Saturday, May 25, 2013
Last Updated: 7:34:13 PM IST
  • ನಾನೆಲ್ಲಿರುವೆ:
  • ಮುಖಪುಟ ರಾಷ್ಟ್ರೀಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
  • ಆಧೀನಂ ಮಠಕ್ಕೆ ನಿತ್ಯಾನಂದ ನೇಮಕ
  • ವಿರೋಧದ ನಡುವೆಯೇ ನಿತ್ಯಾನಂದ ಪೀಠಾರೋಹಣ
  • ಆಧೀನಂ ಮಠದ ಮುಖ್ಯಸ್ಥರಾಗಿ ಅಧಿಕೃತವಾಗಿ ಪೀಠಾರೋಹಣ ಮಾಡಿದ ನಿತ್ಯಾನಂದ ಸ್ವಾಮಿ.

    • Udayavani | Apr 29, 2012

      ಮದುರೈ: ಬೆಂಗಳೂರು ಸಮೀಪದ ಬಿಡದಿ ಬಳಿಯ ಧ್ಯಾನಪೀಠ ಆಶ್ರಮದ ಸಂಸ್ಥಾಪಕ ನಿತ್ಯಾನಂದ ಸ್ವಾಮಿಯನ್ನು ದೇಶದ ಪುರಾತನ ಶೈವ ಮಠಗಳಲ್ಲಿ ಒಂದಾಗಿರುವ ಮದುರೈನ ಆಧೀನಂ ಮಠದ ಪೀಠಾಧಿಪತಿಯಾಗಿ ನೇಮಕ ಮಾಡಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.

      ಆಧೀನಂ ಮಠದ 293ನೇ ಮುಖ್ಯಸ್ಥರಾಗಿ ಅಧಿಕೃತವಾಗಿ ಪೀಠಾರೋಹಣ ಮಾಡಲು ನಿತ್ಯಾನಂದ ಸ್ವಾಮಿ ಮದುರೈಗೆ ಆಗಮಿಸಿದ್ದ ವೇಳೆ ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿವೆ.

      'ಭಕ್ತರು ಹಾಗೂ ಇತರೆ ಮಠಗಳ ಮುಖ್ಯಸ್ಥರ ಜತೆ ಸಮಾಲೋಚನೆ ನಡೆಸದೆ ಆಧೀನಂ ಮಠಕ್ಕೆ ಹೊಸ ಪೀಠಾಧಿಪತಿ ನೇಮಕ ಮಾಡುವ ಮೂಲಕ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಲಾಗಿದೆ. ನಿತ್ಯಾನಂದ ಸ್ವಾಮಿ ಅವರು ತಮ್ಮ ವಿರುದ್ಧವಿರುವ ಆರೋಪಗಳಿಂದ ಮುಕ್ತವಾಗುವವರೆಗೂ ಅವರನ್ನು ಮಠದ ಮುಖ್ಯಸ್ಥರನ್ನಾಗಿ ನೇಮಕ ಮಾಡಬಾರದಿತ್ತು. ಅದೂ ಅಲ್ಲದೆ ಕೆಲವು ಸಂಪ್ರದಾಯಗಳನ್ನು ಪಾಲಿಸದೆ ನಿತ್ಯಾನಂದ ಅವರು ಅಧಿಕಾರ ಸ್ವೀಕರಿಸಿದ್ದಾರೆ' ಎಂದು ಮಠದ ಬಳಿ ಪ್ರತಿಭಟನೆ ನಡೆಸಿದ ಹಿಂದು ಮಕ್ಕಳ್‌ ಕಚ್ಚಿ ಸಂಘಟನೆಯ ರಾಜ್ಯಾಧ್ಯಕ್ಷ ಅರ್ಜುನ್‌ ಸಂಪತ್‌ ಆರೋಪಿಸಿದರು. ಹಿರಿಯ ಪೀಠಾಧಿಪತಿಗಳನ್ನು ಭೇಟಿ ಮಾಡಲು ಅವಕಾಶ ಸಿಗದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

      ಆಧೀನಂ ಮಠದ ಪೀಠಾಧಿಪತಿಯಾಗುವವರಿಗೆ ನಾಲ್ಕು ವರ್ಷಗಳ ಕಾಲ ಧಾರ್ಮಿಕ ತರಬೇತಿ ನೀಡಲಾಗುತ್ತದೆ. ಹಿರಿಯ ಶ್ರೀಗಳು ಕೂಡ ಅಂತಹ ತರಬೇತಿ ಪಡೆದಿದ್ದಾರೆ. ಆದರೆ ನಿತ್ಯಾನಂದ ಅವರನ್ನು ಏಕಾಏಕಿ ನೇಮಕ ಮಾಡಲಾಗಿದೆ ಎಂದು ಹಿಂದು ಮುನ್ನಾನಿ ಸಂಘಟನೆ ಕೂಡ ವಿರೋಧ ವ್ಯಕ್ತಪಡಿಸಿದೆ.

      ಇದೇ ವೇಳೆ, ತಾವು ಕೈಗೊಂಡಿರುವ ನಿರ್ಧಾರ ಸರಿಯಾಗಿದೆಯೇ ಎಂಬುದನ್ನು ಹಿರಿಯ ಶ್ರೀಗಳೇ ಸ್ಪಷ್ಟಪಡಿಸಬೇಕು ಎಂದು ವಿಎಚ್‌ಪಿ ನಾಯಕ ಪಿ. ಸೋಮಸುಂದರಂ ಹೇಳಿದ್ದರೆ, ಮಠಗಳ ವಿಚಾರದಲ್ಲಿ ಮೂಗು ತೂರಿಸುವುದಿಲ್ಲ ಎಂದು ಬಿಜೆಪಿ ನಾಯಕ ರಾಮಕೃಷ್ಣನ್‌ ತಿಳಿಸಿದ್ದಾರೆ.

      ಗೌರವ ಸಿಕ್ಕಿದೆ- ನಿತ್ಯಾನಂದ

      2500 ವರ್ಷಗಳಷ್ಟು ಇತಿಹಾಸವಿರುವ ಆಧೀನಂ ಮಠದ ಮುಖ್ಯಸ್ಥರಾಗಿ ಅಧಿಕೃತವಾಗಿ ಪೀಠಾರೋಹಣ ಮಾಡಿದ ನಿತ್ಯಾನಂದ ಅವರು, ಮಠ ತಮಗೆ ಗೌರವ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು. ಹಿಂದು ಸಂಘಟನೆಗಳು ತಮ್ಮ ನೇಮಕಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ನಿತ್ಯಾನಂದ, ನನ್ನನ್ನು ಅವರೆಲ್ಲಾ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದು ಹೇಳಿದರು.

      ನಿತ್ಯಾನಂದ ನೇಮಕ ಸರಿಯಾಗಿಯೇ ಇದೆ

      ನಿತ್ಯಾನಂದ ಅವರನ್ನು ಪೀಠಾಧಿಪತಿಯಾಗಿ ನೇಮಕ ಮಾಡಿದ ತಮ್ಮ ನಿರ್ಧಾರ ಸರಿಯಾಗಿಯೇ ಇದೆ ಎಂದು ಹಿರಿಯ ಶ್ರೀಗಳು ಸಮರ್ಥಿಸಿಕೊಂಡಿದ್ದಾರೆ. ಉತ್ತರಾಧಿಕಾರಿಯಾಗಿ ಯಾರನ್ನು ನೇಮಕ ಮಾಡಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳುವುದು ನನ್ನ ಹಕ್ಕು. ಆಧೀನಂ ಪೀಠಕ್ಕೆ ನಿತ್ಯಾನಂದ ಅವರೇ ಅರ್ಹ ವ್ಯಕ್ತಿ ಎಂದು ಹೇಳಿದರು.

      ಇದಕ್ಕೂ ಮುನ್ನ ಪ್ರಸಿದ್ಧ ಮದುರೈ ಮೀನಾಕ್ಷಿ ದೇಗುಲದಲ್ಲಿ ಹಿರಿಯ ಶ್ರೀಗಳ ಜತೆ ನಿತ್ಯಾನಂದ ದರ್ಶನ ಪಡೆದರು. ಶೈವ ವೆಲಲಾರ್‌ ಸಮುದಾಯಕ್ಕೆ ಸೇರದ ವ್ಯಕ್ತಿಯೊಬ್ಬರು ಆಧೀನಂ ಪೀಠಾಧಿಪತಿಯಾಗುತ್ತಿರುವುದು ಇದೇ ಮೊದಲು.

    Share your views-post your Comment below
    blog comments powered by Disqus
    ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
    • Copyright @ 2009 Udayavani.All rights reserved.
    • Designed & Hosted By 4cplus