Thursday, May 23, 2013
Last Updated: 1:03:06 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಮಹಿಳಾ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಕಳೆದು ಹೋದುದನ್ನು ಹುಡುಕುತ್ತ...
    • ಕಳೆದು ಹೋದುದನ್ನು ಹುಡುಕುತ್ತ...

      • ಸರಸ | May 04, 2012

        ಮೊನ್ನೆ ನನ್ನ ಗೆಳತಿಯೊಬ್ಬಳ ಮನೆಗೆ ಸಂಜೆ ಆಪ್ತವಾಗಿ ಭೇಟಿಯಿತ್ತೆ. ಮನೆಯಲ್ಲಿ ಯಾಕೋ ಬಿಗು ವಾತಾವರಣವಿತ್ತು. ಚಿಂತೆಯ ಪರ್ವತವನ್ನೇ ತಲೆ ಮೇಲೆ ಹೇರಿಕೊಂಡ ಮುಖಭಾವದ ನನ್ನ ಸ್ನೇಹಿತೆ. ಮೋರೆ ಬೀಗಿಸಿಕೊಂಡು ಸಿಡಿಮಿಡಿಗುಟ್ಟುತ್ತ ಮನೆಯೊಳಗೆ ಆಚೀಚೆ ಶತಪಥ ಸುಳಿಯುತ್ತಿದ್ದ ಅವಳ ಪತಿ ಮಹಾಶಯ. ಯಾಕೋ ನಾನು ಬಂದಿದ್ದ ಹೊತ್ತು- ಘಳಿಗೇನೇ ಸರಿಯಾಗಿಲ್ವೇನೋ ಅನಿಸಿತು.
        ""ಈ ಮನೇಲಿ ಒಂದು ವಸ್ತು ಇದ್ದಲ್ಲಿ ಇರಲ್ಲ...ಬೇಕೂಂದ್ರೆ ಎಲ್ಲಿ ಹುಡುಕಿದ್ರೂ ಸಿಗಲ್ಲ... ನನ್‌ ಕರ್ಮ...ನಂಗೀಗ್ಲೆà ಬೇಕಾಗಿತ್ತು ಅದೂ...ಎಲ್ಹೋಯೆ¤à?...ಬೇಗ ತೆಕ್ಕೊಡೋ!' ಅಂತ ಎಗರಾಡೋ ಗಂಡ...

        ""ಆಫೀಸ್‌ ಫೈಲು ಇಟ್ಕೊಳ್ಳೋಕೂ ಒಂದು ಜಾಗಾಂತ ಇರಲ್ವಾ? ಅದನ್ನು ಯಾಕೆ ಮನೇಗೆ ತರಿ¤àರಾ... ಅದಲ್ಲೆ ಎಲ್ಲಾದ್ರೂ ಎಸಿªರಿ¤àರಾ? ಅದ್ನ ನಾನ್ಯಾಕೆ ತೆಗೊಳ್ಳಿ... ನಂಗೇನು ಸಾಂಬಾರು ಮಾಡೋಕೆ ಬರುತ್ತ ಅದ್ರಿಂದ...!?' ಮೂದಲಿಸೋ ಹೆಂಡತಿ.

        ""ನಿನ್‌ ಪುರಾಣ ಬೇಡ... ಬೇಗ ತಂದೊRಡು...ಅಷ್ಟೆ'

        ಪತಿಯ ವಟಗುಟ್ಟುವಿಕೆ ಪಿರಿಪಿರಿ ಸಹಿಸಲಾರದೆ ನನ್ನ ಗೆಳತಿಯೇ ತಾಸು ಹೊತ್ತು ಮನೆಯಿಡೀ ಜಾಲಾಡಿ ಟಿಪಾಯ್‌ ಮೇಲಿದ್ದ ದಿನ ಪತ್ರಿಕೆಗಳ ರಾಶಿಯೊಳಗೆಲ್ಲೋ ಹುದುಗಿದ್ದ  ಫೈಲನ್ನು ತೆಗೆದು  ಗಂಡನ ಕೈಗಿತ್ತು,  ""ಹಳೇ ಪೇಪರೊಳಗೆ ಯಾರ್ರೀ ತುರುಕಿದ್ದು...ಅದ್ಹೇಗೆ ಅಲ್ಲಿಗೆ ಹೋಯ್ತು...ಅದ್ಕೆàನು ಕೈಕಾಲು ಬಂದಿತ್ತಾ?' ಅಂತ ಚುಡಾಯಿಸಿದಾಗ ಆತ ಮರು ಮಾತಿಲ್ಲದೆ ಫೈಲು ಕೈಗೆತ್ತಿಕೊಂಡು ತಣ್ಣಗೆ ತನ್ನ ಕೋಣೆಯೊಳಕ್ಕೆ ಸೇರಿ ಬಾಗಿಲು ಹಾಕಿಕೊಂಡರು!

        ""ಇವ್ರು ಯಾವತ್ತೂ ಹೀಗೇ ಕಣೆ...ಒಂದು ವಸ್ತು ನೀಟಾಗಿ ಒಂದ್ಕಡೆ ಇಡಲ್ಲಾ... ಸಿಕ್ಕಿಲ್ಲಾಂದ್ರೆ ನನ¤ಲೆ ತಿನ್ತಾರೆ 'ನನ್ನ ಗೆಳತಿ ಹೇಳಿಕೊಂಡಳು.

        ಇಂತಹ ಘಟನೆಗಳು ಎಲ್ಲರ ಮನೆಯಲ್ಲೂ ಘಟಿಸುತ್ತಲೇ ಇರುತ್ತವೆ. ಅದೂ ಅಲ್ಲದೆ ಯಾವುದೇ ಮನೆಗಳಲ್ಲಿ ನಡೆಯುವ ಇಂತಹ ಪ್ರಕರಣಗಳಲ್ಲಿ "ಭೂತಕ್ಕೆ ಬಿಟ್ಟ ಕೋಳಿ'ಯಂತೆ ಅವ್ಯವಸ್ಥೆಯನ್ನು ಸುವ್ಯವಸ್ಥಿತಗೊಳಿಸುವ ಅಲಿಖೀತ ಒಪ್ಪಂದಕ್ಕೆ ಮನೆ ಗೃಹಿಣಿಯೇ ಬದ್ಧಳಾಗಿರುತ್ತಾಳೆ!
        ಹಿರಿಯರಿಂದ ತೊಡಗಿ ಸಣ್ಣ ಮಕ್ಕಳವರೆಗೂ ಈ ಚಾಳಿ ಸಾಂಕ್ರಾಮಿಕವಾಗಿ ವ್ಯಾಪಿಸಿರುವುದು ಸರ್ವಸಾಮಾನ್ಯ.

        ""ಅಮ್ಮಾ...ನನ್ನ ಪಿಂಕ್‌ ಚೂಡಿದಾರ್‌ದ್ದು ವ್ಹೇಲ್‌ ಕಾಣಿ¤ಲ್ಲಾ...' ಅಂತ ರಾಗ ಎಳೆಯೋ ಪುತ್ರೀಮಣಿ.
        ""ಅಮ್ಮಾ...ನನ್ನ ಬ್ಲ್ಯಾಕ್‌ ಶೂದ್ದು ಸಾಕ್ಸ್‌ ಎಲ್ಲಿದೆ? ಬೆಲ್ಟ್ ಕಾಣಿ¤ಲ್ಲಾ...ಬೇಗ ತಂದೊRಡು... ಸ್ಕೂಲಿಗೆ ತಡ ಆಯ್ತು' ಎಂದು ಅರಚಾಡುವ  ಮಗರಾಯ.

        ""ಲೇ... ಎಲ್ಲೋದಿಯಾ...ಬಾರೆ...ತೆಕ್ಕೊಡೇ...' ಅತ್ಯಗತ್ಯ ವಸ್ತುಗಳನ್ನು ಎಲ್ಲೆಂದರಲ್ಲಿಟ್ಟು ಭೂಮಿ- ಆಕಾಶ ಒಂದಾಗುವಂತೆ ಕೂಗಾಡುತ್ತ ಸತಿಯ ಕೈಕಾಲು ಬೀಳ್ಳೋ ಹಾಗೆ ಮಾಡೋ ಪತಿ ಮಹಾಶಯ...ಎಲ್ಲೆಡೆಯೂ ಕಾಣ ಸಿಗುತ್ತಾರೆ.

        ಹಾಗಂತ ನಮ್ಮ ಗೃಹಿಣಿಯರೇನೂ ಕಮ್ಮಿಯವರಲ್ಲ. ""ಹಾಳಾದ್ದು ಮರೆವು. ಎಲ್ಲಿಟೊ°à ಏನೋ. ನೆನಪಿಗೇ ಬರ್ತಾ ಇಲ್ಲ. ಅಲ್ಲಾ...ಆಗ ಅವ್ನು ಬಂದೊØàದ. ಎಲ್ಲಾರೂ ತೆಗೊಂಡ್ನಾ ಹ್ಯಾಗೆ... ಪಕ್ಕದ ಮನೆ ಹುಡುಗಿ ಬಂದಿತ್ತು... ಅದೆಲ್ಲಾದ್ರೂ ಕೈಗೆತ್ತಿಕೊಂಡಿರ್ಬೇಕೂ' ಮನೆಯಿಡೀ ಹುಡುಕಾಡೋದು ಅಲ್ಲದೆ, ವೃಥಾ ಯಾರ್ಯಾರ ಮೂತಿಗೆ ಮಂಗಳಾರತಿ ಮಾಡುವುದೋ ಸಹಸ್ರನಾಮಗೈಯುವುದೋ ಮಾಡಿ ಅಷ್ಟಕ್ಕೂ ತೃಪ್ತರಾಗದೆ, ""ಸ್ವಾಮೀ ದೇವ್ರೇ...ಒಂದ್ಸಲ ಅದು ನನ್‌ ಕೈ ಸೇರಿದ್ರೆ ಸಾಕಪ್ಪಾ... ನಿನ್‌ ಹೆಸರಿಗೊಂದು ಅರ್ಚನೆ ಮಾಡಿಸ್ತೀನಿ...ಸೇವೆ ಕೊಡ್ತೀನಿ' ಅಂತ ಕಾಣದ ದೇವ ದೈವಗಳಿಗೆ ಹರಕೆ, ಕಾಣಿಕೆ ಎತ್ತಿಡುವುದೂ ನಡೆಯುತ್ತದೆ.

        ಈ ಎಲ್ಲ ಸನ್ನಿವೇಶ, ಘಟನೆಗಳ ಹಿನ್ನೆಲೆಯೇನು? ಹೀಗಾಗುವುದಕ್ಕೇನು ಕಾರಣ? ಒಮ್ಮೆ ಅವಲೋಕಿಸಿ ನೋಡೋಣವೆ? ಮನೆಗೊಂದಿಷ್ಟು ಪತ್ರಿಕೆ, ಪುಸ್ತಕಗಳು ಬರುತ್ತವೆ. ಎಲ್ಲರಿಗೂ ಓದುವುದಕ್ಕೆ ಇವುಗಳು ಬೇಕೇ ಬೇಕು. ಆದರೆ, ಓದಿದವರ್ಯಾರೂ ಅದನ್ನು ಚೊಕ್ಕದಾಗಿ ಅದಕ್ಕೆ ಕಾದಿರಿಸಿದ ಜಾಗದಲ್ಲಿ  ಜೋಡಿಸಿಡುವ ಗೋಜಿಗೇ ಹೋಗುವುದಿಲ್ಲ. ಓದಿದ ಮೇಲೆ ಸೋಫಾದ ಮೇಲೆ, ಟಿವಿ ಸ್ಟಾಂಡಲ್ಲಿ, ಮಂಚದ ಮೇಲೆ, ಓದೋ, ಊಟ ಮಾಡೋ ಮೇಜಿನ ಮೇಲೆ, ಕಿಟಕಿ ಸಂದಿಯಲ್ಲಿ ಎಲ್ಲಾದರೂ ಅಲ್ಲಿ ಎಸೆಯುತ್ತಾರೆ. ಬಳಸಿದವರು ಯಾರೇ ಇರಲಿ ಮಾಸ, ವಾರ, ದಿನ ಪತ್ರಿಕೆಗಳನ್ನು ಕ್ರಮಾಗತವಾಗಿ ಜೋಡಿಸಿ ತೆಗೆದಲ್ಲೇ ಇರಿಸಿದರೆ ನೋಡುವುದಕ್ಕೂ ಚಂದ, ಬೇಕೆಂದಾಗ ಇಡೀ ಮನೆ ರಂಪ ರಾಮಾಯಣ ಮಾಡೋದು ತಪ್ಪುತ್ತದೆ.

        * ದಿನನಿತ್ಯದ ಬಳಕೆಯಲ್ಲಿ ಉಪಯೋಗಿಸಲ್ಪಡುವ ಪೆನ್ನು, ಕಾಗದದ ಹಾಳೆಗಳು, ಕನ್ನಡಕ, ಛತ್ರಿ, ಮೊಬೈಲ್‌ ಇವುಗಳಿಗೆಲ್ಲ ಇರಿಸುವುದಕ್ಕಾಗಿ ನಿಗದಿಯಾದ ಜಾಗವಿರಬೇಕು/ಇರುತ್ತದೆ. ಬಳಸಿದ ಮೇಲೆ ನಿರ್ದಿಷ್ಟ ಸ್ಥಳದಲ್ಲೋ ಅವುಗಳನ್ನಿಟ್ಟರೆ ಎಲ್ಹೋಯ್ತು?
        ಅಂತ ತಲೆಕೆಡಿಸಿಕೊಳ್ಳೋ ತಾಪತ್ರಯವಿಲ್ಲ.

        * ಇನ್ನು ಬಟ್ಟೆ ಬರೆಯ ವಿಚಾರಕ್ಕೆ ಬಂದರೂ ಅಷ್ಟೆ. ಕೊಳೆಯಾಗಿರೋ ವಸ್ತ್ರ,ಮಲಿನಗೊಂಡು ತೊಳೆಯೋದಕ್ಕಿರೋ ಉಡುಗೆ, ತೊಡುಗೆಗಳನ್ನು ಬುಟ್ಟಿಯಲ್ಲೋ...ಪ್ಲಾಸ್ಟಿಕ್‌ ಬಕೆಟ್‌ಗೊಳಗೋ ಹಾಕಿದರೆ ತೊಳೆದು ಸ್ವಚ್ಚಮಾಡುವವರಿಗೂ ಅನುಕೂಲ. ಮಡಿ ಮಾಡಿ ಒಣಗಿಸಿಟ್ಟಿರೋ ಬಟ್ಟೆಗಳಿಗೊಂದು ನೆಲೆಯಿರಲಿ. ಚಂದವಾಗಿ ಇಸಿŒ ಮಾಡಿದ ಡ್ರೆಸ್ಸುಗಳು ಬೀರೊಳಗೋ, ವಾರ್ಡ್‌ ರೋಬಲ್ಲೋ ಶೋಭಿಸಲಿ.
        ಪ್ಯಾಂಟು, ಪೈಜಾಮುಗಳೊಡನೆ ಅದಕ್ಕೆ ಹೊಂದಿಕೆಯಾಗೋ ಅಂಗಿ, ಷರಾಯಿಗಳು ಒಳ ಉಡುಪುಗಳು, ಚೂಡಿದಾರ್‌, ಸಲ್ವಾರ್‌ ಕಮೀಜ್‌ಗಳೊಂದಿಗೆ ಅವುಗಳ ಶಾಲು, ದುಪಟ್ಟಾಗಳು, ಸೀರೆಗಳ ಜೊತೆಗೆ ಕುಪ್ಪಸ, ಅದಕ್ಕೆ ಹೊಂದುವ ಇತರ ದಿರಿಸುಗಳನ್ನು ತೆಗೆದಿಡಬೇಕು. ಇನ್ನು ದಿನ ನಿತ್ಯದ ಬಳಕೆಯ ನೈಟಿ, ಹೌಸ್‌ ಕೋಟುಗಳು, ಲುಂಗಿ, ಟೀಶರ್ಟ್‌, ಬರ್ಮುಡಾ ಬೇಗನೆ ಕೈಗೆ ಸಿಗೋ ರೀತಿ ಪ್ರತ್ಯೇಕವಾಗಿ ತೆಗೆದಿರಿಸಿದರೆ ಬಳಸುವವರಿಗೂ ಅನುಕೂಲ, ಸೌಕರ್ಯ.

        * ಯಾವತ್ತೂ ಉಪಯೋಗಿಸುವ ಸೌಂದರ್ಯ ಸಾಧನಗಳು, ತಲೆ, ಕೈ, ಕಾಲಿಗೆ ತೊಡುವ ಆಲಂಕಾರಿಕ ವಸ್ತ್ರ, ಆಭರಣಗಳು, ಹೇರ್‌ಬ್ಯಾಂಡ್‌, ಕ್ಲಿಪ್‌, ಪಿನ್‌, ಬಳೆ, ಸರ, ಬಾಚಣಿಗೆ, ಬ್ರಶ್‌ಗಳೆಲ್ಲ ಡ್ರೆಸಿಂಗ್‌ ಟೇಬಲ್‌ ಪಕ್ಕದಲ್ಲೇ  ಸ್ಥಾನ ಪಡೆಯಲಿ.

        * ಇನ್ನು ಅಡುಗೆ ಕೋಣೆಯಲ್ಲಿ ಬಳಸಲ್ಪಡುವ ಚಾಕು, ಕತ್ತರಿ, ಕತ್ತಿ, ಬಿಸಿ ಪಾತ್ರೆಗಳನ್ನು ಇಳಿಸಲು ಬಳಸುವ ಇಕ್ಕಳು, ಪಾತ್ರೆ,ಪರಡಿ, ಚಮಚೆ, ತಟ್ಟೆ, ಲೋಟಗಳಿಗೂ ಅದರದ್ದೇ ಆದ ಸುರಕ್ಷಿತ ಜಾಗವಿರಲಿ. ಬಳಸಿದ ಮೇಲೆ ಅವುಗಳು ಸ್ವಸ್ಥಾನಕ್ಕೆ ಸೇರ್ಪಡೆಗೊಳ್ಳಬೇಕು. ಆವಾಗ ಹುಡುಕಾಟದ ಗೋಳಾಟ ಇರುವುದಿಲ್ಲ.
        (ತಮಾಷೆ ಏನು ಗೊತ್ತಾ...ನನ್ನ ಪರಿಚಯದ ಸೋದರಿಯೊಬ್ಬರು  ಕುಕ್ಕರ್‌ನ "ವೈಟ್‌' ಎಲ್ಲೋ ಇಟ್ಟಿದ್ದು, ಮನೆಯಿಡೀ ಹುಡುಕಾಡಿ ಅದು ಸಿಗದೆ ಅನ್ನ ಮಾಡುವುದಕ್ಕೆ ಪಕ್ಕದ ಮನೆಯಿಂದ "ವೈಟ್‌' ಇಸ್ಕೊಂಡು ಬಂದ್ರಂತೆ! ಪುಣ್ಯಾತಗಿತ್ತಿ. ಹುಡುಕ್ತಾ ಗ್ಯಾಸ್‌ ಸ್ಟೌ ಕೆಳಗೆ ಆಕೆ ನೋಡಿರಲೇ ಇಲ್ಲ. ರಾತ್ರಿ ಸ್ಟವ್‌ ಒರೆಸ್ತಾ ಇದ್ದಾಗ ಅದರಡಿಯಲ್ಲಿ ಅವಿತುಕುಳಿತಿದ್ದ ವೈಟ್‌ ಸಿಕ್ಕಿತಂತೆ!)

        * ಇನ್ನು ಹಣದ ಪರ್ಸ್‌ ಅತೀ ಆವಶ್ಯಕವಾಗಿರೋ ದಾಖಲೆ ಪತ್ರಗಳು, ರೆಕಾರ್ಡ್‌ಗಳನ್ನಂತೂ ಜತನದಿಂದ ಬೀರೊ ಳಗೆ ಇಡೋದೇ ವಾಸಿ. ಆದರೇನು ಬಂತು. ಅದೆಷ್ಟೋ ಮನೆಗಳಲ್ಲಿ ಅಲ್ಮೇರಾದ ಕೀಲಿ ಗೊಂಚಲು ಕೀ ತೂತಿನೊಳಗೇ ಜೋತು ಬಿದ್ದಿರುತ್ತದೆ. ಅದನ್ನು  ತಮಗಷ್ಟೇ ಗೊತ್ತಿರುವ ಜಾಗದಲ್ಲಿ ಜೋಪಾನವಾಗಿಡೋ ಅಭ್ಯಾಸವೂ ಕೆಲವರಿಗಿಲ್ಲ.

        * ಇನ್ನು ನಮ್ಮ ಸೋದರಿಯರು... ಎಲ್ಲಾದರೂ ತಿರುಗಾಟ ಮುಗಿಸಿ ಬಂದವರು ಬೆಲೆ ಬಾಳುವ ಸರ, ಉಂಗುರ, ಬಳೆಗಳನ್ನು ಕಳಚಿ ಗಡಿಬಿಡಿಯಲ್ಲಿ ಎಲ್ಲೆಲ್ಲೋ ಇಡುತ್ತಾರೆ. ಇಲ್ಲವೇ  ಸ್ನಾನ ಮಾಡಬೇಕಿದ್ದರೆ ಬಚ್ಚಲು ಮನೆಯಲ್ಲೋ ಬಿಟ್ಟು, ಎಲ್ಲೋ ಕಳೆದು ಹೋಯ್ತು ಅಂತ ಗೋಳಾಡುತ್ತಾರೆ. ಎಷ್ಟೇ ತರಾತುರಿಯಿರಲಿ, ಇವುಗಳ ಬಗ್ಗೆ ನಿಗಾ ಇರಬೇಕಲ್ಲವೆ?

        ಪ್ರಶಾಂತ ಮನಃಸ್ಥಿತಿಯಿಂದ ಬದುಕಬೇಕಿದ್ದರೆ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಒಂದಷ್ಟು ಶಿಸ್ತು, ನಿಯಮ ನೀತಿ, ಸಂಯಮವಿರಬೇಕಾಗುತ್ತದೆ. ನಮ್ಮಲ್ಲಿರೋ ಸೋಮಾರಿತನ, ಆಲಸ್ಯ, ಹೇಗಿದ್ದರೂ ಆಯ್ತು ಅನ್ನೋ ನಿರ್ಲಿಪ್ತ ಧೋರಣೆಗೆ ಕೆಲವೊಮ್ಮೆ ದುಬಾರಿ ಬೆಲೆ ತೆರಬೇಕಾಗುತ್ತದೆ.  ಎಲ್ಲವನ್ನು ನಿಭಾಯಿಸಿಕೊಂಡು ಸಂಸಾರದ ನೆಮ್ಮದಿ ಕಾಪಾಡಿಕೊಳ್ಳಬೇಕಾದುದು ಮನೆಯಲ್ಲಿರೋ ಗೃಹಿಣಿ ಪಟ್ಟದಲ್ಲಿ ರುವವಳೊಬ್ಬಳದ್ದೇ  ಜವಾಬ್ದಾರಿಯೆಂದು ತಿಳಿಯದೆ ಮನೆಯ ಯಜಮಾನ, ಮಕ್ಕಳೂ ಜೀವನಶಿಸ್ತನ್ನು ಕಟ್ಟು ನಿಟ್ಟಾಗಿ ಪಾಲಿಸಿದರೆ ಎಲ್ಲಿದೆಯೋ ಏನಾಯೊ¤à ಅಂತ ಪರಿತಪಿಸುವುದು ಬೇಡವಾಗುತ್ತದೆ !   

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      pic"ಉದ್ಯೋಗ' ಎನ್ನುವುದು ಕೆಲವರಿಗೆ ತಮ್ಮ ಪ್ರತಿಭೆಯ ಅಭಿವ್ಯಕ್ತಿಗೆ, ಸ್ವಾತಂತ್ರ್ಯದ ಅಪೇಕ್ಷೆಗೆ ಪೂರಕವಾದರೆ ಇನ್ನು ಕೆಲವರಿಗೆ ತುತ್ತಿನ ಚೀಲ ತುಂಬಿಸಲು ಅನಿವಾರ್ಯ...
      • ಈ ವಿಭಾಗದಲ್ಲಿಯೂ ಇದೆ
      • ಏಕತಾರಿ ಮಿಡಿತ
        ಅವಳು ಒಂಟಿಯಾಗಿ ಕಾರ್ಯಕ್ರಮಕ್ಕೆ ಬಂದಳು, ಕಾರ್ಯಕ್ರಮ ಮುಗಿದ ನಂತರ ಒಂಟಿಯಾಗಿ ಬಸ್‌ನಲ್ಲಿ ಜೋತಾಡಿಕೊಂಡು ಹೋಗುತ್ತಿದ್ದಳು....
      image
      image
      • Copyright @ 2009 Udayavani.All rights reserved.
      • Designed & Hosted By 4cplus