ಡೆಕ್ಕನ್‌ಗೆ 10 ಸೋಲುಹೈದರಾಬಾದ್: ಡೇವಿಡ್ ವಾರ್ನರ್ ಅವರ ಸ್ಫೋಟಕ ಶತಕಕ್ಕೆ ತತ್ತರಿಸಿದ ಡೆಕ್ಕನ್ ಚಾರ್ಜರ್ 10ನೇ ಸೋಲನುಭವಿಸುವ ಮೂಲಕ ತನ್ನ ದುರದೃಷ್ಟವನ್ನು ಮತ್ತೂಮ್ಮೆ ತಾನೇ ಹಳಿದುಕೊಂಡಿತು. ಗುರುವಾರ ತವರಿನ ಅಂಗಳದಲ್ಲಿ 187ರಷ್ಟು ಭರ್ಜರಿ ಮೊತ್ತವನ್ನೂ ಪೇರಿಸಿಯೂ ಡೆಲ್ಲಿ ಡೇರ್‌ಡೆವಿಲ್ಸ್ ಬಲೆಗೆ ಬಿತ್ತು.ಈಗಾಗಲೇ ಕೂಟದಿಂದ ಹೊರಬಿದ್ದ ಡೆಕ್ಕನ್ ಮೊದಲು ಬ್ಯಾಟಿಂಗ್ ನಡೆಸಿ 4 ವಿಕೆಟಿಗೆ 187 ರನ್ ಪೇರಿಸಿದರೆ, ಡೆಲ್ಲಿ 16.4 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 193 ರನ್ ಪೇರಿಸಿ ತನ್ನ 9ನೇ ಗೆಲುವನ್ನು ದಾಖಲಿಸಿತು; ಮತ್ತೆ ಅಗ್ರಸ್ಥಾನಕ್ಕೇರಿತು. ಇದು ಡೆಕ್ಕನ್‌ಗೆ ಎದುರಾದ 10ನೇ ಸೋಲು.ವಾರ್ನರ್ ಪವರ್ಬ್ಯಾಟಿಂಗ್ನಲ್ಲಿ ಮಿಂಚಿದ ಶಿಖರ್ ಧವನ್ ಅವರ ಮೊದಲ ಎಸೆತವನ್ನೇ ಬೌಂಡರಿಗೆ ರವಾನಿಸಿದ ಸೆಹವಾಗ್ ಡೆಲ್ಲಿಗೆ ಶುಭಾರಂಭ ಕೊಡಿಸಿದ್ದರು. ಆದರೆ ದ್ವಿತೀಯ ಎಸೆತದಲ್ಲೇ ಮತ್ತೂಬ್ಬ ಬ್ಯಾಟಿಂಗ್ ಹೀರೋ ಕ್ಯಾಮರೂನ್ ವೈಟ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆಗ ಡೆಕ್ಕನ್ ದೊಡ್ಡದೊಂದು ಬೇಟೆಯ ಸುಳಿವು ನೀಡಿದ್ದು ನಿಜ.ದುರದೃಷ್ಟವಶಾತ್ ಡೆಕ್ಕನ್ ಆಸೆಯೆಲ್ಲ ಇಲ್ಲಿಂದಲೇ ಮಣ್ಣುಗೂಡಲಾರಂಭಿಸಿತು. ವಾರ್ನರ್-ನಮನ್ ಓಜಾ ಸೇರಿಕೊಂಡು ಸಂಗಕ್ಕರ ಪಡೆಯ ದಾಳಿಯನ್ನು ಒಂದೇಸಮನೆ ಧೂಳೀಪಟಗೊಳಿಸಿದರು. 'ಸೋಲಿನ ತಂಡ'ಕ್ಕೆ ಬಳಿಕ ಒಂದೂ ವಿಕೆಟ್ ಲಭಿಸದಂತೆ ಮಾಡಿದರು.ವಾರ್ನರ್-ಓಜಾ 16.2 ಓವರ್‌ಗಳ ಜೊತೆಯಾಟ ನಡೆಸಿ ಮುರಿಯದ ದ್ವಿತೀಯ ವಿಕೆಟಿಗೆ 11.57ರ ಸರಾಸರಿಯಲ್ಲಿ 187 ರನ್ ಸೂರೆಗೈದು ಡೆಲ್ಲಿಯ ಪವರ್ ಏನೆಂಬುದನ್ನು ತೋರಿದರು.