Sunday, December 21, 2014
Last Updated: 6:10:11 PM IST
 • ನಾನೆಲ್ಲಿರುವೆ:
 • ಮುಖಪುಟ ಅಭಿಪ್ರಾಯ ಬ್ಲಾಗ್ ಮನೋಹರ ಪ್ರಸಾದ್‌
 • ವಿಡಿಯೋ ಗ್ಯಾಲರಿ
 • ಉದಯವಾಣಿ
 • ವೆ ಬ್
 • ಹುಡುಕಿ
image
 • Imageಮನೋಹರ ಪ್ರಸಾದ್‌, ಸುದ್ದಿವಿಭಾಗದ ಮುಖ್ಯಸ್ಥರು

  'ಉದಯವಾಣಿ' ದಿನಪತ್ರಿಕೆಯ ಮಂಗಳೂರು ಸುದ್ದಿವಿಭಾಗದ ಮುಖ್ಯಸ್ಥರು. ಮಾನವೀಯ ಮತ್ತು ಸಾಮಾಜಿಕ ಪ್ರಸ್ತುತಿಯ ವರದಿಗಾರಿಕೆಯಿಂದ ಗಮನ ಸೆಳೆದವರು, ಕತೆಗಾರ ಕೂಡಾ. 2005ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2007ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಗೌರವ ಪ್ರಶಸ್ತಿ ಪುರಸ್ಕೃತರಾಗಿರುವ ಅವರ 2500ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ.

Sep 13, 2012 | Comments 2 | ShareShare
------------------------------------------------------------------------------------
ಯಕ್ಷರು, ಕಿನ್ನ­ರರು, ಕಿಂಪು­ರು­ಷರ ಗಂಧರ್ವ ಲೋಕ­ದಲ್ಲಿ..


ಹಚ್ಚ ಹಸಿರು ಸೀರೆ ಉಟ್ಟು, ಕಡು ನೀಲಿ ಸೆರ­ಗನ್ನು ಮಂದ ಮಾರು­ತಕ್ಕೆ ಹಾರಿ ಬಿಟ್ಟು ಮಲ­ಗಿದೆ ಬೆಟ್ಟ­ಗಳ ಸಾಲು. ಎಲ್ಲವೂ ಸ್ತಭœ; ಆದರೆ, ಒಂದೇ ಕ್ಷಣ. ಮರು­ಕ್ಷಣ ಎಲ್ಲಾ ದೃಶ್ಯವೂ ಬದಲು- ಬಾಲ್ಯ­ದಲ್ಲಿ ನಾವು ನೋಡು­ತ್ತಿದ್ದ ವಾರ್ಷಿ­ಕೋ­ತ್ಸವ ನಾಟ­ಕ­ಗಳ ಪರದೆ ಸರಿದು ಇನ್ನೊಂದು ದೃಶ್ಯ ಬಂದ ಹಾಗೆ. ಒಮ್ಮೆಲೇ ಚಟು­ವ­ಟಿ­ಕೆ­ಗಳು ಆರಂಭ. ಗಡಿ­ಬಿ­ಡಿ­ಗೊಂಡ ಬೆಟ್ಟ ಸೆರ­ಗನ್ನು ಸೊಂಟಕ್ಕೆ ಸಿಕ್ಕಿ­ಸಿ­ಕೊಂಡು ಹಸಿರು ಸೀರೆಯ ಮೇಲೆ ಬಿಳಿಯ ಚಾದರ ಹೊದೆದು ಮುಗಿ­ಲಿ­ನಿಂದ ಬಂತೋ ಎಂಬಂ­ತಹ ಮಂಜಿ­ನ­ಧಾ­ರೆಗೆ ಸಿದ­œ­ವಾ­ಗಿದೆ.

                                 ಭಾನು­ಭೂ­ಮಿಗೆ ನಿಸರ್ಗ ಕಟ್ಟಿದ ಸೇತುವೆ

ಈಗ ತಾನೇ ಮೌನ­ದಿಂ­ದಿದ್ದ ಬೆಟ್ಟದ ಬಣ್ಣ ಬದಲು. ಸುಮ್ಮ­ನಿದ್ದ ಬೆಟ್ಟದ ಎಲ್ಲೆ­ಡೆ­ಯಿಂದ ಹೇಗೆ ಉದ್ಭ­ವ­ವಾ­ಯಿತು ಈ ಆಸ­ನ­ವನ್ನೇ ಮರೆ­ಮಾ­ಚು­ವಂ­ತಹ ಮಂಜಿನ ಪರದೆ ? ದಟ್ಟ ಮಂಜು, ತೆಳು ಮಂಜು, ದಪ್ಪ ಮಂಜು, ಭಾಷ್ಪ ಮಂಜು. ಏನಿದು ಬಣ್ಣ­ಬ­ಣ್ಣದ ವೈವಿ­ಧ್ಯ­ಮಯ ಜಾಲ ? ಏರು­ಏ­ರು­ತ್ತಿ­ರುವ ಮಂಜೇ ಈಗ ಕರ­ಗು­ತ್ತಿ­ದೆಯೇ ? ಅಡ್ಡ­ಅ­ಡ್ಡ­ವಾಗಿ ಅದು ದಟ್ಟೆ$ç­ಸು­ತ್ತಿ­ದೆಯೇ ? ಒಮ್ಮಿಂ­ದೊ­ಮ್ಮೆಲೇ ಸುರಿಯ ತೊಡ­ಗಿದೆ.. ಆವ­ರಿ­ಸ­ತೊ­ಡ­ಗು­ತ್ತಿದೆ ಮಂಜು.. ಇಳೆ­ಯೆಲ್ಲಾ ಮುಳುಗಿ ಹೋಗು­ವುದೇ ಎಂಬ ಭಯ­ವನ್ನು ಉಂಟು ಮಾಡು­ತ್ತಿದೆ ಈಗ ಯಾವುದೂ ಕಾಣಿ­ಸದು.

ಎಲ್ಲಿ ಮಾಯ­ವಾ­ಯಿತು ಬೆಟ್ಟ ? ಎಲ್ಲಿ ಕಾಣ­ದಾ­ಯಿತು ಶಿಖರ ? ಈ ಮಂಜಿಗೆ ಉಳಿ­ದೀತೇ ಉಟ್ಟ­ಚಾ­ದರ ? ಇನ್ನು ಎಂದಿಗೂ ನಿಲ್ಲದೆ ಈ ಮಂಜು ? ಕಾಣಿ­ಸದೆ ಇಳೆಯ ಉಡು­ಗೆಯ ಹಸಿರು ? ತಟ್ಟನೆ ಹೊಸ­ತೊಂದು ದೃಶ್ಯಾ­ವಳಿ. ಮಂಜಿನ ಛಾಯೆ ಎಲ್ಲಿಯೋ ಮಾಯೆ ! ಅಟ್ಟಿ­ಸಿ­ಕೊಂಡು ಬರು­ತ್ತಿ­ರುವ ಕುಳಿ­ರ್ಗಾ­ಳಿಗೆ ಬೆದರಿ ಹತ್ತಿ ಮೂಟೆಯ ಹಾಗೆ ಸಾಗಿ ಬೆಟ್ಟದ ಆಚೆ ಬದಿಗೆ ತೇಲಿ ತೇಲಿ ಹೋಯಿತು. ಅಳಿ­ದು­ಳಿದ ಒಂದಷ್ಟು ಮಂಜಿನ ಮಾಯೆಯ ಎಡೆ­ಯಿಂದ ಕಣ್ಣು ಮಿಟು­ಕಿ­ಸು­ತ್ತಾ­ನಲ್ಲ ಸೂರ್ಯ ! ಎಲ್ಲಿಂದ ಬಂತು ಅವ­ನಿಗೆ ಈ ತುಂಟ ನಗೆ ? ನಿನ್ನೆ ಮೊನ್ನೆ ಇದೇ ವೇಳೆ ಭೂಮಿ­ಯನ್ನು ಸುಡು­ವಂ­ತಹ ಕೆಂಡದ ಉಂಟೆ­ಯಾ­ಗಿದ್ದ ಈ ಸೂರ್ಯ ಈಗ ಬೆಳ­ದಿಂ­ಗ­ಳಿ­ನಂ­ತಹ ಬಿಸಿ­ಲನ್ನು ಪಸ­ರಿ­ಸು­ತ್ತಿ­ರು­ವ­ನಲ್ಲ ! ಏನು ಸೋಜಿಗ!?

 

ಸಮೃ­ದ್ಧ ಸಂಸ್ಕೃತಿ

ಮತ್ತೆ ಹಸಿರು ಸೀರೆಯ ಬೆಟ್ಟ­ಗಳ ಸಾಲು. "ಶಿಮ್ಲಾ' ಎಂಬ ಹೆಸರು ಹೊತ್ತ ಚಿತ್ರ ಬಿಡಿ­ಸಿ­ದಂ­ತಹ ಊರಿನ ತುಂಬಾ ನಿಸ­ರ್ಗದ ಆಟವೇ ಆಟ. ಪ್ರಕೃತಿ ಬಿಡಿ­ಸಿದ ಚಿತ್ತಾ­ರ­ವಾದ ಶಿಮ್ಲಾದ ಬಾನೆ­ತ್ತ­ರದ ವೃಕ್ಷ ಸಮೂ­ಹ­ಗ­ಳಿಂದ ಈಗ ಹೊರ­ಡು­ತ್ತಿವೆ ಹಕ್ಕಿ­ಗಳ ಸಾಲು. ತಟ್ಟನೆ ನೆನ­ಪಾ­ಯಿತು ಕವಿ­ವರ್ಯ ಬೇಂದ್ರೆ­ಯ­ವರ ಹಾಡು: "ಗಿ­ಡ­ಗಂ­ಟಿ­ಗಳ ಕೊರ­ಳೊ­ಳ­ಗಿಂದ ಹೊರ­ಟಿತು ಹಕ್ಕಿ­ಗಳ ಹಾಡು.. ಗಂಧ­ರ್ವರ ಸೀಮೆ­ಯಾ­ಯಿತು ಕಾಡಿನ ನಾಡು.. ಕ್ಷಣ­ದೊಳು.. ಕಾಡಿನ ನಾಡು..'
ದೃಷ್ಟಿ ಹಾಯಿ­ಸಿ­ದ­ಲ್ಲೆಲ್ಲಾ, ಬಾನ ಚುಂಬಿ­ಸಲು ಹೊರ­ಟಂ­ತಿ­ರುವ ದೇವ­ದಾರು ವೃಕ್ಷ­ಗಳು. ಸ್ಪರ್ಧೆ ನೀಡು­ತ್ತಿ­ರುವ ಪೈನ್‌ (ಸೂ­ಜಿ­ಪರ್ಣ?) ವೃಕ್ಷ­ಗಳು. ಅವು­ಗಳ ಎಡೆ­ಯಿಂದ ಎಳೆ ಬಿಸಿ­ಲಿಗೆ ಕರಗಿ ತೊಟ್ಟಿ­ಕ್ಕು­ತ್ತಿ­ರುವ ಹನಿ­ಗಳು- "ಮೂ­ಡಲ ಮನೆಯ.. ಮುತ್ತಿನ ನೀರಿನ.. ಎರ­ಕಾವ ಹೊಯ್ದ, ನುಣ್ಣನೆ ಎರ­ಕಾವ ಹೊಯ್ದಾ.. ಬಾಗಿಲು ತೆರೆದು ಬೆಳಕು ಹರಿದು ಜಗ­ವೆಲ್ಲಾ ತೊಯ್ದಾ..ದೇ­ವನು.. ಜಗ­ವೆಲ್ಲಾ ತೊಯ್ದಾ..'.

                                                              

ಶಿಮ್ಲಾದ ಪಕ್ಷಿ­ನೋಟ

ಹಿಮಾ­ಲಯ ಪರ್ವ­ತದ ತಪ್ಪ­ಲಿನ ಹಿಮಾ­ಚಲ ಪ್ರದೇಶ. ಹೆಸರೇ ಸೂಚಿ­ಸು­ವಂತೆ ಹಿಮ­ವ­ತ್ಪ­ರ್ವ­ತ­ಗಳ ಆಲಯ. ಈ ಆಲ­ಯ­ದೊ­ಳಗೆ ರಾಜ­ಧಾ­ನಿ­ಯಾ­ಗಿ­ರುವ ಪುಟ್ಟ ಆಲ­ಯವೇ ಶಿಮ್ಲಾ. ಸಮು­ದ್ರ­ಮ­ಟ್ಟ­ದಿಂದ ಮುನ್ನೂರ ಐವತ್ತು ಮೀಟ­ರು­ಗ­ಳಿಂದ ಏಳು ಸಾವಿರ ಮೀಟರು ಎತ್ತ­ರ­ದ­ವ­ರೆಗೆ ವ್ಯಾಪಿ­ಸಿ­ರುವ ಬೆಟ್ಟ­ಗಳ ಶ್ರೇಣಿ. ಶಿಮ್ಲಾ­ದಲ್ಲಿ ನಾನು ಸಾವಿ­ರದ ಇನ್ನೂರು ಮೀಟರ್‌ ಎತ್ತ­ರ­ದಲ್ಲಿ ಹೊಟೇ­ಲ್‌ನ ಕೊಠ­ಡಿಯ ಆವ­ರ­ಣ­ದಿಂದ ಹೊರ ಬಂದು ಮುಂಜಾನೆ "ಶಿಮ್ಲಾ'ವನ್ನು ನೋಡು­ತ್ತಿದ್ದೆ. ನೋಡು ನೋಡು­ತ್ತಿ­ದ್ದಂ­ತೆಯೇ ಮುಂಜಾ­ನೆಯೇ ಆವ­ರಿ­ಸಿದ ಕತ್ತಲು. ಮತ್ತೆ ಸೂರ್ಯನ ಕಣ್ಣು ಮಿಟು­ಕಿಗೆ ಸಮ­ನಾಗಿ ವೃಕ್ಷ ಸಮೃ­ದ್ಧ ಬೆಟ್ಟ­ಗ­ಳಲ್ಲಿ ಹಸಿ­ರಿನ ವೈವಿಧ್ಯ. ನಸು ಹಸಿರು, ಹಸಿರು, ಕಡು ಹಸಿರು, ಒಮ್ಮೊಮ್ಮೆ ಪಾಚಿಯ ಹಾಗೆ ದಟ್ಟ. ಒಮ್ಮೊಮ್ಮೆ ಎಳೆ ಲಿಂಬೆಯ ಹಾಗೆ ಮಂದ. ಈಗ ಮಂಜಿನ ಜಾಗ­ವನ್ನು ಮೋಡ­ಗಳು ಆಕ್ರ­ಮಿ­ಸಿ­ಕೊಂ­ಡವೇ? ಪಲಾ­ಯನ ಸನ್ನ­ದ­œ­ವಾ­ಗಿ­ರುವ ಮೋಡ­ಗಳು. ತುಂಡು ಮೋಡ­ಗಳ ಓಟದ ವೇಗವೇ.. ಒಲಿಂ­ಪಿಕ್‌ ಓಟಕ್ಕೆ ಸಿದ­œ­ವಾ­ಗಿ­ರುವ ಹಾಗೆಯೇ.


 ದಾಂವರಿ ಜಲ­ಪಾತ

ಸೂರ್ಯ­ನನ್ನು ಮುಚ್ಚುವ ಮುಚ್ಚಾ­ಟ­ದಲ್ಲಿ ನಿತ­ರ­ವಾ­ಗಿವೆ ಎರಡು ಮೂಟೆ ಹತ್ತಿಯ ರಾಶಿ. ಈ ಓಟದ ಪ್ರತಿ­ಫ­ಲ­ನ­ವಿದೆ ಬೆಟ್ಟದ ಶ್ರೇಣಿ­ಗ­ಳಲ್ಲಿ. ಬೆಟ್ಟದ ನಡುವೆ ಒಂದು ಚಿನ್ನದ ಬಟ್ಟಲು ಓಡಿದ ಹಾಗೆ ತಿರು­ಗುತ್ತಾ ಓಡು­ತ್ತಿದೆ ಈ ಬಟ್ಟಲು. ಇವೆಲ್ಲ ಘಟ­ನಾ­ವ­ಳಿಯ ನಡುವೆ ಹರ್ಷ­ಚಿ­ತ್ತ­ದಿಂದ ಬೀಗು­ತ್ತಿ­ರುವ ವೃಕ್ಷ ಸಮೂಹ. ಬಾನೆ­ತ್ತ­ರಕ್ಕೆ ಜಿಗಿ­ಯುವ ಉತ್ಸಾ­ಹದ ತರು­ಗಳು. ಬಾನಿ­ನಿಂದ ಉದು­ರುವ ಮಂಜಿನ ಮುತ್ತಾ­ಗಲೀ, ಮಳೆಯ ಹನಿ­ಯಾ­ಗಲೀ, ಬಾನಿ­ನಿಂದ ಬಿರಿ­ಯುವ ಸೂರ್ಯ­ಕಿ­ರ­ಣ­ವಾ­ಗಲೀ ತಮ್ಮನ್ನು ಭೇದಿಸಿ ಭೂಮಿಗೆ ಇಳಿ­ಯಲು ಬಿಡ­ಲಾ­ರೆ­ವೆಂಬ ಛಲ­ದಿಂದ ಬೀಗು­ತ್ತಿವೆ.
.. .. .. ..

ಶಿಮ್ಲಾದ ಮಡಿ­ಲಲ್ಲಿ ಮೈಮ­ರೆ­ತಂತೆ ಹೊತ್ತು ಸಾಗಿದ ಅರಿವೇ ಇಲ್ಲ. ಅರೆ.. ದಿಢೀ­ರನೇ ನಟ್ಟಿ­ರುಳು ಕವಿ­ಯಿತೇ? ಇದೇ­ನಿನು ? ಏನೂ ಕಾಣಿ­ಸದು, ಏನೂ ಕೇಳಿ­ಸದು. ಎಲ್ಲಿ ಹೋದ ಸೂರ್ಯ? ಈಗ­ತಾನೇ ಕಣ್ಣು ಮಿಟು­ಕಿ­ಸುತ್ತಾ, "ಅ­ರರೆ ಎನ್ನಯ.. ಸಮಾ­ನ­ರಾ­ರಿ­ಹರು' ಅನ್ನು­ತ್ತಿ­ದ್ದ­ನಲ್ಲ. ಬೆಟ್ಟಕ್ಕೆ ಈಗ ಕಪ್ಪು ಚಾದರ. ತಟ್ಟನೆ ಬೀಸಿದೆ ಬಿರು­ಗಾಳಿ. ಎಲ್ಲ­ವನ್ನೂ, ಎಲ್ಲ­ರನ್ನೂ ಶಿಖ­ರದ ಆಚೆ ಎಸೆದು ಬಿಡು­ವಂತ ಗಾಳಿ. ಬೆಟ್ಟ­ವೆಲ್ಲ ಒಮ್ಮೆಲೇ ಅಡುಗೆ ಕೋಣೆ­ಯಾ­ಯಿತೆ ? ಹಳ್ಳಿ­ಮ­ನೆ­ಯಲ್ಲಿ ಮಳೆ­ಗಾ­ಲ­ದಲ್ಲಿ ಅಮ್ಮ ಹಸಿದ ಕಟ್ಟಿ­ಗೆ­ಯಲ್ಲಿ ಒಲೆ ಉರಿ­ಸಲು ಪ್ರಯ­ತ್ನಿ­ಸು­ತ್ತಿದ್ದ ಹಾಗೆ. ಒಲೆ­ಯಿಂದ ದಟ್ಟ ಹೊಗೆ. ಚಟ­ಪಟ ಸದ್ದು. ಸಿಡಿವ ಹನಿ ಒಲೆ­ಯಲ್ಲಿ. ಸುರಿವ ಹನಿ ಅಮ್ಮನ ಕಣ್ಣು­ಗ­ಳಲ್ಲಿ..
.. .. .. ..

      ಚಳಿ­ಗಾ­ಲ­ದಲ್ಲಿ ಹನು­ಮಾನ್‌ ದೇವಾ­ಲಯ 

ಮತ್ತೆ ಬೆಳಕು. ಶುಭ್ರ ಬೆಳಕು. ಅಲ್ಲಿ ಕಾಮ­ನ­ಬಿಲ್ಲು ಮೂಡಿ­ದೆಯೇ ?- "ಗಿ­ಡ­ಗಳ ಮೇಲೆ ಹೂಗಳ ಒಳಗೆ ಅಮೃ­ತದಾ ಬಿಂದು. ಕಂಡವು ಅಮೃ­ತದಾ ಬಿಂದು. ಯಾರಿ­ರಿ­ಸಿ­ಹರು ಮುಗಿ­ಲಿನ ಮೇಲಿಂದ ಇಲ್ಲಿಗೆ ಇದ ತಂದ.. ಈಗಾ.. ಇಲ್ಲಿಗೆ ಇದ ತಂದು ?
ಜಗ­ತ್ತಿಗೆ ಛಾವಣಿ ಬಿರು­ದಾಂ­ಕಿತ ಹಿಮಾ­ಚಲ ಪ್ರದೇಶ ತನ್ನದೇ ಆದ ವೈಶಿ­ಷ್ಟ್ಯ­ಗ­ಳೊಂ­ದಿಗೆ. ವಸ್ತುಶಃ ಪ್ರತ್ಯೇ­ಕ­ವಾದ ಜಗತ್ತೇ ಎಂಬಷ್ಟು ಪ್ರಸಿ­ದ್ಧ. ಪಂಜಾ­ಬಿನ ಸಮೃ­ದ್ಧ ಸಮ­ತಟ್ಟು ಪ್ರದೇ­ಶ­ದಿಂದ ಶಿವಾ­ಲಿಕ್‌ ಪರ್ವತ ಶ್ರೇಣಿ ಮೂಲಕ ಅಥವಾ ಶಿಮ್ಲಾ ಬೆಟ್ಟ­ಗಳ ಮೂಲಕ ನದಿ­ಗಳು, ಕಣಿ­ವೆ­ಗಳು, ಅಪೂರ್ವ ಹೂರಾಶಿ ವನ ಸಮೃ­ದಿ­œಯ ನಾಡು. ಚಳಿ­ಗಾ­ಲ­ದಲ್ಲಿ ಪೂರ್ತಿ ಹಿಮಾ­ಚ್ಛಾ­ದಿ­ತ­ವಾದ ರಾಜ್ಯ. ಸುಮಾರು ಮೂರು ತಿಂಗಳು ದೈನಂ­ದಿನ ಚಟು­ವ­ಟಿ­ಕೆ­ಗಳೇ ಸ್ತಬ್ಧ. ಹಿಮದ "ಹೆ­ಪ್ಪು­ಗ­ಟ್ಟುವ' ಅನು­ಭ­ವ­ಕ್ಕಾಗಿ ಈ ಸಂದ­ರ್ಭ­ದಲ್ಲೂ ಪ್ರವಾ­ಸಿ­ಗ­ಳಿಂದ ಇದು ಸಮೃ­ದ್ಧ.

ಶಿಮ್ಲಾದ ರಿಡ್ಜ್­ನ­ಲ್ಲಿ­ರುವ ಶತ­ಮಾನ ಹಿನ್ನೆ­ಲೆಯ ಚರ್ಚ್‌

ಆದಿ­ವಾ­ಸಿ­ಗಳು ಮುಂತಾದ ವಿವಿಧ ರಾಜ­ಮ­ನೆ­ತ­ನ­ಗಳು ಆಳಿದ ನಾಡಿದು. ಅಕಾ­ಸ್ಮಾ­ತ್ತಾಗಿ ಈ ನಾಡಿನ ಕಡೆಗೆ ಬ್ರಿಟಿ­ಷರು ಕಣ್ಣು ಹಾಯಿ­ಸಿ­ದರು. ಪುರಾ­ಣ­ಗ­ಳಲ್ಲಿ "ದೇ­ವ­ಭೂಮಿ' ಎಂದು ಉಲ್ಲೇ­ಖೀತ ಈ ನಾಡಲ್ಲಿ ಅವರು ತಮ್ಮ ತಾಯ್ನಾ­ಡನ್ನು ಕಂಡು­ಕೊ­ಳ್ಳಲು ಯತ್ನಿ­ಸಿ­ದರು. ಇಲ್ಲಿನ ಪ್ರಕೃತಿ, ಮಂಜು, ಹಿಮ, ನಿಸರ್ಗ ಸೌಂದ­ರ್ಯ­ದಿಂ­ದಾಗಿ ಅವ­ರಿಗೆ ಇದು ಪುನ­ಶ್ಚೇ­ತ­ನದ ಕೇಂದ್ರ­ವಾ­ಯಿತು. 1814 ರಲ್ಲಿ ನೇಪಾ­ಲದ ದೊರೆಯ ಗೂರ್ಖಾ ಸೈನಿ­ಕರು ಸಿಕ್ಕಿ­ಮ್‌ಗೆ ದಾಳಿ ನಡೆ­ಸಿದ ಸಂದರ್ಭ ಇದಾ­ಗಿತ್ತು. ಸಿಕ್ಕಿಂ ಆಳ­ರ­ಸರ ಪರ­ವಾಗಿ ಬ್ರಿಟಿ­ಷರು ಬಂದರು. ಜಯಿ­ಸಿ­ದರು. 1822 ರಲ್ಲಿ ತರುಣ ಬ್ರಿಟಿಷ್‌ ಸೇನಾ­—­ಕಾರಿ ಮೆ| ಕೆನಡಿ ಇಲ್ಲಿ ತನ­ಗಾಗಿ ಒಂದು ಬಂಗ­ಲೆ­ಯನ್ನು ನಿರ್ಮಿ­ಸಿದ ಮುಂದೆ ಬ್ರಿಟಿ­ಷರು ಇಲ್ಲಿ ರಜಾ­ಕಾ­ಲ­ವನ್ನು ಸವಿ­ದರು. ಶಿಮ್ಲಾ ಅವರ ಬೇಸ­ಗೆಯ ರಾಜ­ಧಾ­ನಿ­ಯಾ­ಯಿತು. ಈ ಎಲ್ಲಾ ಘಟ­ನಾ­ವಳಿ ಸ್ಮಾರ­ಕ­ಗಳ ರೂಪ­ದಲ್ಲಿ ಇಲ್ಲಿ ಈಗಲೂ ಲಭ್ಯ­ವಿದೆ. ಭಾರ­ತದ ಸ್ವಾತಂ­ತ್ರಾé­ನಂ­ತರ ಕೇಂದ್ರಾ­ಡ­ಳಿತ ಪ್ರದೇ­ಶ­ವಾ­ಗಿದ್ದು, ಟಿಬೆಟ್‌-ಜಮ್ಮು ಮತ್ತು ಕಾಶ್ಮೀರ-ಉ­ತ್ತ­ರಾಂ­ಚಲ-ಹ­ರ್ಯಾ­ನಾ­ಗ­ಳನ್ನು ಗಡಿ­ಯಾಗಿ ಈಗ ಹೊಂದಿ­ರುವ ಹಿಮಾ­ಚಲ ಪ್ರದೇಶ 1971 ರಲ್ಲಿ ಭಾರ­ತದ ಭುಟ್ಟೋ ಅವರ ನಡು­ವಣ ಐತಿ­ಹಾ­ಸಿಕ ಒಪ್ಪಂ­ದ­ದಿಂದ ಜಗ­ತ್ತಿನ ಗಮನ ಸೆಳೆ­ಯಿತು. 61 ಲಕ್ಷ ಜನ­ಸಂಖ್ಯೆ. 55673 ಚದರ ಮೈಲಿ ವಿಸ್ತೀರ್ಣ.

                                                           ಬೇಸ­ಗೆಯ ಶಿಮ್ಲಾ

ರಾಜ­ಧಾನಿ ಶಿಮ್ಲಾ ಜಗ­ತ್ತಿನ ಅತ್ಯಂತ ಎತ್ತ­ರದ ವಿಹಾ­ರ­ಧಾಮ ಅಥವಾ ನಿಸ­ರ್ಗ­ಧಾಮ ಎಂದೇ ಪ್ರಸಿ­ದ್ಧ. ದಿಲ್ಲಿ­ಯಿಂದ ವಿಮಾನ, ರೈಲು, ರಸ್ತೆ ಮೂಲಕ ಸುಲಭ ಪ್ರಯಾಣ. ದಿಲ್ಲಿ­ಯಿಂದ ವಾಹ­ನ­ಗಳ ಮೂಲಕ ಏಳೆಂಟು ತಾಸು­ಗ­ಳಲ್ಲಿ ತಲು­ಪ­ಬ­ಹುದು. ಜುಲೈ ಬಳಿಕ ಹೋದರೆ ಜಗ­ತ್ಪ­ಸಿ­ದ್ಧ ಶಿಮ್ಲಾ ಸೇಬು ಹಣ್ಣು­ಗಳ ತೋಟ­ಗ­ಳಲ್ಲಿ ಸುತ್ತಾ­ಡ­ಬ­ಹುದು. ನವೆಂ­ಬರ್‌ ನಂತರ ಮೂರು ತಿಂಗಳು ಹಿಮಾ­ಚ­ಲ­ವಿಡೀ ನಿಜ ಅರ್ಥ­ದಲ್ಲಿ ಹಿಮದ ಅಡಿ­ಯಲ್ಲಿ ಪವ­ಡಿ­ಸಿ­ರು­ತ್ತದೆ. ಇದು ಅದ್ಭು­ತ­ವಾದ ಮಾಯಾ­ಲೋಕ. ಜನ­ಸಾ­ಮಾ­ನ್ಯರು ವರ್ಷದ ಇತರ ತಿಂಗ­ಳಲ್ಲಿ ದುಡಿದು ಈ ಅವ­ಧಿ­ಗಾಗಿ ಕೂಡಿ­ಡ­ಬೇಕು. ಎಪ್ರಿ­ಲ್‌­ನಿಂದ ಜೂನ್‌ ಅಂತ್ಯ­ದ­ವ­ರೆಗೆ ಸೆಕೆ­ಗಾಲ. ಸೆಪ್ಟೆಂ­ಬ­ರ್‌­ವ­ರೆಗೆ ಮಳೆ­ಗಾಲ. ಮುಂದೆ ನವೆಂ­ಬ­ರ್‌­ನಿಂದ ಮಾರ್ಚ್‌­ವ­ರೆಗೆ ಚಳಿ­ಗಾಲ. ಬಳಿಕ ವಸಂ­ತ­ಕಾಲ. ಒಂದೊಂದು ಋತು­ವಿಗೂ ಇಲ್ಲಿ ಅದ­ರದ್ದೇ ಆದ ವೈಭವ. ಹೂವು­ಗಳು ಅರ­ಳಿ­ದರೆ ಶಿಮ್ಲಾಕ್ಕೆ ಶಿಮ್ಲವೇ ಅರ­ಳಿದ ಹಾಗೆ. ಮಂಜು ತುಂಬಿ­ದರೆ ಬಿಳಿಯ ಚಾದರ. ಹಿಮ­ಪಾ­ತ­ವಾ­ದರೆ ಶಿಮ್ಲಾಕ್ಕೆ ಶಿಮ್ಲವೇ ಹಿಮದ ಹೊದಿ­ಕೆಯ ಒಳಗೆ. ಒಂದಿಷ್ಟು ಮಳೆ ಸುರಿ­ದರೆ ಶಿಮ್ಲಾ­ಪೂರ್ತಿ ವರ್ಷ­ಧಾ­ರೆ­ಯಲ್ಲಿ ಮಿಂದ ಹಾಗೆ.
.. .. .. ..

  

  ಸರ್‌­ಹಾ­ನ್‌­ನ­ಲ್ಲಿ­ರುವ ಭೀಮ­  ಕಾಳಿ ದೇವಾ­ಲಯ

ಶಿಮ್ಲಾದ ಜನರೇ ಒಂಥರಾ ಹೂವು­ಗಳ ಹಾಗೆ. ಸದಾ ನಗು­ಮುಖ. ಪ್ರವಾ­ಸಿ­ಗ­ರೆಂ­ದರೆ ಅವ­ರಿಗೆ ನಿಜ ಅರ್ಥದ ಮನೆಯ ಅತಿಥಿ. ನಿಸರ್ಗ ಸಂಪ­ತ್ತಿನ ಬಳಿಕ ಶಿಮ್ಲಾದ ಪ್ರಮುಖ ಆದಾ­ಯವೇ ಪ್ರವಾ­ಸೋ­ದ್ಯಮ. ಆದ್ದ­ರಿಂದ, ಇಲ್ಲಿ ಸದಾ ಶಾಂತಿ. ಹಿಮಾ­ಚಲ ಪ್ರದೇ­ಶ­ವೆಂ­ದರೆ ಶಾಂತಿಯ ಆಲ­ಯ­ವೆಂದೂ ಪ್ರಖ್ಯಾತಿ.


ಇಲ್ಲಿ ಪ್ರವಾ­ಸಿ­ಗ­ರನ್ನು ದೋಚು­ವ­ವ­ರಿಲ್ಲ. ಹೆಜ್ಜೆ ಹೆಜ್ಜೆಗೂ ನಿಖ­ರ­ವಾದ ಮಾಹಿ­ತಿ­ಯನ್ನು ಆತ್ಮೀ­ಯ­ತೆ­ಯಿಂದ ಜನ ನೀಡು­ತ್ತಾರೆ. ಆದರೂ, ಕೆಲ­ವರು ಪ್ರವಾ­ಸಕ್ಕೆ ಮಾರ್ಗ­ದ­ರ್ಶಿ­ಗ­ಳೆಂದು ಹೇಳಿ­ಕೊ­ಳ್ಳು­ವ­ವ­ರಿ­ದ್ದಾರೆ. ಅಂತ­ಹ­ವರ ವಿರು­ದ್ಧ ಎಚ್ಚ­ರಿ­ಕೆಯ ಫಲ­ಕ­ಗಳು ಅಲ್ಲಲ್ಲಿ ಕಾಣಿ­ಸು­ತ್ತವೆ. ಮಾರ್ಗ­ದ­ರ್ಶ­ನಕ್ಕೆ ಸರ­ಕಾ­ರವೇ ಅ—­ಕೃ­ತ­ರನ್ನು ನೇಮಿಸಿ, ಗುರು­ತಿನ ಚೀಟಿ­ಯನ್ನು ಒದ­ಗಿ­ಸು­ತ್ತದೆ. ಬಗೆ­ಬ­ಗೆಯ ಬಜೆ­ಟ್‌­ನಿಂದ, ಅಂದರೆ ಇನ್ನೂರು ರೂಪಾ­ಯಿ­ಯಿಂದ ಇಪ್ಪ­ತ್ತೈದು ಸಾವಿರ ರೂಪಾ­ಯಿ­ವ­ರೆಗೂ ಹೊಟೇ­ಲ್‌­ಗಳು ಇಲ್ಲಿ ಲಭ್ಯ.


ಶಿಮ್ಲಾದ ಟಾಯ್‌ ಟ್ರೈನ್‌

ಶಿಮ್ಲಾ ಸಹಿತ ಹಿಮಾ­ಚಲ ಪ್ರದೇ­ಶದ ಪ್ರೇಕ್ಷ­ಣೀಯ ಸ್ಥಳ­ಗಳ ಹೆಸ­ರು­ಗ­ಳನ್ನು, ಗಿರಿ­ಶಿ­ಖ­ರ­ಗ­ಳನ್ನು, ನದಿ ಕಿನಾ­ರೆ­ಗ­ಳನ್ನು, ಕಣಿ­ವೆ­ಗ­ಳನ್ನು, ಸ್ಮಾರ­ಕ­ಗ­ಳನ್ನು, ಆಧು­ನಿಕ ಸಂಭ್ರ­ಮ­ಗ­ಳನ್ನು ಈ ಲೇಖ­ನ­ದಲ್ಲಿ ಪಟ್ಟಿ ಮಾಡ­ಲಾ­ಗಿಲ್ಲ. ಏಕೆಂ­ದರೆ, ಸಂಪೂರ್ಣ ಹಿಮಾ­ಚ­ಲವೇ ಪ್ರೇಕ್ಷ­ಣೀಯ ಸ್ಥಳ, ಪ್ರಕೃತಿ ಸೌಂದ­ರ್ಯದ ಆಡುಂ­ಬೊಲ.
ಈ ಪ್ರದೇ­ಶ­ದಲ್ಲಿ ಸಹ­ಸ್ರ­ಮಾ­ನ­ಗ­ಳಿಂದ ಅಸ್ತಿ­ತ್ವ­ದ­ಲ್ಲಿ­ರುವ ಮೂಲ ನಿವಾ­ಸಿ­ಗಳು, ಬುಡ­ಕಟ್ಟು ಮತ್ತಿ­ತರ ಜನಾಂ­ಗ­ದ­ವರು: ದಾಸರು, ಖಾಸರ, ಪಿಶಾ­ಚರು, ಗುಜ್ಜಾ­ರರು, ಲಾಂಬಾರು, ಖಾಂಪ­ತರು, ಜಾಡರು, ಯಕ್ಷರು, ಕಿರಾ­ತರು, ನಾಗಾ­ಗಳು, ಕಿನ್ನರು, ಕಿಂಪು­ರು­ಷರು.... ಪುರಾಣ, ಮಹಾ­ಕಾ­ವ್ಯ­ಗಳ ನೆನ­ಪಾ­ಗು­ತ್ತಿ­ದೆಯೇ ?
.. .. .. ..

ಹಿಮಾ­ಚ­ಲ­ದಾ­ದ್ಯಂತ ದೇವಿ ಮತ್ತು ಶಿವ­ನಿಗೆ ವಿಶೇಷ ಪೂಜೆ. ಆಂಜ­ನೇಯ ಸಹಿತ ಸರ್ವರ ಆರಾ­ಧ­ನೆ­ಯಿದೆ. ದೇವಿ-ಕಾ­ಳಿ­ಯ­ನ್ನಂತೂ ಸಾರ್ವ­ತ್ರಿ­ಕ­ವಾಗಿ ದೇವಾ­ಲ­ಯ­ಗ­ಳಲ್ಲಿ ಆರಾ­—­ಸ­ಲಾ­ಗು­ತ್ತಿದೆ. ಕಾಳಿಯು ಇನ್ನೊಂದು ರೂಪ­ಶ್ಯಾ­ಮಲೆ. ಬೆಟ್ಟ­ಗುಡ್ಡ ಪರ್ವ­ತ­ಗ­ಳ­ಲ್ಲೆಲ್ಲ ಈ ಶ್ಯಾಮ­ಲೆಯ ಆರಾ­ಧನೆ. ಶ್ಯಾಮ­ಲೆ­ಯಿಂ­ದಲೇ ಬಂದಿ­ರುವ ಹೆಸರು ಶಿಮ್ಲಾ.

                              ಹಿಮಚ್ಚಾದಿತ  ಶಿಮ್ಲಾ

ಶಿಮ್ಲಾ­ದಿಂದ ಮುಂಜಾನೆ ನಾವು ಹೊರ­ಟದ್ದು 22 ಕಿ.ಮೀ. ಅಂತ­ರ­ದ­ಲ್ಲಿ­ರುವ ನಾಲೆªà­ರಾಕ್ಕೆ. ಈ ಬಾರಿ ಮಂಜು, ಮೋಡ, ಮಳೆ ಎಲ್ಲ­ವನ್ನೂ ನೋಡುವ ಅವ­ಕಾಶ. ಆದರೆ, ಮೀಟ­ರು­ಗ­ಟ್ಟಲೆ ದಪ್ಪ, ಊರಿಗೇ ಊರನ್ನೇ ಆವ­ರಿ­ಸುವ ಹಿಮ ನೋಡ­ಬೇ­ಕಾ­ದರೆ ಡಿಸೆಂ­ಬ­ರ್‌­ನಲ್ಲಿ ಇಲ್ಲಿಗೆ ಬರ­ಬೇಕು. ಟ್ಯಾಕ್ಸಿ ಚಾಲಕ ಭೂಪಿಂ­ದರ್‌ ಸಿಂಗ್‌ ಅಲ್ಲಲ್ಲಿ ರಮ­ಣೀಯ ತಾಣ­ಗ­ಳಲ್ಲಿ ವಾಹನ ನಿಲ್ಲಿ­ಸುತ್ತಾ ಅಲ್ಲಿನ ವಿಶೇ­ಷ­ಗ­ಳನ್ನು ಹಿಂದಿ­ಯಲ್ಲಿ ವಿವ­ರಿ­ಸು­ತ್ತಿ­ದ್ದರು. ಬ್ರಿಟಿ­ಷರ ವೈಸ­ರಾ­ಯ್‌­ಗಳ ಸಹಿತ ಎಲ್ಲಾ ಹಿರಿಯ ಅಧಿ­ಕಾ­ರಿ­ಗಳು ವಿಹ­ರಿ­ಸು­ತ್ತಿದ್ದ ತಾಣ­ವಿದು.


ಜಗ­ತ್ತಿನ ಜನ­ಪ್ರಿಯ ತಾಣ­ಗ­ಳ­ಲ್ಲೊಂ­ದಾದ ಗಾಲ್ಫ್­ಕೋರ್ಸ್‌ ಇಲ್ಲಿದೆ. ದೇವ­ದಾರು ವೃಕ್ಷ­ಗಳ ನಡುವೆ ಅರ­ಳಿ­ರುವ ಪುಟ್ಟ ಊರಿದು. ಕೋಗೀ ಎಂಬಲ್ಲಿ ಮಹಾ­ನಾಗ್‌ ದೇವ­ಸ್ಥಾನ. ಉತ್ತರ ಭಾರ­ತದ ಅತೀ ದೊಡ್ಡ ಫಲ ಸಂಸ್ಕ­ರಣಾ ಕೆಂದ್ರವೂ ಇಲ್ಲಿದೆ. ಹಿಮಾ­ಚ­ಲ­ದಲ್ಲಿ ಡಿಡಿಂ­ಬೆಗೂ ಎರಡು ದೇವಾ­ಲ­ಯ­ಗ­ಳಿವೆ.


               ಅದ್ಭುತ ಆತಿಥ್ಯ

ನಾಲೆªàರಾ ಸಹಿತ ಶಿಮ್ಲಾದ ವಿವಿಧ ತಾಣ­ಗ­ಳ­ಲ್ಲಿನ ಪ್ರಧಾನ ಆಕ­ರ್ಷಣೆ ಕುದುರೆ ಸವಾರಿ. ನೂರಾರು ಕುದು­ರೆ­ಗಳು- ಪರಿ­ಣತ, ಚಾಣಾಕ್ಷ ಸವಾ­ರರು. ಸರ­ಕಾ­ರ­ದಿಂದ ಅ—­ಕೃತ ಮಾನ್ಯತೆ. ಕಡಿ­ದಾದ ಬೆಟ್ಟ­ಗಳ ಸೌಂದರ್ಯ ವೀಕ್ಷಿ­ಸಲು ಕುದುರೆ ಸವಾರಿ ರೋಮಾಂ­ಚಕ. ನಮ್ಮ ಆತಿ­ಥೇ­ಯ­ರು ಆಗ ಪಾಣಿಪತ್‌ನಲ್ಲಿ ನೆಲೆಸಿದ್ದ (ಈಗ ಮುಂಬಯಿಯಲ್ಲಿ ಇದ್ದಾರೆ) ಕಾಪೊಳಿ ದಿವಾ­ಕರ ಹೆಬ್ಟಾರ್‌- ಪ್ರಶೀಲಾ ದಂಪತಿ, ಅವರ ಪುತ್ರಿ ದಿಪಿಂತಿ; ನನ್ನ ಜತೆ­ಯ­ಲ್ಲಿದ್ದ ಶ್ರೀನಾಥ್‌ ಕುಟುಂಬ.. ಅದಾ­ಗಲೇ ಈ ಅಭಿ­ಯಾ­ನಕ್ಕೆ ಸಿದ­œ­ರಾ­ಗಿ­ದ್ದರು ! ಸುಮಾರು ಎರಡು ತಾಸು­ಗಳ ಈ ಕುದುರೆ ಸವಾರಿ ಅಪೂರ್ವ ಅನು­ಭವ. ಅಲ್ಲಿಂದ ನಾವು ಬಂದದ್ದು ಕುಫ್ರಿಗೆ. ಇದು ಹಿಮಾ­ಚ­ಲದ ಇನ್ನೊಂದು ಜನ­ಪ್ರಿಯ ತಾಣ. ಚಳಿ­ಗಾ­ಲ­ದಲ್ಲಿ ಸಂಪೂರ್ಣ ಹೆಪ್ಪು­ಗ­ಟ್ಟುವ ಸಂಭ್ರಮ ಸವಿ­ಯಲು ಈ ತಾಣ ಪ್ರಸಿ­ದ್ಧ.

ಇದು ಕೆಲವು ಸ್ಯಾಂಪ­ಲ್‌­ಗಳು ಅಷ್ಟೆ. ಹಾದಿ­ಯು­ದ್ದಕೂ ಬಗೆ­ಬ­ಗೆಯ ಹಣ್ಣು­ಗ­ಳನ್ನು ಆಸ್ವಾ­ದಿ­ಸು­ವುದು ಇನ್ನೊಂದು "ರ­ಸ­ಮಯ' ಅನು­ಭವ. ಲಿಚಿ­ಯಂ­ತಹ ಹಣ್ಣು­ಗ­ಳೆಂ­ದರೆ ಪ್ರವಾ­ಸಿ­ಗ­ಳಿಗೆ ಅಚ್ಚು­ಮೆಚ್ಚು. ಲಸ್ಸಿಯ ಸೊಗಸೇ ಸೊಗಸು. ಸಾಮಾ­ನ್ಯ­ವಾಗಿ ಇಲ್ಲಿ ಮೊಸ­ರನ್ನು ಹೆಚ್ಚಾಗಿ ಬಳ­ಸು­ತ್ತಾರೆ. ಅದು ಹೆಚ್ಚಿನ ಶಕ್ತಿ­ಯನ್ನು ಒದ­ಗಿ­ಸು­ತ್ತದೆ ಅನ್ನು­ವುದು ಇದಕ್ಕೆ ಕಾರಣ. ಯಾಕ್‌ ಮೂಲಕ ಸಮ­ದ­œ­ವಾಗಿ ಪಡೆ­ಯಲು ಸಾಧ್ಯ.

 

ನಿಸ­ರ್ಗದ ವೈಭವ

ಶಿಮ್ಲಾ ಸಹಿತ ಹಿಮಾ­ಚ­ಲ­ದಲ್ಲಿ ಗಮನ ಸೆಳೆ­ಯುವ ಅಂಶ­ವೆಂ­ದರೆ ಬೆಟ್ಟ­ಗಳು, ಪರ್ವ­ತ­ಗ­ಳಲ್ಲಿ ನಿರ್ಮಾ­ಣ­ವಾ­ಗಿ­ರುವ ಗುಂಪು ಗುಂಪು ಮನೆ­ಗಳು. ದೂರ­ದಿಂದ ನೋಡಿ­ದರೆ, ಬಣ್ಣ­ಬ­ಣ್ಣದ ಈ ಮನೆ­ಗಳ ಸಮೂಹ ಕೂಡಾ ಅರ­ಳಿದ ಹೂಗೊಂ­ಚ­ಲಿನ ಹಾಗೆಯೇ ಕಾಣಿ­ಸು­ತ್ತಿದೆ. ಈ ಬಡಾ­ವ­ಣೆ­ಗ­ಳನ್ನು ತಲು­ಪಲು ಹಾವಿ­ನಂತೆ ಅಂಕು­ಡೊಂ­ಕಾದ ಹಾದಿ­ಗಳು ! ರಾತ್ರಿ ಈ ಮನೆ­ಗಳ ದೀಪ­ಗಳು ಕೂಡಾ ತಾರೆ­ಗಳು ಮಿನು­ಗಿ­ದಂತೆ ಕಾಣಿ­ಸು­ತ್ತದೆ !
.. .. .. ..

                                                                         ಕುದುರೆ ಸವಾ­ರಿಯ ರೋಮಾಂ­ಚನ

ದೇವ­ರು­ಗಳ ಬಗ್ಗೆ ಅಪಾರ ಶ್ರದ್ಧೆ. ದೇವಿ ಮಂದಿ­ಗಳು ಅನ­ನ್ಯ­ವಾದ ಕೇಂದ್ರ­ಗಳು. ಮೈಲು­ಗ­ಟ್ಟಲೆ ವಿಸ್ತಾ­ರ­ದಲ್ಲಿ ಬೆಳೆ­ದಿ­ರುವ ವೃಕ್ಷ­ಗಳು. ಬಗೆ­ಬ­ಗೆಯ ಫಲ­ಪು­ಷ್ಪ­ಗಳು. ಆದ್ದ­ರಿಂ­ದಲೇ, ಇದು ನಿಜ ಅರ್ಥದ ದೇವರ ನಾಡು.
.. .. .. ..

ಶಿಮ್ಲಾದ ಬಗ್ಗೆ ಪ್ರಸಿ­ದ­œ­ವಾದ ಒಂದು ಉಲ್ಲೇಖ ಹೀಗಿದೆ:
""ನೀವು ಶಿಮ್ಲಾ­ದಿಂದ ನಿಮ್ಮ ಊರಿಗೆ ಮರಳಿ ಹೊರಟು ಬಂದಿ­ರ­ಬ­ಹುದು. ಆದರೆ, ನಿಮ್ಮ ಹೃದ­ಯ­ದಿಂದ ಶಿಮ್ಲಾ ಎಂದೆಂ­ದಿಗೂ ಹೊರಟು ಹೋಗು­ವು­ದಿಲ್ಲ'!

 

ಶಿಮ್ಲಾ: ರಸ್ತೆಯ ಅಂಚಿ­ನಲ್ಲಿ ಪಾದಾ­ಚಾ­ರಿ­ಗಳ ಪಯಣ ಕೂಡಾ ಶಿಖ­ರಾ­ರೋ­ಹಣ !

(ಚಿತ್ರ­ಗಳು: ಕಾಪೊಳಿ ದಿವಾ­ಕರ ಹೆಬ್ಟಾರ್‌, ಪ್ರಶೀಲಾ ದಿವಾಕರ್‌ ಮತ್ತು ಸಂಗ್ರಹ )

 • Other Blogs By ಮನೋಹರ ಪ್ರಸಾದ್‌
 • POSTED COMMENTS
 • pic
 • Must visit
  Sep 17, 2012
  Author: vishookiran@gmail.com

  Shimla and Gangtok were my dream locations and this blog has made me more desperate to visit this heaven on EARTH. Superb Narrations is simple and beautiful words ...andahage ...very good blog

 •  
 • pic
 • YAKSHARU, KINNARARU, KIMPURUSHARA GANDHARVA LOKADALLI
  Sep 14, 2012
  Author: hkdivakar@yahoo.co.in

  VERY NICE ARTICLE INDEED. ALTHOUGH WE PAID VISIT TO SHIMLA QUITE A FEW TIMES, SOME OF THE INFORMATIONS WE LEARNT ONLY THRU' YOUR BLOG. YOU BROUGHT BACK THE MEMORIES OF OUR VISIT TO SHIMLA WITH YOU... AND OUR PHOTOGRAPHS ALSO FOUND A PLACE IN YOUR BLOG. NICE ARTICLE AND VERY INFORMATIVE TOO.

 • Blog Archive
Keywords:   
From:
To:
 • POST YOUR COMMENTS
 • Name *
 •  
 • Subject
 • Email ID *
 •  
 • Comment *
 • Comments are moderated and will not be posted if found irrelevant or offensive.
 • Copyright @ 2009 Udayavani.All rights reserved.
 • Designed & Hosted By 4cplus