Sunday, May 26, 2013
Last Updated: 2:20:45 PM IST
  • ನಾನೆಲ್ಲಿರುವೆ:
  • ಮುಖಪುಟ ರಾಷ್ಟ್ರೀಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ರಾಡಾರ್‌ ನಾಶಕ ಕ್ಷಿಪಣಿ ಅಭಿವೃದ್ಧಿ
      • Udayavani | Apr 29, 2012

        ಹೊಸದಿಲ್ಲಿ : ಖಂಡಾಂತರ ಕ್ಷಿಪಣಿ ಅಗ್ನಿ-5ರ ಪರೀಕ್ಷೆ ಯಶಸ್ವಿಯಾದ ಹುರುಪಿನಲ್ಲಿ ಭಾರತ ಈಗ ಶತ್ರು ದೇಶಗಳ ಅತ್ಯಾಧುನಿಕ ರಾಡಾರ್‌ ವ್ಯವಸ್ಥೆಯನ್ನೇ ನಾಶ ಮಾಡುವ ಸಾಮರ್ಥ್ಯವುಳ್ಳ ಕ್ಷಿಪಣಿ ಆ್ಯಂಟಿ ರೇಡಿಯೇಶನ್‌ ಮಿಸೈಲ್‌ (ಆರ್ಮ್)ಅನ್ನು ಅಭಿವೃದ್ಧಿಪಡಿಸುತ್ತಿದೆ.

        ಕ್ಷಿಪಣಿ ನಿರ್ಮಾಣದಲ್ಲಿ ಪರಿಣತಿಯನ್ನು ಸಾಧಿಸಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯ (ಡಿಆರ್‌ಡಿಎಲ್‌)ಆರ್ಮ್ ನಿರ್ಮಾಣ ಯೋಜನೆಯನ್ನು ಆದ್ಯತೆಯಲ್ಲಿ ಕೈಗೆತ್ತಿಕೊಂಡಿದೆ.

        ಆರ್ಮ್ ಕ್ಷಿಪಣಿಯನ್ನು ಸುಖೋಯ್‌ ಸಮರ ವಿಮಾನಗಳಾದ ಸು-30 ಎಂಕೆಐಗೆ ಅಳವಡಿಸಬಹುದು. ಇಂತಹ 140 ಸುಖೋಯ್‌ಗಳು ಈಗಾಗಲೇ ಸೇನೆಯ ಬಳಿಯಿವೆ ಹಾಗೂ ಇನ್ನೂ 100 ಸುಖೋಯ್‌ಗಳನ್ನು ರಷ್ಯಾ ಮುಂದಿನ ದಿನಗಳಲ್ಲಿ ಕೊಡಲಿದೆ.

        'ಆರ್ಮ್' ರಾಡಾರ್‌ಗಳಿಂದ ಹೊರಹೊಮ್ಮುವ ವಿದ್ಯುತ್‌-ಆಯಸ್ಕಾಂತೀಯ ವಿಕಿರಣ ಮತ್ತು ಮಿಡಿತವನ್ನು ಶೋಧಿಸುವ ಮೂಲಕ ರಾಡಾರ್‌ ವ್ಯವಸ್ಥೆಯನ್ನು ಪತ್ತೆ ಹಚ್ಚಿ ಎರಗುತ್ತದೆ. ಈ ಕ್ಷಿಪಣಿ ರಾಡಾರ್‌ ತರಂಗಾಂತರದಿಂದ ಮುಕ್ತವಾಗಿರುತ್ತದೆ ಹಾಗೂ ರಾಡಾರ್‌ ಅನ್ನು ಸಾಮರ್ಥ್ಯ ಹೊಂದಿರುತ್ತದೆ.

        ಅಮೆರಿಕದಂತಹ ಕೆಲವು ಶಕ್ತ ರಾಷ್ಟ್ರಗಳ ಬಳಿ ಈಗಾಗಲೇ ಇಂತಹ ಕ್ಷಿಪಣಿಗಳಿವೆ. ರಾಡಾರ್‌ನ ಆ್ಯಂಟೆನಾ ಅಥವಾ ಟ್ರಾನ್ಸ್‌ಮೀಟರ್‌ನ್ನು ಈ ಕ್ಷಿಪಣಿಗಳು ಪತ್ತೆ ಹಚ್ಚುತ್ತವೆ. ಅಮೆರಿಕದ ವಾಯುಪಡೆಯ ಬಳಿಯಿರುವ ಆ್ಯಂಟಿ ರೇಡಿಯೇಶನ್‌ ಮಿಸೈಲ್‌ ಮ್ಯಾಕ್‌-2ಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಸಂಚರಿಸುತ್ತದೆ ಮತ್ತು ಹೊಗೆರಹಿತ ಪ್ರೊಪೆಲ್ಲರ್‌ ಮೋಟಾರ್‌ನ್ನು ಇದು ಹೊಂದಿದೆ.

        ಆರ್ಮ್ ಜತೆಗೆ ಡಿಆರ್‌ಡಿಒ ನಭದಿಂದ ನಭಕ್ಕೆ ಚಿಮ್ಮುವ ಮತ್ತು ಕಡಿಮೆ ವ್ಯಾಪ್ತಿಯ ನೆಲದಿಂದ ನಭಕ್ಕೆ ಚಿಮ್ಮುವ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುತ್ತಿದೆ. ಭವಿಷ್ಯದಲ್ಲಿ ನೆಲದಿಂದ ನಭಕ್ಕೆ ಚಿಮ್ಮುವ ನಿರ್ದೇಶಿತ ಅಸ್ಟ್ರಾ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಲುದ್ದೇಶಿಸಿದೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • ಈ ವಿಭಾಗದಲ್ಲಿಯೂ ಇದೆ
      • Copyright @ 2009 Udayavani.All rights reserved.
      • Designed & Hosted By 4cplus