ಮುಂಬಯಿ : ಗತಕಾಲದ ಚಿತ್ರನಾಯಕಿ ರೇಖಾ ಅವರ ಜತೆ ನಟಿಸಲು ಒದಗಿಸಿದ ಚಿತ್ರಕಥೆ ಉತ್ತಮವಿದ್ದರೆ ತೊಂದರೆಯಿಲ್ಲ ಎಂದು ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಹೇಳಿದ್ದಾರೆ.ಚಿತ್ರಕಥೆ ಉತ್ತಮವಿದ್ದರೆ ಮತ್ತು ನಮಗೆ ಇಷ್ಟವಾದರೆ ಒಟ್ಟಿಗೆ ಕೆಲಸ ಮಾಡಲು ತೊಂದರೆ ಏನಿದೆ ಎಂದು ಬಚ್ಚನ್ ಹೇಳಿದ್ದಾರೆ.ಸದ್ಯದಲ್ಲೇ ಬಿಡುಗಡೆಯಾಗಲಿರುವ ಡಿಪಾರ್ಟ್‌ಮೆಂಟ್ ಚಲನಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಬಿಗ್ ಬಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.ಹಿಂದಿನ ರೀಲ್ ಲೈಫ್‌ನಲ್ಲಿ ಅಮಿತಾಭ್ ಬಚ್ಚನ್ ಮತ್ತು ರೇಖಾ ಜೋಡಿ ರಜತ ಪರದೆ ಮತ್ತು ನಿಜಜೀವನದಲ್ಲಿ ಉತ್ತಮ ಸಂಬಂಧ ಹೊಂದಿದ್ದರು. ಈ ಬಗ್ಗೆ ಬಾಲಿವುಡ್‌ನಲ್ಲಿ ಬಿಸಿಬಿಸಿ ಗಾಸಿಪ್‌ಗ್ಳು ಕೂಡಾ ಹರಡುತ್ತಿದ್ದವು. ಈ ಜೋಡಿ ದೋ ಆಂಜಾನ್ (1976), ಮುಕದ್ದಾರ್ ಕಾ ಸಿಕಂದರ್ (1978), ಮಿಸ್ಟರ್ ನಟವರ್‌ಲಾಲ್ (1979) ಸುಹಾಗ್ (1979), ಸಿಲ್‌ಸಿಲಾ (1981) ಮತ್ತು ಇತರ ಕೆಲವು ಚಿತ್ರಗಳಲ್ಲಿ ನಟಿಸಿದ್ದರು.