ಡೆಲ್ಲಿ ಜಯಭೇರಿಯಲ್ಲಿ ವಾರ್ನರ್ ಕೊಡುಗೆ ಅಜೇಯ 109 ರನ್. ಎದುರಿಸಿದ್ದು 54 ಎಸೆತ, ಬಾರಿಸಿದ್ದು 10 ಬೌಂಡರಿ ಹಾಗೂ 7 ಸಿಕ್ಸರ್. 52 ಎಸೆತಗಳಲ್ಲಿ ಅವರ ದ್ವಿತೀಯ ಐಪಿಎಲ್ ಶತಕ ಪೂರ್ಣಗೊಂಡಿತು. ಇದು ಟಿ-ಟ್ವೆಂಟಿಯಲ್ಲಿ ಆಸೀಸ್ ಓಪನರ್ ದಾಖಲಿಸಿದ 5ನೇ ಸೆಂಚುರಿ.ವಿಕೆಟ್ ಕೀಪರ್ ನಮನ್ ಓಜಾ 46 ಎಸೆತಗಳಿಂದ 64 ರನ್ ಬಾರಿಸಿದರು. ಇದರಲ್ಲಿ 2 ಬೌಂಡರಿ, 5 ಸಿಕ್ಸರ್ ಸೇರಿತ್ತು.ಶಿಖರವೇರಿದ ಧವನ್ಇದಕ್ಕೂ ಮುನ್ನ ಪ್ರಚಂಡ ಫಾರ್ಮ್ನಲ್ಲಿದ್ದ ಎಡಗೈ ಆರಂಭಕಾರ ಶಿಖರ್ ಧವನ್ ತವರಾದ ಡೆಲ್ಲಿ ವಿರುದ್ಧವೇ ಸಿಡಿದು ನಿಂತದ್ದು ವಿಶೇಷ. ಅವರಿಗೆ ಕ್ಯಾಮರೂನ್ ವೈಟ್ ಅಮೋಘ ಬೆಂಬಲ ಒದಗಿಸಿದರು. ಇವರಿಬ್ಬರ 3ನೇ ವಿಕೆಟ್ ಜೊತೆಯಾಟದಲ್ಲಿ 126 ರನ್ ಒಟ್ಟುಗೂಡಿತು.ಡೇನಿಯಲ್ ಹ್ಯಾರಿಸ್ (19) ಹಾಗೂ ನಾಯಕ ಕುಮಾರ ಸಂಗಕ್ಕರ (4) ಅವರನ್ನು ಬಹಳ ಅಗ್ಗಕ್ಕೆ ಕಳೆದುಕೊಂಡ ಬಳಿಕ ಡೆಕ್ಕನ್ ತನ್ನ ಎಂದಿನ ವೈಫಲ್ಯವನ್ನೇ ಮುಂದುವರಿಸುವ ಭೀತಿ ಎದುರಾದದ್ದು ಸಹಜ. ಇವರಿಬ್ಬರು 33 ರನ್ ಆಗುವಷ್ಟರಲ್ಲಿ ನಿರ್ಗಮಿಸಿದ್ದರು.ಆದರೆ ಧವನ್ ಮತ್ತು ವೈಟ್ ಪಟ್ಟು ಬಿಗಿಗೊಳಿಸುತ್ತ ಹೋದರು. ಇವರಿಬ್ಬರ ಆರ್ಭಟದ ವೇಳೆ ಕೂಟದಲ್ಲೇ ಅತ್ಯಂತ ಬಲಾಡ್ಯವೆನಿಸಿದ್ದ ಡೆಲ್ಲಿ ಬೌಲಿಂಗ್ ಮತ್ತೂಮ್ಮೆ ತೀರಾ ಸಾಮಾನ್ಯ ಮಟ್ಟಕ್ಕೆ ಕುಸಿಯಿತು. ಇರ್ಫಾನ್ ಪಠಾಣ್, ಆಂದ್ರೆ ರಸೆಲ್, ಶಾಬಾಜ್ ನದೀಮ್ ಅವರೆಲ್ಲ ದುಬಾರಿಯಾಗಿ ಗೋಚರಿಸಿದರು. ಮಾರ್ನ್ ಮಾರ್ಕೆಲ್ ಕೂಡ ಹಿಡಿತ ಸಾಧಿಸುವಲ್ಲಿ ವಿಫಲರಾದರು.ಬರೀ 59 ಎಸೆತಗಳಿಂದ ಶತಕದ ಜೊತೆಯಾಟ ಪೂರ್ತಿಗೊಳಿಸಿದ ಧವನ್-ವೈಟ್, 70 ಎಸೆತಗಳಿಂದ 126 ರನ್ ಸೂರೆಗೈದರು. ಅಮೋಘ ಲಹರಿಯಲ್ಲಿದ್ದ ಧವನ್ ಶತಕ ಬಾರಿಸಬಹುದೆಂಬ ನಿರೀಕ್ಷೆ ಎಲ್ಲರದಾಗಿತ್ತು. ಆದರೆ ಅವರ ಓಟ 84ಕ್ಕೆ ರನೌಟ್ ರೂಪದಲ್ಲಿ ಕೊನೆಗೊಂಡಿತು. 49 ಎಸೆತಗಳ ಈ ಮನಮೋಹಕ ಇನ್ನಿಂಗ್ಸ್‌ನಲ್ಲಿ ಧವನ್ 9 ಬೌಂಡರಿ, 5 ಸಿಕ್ಸರ್ ಸಿಡಿಸಿ ತವರಿನ ಅಭಿಮಾನಿಗಳಿಗೆ ಅಪರೂಪದ ರಂಜನೆ ಒದಗಿಸಿದರು. ವೈಟ್ 40 ಎಸೆತಗಳಿಂದ 65 ರನ್ ದೋಚಿದರು. ಸಿಡಿಸಿದ್ದು 7 ಬೌಂಡರಿ ಹಾಗೂ 2 ಸಿಕ್ಸರ್. ಆದರೆ ಇವರ ಪ್ರಯತ್ನವನ್ನೆಲ್ಲ ವಾರ್ನರ್-ಓಜಾ ಸೇರಿಕೊಂಡು ಲೆಕ್ಕಕ್ಕಿಲ್ಲದಂತೆ ಮಾಡಿಬಿಟ್ಟರು.ಸ್ಕೋರ್ಪಟ್ಟಿಡೆಕ್ಕನ್ ಚಾರ್ಜರ್:ಡೇನಿಯಲ್ ಹ್ಯಾರಿಸ್ ಸಿ ಜಯವರ್ಧನ ಬಿ ಮಾರ್ಕೆಲ್ 19ಶಿಖರ್ ಧವನ್ ರನೌಟ್ 84ಕುಮಾರ ಸಂಗಕ್ಕರ ಸಿ ನದೀಮ್ ಬಿ ಆರೋನ್ 4ಕ್ಯಾಮರೂನ್ ವೈಟ್ ಸಿ ಓಜಾ ಬಿ ಆರೋನ್ 65ಜೀನ್‌ಪಾಲ್ ಡ್ಯುಮಿನಿ ಔಟಾಗದೆ 13ಪಾರ್ಥಿವ್ ಪಟೇಲ್ ಔಟಾಗದೆ 0ಇತರ 2ಒಟ್ಟು (20 ಓವರ್‌ಗಳಲ್ಲಿ 4 ವಿಕೆಟಿಗೆ) 187ವಿಕೆಟ್ ಪತನ: 1-28, 2-33, 3-159, 4-179.ಬೌಲಿಂಗ್:ಆಂದ್ರೆ ರಸೆಲ್ 4-0-39-0ಇರ್ಫಾನ್ ಪಠಾಣ್ 4-0-46-0ಮಾರ್ನ್ ಮಾರ್ಕೆಲ್ 4-0-32-1ವರುಣ್ ಆರೋನ್ 4-0-30-2ಶಾಬಾಜ್ ನದೀಮ್ 4-0-39-0ಡೆಲ್ಲಿ ಡೇರ್‌ಡೆವಿಲ್ಸ್:ವೀರೇಂದ್ರ ಸೆಹವಾಗ್ ಸಿ ವೈಟ್ ಬಿ ಧವನ್ 4ಡೇವಿಡ್ ವಾರ್ನರ್ ಔಟಾಗದೆ 109ನಮನ್ ಓಜಾ ಔಟಾಗದೆ 64ಇತರ 16ಒಟ್ಟು (16.4 ಓವರ್‌ಗಳಲ್ಲಿ ಒಂದು ವಿಕೆಟಿಗೆ) 193ವಿಕೆಟ್ ಪತನ: 1-4.ಬೌಲಿಂಗ್:ಶಿಖರ್ ಧವನ್ 2-0-27-1ಟಿ.ಪಿ. ಸುಧೀಂದ್ರ 3.4-0-43-0ಮನ್‌ಪ್ರೀತ್ ಗೋನಿ 4-0-22-0ಆಶಿಷ್ ರೆಡ್ಡಿ 2-0-29-0ಅಮಿತ್ ಮಿಶ್ರಾ 4-0-44-0ಅಂಕಿತ್ ಶರ್ಮ 1-0-16-0ಪಂದ್ಯಶ್ರೇಷ್ಠ: ಡೇವಿಡ್ ವಾರ್ನರ್