Wednesday, May 22, 2013
Last Updated: 3:22:11 PM IST
  • ನಾನೆಲ್ಲಿರುವೆ:
  • ಮುಖಪುಟ ರಾಜ್ಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಸಾವಯವ ಕೃಷಿಗೆ ಆದ್ಯತೆ ನೀಡಿ: ಶಾಸಕ ರವಿ
    • ಚಿಕ್ಕಮಗಳೂರು ತಾಲೂಕು ಲಕ್ಯಾದಲ್ಲಿ ಶಾಸಕ ಸಿ.ಟಿ.ರವಿ ಬಿತ್ತನೆ ಬೀಜ ವಿತರಿಸಿದರು.

      • Udayavani | May 09, 2012

        ಚಿಕ್ಕಮಗಳೂರು: ರೈತರು ಸಾವಯವ ಗೊಬ್ಬರವನ್ನು ಉಪಯೋಗಿಸಿ ,ಖಾಸಗಿ ಕಂಪನಿಗಳ ಬೀಜಗಳನ್ನು ಬಳಸದೆ ರೈತರೇ ತಮಗೆ ಅಗತ್ಯವಿರುವ ಬಿತ್ತನೆ ಬೀಜಗಳನ್ನು ತಯಾರು ಮಾಡಿಕೊಂಡು ಕಡಿಮೆ ವೆಚ್ಚದಲ್ಲಿ ಉತ್ತಮ ಬೆಳೆ ಬೆಳೆಯಬೇಕು ಎಂದು ಶಾಸಕ ಸಿ.ಟಿ. ರವಿ ತಿಳಿಸಿದರು.


        ಲಕ್ಯಾ ಗ್ರಾಮದ ರೈತರ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಹಂಗಾಮಿನ ಸಹಾಯ ಧನದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಿಸಿ ರೈತರು ಸಿಕ್ಕಸಿಕ್ಕ ವಿದೇಶಿ ಕಂಪೆನಿಗಳ ಬಿತ್ತನೆ ಬೀಜ ಮತ್ತು ರಾಸಾಯನಿಕ ಗೊಬ್ಬರಗಳನ್ನು ಬಳಸಿ ಕೃಷಿ ವೆಚ್ಚವನ್ನು ದುಬಾರಿ ಮಾಡಿಕೊಳ್ಳುತ್ತಿರುವುದು ದುರದ„ಷ್ಟಕರ ಸಂಗತಿ ಎಂದು ತಿಳಿಸಿದರು.

        ಸಾವಯವ ಗೊಬ್ಬರವನ್ನು ಬಳಸಿ ಉತ್ತಮ ಇಳುವರಿ ಪಡೆದುಕೊಳ್ಳಬೇಕು. ತಕ್ಷಣದ ಲಾಭ ಮತ್ತು ಅನುಕೂಲಗಳನ್ನು ನೋಡಿಕೊಂಡು ರಾಸಾಯನಿಕಗಳನ್ನು ಬಳಸುತ್ತಿರುವುದರಿಂದ ಭೂಮಿಯ ಫ‌ಲವತ್ತೆ ದೀರ್ಘ‌ಕಾಲದಲ್ಲಿ ನಾಶಹೊಂದುತ್ತಾ ಬರುತ್ತದೆ ಎಂದರು.

        ಸರ್ಕಾರ ರೈತರಿಗೆ ಅಗತ್ಯವಿರುವ ಬೀಜ ಗೊಬ್ಬರವನ್ನು ದಾಸ್ತಾನು ಮಾಡುತ್ತಾ ಬಂದಿದೆ. ವರುಣನ ಕ„ಪೆ ಬೇಕಾಗಿದೆ. ರೈತರಿಗೆ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಸಬ್ಸಿಡಿ ದರದಲ್ಲಿ ಬೀಜ ಮತ್ತು ಗೊಬ್ಬರ ನೀಡುವ ಮೂಲಕ ರೈತರನ್ನು ಸ್ವಾವಲಂಬಿಗಳನ್ನಾಗಿಸುತ್ತಿದ್ದೇವೆ. ಈ ಗ್ರಾಮದ ರೈತರಿಗೆ ಸುವರ್ಣ ಭೂಮಿ ಯೋಜನೆಯಡಿ 3600 ರೈತರಿಗೆ ಸೌಲಭ್ಯ ನೀಡಲಾಗಿದೆ ಎಂದು ಹೇಳಿದರು.

        ತಾಪಂ ಸದಸ್ಯ ಸರೋಜ ನಾಗರಾಜ್‌, ಗ್ರಾಪಂ ಅಧ್ಯಕ್ಷೆ ಗೌರಮ್ಮ, ಉಪಾಧ್ಯಕ್ಷೆ ಹಾಲಮ್ಮ, ಸಹಾಯಕ ಕೃಷಿ ನಿರ್ದೇಶಕ ಕೆ.ಆರ್‌. ಲೋಕೇಶ್‌, ಮಲ್ಲಿಕಾರ್ಜುನ್‌, ಕೃಷಿ ಅಕಾರಿ ಲಕ್ಷŒ$¾ಯ್ಯ ಹಾಗೂ ಇತರೆ ರೈತರು ಉಪಸ್ಥಿತರಿದ್ದರು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus