Saturday, May 18, 2013
Last Updated: 3:05:50 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಕೃಷಿ-ವಾಣಿಜ್ಯ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಬಾಳೇಲಿ ಚಂದ್ರ ಮೂಡಿದ
    • 35 ಗುಂಟೆ ಹೊಲದಲ್ಲಿ ಚಂದ್ರ (ಕೆಂಪು)ಬಾಳೆ ಬೆಳೆದ ಶ್ರೀಶೈಲ ಕೊಳಕಿ ತನ್ನ ತೋಟದಲ್ಲಿ ಇತರರೊಂದಿಗೆ.

      • ಕಿರಣ ಶ್ರೀಶೈಲ ಆಳಗಿ | May 07, 2012

        ಯಾರೂ ಬೆಳೆಯದ ಬೆಳೆ ತೆಗೆಯಬೇಕು ಅನ್ನುವ ರೈತರು ಸಿಗುವುದು ಕಷ್ಟ. ಪಕ್ಕದ ರೈತನಿಗೆ ಯಾವ ಬೆಳೆ ಲಾಭ ಕೊಟ್ಟಿದಿಯೋ ಅದನ್ನೇ ಹಿಂಬಾಲಿಸುವುದು ಪರಿಪಾಠ. 

        ಕಾಟನ್‌ ಸೀರೆಗಳಿಗೆ ಹೆಸರುವಾಸಿಯಗಿರುವ ಬಾಗಲಕೋಟೆ ಜಿಲ್ಲೆಯ ರಬಕ-ಬನಹಟ್ಟಿ ಕೆಲ ರೈತರು ಇದಕ್ಕೆ ಅಪವಾದ. ಇತ್ತಿಚಿಗೆ ಬನಹಟ್ಟಿಯ ಮೂರ್ತೆಪ್ಪ ಹೂಗಾರ ಬರದ ನಾಡಲ್ಲಿ ಕಾಫಿ ಬೆಳೆದು ಹೆಸರು ಮಾಡಿದ್ದಾರೆ.  ಅದೇ ರೀತಿ ಇಗ ಇಲ್ಲಿಯ ರೈತರೊಬ್ಬರು ಚಂದ್ರ(ಕೆಂಪು)ಬಾಳೆಯನ್ನು ಬೆಳೆದು ಅವಳಿ ಜಿಲ್ಲೆಯ ಅವಳಿ ನಗರಗಳತ್ತ ಜನ ಮತ್ತೋಮ್ಮೆ ಕಣ್ಣ ಹಾಯಿಸುವಂತೆ ಮಾಡಿದ್ದಾರೆ.ಬನಹಟ್ಟಿಯ ರೈತ ಶ್ರೀಶೈಲ ಶಿವ ಯೋಗಿ ಕೊಳಕಿ 35 ಗುಂಟೆ ಹೊಲದಲ್ಲಿ ಚಂದ್ರ (ಕೆಂಪು)ಬಾಳೆ ಬೆಳೆದಿದ್ದಾರೆ. ಇದು ಹೆಚ್ಚಾಗಿ ಮಲೆನಾಡು ಮತ್ತು ತುಳುನಾಡಿನ ಕೆಲ ಪ್ರದೇಶಗಳಿಗೆ ಮಾತ್ರ ಸೀಮಿತವಾದ ಬೆಳೆ.

        ಇತ್ತೀಚಿಗಷ್ಟೆ ಗುಲ್ಬರ್ಗಾಜಿಲ್ಲೆಯ ಹುಮನಾಬಾದ ನಗರದಲ್ಲಿ ರೈತರೊಬ್ಬರು ಬೆಳೆದಿದ್ದನ್ನು ಗಮನಿಸಿದ ಶ್ರೀಶೈಲ ಕೊಳಕಿ ಪ್ರಾಯೋಗಿಕಾವಾಗಿ 25 ಸಸಿಗಳನ್ನು ತಂದು ನೆಟ್ಟರು. ಅದು ತುಂಬಾ ಹುಲುಸಾಗಿ ಬೆಳೆದು ಒಳ್ಳೆಯ ಇಳುವರಿ ಕೊಟ್ಟಿತು. ಅಂದರೆ ಹುಮನಾಬಾದ ವಾತವರಣದಲ್ಲಿ ಒಂದು ಬಾಳೆಗಿಡಕ್ಕೆ 4 ರಿಂದ 5 (ಡಜನ್‌) ಗೊನಿಗಳಷ್ಟು ಇಳುವರಿ ಕೊಟ್ಟ ಗಿಡ ಬನಹಟ್ಟಿ ವಾತಾವರಣದಲ್ಲಿ ಒಂದು ಗಿಡಕ್ಕೆ 8 ರಿಂದ 10 ಗೊನೆಗಳಷ್ಟು ಇಳುವರಿ ಕೊಟ್ಟಿದ್ದರಿಂದ ಶ್ರೀಶೈಲ ಕೊಳಕಿ ಅಲ್ಲಿಂದ ಹೆಚ್ಚಿನ ಸಸಿಗಳನ್ನು ತಂದು 35 ಗುಂಟೆಯಲ್ಲಿ ನೆಟ್ಟರು. ಅದು ಈಗ ಹಲುಸಾಗಿ ಬೆಳೆದು ಫ‌ಸಲು ನೀಡುತ್ತಿದೆ.
        ಕೇವಲ ಪಿಯುಸಿ ಕಲಿತ ಶ್ರೀಶೈಲ, ಚಂದ್ರಬಾಳೆ ಬೆಳೆಯಲು ಬಲು ಹುರುಪಿನಿಂದ ಮುಂದಾದರು. ಇವರ ತಂದೆ ಶಿವಯೋಗೆಪ್ಪ ಕೂಡಾ ಸಾಥ್‌ ನೀಡಿದರು. ಅನ್ನದಾತ ಕಂಪನಿಯ ಸ್ನೇಹಿತ ಬಸವರಾಜ ತಿಗಣಿ ಬೆಳೆ ಬೆಳೆಯಲು ಸಲಹೆ ನೀಡಿದರು.

        35 ಗುಂಟೆ ಜಮೀನಿನಲ್ಲಿ 750 ಸಸಿಗಳನ್ನು ನಾಟಿ ಮಾಡಲಾಗಿದೆ. ನಾಟಿ ಮಾಡಿದ 17 ತಿಂಗಳ ನಂತರ ಕಟಾವು ಮಾಡಲು ಬರುತ್ತದೆ. ಇಲ್ಲಿಯ ವಾತಾವರಣಕ್ಕೆ ಈ ಬಾಳೆ ಒಳ್ಳೆಯ ಫ‌ಸಲು ಬರುತ್ತದೆ. ಇದರ ಬೆಳವಣಿಗೆ ಹಂತದಲ್ಲಿ ಇದಕ್ಕೆ ಸಮತೋಲನ ಗೊಬ್ಬರಗಳನ್ನು ನೀಡಲಾಗಿದೆ. ಒಂದು ಗಿಡ ಸರಾಸರಿ 25 ರಿಂದ 29 ಅಡಿ ಎತ್ತರವಾಗುತ್ತದೆ. ಶೇ.95ರಷ್ಟು ಸಾವಯವ ಗೊಬ್ಬರ ನೀಡಲಾಗಿದ್ದು. ಇದರ ಒಂದೂ ಎಲೆಯನ್ನು ಹೊರಗೆ ಚಲ್ಲದೆ ಗಿಡದ ಬುಡದಲ್ಲಿ ಚಲ್ಲಿ ನೀರು ಉಣಿಸಾಲುತ್ತದೆ. ಇದರಿಂದ ಭೂಮಿಯ ತೇವಾಂಶ ಹೆಚ್ಚಾಗುವುದರೊಂದಿಗೆ ಜೀವಸತ್ವಗಳು ಸಾಯುವುದಿಲ್ಲ. ಹೀಗೆ ಮಾಡುವುದರಿದಂದ ಹೆಚ್ಚಿನ ಗೊಬ್ಬರ ಹಾಕುವುದು ಕಡಿಮೆಯಾಗುತ್ತದೆ. ಅಗ್ಯಾìನಿಕ 50 ಕೆಜಿ, ಬೇನ ಎಣ್ಣೆ, ಎರೆಹುಳು ಗೊಬ್ಬರ ಜೊತೆಗೆ ಕೊಟ್ಟಿಗೆ ಗೊಬ್ಬರ, ನೀಲಮಾಣಿ ಸೇರಿದಂತೆ ಅನೇಕ ರೀತಿಯ ಸಮತೋಲನ ಸಾವಯುವ ಮತ್ತು ಅಲ್ಪ$ಪ್ರಮಾಣದಲ್ಲಿ ಸರಕಾರಿ ರೋಗನಿರೋಧಕ ಔಷಧಿಗಳನ್ನು ಬಳಲಾಗುತ್ತದೆ..

        ಲಾಭದ ಬೆಳೆ

        ಕೆಂಪು ಬಾಳೆ ಲಾಭದ ಬೆಳೆಯಾಗಿದ್ದು, ಒಂದು ಗಿಡ ಸರಾಸರಿ 25 ಕೆಜಿ ಯಿಂದ 30 ಕೆಜಿ ಫ‌ಸಲು ನೀಡುತ್ತದೆ. ಪ್ರತಿ ಕೆಜಿಗೆ 40 ರೂ. ಸಗಟು ಮಾರುಕಟ್ಟೆಯಲ್ಲಿ ಬೆಲೆ ಸಿಗುವುದರಿಂದ, ಕೇವಲ 35 ಗುಂಟೆಯಲ್ಲಿ ಈ ಬಾಳೆ ಬೆಳೆಯಲು 60 ಸಾರ ರೂ. ಖರ್ಚು ಮಾಡಲಾಗಿದೆ.  ಒಟ್ಟು 6 ಲಕ್ಷ 75 ಸಾವಿರ ಹಣ ಬರುತ್ತದೆ. ಖರ್ಚು ವೆಚ್ಚ ತೆಗೆದರೆ ಪ್ರತಿ ಎಕರೆಗೆ 6 ಲಕ್ಷ ರೂ. ಕಟ್ಟಿಟ್ಟ ಬುತ್ತಿ.

        ಮಾರುಕಟ್ಟೆ :  

        ಕೆಂಪು ಬಾಳೆಗೆ ಸಣ್ಣ ಪ್ರಮಾಣದ ಮಾರುಕಟ್ಟೆ ಸಂಕಷ್ಟ ಇದೆ.  ಕಷ್ಟ ಪಟ್ಟು ಬೆಳೆ ಬೆಳೆಯಬಹುದು ಆದರೆ ಮಾರುಕಟ್ಟೆ ಮಾಡುವುದು ತುಂಬಾ ಕಷ್ಟದ ಕೆಲಸ ಎನ್ನುತ್ತಾರೆ ಶ್ರೀಶೈಲ. ಉತ್ತಮವಾಗಿ ಬೆಳೆ ಬೆಳೆದ
        ರೈತರಿಗೆ ರಾಜ್ಯದಲ್ಲಿ ಒಳ್ಳೆ ಮಾರುಕಟ್ಟೆಇಲ್ಲ, ಬೆಂಗಳೂರು ಸಫ‌ಲ್‌ ಮಾರು ಕಟ್ಟೆಯಲ್ಲಿ ಈ ಬಾಳೆಯನ್ನು ಕೆಜಿಗೆ ಕೇವಲ 20 ರೂ. ಗೆ ಕೇಳಿದರು. ಆದರೆ ಸಾಗಾಣೆ ವೆಚ್ಚ ಎಲ್ಲಾ ಸೇರಿ ತುಂಬಾ ಲಾಸ್‌ಆಗುವ ಸಾದ್ಯತೆಗಳು ಕಂಡು ಬಂದಿದ್ದರಿಂದ ನಾವು ಮಹಾರಾಷ್ಟ್ರದ ಪುಣೆಯಲ್ಲಿರುವ ರಿಲಾಯನ್ಸ್‌ ಮಾರುಕಟ್ಟೆಯವರನ್ನು ಸಂಪರ್ಕಿಸಿ ಕೆಜಿಗೆ ಸರಾಸರಿ 40ರೂ.ಗೆ ಮಾರಾಟ ಮಾಡಿದ್ದೇವೆ ರೈತ ಶ್ರೀಶೈಲ ಸಂತೋಷದಿಂದ ಹೇಳುತ್ತಾರೆ. ಕೇವಲ ಕಬ್ಬನ್ನೇ ಒಂದು ವಾಣಿಜ್ಯ ಬೆಳೆಯನ್ನಾಗಿಸಿಕೊಂಡಿರುವ ಇಲ್ಲಿಯ ರೈತರಿಗೆ ಚಂದ್ರ (ಕೆಂಪು) ಬಾಳೆ ಬೆಳೆಯುವುದರ ಮೂಲಕ ಮನಸ್ಸೊಂದಿದ್ದರೆ ಯಾವುದೇ ಬೆಳೆಯನ್ನು ಎಲ್ಲಿ ಬೇಕಾದರೂ ಬೆಳೆಯಬಹುದು. ಆದಾಯವನ್ನೂ ಗಳಿಸಬಹುದು ಎಂಬುದನ್ನು ತೋರಿಸಿರುವ ಕೊಳಗಿ ತೋರಿಸಿದ್ದಾರೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus