ಗಣೇಶ್ ಕುಳಮರ್ವ | May 04, 2012
ಶೀರ್ಷಿಕೆ ಓದಿ ಆಶ್ಚರ್ಯವಾಯಿತಾ. ಹಾಗಾದರೆ ಇಲ್ಲಿ ಕೊಟ್ಟಿರುವ ಫೋಟೋ ನೋಡಿ. ಮೇಲ್ನೋಟಕ್ಕೆ ಪುಟ್ಟ ಮಕ್ಕಳ ಚಪ್ಪಲಿಯ ಮೋಡಲ್‌ನಂತೆ ಕಂಡರೂ ಅವು ನಿಜಕ್ಕೂ ಚಪ್ಪಲಿಯ ಮಾಡೆಲ್ ಅಲ್ಲ. ಬದಲಾಗಿ ಹೆಂಗೆಳೆಯರ ತುರುಬನ್ನು ಅಲಂಕರಿಸುವ "ಕ್ಲಿಪ್'.
ಹೆಂಗಳೆಯರಿಗೆ ಸೌಂದರ್ಯ ಪ್ರಜ್ಞೆ ಹೆಚ್ಚು. ತಾವು ಎಷ್ಟೇ ಶೃಂಗಾರ ಮಾಡಿ ಕೊಂಡರೂ ಕಡಿಮೆ ಎಂಬ ಭಾವನೆ ಹೊಂದಿರುವವರು. ಆದ್ದರಿಂದಲೇ ಅವರಿಗೆ ಶೃಂಗಾರ ವಸ್ತುಗಳ ಬಗ್ಗೆ ಆಸಕ್ತಿಯು ಅಧಿಕ. ಹಾಗೆಯೇ ಅವರು ಶೃಂಗಾರ ವಸ್ತುಗಳಲ್ಲಿ ಸದಾ ಹೊಸತನವನ್ನು ಬಯಸುತ್ತಾರೆ. ಈ ಕಾರಣಕ್ಕಾಗಿಯೇ ಕ್ಲಿಪ್‌ಗ್ಳಲ್ಲಿಯೂ ಇಂತಹವುಗಳನ್ನು ತಯಾರಿಸಿ, ಮಾರುಕಟ್ಟೆಗೆ ತಂದಿರಬಹುದು.

ಯಾವುದೇ ಒಂದು ವಸ್ತುವನ್ನು ಆಕಾರ, ಬಣ್ಣ ಹಾಗೂ ಒಂದೇ ರೀತಿಯಲ್ಲಿ ತಯಾರಿಸಿ ಮತ್ತೆ ಮತ್ತೆ ಮಾರುಕಟ್ಟೆಗೆ ತಂದರೆ ಅದರ ಬೇಡಿಕೆ ಕುಗ್ಗುತ್ತದೆ. ಇದಕ್ಕಾಗಿ ಅದರಲ್ಲಿ ಏನಾದರೂ ಹೊಸತನವನ್ನು ಸದಾ ತರುತ್ತಿರಬೇಕು. ಅದು ನೋಡುಗರ ಚಿತ್ತಾಕರ್ಷಕವಾಗಿರಬೇಕು. ಆದ್ದರಿಂದಲೇ ಮಾರುಕಟ್ಟೆ ಗಿಮಿಕ್‌ಗಳು ಅಳವಡಿಕೆಗೆ ಬಂದುವು. ಕ್ಲಿಪ್‌ನಲ್ಲಿ ಈ ಬದಲಾವಣೆಯೂ ಒಂದು ಗಿಮಿಕ್.
ಕ್ಲಿಪ್‌ನಲ್ಲೂ ಹೊಸತನ
ಹಿಂದೆ ಸಾಮಾನ್ಯವಾದ ತಂತಿ ತುಂಡಿನಂತಿರುತ್ತಿದ್ದ ಕ್ಲಿಪ್‌ಗ್ಳು ಬಳಕೆಗೆ ಬಂದಿದ್ದವು. ಅನಂತರ ಕ್ಲಿಪಗಳ ರಚನೆಯಲ್ಲಿಯೂ ಬದಲಾವಣೆ ಮಾಡಿ, ಆಕರ್ಷಣೆಗಾಗಿ ಕೆಲವೊಂದು ಡಿಸೈನ್‌ಗಳನ್ನು ಅವುಗಳಿಗೆ ಜೋಡಿಸಲಾಯಿತು. ತದನಂತರ ಕ್ಲಿಪ್ ತಯಾರಿಕೆ ಹಾಗೂ ಮಾರಾಟದಲ್ಲಿ ಪೈಪೋಟಿ ಪ್ರಾರಂಭವಾಯಿತು. ಇದರಿಂದ ಕ್ಲಿಪ್‌ಗ್ಳಿಗೆ ಫ್ಯಾಶನ್ ಸ್ಪರ್ಶ ದೊರೆಯಿತು.
ಜನರ ಮೇಲೆ ಸಿನೆಮಾ, ಟಿ.ವಿ.ಗಳ ಮೋಡಿ ಹೆಚ್ಚಾದಂತೆ ಫ್ಯಾಶನ್ ಗೀಳು ಹೆಚ್ಚಿಸಿಕೊಂಡು ಮಹಿಳೆಯರು ಕ್ಲಿಪ್ ನಂತಹ ಶೃಂಗಾರ ವಸ್ತುಗಳಲ್ಲಿ ಬದಲಾವಣೆ ಮತ್ತು ಹೊಸತನಕ್ಕೆ ಹಾತೊರೆಯು ತೊಡಗಿದರು. ಇದನ್ನರಿತ ಅವುಗಳ ತಯಾರಕರು ಚಿಟ್ಟೆ, ವಿವಿಧ ರೀತಿಯ ಹೂವು -ಹಣ್ಣುಗಳ ಆಕಾರದ ಕ್ಲಿಪ್‌ಗ್ಳನ್ನು ತಯಾರಿಸಿ ಮಾರಲಾಂಬಿಸಿದರು. ಇದರಿಂದ ಕ್ಲಿಪ್‌ನ ಕ್ರೇಜ್ ಅಧಿಕವಾಗಿ ಪ್ರತಿ ವರ್ಷವು ಹೊಸ ಹೊಸ ತರದ ಕ್ಲಿಪ್‌ಗ್ಳು ಮಾರುಕಟ್ಟೆ ಪ್ರವೇಶಿಸಿದುವು. ಇದರ ಮುಂದುವರಿದ ಭಾಗವಾಗಿ ಈ ಭಾರಿ ಇಂತಹ ಚಪ್ಪಲಿಯಾಕಾರದ ಕ್ಲಿಪಗಳು ಫ್ಯಾನ್ಸಿ ಅಂಗಡಿ ಸೇರಿವೆ.
ಕೊಂಕು: ಚಪ್ಪಲಿಗು ಬಂತು ಮುಡಿಗೇರುವ ಭಾಗ್ಯ! ಎಂದಾಗ ನನಗೆ ಒಂದು ಜೋಕ್ ನೆನಪಿಗೆ ಬಂತು. ಅದೇನೆಂದರೆ: ಗುಂಡ ಒಮ್ಮೆ ಫೋಟೋಗ್ರಾಫರ್ ಒಬ್ಬರ ಬಳಿಗೆ ಹೋಗಿ ತನ್ನದೊಂದು ಸ್ಟಾ éಂಪ್ ಸೈಜ್ ಫೋಟೋ ತೆಗೆಯಿರಿ. ಆದರೆ ಫೋಟೋದಲ್ಲಿ ತನ್ನ ಹೊಸ ಚಪ್ಪಲಿಯು ಕಾಣಬೇಕು.
ಫೋಟೋಗ್ರಾಫರ್: ಹಾಗಾದರೆ, ಚಪ್ಪಲಿಯನ್ನು ತಲೆಯಲ್ಲಿ ಇಟ್ಟುಕೊ!