ
    • ಇದು ಚಿನ್ನಕ್ಕೆ ಇದುವರೆಗೆ ದೊರಕಿದ ಸಾರ್ವಕಾಲಿಕ ಗರಿಷ್ಠ ಬೆಲೆಯಾಗಿದೆ.

      • Udayavani | Apr 29, 2012

        ನವದೆಹಲಿ : ಅಕ್ಷಯ ತೃತೀಯ ಬಳಿಕ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಬಹುದೆಂಬ ನಿರೀಕ್ಷೆ ಸುಳ್ಳಾಗಿದೆ. ಇಲ್ಲಿನ ಚಿನಿವಾರ ಪೇಟೆಯಲ್ಲಿ ಬಂಗಾರದ ಬೆಲೆ ಶನಿವಾರ ಪ್ರತಿ 10 ಗ್ರಾಂ ಗೆ 100 ರೂ. ಏರಿಕೆ ಕಂಡು 29,540 ರೂ. ತಲುಪಿದೆ. ಇದು ಚಿನ್ನಕ್ಕೆ ಇದುವರೆಗೆ ದೊರಕಿದ ಸಾರ್ವಕಾಲಿಕ ಗರಿಷ್ಠ ಬೆಲೆಯಾಗಿದೆ.

        ವಿವಾಹ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಆಭರಣಗಳಿಗೆ ಮುಂದುವರೆದ ಬೇಡಿಕೆ ಮತ್ತು ಷೇರುಪೇಟೆಯಲ್ಲಿ ಕಂಡುಬಂದಿರುವ ಅಸ್ಥಿರತೆ ಪರೋಕ್ಷವಾಗಿ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಳೆದ 7 ದಿನಗಳಲ್ಲಿ ಚಿನ್ನದ ಬೆಲೆ 10 ಗ್ರಾಂ.ಗೆ 550 ರೂ.ನಷ್ಟು ಏರಿಕೆ ಕಂಡು ಗ್ರಾಹಕರು ಕಂಗೆಡುವಂತೆ ಮಾಡಿದೆ.

        ಇದೇ ವೇಳೆ ಬೆಳ್ಳಿಯ ಬೆಲೆಯೂ ಶನಿವಾರ ಪ್ರತಿ ಕೆಜಿಗೆ 100 ರೂ. ಏರಿಕೆ ಕಂಡು 56,500 ರೂ. ತಲುಪಿದೆ.

        ದೆಹಲಿ ಮಾರುಕಟ್ಟೆಯಲ್ಲಿ ಶೇ.99.9 ಶುದ್ಧತೆಯ ಮತ್ತು ಶೇ.99.5 ಶುದ್ಧತೆಯ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ಕ್ರಮವಾಗಿ 100ರೂ. ಏರಿ 29,540 ಮತ್ತು 29,400 ರೂ. ತಲುಪಿದೆ.

        ಅದೇ ರೀತಿ ಮುಂಬೈ ಮಾರುಕಟ್ಟೆಯಲ್ಲಿ ಶೇ.99.9 ಶುದ್ಧತೆಯ ಮತ್ತು ಶೇ.99.5 ಶುದ್ಧತೆಯ ಚಿನ್ನ ಕ್ರಮವಾಗಿ 110 ರೂ. ಏರಿಕೆ ಕಂಡು 29290 ರೂ. ಮತ್ತು 29,155 ರೂ. ತಲುಪಿದೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus