Sunday, May 26, 2013
Last Updated: 8:00:22 AM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಹರಾಜು ಬೇಕು-ಬೇಡ: ಫ್ರಾಂಚೈಸಿಗಳಲ್ಲೇ ಭಿನ್ನಮತ
      • Udayavani | May 10, 2012

        ಹೊಸದಿಲ್ಲಿ: ಐದನೇ ಐಪಿಎಲ್‌ ಚಾಲ್ತಿಯಲ್ಲಿರುವಂತೆಯೇ ಎಲ್ಲ ಫ್ರಾಂಚೈಸಿಗಳು ತಮ್ಮ ಭವಿಷ್ಯದ ಮಹತ್ವದ ಯೋಜನೆಯೊಂದರ ಬಗ್ಗೆ ಮಾತುಕತೆ ಆರಂಭಿಸಿವೆ. 2014ರಲ್ಲೂ ಆಟಗಾರರನ್ನು ಉಳಿಸಿಕೊಳ್ಳುವ ಬಗ್ಗೆ ಚರ್ಚಿಸಲಾರಂಭಿಸಿವೆ. ಆದರೆ ಈ ವಿಷಯದಲ್ಲಿ ಫ್ರಾಂಚೈಸಿಗಳ ನಡುವೆಯೇ ಭಿನ್ನಮತ ಸೃಷ್ಟಿಯಾಗಿದೆ.

        ಕೆಲವು ಫ್ರಾಂಚೈಸಿಗಳು ಆಟಗಾರರನ್ನು ಉಳಿಸಿಕೊಳ್ಳುವ ನೀತಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದರೆ, ಮತ್ತೆ ಕೆಲವು ಫ್ರಾಂಚೈಸಿಗಳು ನೂತನ ಹರಾಜು ನಡೆಯಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿವೆ.
        ಮೂಲಗಳ ಪ್ರಕಾರ ಒಟ್ಟು ಒಂಭತ್ತರಲ್ಲಿ 5 ಫ್ರಾಂಚೈಸಿಗಳು ಆಟಗಾರರನ್ನು ತಮ್ಮ ಬಳಿಯೇ ಉಳಿಸಿಕೊಳ್ಳಲು ಸಹಮತ ವ್ಯಕ್ತಪಡಿಸಿವೆ. ಇವುಗಳೆಂದರೆ ಡೆಲ್ಲಿ, ಕೋಲ್ಕತಾ, ಮುಂಬೈ, ಚೆನ್ನೈ ಹಾಗೂ ಬೆಂಗಳೂರ್‌. ಆದರೆ ಪಂಜಾಬ್‌, ಹೈದರಾಬಾದ್‌, ಪುಣೆ ಹಾಗೂ ರಾಜಸ್ಥಾನ್‌ ನೂತನ ಹರಾಜಿಗೆ ಬೆಂಬಲ ಸೂಚಿಸಿವೆ.

        ಈ ಹಿಂದೆ 2010ರ ಹರಾಜಿನ ವೇಳೆ ಪ್ರತಿ ತಂಡಕ್ಕೂ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ಮಾಡಿಕೊಡಲಾಗಿತ್ತು. ಇದರಂತೆ ಐಪಿಎಲ್‌ನಲ್ಲಿ ಉತ್ತಮ ನಿರ್ವಹಣೆ ನೀಡಿದ ತಂಡಗಳು ಆಟಗಾರರನ್ನು ಉಳಿಸಿಕೊಳ್ಳಲು ಮುಂದಾಗಿದ್ದವು.

        2010ರಲ್ಲಿ ಆಟಗಾರರ ಜೊತೆ 2 ವರ್ಷಗಳ ಒಪ್ಪಂದಕ್ಕೆ ಸಹಿ ಮಾಡಲಾಗಿತ್ತು. ಇದರೊಂದಿಗೆ ಹೆಚ್ಚುವರಿಯಾಗಿ ಒಂದು ವರ್ಷ, ಅಂದರೆ 2013ರ ವರೆಗೂ ಒಪ್ಪಂದ ಮುಂದುವರಿಸುವ ಅವಕಾಶವನ್ನೂ ಮಾಡಿಕೊಡಲಾಗಿತ್ತು.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus