Udayavani | May 10, 2012
ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಕಲ್ಯಾಣ್ ಸಮನ್ವಯ ಸಮಿತಿಯ ನೂತನ ಕಚೇರಿಯ ಉದ್ಘಾಟನಾ ಸಮಾರಂಭವು ಮೇ 15 ರಂದು ಕಲ್ಯಾಣ್ ಪಶ್ಚಿಮದ ಜೋಶಿಭಾಗ್‌ನ ನ್ಯೂ ಹೈಸ್ಕೂಲ್ ಸಮೀಪದಲ್ಲಿರುವ ಕೇಶವ್‌ಜೀ ಮಾವ್‌ಜೀ ಚಾಳ್‌ನಲ್ಲಿ ನಡೆಯಲಿದೆ. ನೂತನ ಕಚೇರಿಯನ್ನು ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ಜಯ ಸಿ. ಸುವರ್ಣ ಅವರು ಉದ್ಘಾಟಿಸಲಿದ್ದಾರೆ.
ಧಾರ್ಮಿಕ ಕಾರ್ಯಕ್ರಮವಾಗಿ ಆ ದಿನ ಮುಂಜಾನೆ 5.30 ರಿಂದ ಗಣಹೋಮ, ಬೆಳಗ್ಗೆ 7.30 ರಿಂದ ಶ್ರೀ ಸತ್ಯನಾರಾಯಣ ಮಹಾಪೂಜೆ, ಗುರುಪೂಜೆ, ಭಕ್ತಾದಿಗಳಿಂದ ಭಜನೆ, ಪೂರ್ವಾಹ್ನ 11 ಗಂಟೆಯಿಂದ ಸಭಾ ಕಾರ್ಯಕ್ರಮ, ಮಧ್ಯಾಹ್ನ 12.30 ರಿಂದ ದಿವಾಕರ ಆರ್. ಸಾಲ್ಯಾನ್ ಮತ್ತು ಉಮೇಶ್ ಬಂಗೇರ ಅವರ ಪ್ರಾಯೋಜಕತ್ವದಲ್ಲಿ ಅನ್ನಸಂತರ್ಪಣೆ ನೆರವೇರಲಿದೆ.
ಸಮಾರಂಭವು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಗೌರವಾಧ್ಯಕ್ಷ ವೈ. ನಾಗೇಶ್, ಗೌರವ ಪ್ರಧಾನ ಕಾರ್ಯದರ್ಶಿ ಜ್ಯೋತಿ ಕೆ. ಸುವರ್ಣ, ಗೌರವ ಕೋಶಾಧಿಕಾರಿ ಉದಯ ಎಸ್. ಸಾಲ್ಯಾನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ಉಳ್ಳಾಲ್, ಕಲ್ಯಾಣ್ ಸಮನ್ವಯ ಸಮಿತಿಯ ಕಾರ್ಯಾಧ್ಯಕ್ಷ ದಿವಾಕರ ಆರ್. ಸಾಲ್ಯಾನ್, ಉಪಕಾರ್ಯಾಧ್ಯಕ್ಷ ಮೋನಪ್ಪ ಪೂಜಾರಿ, ಉಪಕಾರ್ಯಾಧ್ಯಕ್ಷ ಮಹೇಶ್ ಎಲ್. ಕುಕ್ಯಾನ್, ಗೌರವ ಕಾರ್ಯದರ್ಶಿ ಕೃಷ್ಣ ಜಿ. ಪೂಜಾರಿ, ಗೌರವ ಕೋಶಾಧಿಕಾರಿ ಕೃಷ್ಣ ಎಲ್. ಕುಕ್ಯಾನ್ ಹಾಗೂ ಸಮಿತಿಯ ಸದಸ್ಯರ ನೇತೃತ್ವದಲ್ಲಿ ನೆರವೇರಲಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.