ಮಲ್ಪೆ : ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನು ಖಾಲಿ ಮಾಡಲು ಜಾಗದ ಅವ್ಯವಸ್ಥೆಯಿಂದಾಗಿ ಪಸೀನ್ ಮೀನುಗಾರರು ಮಂಗಳವಾರ ಮಧ್ಯಾಹ್ನದಿಂದ ತಮ್ಮ ಬೋಟುಗಳನ್ನು ದಕ್ಕೆಯಲ್ಲಿ ಸಾಲಾಗಿ ಕಟ್ಟಿ ಧರಣಿ ಕುಳಿತಿದ್ದಾರೆ.ಆಳಸಮುದ್ರ ದೋಣಿಗಳಿಂದ ತಮಗೆ ತೊಂದರೆ ಆಗುತ್ತಿದೆ, ತಂದ ಮೀನನ್ನು ಖಾಲಿ ಮಾಡಲು ದಕ್ಕೆಯಲ್ಲಿ ಸ್ಥಳಾವಕಾಶ ಕೊಡುತ್ತಿಲ್ಲ ಎಂದು ಹೇಳಿರುವ ಮಲ್ಪೆ ಬಂದರಿನ ಎಲ್ಲಾ 106 ಪಸೀìನ್ ಬೋಟ್‌ಗಳ ಮೀನುಗಾರರು ಸಮಸ್ಯೆ ಪರಿಹಾರ ಕಾಣದೆ ಮೀನುಗಾರಿಕೆಗೆ ತೆರಳುವುದಿಲ್ಲ ಎಂದು ಹೇಳಿದ್ದಾರೆ.ಆಳಸಮುದ್ರ ಬೋಟಿನವರು ಮರುದಿವಸ ಖಾಲಿ ಮಾಡಬೇಕಾದ ದೋಣಿಯನ್ನು ತಂದು ಹರಾಜು ದಕ್ಕೆಯಲ್ಲಿ ನಿಲ್ಲಿಸುವುದರಿಂದ ಪಸೀìನ್ ಬೋಟುಗಳಿಂದ ಮೀನು ಖಾಲಿ ಮಾಡುವಂತಿಲ್ಲ. ಬಹಳ ದೂರದಲ್ಲಿ ದೋಣಿಯನ್ನು ನಿಲ್ಲಿಸಿ ಮೀನು ಖಾಲಿ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಇದರಿಂದಾಗಿ ಪಸೀìನ್ ಮೀನುಗಾರರಿಗೆ ತಾವು ತಂದ ಮೀನಿನ ತಾಜಾತನ ಉಳಿಯದೆ ಸರಿಯಾಗಿ ಬೆಲೆಯೂ ಸಿಗದೆ ನಷ್ಟ ತಂದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ.ಆಳಸಮುದ್ರ ಸೇರಿದಂತೆ ಇತರ ಟ್ರಾಲ್‌ಬೋಟ್‌ಗಳನ್ನು ದಕ್ಕೆಯಲ್ಲಿ ಸಂಜೆ 6 ಗಂಟೆಯ ಅನಂತರ ನಿಲ್ಲಿಸಿ ಪಸೀìನ್ ಮೀನುಗಾರರಿಗೆ ಮೀನು ಖಾಲಿ ಮಾಡಲು ವ್ಯವಸ್ಥೆ ಕಲ್ಪಿಸಬೇಕು. ಸಮಸ್ಯೆ ಕುರಿತು ಮೀನುಗಾರರ ಸಂಘ ಮತ್ತು ಆಳಸಮುದ್ರ ಬೋಟ್ ಮಾಲಕರ ಸಂಘಕ್ಕೂ ತಿಳಿಸಲಾಗಿದೆ. ಸಮಸ್ಯೆ ಪರಿಹಾರ ಕಾಣದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ ಹೂಡಲಾಗುವುದು ಎಂದು ಮಲ್ಪೆ ಪಸೀìನ್ ಮೀನುಗಾರರ ಸಂಘದ ಅಧ್ಯಕ್ಷ ಗುರುದಾಸ್ ಬಂಗೇರ ತಿಳಿಸಿದ್ದಾರೆ.