ಲಂಡನ್: ಇನ್ನು 82 ದಿನಗಳಲ್ಲಿ ಆರಂಭಗೊಳ್ಳಲಿರುವ ಲಂಡನ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ಹಾಗೂ ಆಯತ್ಲೆಟಿಕ್ಸ್ ಸ್ಪರ್ಧೆಗಳು ನಡೆಯಲಿರುವ ಒಲಿಂಪಿಕ್ ಕ್ರೀಡಾಂಗಣವನ್ನು ಶನಿವಾರ ಒಲಿಂಪಿಕ್ ಪಾರ್ಕ್‌ನ ಸನಿಹ ವಾಸಿಸುತ್ತಿರುವ 9 ವರ್ಷದ ಬಾಲಕಿ ಗಣ್ಯರ ಸಮ್ಮುಖದಲ್ಲಿ ಅಧಿಕೃತವಾಗಿ ಉದ್ಘಾಟಿಸಿದರು.ಲಂಡನ್ ಒಲಿಂಪಿಕ್ಸ್‌ನ ಸಂಘಟನಾ ಸಮಿತಿಯ ಚೇರ್ಮನ್ ಸೆಬಾಸ್ಟಿಯನ್ ಕೊಯಿ ಅವರ ಜತೆ ಕ್ರೀಡಾಂಗಣದ ವೇದಿಕೆಗೆ ಆಗಮಿಸಿದ ನಿಯಾಮ್ ಕ್ಲಾರ್ಕ್ ವಿಲ್ಲಿಸ್ ಅವರು ಜತೆಯಾಗಿ ಬ್ಲೂ ಬಟನ್ ಒತ್ತಿದಾಗ ನೆಟ್ ತೆರೆದುಕೊಂಡಿತು ಮತ್ತು ಬಲೂನ್‌ಗಳು ನೆರೆದ 40 ಸಾವಿರದಷ್ಟು ಪ್ರೇಕ್ಷಕರ ಮೇಲಿನಿಂದ ಹಾರಿತು. ವಿಶೇಷ ಪರೀಕ್ಷೆಯ ಮೂಲಕ ಈ ಬಾಲಕಿಯನ್ನು ಈ ಗೌರವಕ್ಕಾಗಿ ಆಯ್ಕೆ ಮಾಡಲಾಗಿತ್ತು. ತನ್ನ ಮನೆಯಿಂದಲೇ ಒಲಿಂಪಿಕ್ ಪಾರ್ಕ್ ಕಾಣುವಷ್ಟು ಹತ್ತಿರ ವಿಲ್ಲಿಸ್ ವಾಸಿಸುತ್ತಿದ್ದಾರೆ. ಲಂಡನ್ ಒಲಿಂಪಿಕ್ಸ್ ಜುಲೈ 27ರಂದು ಆರಂಭವಾಗಲಿದೆ.8ರಿಂದ 14 ವರ್ಷದೊಳಗಿನ 100 ಮಂದಿ ಬಾಲಕ-ಬಾಲಕಿಯರ ಪಟ್ಟಿಗೆ ಪ್ಯಾರಾಒಲಿಂಪಿಕ್ ಚಿನ್ನ ವಿಜೇತ ಬಿಲ್ಗಾರ್ತಿ ಡೇನಿಯಲ್ ಬ್ರೌನ್ ಅವರು ಬಿಲ್ಲು ಅನ್ನು ಗುರಿ ಇಡುವ ಮೂಲಕ ಒಂದು ಹೆಸರನ್ನು ಆಯ್ಕೆ ಮಾಡಿದ್ದರು. ಇದುವೇ ವಿಶೇಷ ಪರೀಕ್ಷೆಯಾಗಿದೆ.ಅದ್ಭುತ ಟ್ರ್ಯಾಕ್ಬ್ರಿಟಿಷ್ ವಿ.ವಿ. ಮತ್ತು ಕಾಲೇಜ್‌ಗಳ ಹೊರಾಂಗಣ ಸ್ಪರ್ಧೆಗಳು ಇದೇ ಕ್ರೀಡಾಂಗಣದಲ್ಲಿ ಶನಿವಾರ ಜರಗಿದವು. ಇದು ಒಲಿಂಪಿಕ್ಸ್‌ಗೆ ಪೂರ್ವಭಾವಿಯಾಗಿ ಟ್ರ್ಯಾಕ್ ಪರೀಕ್ಷಿಸಲು ಈ ಸ್ಪರ್ಧೆಯನ್ನು ಸಂಘಟಿಸಲಾಗಿತ್ತು.ಇದೊಂದು ಅದ್ಭುತ ಟ್ರ್ಯಾಕ್. ನಾನು ಪ್ರಮುಖ ಚಾಂಪಿಯನ್‌ಶಿಪ್‌ನ ಚಿನ್ನ ಗೆದ್ದಷ್ಟೇ ಸಂಭ್ರಮ ನನಗಾಯಿತು ಎಂದು 24ರ ಹರೆಯದ ವಿದ್ಯಾರ್ಥಿ ಜಸ್ಟಿನ್ ಕಿನ್ನೆ ಹೇಳಿದ್ದಾರೆ. ಇನ್ನು ಕೆಲವೇ ತಿಂಗಳಲ್ಲಿ ವಿಶ್ವ ದರ್ಜೆಯ ಆ್ಯತ್ಲೀಟ್‌ಗಳು ಇದೇ ಟ್ರ್ಯಾಕ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂಬುದನ್ನು ತಿಳಿದು ಆಶ್ಚರ್ಯವಾಗುತ್ತಿದೆ ಎಂದವರು ತಿಳಿಸಿದರು.ಕೆಲವು ವಿಶ್ವದರ್ಜೆಯ ಆ್ಯತ್ಲೀಟ್‌ಗಳು ಈ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಐದು ಬಾರಿಯ ರೋವಿಂಗ್ ಚಿನ್ನ ವಿಜೇತ ಸ್ಟೀವ್ ರೆಡ್‌ಗೆÅàವ್ ಮತ್ತು ಈಜುಪಟು ಮಾರ್ಕ್ ಫಾಸ್ಟರ್ ಸಮಾರಂಭದಲ್ಲಿ ಭಾಗವಹಿಸಿದವರಲ್ಲಿ ಪ್ರಮುಖರಾಗಿದ್ದಾರೆ.