Friday, May 24, 2013
Last Updated: 5:45:33 AM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
  • ಕಾಡು ಕೋಳಿ ಊರಿಗೆ ಬಂದಿತ್ತಾ... .
  • ಕೇರಳದ ಕಾಡ್‌ ಕೋಳಿಗಳು

    • ಗುರು ಮುಂಡಾಜೆ | May 09, 2012

      ಬೆಳ್ತಂಗಡಿ : ಇದು ಹಾರುವ ಕೋಳಿ. ಅಬ್ಬಬ್ಟಾ ಅಂದರೆ 320 ಗ್ರಾಂ ನಷ್ಟು ತೂಗುವ ಈ ಕೋಳಿ ಒಮ್ಮೆ ಮೊಟ್ಟೆ ಇಡಲು ಆರಂಭಿಸಿದರೆ ವರ್ಷ ಪೂರ್ತಿ ಮೊಟ್ಟೆ ಇಡುತ್ತದೆ. ಕೇರಳ ರಾಜ್ಯದಲ್ಲಿ ಬಹು ಬೇಡಿಕೆಯಲ್ಲಿರುವ ಇದನ್ನು ಕೇರಳದಲ್ಲಿ ಕಾಡ್‌ ಕೋಳಿ ಎಂದು ಕರೆಯಲಾಗುತ್ತದೆ. ಇದರ ಮಾಂಸ ಆಹಾರವಾಗಿ ಸೇವಿಸಬಹುದು. ಮೊಟ್ಟೆಯಲ್ಲಿ ಔಷಧೀಯ ಗುಣವಿರುವುದರಿಂದ ಅಸ್ತಮ ಖಾಯಿಲೆಯವರಿಗೆ ರಾಮಬಾಣವಿದ್ದಂತೆ.

      ಕೋಳಿ ಜತೆ ಜಾನ್‌


      ಮುಂಡಾಜೆ ಗ್ರಾಮದ ಪರಮುಖ ನಿವಾಸಿ, ಕೃಷಿಕ ಜಾನ್‌ ಅವರ ಮನೆಯಲ್ಲಿ ಕೇರಳ ರಾಜ್ಯದ ಇಂತಹ ಹಾರುವ 15 ಕಾಡ್‌ ಕೋಳಿಗಳಿವೆ. ನೋಡುವಾಗ ನಮ್ಮ ಊರಿನ ಕೋಳಿಯ ಮರಿಗಳಂತಿರುವ ಈ ಕೋಳಿಯೊಂದಕ್ಕೆ ಕೇರಳದಲ್ಲಿ 35 ರೂ. ಇದೆ. ಜಾನ್‌ ಅವರು ಸುಮಾರು 2 ತಿಂಗಳ ಹಿಂದೆ ಕೇರಳದ ಕೋಯಿಕೋRಡ್‌ನ‌ ಕುಟ್ಟಿಪುರದಿಂದ ಕಾಡ್‌ ಕೋಳಿ ಮರಿಗಳನ್ನು ತಂದು ಸಾಕುತ್ತಿದ್ದು, ಇವರಲ್ಲಿ 2 ಗಂಡು ಹಾಗೂ 13 ಹೆಣ್ಣು ಕೋಳಿಗಳಿವೆ. ಕೆಲ ಕೋಳಿಗಳು ಮೊಟ್ಟೆ ಇಡುತ್ತಿವೆ. ಇದರ ಮೊಟ್ಟೆ ನೆಲ್ಲಿಕಾಯಿಯಷ್ಟು ಗಾತ್ರ ಹೊಂದಿದ್ದು, ಮೊಟ್ಟೆಯ ಪದರದ ಮೇಲೆ ಕಪ್ಪು ಮಚ್ಚೆಯಂತೆ ಬಣ್ಣವಿದ್ದು ನೋಡಲು ಸುಂದರವಾಗಿದೆ. ಇವುಗಳ ಮೊಟ್ಟೆಯನ್ನು ಶಾಖದ ಮೂಲಕ ಒಡೆದು ಮರಿ ಮಾಡಿ ಮರಿಗಳಿಗೆ 2 ವಾರದ ವರೆಗೆ ಶಾಖ ನೀಡಬೇಕಾಗುತ್ತದೆ. ಮರಿಗಳಿರುವಾಗ ಇವುಗಳಿಗೆ ವಿಟಮಿನ್‌ ಬಿ ಕಾಂಪ್ಲೆಕ್ಸ್‌ ಮಾತ್ರೆಗಳನ್ನು ನೀರಿನಲ್ಲಿ ಬೆರೆಸಿ ನೀಡಬೇಕಾಗುತ್ತದೆ. ಬ್ಯಾಕೀrರಿಯಾ ಕೀಟ ನಾಶಕಗಳನ್ನು ಬಳಸುವುದರಿಂದ ಕೋಳಿಗಳಿಗೆ ಯಾವ ರೋಗ ಕೂಡಾ ಬರುವುದಿಲ್ಲ.

      ನೆಲ್ಲಿಕಾಯಿಯ ಗಾತ್ರದ ಬಣ್ಣ ಬಣ್ಣದ ಮೊಟ್ಟೆ

      ಒಂದೇ ಗಾತ್ರವನ್ನು ಹೊಂದಿರುವ ಇವುಗಳಲ್ಲಿ ಗಂಡು - ಹೆಣ್ಣು ಎಂದು ಪಕ್ಕನೆ ಗುರುತಿಸುವುದು ಕಷ್ಟ. ಕೋಳಿಯ ಎದೆ ಭಾಗದಲ್ಲಿರುವ ಬಣ್ಣದ ವ್ಯತ್ಯಾಸದಿಂದ ಮಾತ್ರ ಹೂಂಜ ಕೋಳಿಗಳನ್ನು ಗುರುತಿಸಬಹುದು. ಇವು ಊರಿನ ಹೂಂಜನಂತೆ ಸಣ್ಣ ಸ್ವರದಲ್ಲಿ ಕೂಗುತ್ತದೆ. ಒಂದು ಗೂಡಿನಲ್ಲಿ 2 ಹೂಂಜನನ್ನು ಒಟ್ಟಾಗಿ ಹಾಕಿದರೆ ಅವು ಸಾಯುವ ತನಕ ಕಾದಾಡಿಕೊಳ್ಳುತ್ತದೆ. ಕೋಳಿ ಒಮ್ಮೆ ಗೂಡಿನಿಂದ ಹಾರಿ ಹೋದರೆ ಮತ್ತೆ ಗೂಡು ಸೇರುವುದಿಲ್ಲ ಎನ್ನುತ್ತಾರೆ ಜಾನ್‌ ರವರು.

      ಆಹಾರ ಕ್ರಮ

      ಮೊಟ್ಟೆಯೊಡೆದು ಒಂದು ವಾರದ ವರೆಗೆ ಮರಿಗಳಿಗೆ ಫೀ ಸ್ಟಾಟರ್ಡ್‌ ಫೀಡ್‌ ಹಾಗೂ 1 ವಾರದಿಂದ 5 ವಾರದ ವರೆಗೆ ಸ್ಟಾಟರ್ಡ್‌ ಫೀಡ್‌ ಹಾಕಲಾಗುತ್ತದೆ. 6ನೇ ವಾರದ ನಂತರ ಮೊಟ್ಟೆ ಇಡಲು ಪ್ರಾರಂಭಿಸಿದಾಗ ಮೊಟ್ಟೆ ಇಡುವ ಕೋಳಿಗಳಿಗೆ ಜೋಳ, ಕಡಲೆ ಹಿಂಡಿ, ಸೋಯಾಬೀನ್‌ ಹಿಂಡಿ, ಉಪ್ಪಿನಂಶವಿಲ್ಲದ ಒಣ ಮೀನಿನ ಮಿಶ್ರಣದಿಂದ ತಯಾರಿಸಲಾದ ಲೇಯರ್‌ ಫೀಡನ್ನು ಆಹಾರವಾಗಿ ಹಾಕಲಾಗುತ್ತದೆ.

      ಒಂದು ಸಾವಿರಕ್ಕೂ ಅಧಿಕ ಕೋಳಿಗಳನ್ನು ಸಾಕಿದರೆ ಇದರ ತ್ಯಾಜ್ಯದಿಂದ ಗೋಬರ್‌ ಗ್ಯಾಸ್‌ನಂತೆ ಗ್ಯಾಸ್‌ ತಯಾರಿಸಿ ಉಪಯೋಗಿಸಬಹುದು. ಕೃಷಿಗೂ ಉತ್ತಮ. ಒಟ್ಟಿನಲ್ಲಿ ಕೇರಳ ರಾಜ್ಯದಲ್ಲಿ ಖ್ಯಾತಿ ಪಡೆದ ಈ ಕೋಳಿ ಉದ್ಯಮ ದ. ಕ. ಜಿಲ್ಲೆಗೂ ಕಾಲಿಟ್ಟಿದೆ. (ಮಾಹಿತಿಗಾಗಿ - ಜಾನ್‌: 9591176053)

      ಬಣ್ಣ ಹಾಗೂ ಗಾತ್ರದಲ್ಲಿ ಒಂದೇ ರೀತಿಯಲ್ಲಿರುವುದರಿಂದ ಹೆಣ್ಣು - ಗಂಡು ಎಂದು ಗುರುತಿಸುವುದು ಬಹಳ ಕಷ್ಟ. ಹೆಣ್ಣು ಕೋಳಿಗಳು ವರ್ಷ ಪೂರ್ತಿ ಮೊಟ್ಟೆ ಇಡುತ್ತದೆ. ಮೊಟ್ಟೆಯೊಂದಕ್ಕೆ ಕೇರಳದಲ್ಲಿ ಎರಡೂವರೆ ರೂ. ಬೆಲೆಯಿದೆ. ಮಾಂಸ ಹಾಗೂ ಮೊಟ್ಟೆಯಲ್ಲಿ ಔಷಧೀಯ ಗುಣವಿದ್ದು ಇದರ ಮೊಟ್ಟೆಯನ್ನು ಅಸ್ತಮ ಖಾಯಿಲೆಯವರು ತಿಂದರೆ ಅಸ್ತಮ ಖಾಯಿಲೆ ನಿವಾರಣೆಯಾಗುತ್ತದೆ ಎನ್ನುತ್ತಾರೆ ಜಾನ್‌ ಅವರು.

    Share your views-post your Comment below
    blog comments powered by Disqus
    • POSTED COMMENTS
    • pic
    • ಕಾಡು ಕೋಳಿ ಸುದ್ದಿ
      May 09, 2012
      Author: viveknambiars@gmail.com

      ಒಳ್ಳೆಯ ಸುದ್ದಿ. ಆದರೆ ಸ್ವಲ್ಪ ಹಳೆ ಸುದ್ದಿಗಳನ್ನು ಮೆಲುಕು ಹಾಕಬಹುದಿತ್ತು. ಕೇರಳದಲ್ಲಿ ಈ ಕಾಡುಕೋಳಿ ಸಾಕಣೆಯ ಬಗ್ಗೆ ಬರೆದಿದ್ದೀರಿ. ಆದರೆ ಪ್ರಸ್ತುತ ಸನ್ನಿವೇಶವನ್ನು ಚಿತ್ರಿಸಿದ್ದರೆ ಇನ್ನೂ ಒಳ್ಳೆಯದಾಗಿರುತ್ತಿತ್ತು. ಕೇರಳದಲ್ಲಿ ಈ ಕೋಳಿ ಸಾಕಾಣಿಕೆಯ ವಿರುದ್ದ ಅರಣ್ಯ ಇಲಾಖೆ ಕೆಂಗಣ್ಣು ಬೀರಿದ್ದು, ಕೋರ್ಟ್ ನಲ್ಲಿ ದಾವೆ ಹೂಡಿತ್ತು. ಇದೀಗ ಕೋರ್ಟ್ ಈ ಪುಟ್ಟ ಕಾಡು ಕೋಳಿಯನ್ನು ಸಾಕುವುದು ಮತ್ತು ಮಾರಾಟ ಮಾಡುವುದು ಅರಣ್ಯ ಕಾಯಿದೆಯ ಉಲ್ಲಂಘನೆ ಎಂದು ತೀರ್ಪು ಪ್ರಕಟಿಸಿದೆ. ಇದರಿಂದಾಗಿ ಇದನ್ನೇ ನೆಚ್ಚಿಕೊಂಡಿರುವ ಜನ ಕಂಗಾಲಾಗಿದ್ದಾರೆ. ಇತ್ತೀಚೆಗೆ ಏಷಿಯಾನೆಟ್ ನಲ್ಲೂ ಈ ಸುದ್ದಿ ಬಿತ್ತರವಾಗಿತ್ತು. ಉತ್ತಮ ಸುದ್ದಿ... ಧನ್ಯವಾದ, VIVEK NAMBIAR

    ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
    • Copyright @ 2009 Udayavani.All rights reserved.
    • Designed & Hosted By 4cplus