Wednesday, May 22, 2013
Last Updated: 6:59:39 PM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಚಂದರ್‌ಪಾಲ್‌ ನಂ. ವನ್‌ ಬ್ಯಾಟ್ಸ್‌ಮನ್‌
    • ಟೆಸ್ಟ್‌ ಬ್ಯಾಟ್ಸ್‌ಮನ್‌ನ ನಂಬರ್‌ ವನ್‌ ಚಂದರ್‌ಪಾಲ್‌

      • Udayavani | Apr 30, 2012

        ದುಬಾೖ: ಸುಮಾರು ಮೂರು ವರ್ಷಗಳ ಬಳಿಕ ವೆಸ್ಟ್‌ಇಂಡೀಸ್‌ನ ಶಿವನಾರಾಯಣ್‌ ಚಂದರ್‌ಪಾಲ್‌ ಅವರು ಟೆಸ್ಟ್‌ ಬ್ಯಾಟ್ಸ್‌ಮನ್‌ನ ನಂಬರ್‌ ವನ್‌ ರ್‍ಯಾಂಕಿಂಗನ್ನು ಮರಳಿ ಪಡೆದಿದ್ದಾರೆ.

        ಆಸ್ಟ್ರೇಲಿಯ ವಿರುದ್ಧ ಇತ್ತೀಚೆಗೆ ಮುಗಿದ ಟೆಸ್ಟ್‌ ಸರಣಿಯಲ್ಲಿ ಚಂದರ್‌ಪಾಲ್‌ ಸರಾಸರಿ 86.50ರಂತೆ ಗರಿಷ್ಠ 346 ರನ್‌ ಗಳಿಸಿದ್ದಾರೆ. ಡೊಮಿನಿಕಾದಲ್ಲಿ ನಡೆದ ಅಂತಿಮ ಟೆಸ್ಟ್‌ನಲ್ಲಿ ಅವಳಿ ಅರ್ಧಶತಕ ದಾಖಲಿಸಿದ್ದ ಚಂದರ್‌ಪಾಲ್‌ ದಕ್ಷಿಣ ಆಫ್ರಿಕಾದ ಕ್ಯಾಲಿಸ್‌ ಮತ್ತು ಡಿ'ವಿಲಿಯರ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದರು. ಈ ನಡುವೆ ಅವರು ಟೆಸ್ಟ್‌ನಲ್ಲಿ 10 ಸಾವಿರ ರನ್‌ ಪೂರ್ತಿಗೊಳಿಸಿದ ಸಾಧನೆ ಮಾಡಿದರು.

        ಚಂದರ್‌ಪಾಲ್‌ ಈ ಹಿಂದೆ 2008ರ ಜುಲೈಯಲ್ಲಿ ನಂಬರ್‌ ವನ್‌ ಸ್ಥಾನ ಪಡೆದಿದ್ದರು ಮತ್ತು ಏಳು ತಿಂಗಳು ಈ ಸ್ಥಾನದಲ್ಲಿದ್ದರು. 2009ರ ಫೆಬ್ರವರಿಯಲ್ಲಿ ಅವರು ಎರಡನೇ ರ್‍ಯಾಂಕಿಗೆ ಜಾರಿದ್ದರು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • ಈ ವಿಭಾಗದಲ್ಲಿಯೂ ಇದೆ
      image
      • Copyright @ 2009 Udayavani.All rights reserved.
      • Designed & Hosted By 4cplus